ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ವರಿಸಿದ ವರ; ಇದು ರೀಲ್ ಅಲ್ಲ ರಿಯಲ್ ಕತೆ..!

 

ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ವರಿಸಿದ ವರ; ಇದು ರೀಲ್ ಅಲ್ಲ ರಿಯಲ್ ಕತೆ..!

ಕೋಲಾರ: ಎಲ್ಲೆಲ್ಲೂ ಕೊರೋನಾ ಸೋಂಕು ರಣಕೇಕೆ ಹಾಕುತ್ತಿದೆ. ಸೋಂಕು ಹರಡುವುದನ್ನು ತಡೆಯಲು ದೇಶದ ಹಲವು ರಾಜ್ಯಗಳು ಲಾಕ್ ಡೌನ್ ಮೊರೆಹೋಗಿವೆ. ರಾಜ್ಯದಲ್ಲಿ ಕೂಡಾ ಲಾಕ್ ಡೌನ್ ಮಾಡಲಾಗಿದ್ದು, ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಹೀಗಿರುವಾಗಲೇ ಕೊರೋನಾ ಬಂದ್ರೆ ಏನಾಯ್ತು, ಲಾಕ್ ಡೌನ್ ಆದ್ರೆ ಏನಾಯ್ತು ನನ್ ಲೈಫ್ ನನ್ನಿಷ್ಟ ಅಂತ ಇಲ್ಲೊಬ್ಬ  ಒಂದೇ ಮಂಟಪದಲ್ಲಿ ಇಬ್ಬರನ್ನು ವರಿಸಿದ್ದಾನೆ

kolar marriagesource and pic credit: google.com

 

ಅರೆ..ಅರೆ ಏನಿದು..ಇದ್ಯಾವ ಸಿನಿಮಾದ ಕಥೆ ಹೇಳ್ತಿರೋದು ಅಂದ್ಕೊಂಡ್ರಾ..ಸಿನಿಮಾದಲ್ಲಿ ಈ ತರ ಹುಡುಗ ಒಂದೇ ಮಂಟಪದಲ್ಲಿ ಇಬ್ಬರು ಹೀರೋಯಿನ್ ಗಳನ್ನು ಮದುವೆ ಆಗೋದು ನಿಜಾನೇ. ಆದ್ರೆ ಇದು ರೀಲ್ ಕತೆಯಲ್ಲ. ರಿಯಲ್ ಕತೆ. ಕೋಲಾರದಲ್ಲಿ ವ್ಯಕ್ತಿಯೊಬ್ಬ ಒಂದೇ ಮಂಟಪದಲ್ಲಿ ಅಕ್ಕಿ-ತಂಗಿ ಇಬ್ಬರನ್ನೂ ವರಿಸಿದ್ದಾನೆ.

kolar marriagesource and pic credit: google.com

 

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಸುಪ್ರಿಯಾ ಹಾಗೂ ಲಿಖಿತಾ ಎಂಬ ಇಬ್ಬರು ಅಕ್ಕ-ತಂಗಿಯಂದಿರನ್ನು ಉಮಾಪತಿ ಎಂಬಾತ ಒಂದೇ ಮಂಟಪದಲ್ಲಿ,ಒಂದೇ ಮಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾನೆ. ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಹೀಗಾಗಿ ಆಕೆಗೆ ಮದುವೆಯಾಗಿಲ್ಲ. ಆಕೆಗೆ ಮದುವೆಯಾಗದೆ ತಂಗಿ ಲಲಿತಾಗೂ ಮದುವೆಯಾಗುವುದಿಲ್ಲ. ಹೀಗಾಗಿ ತಂಗಿ ಲಲಿತಾ, ನನ್ನನ್ನು ಮದುವೆಯಾಗಬೇಕಾದರೆ ಅಕ್ಕನನ್ನೂ ಮದುವೆಯಾಗಬೇಕು ಎಂಬ ಷರತ್ತನ್ನು ಒಡ್ಡಿದ್ದರು. ಅದರಂತೆ ಷರತ್ತಿಗೆ ಒಪ್ಪಿದ ಉಮಾಪತಿ ಮೇ.7ರಂದು ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಹೋದರಿಯರನ್ನು ಮದುವೆ ಮಾಡಿಕೊಂಡಿದ್ದಾರೆ.

kolar marriagesource and pic credit: google.com

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author