ಅಕ್ಷಯ ತೃತೀಯದಂದು ಚಿನ್ನ ಯಾಕೆ ಖರೀದಿಸಬೇಕು..?

 

ಅಕ್ಷಯ ತೃತೀಯದಂದು ಚಿನ್ನ ಯಾಕೆ ಖರೀದಿಸಬೇಕು..?

Godess Lakshmisource and pic credit: https://bangla.aajtak.in

ಹಿಂದೂ ಧರ್ಮದಲ್ಲಿ, ಅಕ್ಷಯ ತೃತೀಯವನ್ನು ಅತ್ಯಂತ ಶುಭ ಮತ್ತು ವಿಶೇಷವೆಂದು ಪರಿಗಣಿಸಲಾಗಿದೆ.ಹಿಂದೂ ಪಂಚಾಂಗದ  ಪ್ರಕಾರ, ಪ್ರತಿವರ್ಷ ವೈಶಾಖ ತಿಂಗಳ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಈ ದಿನ ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಮಾಡಬಹುದು. ಈ ವರ್ಷಇಂದು(ಮೇ 14) ಶುಕ್ರವಾರ ಅಕ್ಷಯ ತೃತೀಯ ವಿಶೇಷ ದಿನವಾಗಿದೆ.ಈ ದಿನ ಚಿನ್ನ ಖರೀದಿಸಿದರೆ ಬಹಳ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ.

akshaya tritiyasource and pic credit: https://maharashtratimes.com

ಅಕ್ಷಯ ತೃತೀಯವನ್ನು ವೈಶಾಖ ಮಾಸದ(ಎಪ್ರಿಲ್, ಮೇ) ಶುಕ್ಲ ಪಕ್ಷದ ತೃತೀಯ ತಿಥಿಯಂದು ಆಚರಿಸುತ್ತೇವೆ. ಸಂಸ್ಕೃತ ದಲ್ಲಿ ವೈಶಾಖ ಎಂದರೆ ಮಂಥನದ ಕೋಲು ಎಂದರ್ಥ.ಇದು ಎಲ್ಲವನ್ನು ಮಥಿಸಿ ಅತ್ಯಂತ ಶುಭದಾಯಕ ವಿಚಾರವನ್ನು ಕೊಡುವ ತಿಂಗಳು ಎಂದರ್ಥ. ಹಾಗಾಗಿ‌ ಎಲ್ಲಾ ರೀತಿಯ ಆಚರಣೆಗಳು ಹಬ್ಬಗಳು ವೈಶಾಖ ತಿಂಗಳಲ್ಲಿ ಅತ್ಯಂತ ಪವಿತ್ರವಾಗಿ ನಡೆಯುತ್ತದೆ.

 

ಅಕ್ಷಯ ತೃತೀಯ ಅನ್ನೋದು ಹಿಂದೂಗಳಿಗೆ ಅತ್ಯಂತ ಶುಭದಾಯಕ ಹಾಗೂ ಪವಿತ್ರವಾದ ದಿನವಾಗಿದೆ. ಈ ಶುಭ ದಿನವನ್ನು ಎಲ್ಲಾ ರೀತಿಯ ಆಧ್ಯಾತ್ಮಿಕಭೌತಿಕ ಚಟುವಟಿಗಳನ್ನು ಮಾಡಲು ಯೋಗ್ಯವಾದ ದಿನವೆಂದು ಭಾವಿಸುತ್ತಾರೆಜೊತೆಗೆ ಯೋಗಜಪತಪ ಅಥವಾ ಧರ್ಮಗ್ರಂಥಗಳನ್ನು ಓದುವವರಿಗೆ ಮತ್ತು ಇತರ ಯಾವುದೇ ಆಧ್ಯಾತ್ಮಿಕ ವಿಚಾರಗಳನ್ನು ನಡೆಸುವವರಿಗೆ ಈ ದಿನವು ಅತ್ಯಂತ ಒಳ್ಳೆಯ ದಿನ ಎಂದು ಭಾವಿಸಲಾಗುತ್ತದೆ.

Godess lakshmisource and pic credit: https://www.timesnowhindi.com

ಅಕ್ಷಯ ತೃತೀಯ ಎಂದರೇನು..?

ಸಂಸ್ಕೃತ ಶಬ್ದ ಅಕ್ಷಯದಲ್ಲಿ '' ಎಂದರೆ ಇಲ್ಲ ಎಂದೂ ಹಾಗೂ 'ಕ್ಷಯ' ಎಂದರೆ ಸವೆತ ಎಂದರ್ಥ. ಅಂದರೆ ಸವೆಯದ್ದು ಅಥವಾ ಮುಗಿಯದ್ದು,ಅಥವಾ ಪುನರುತ್ಪತ್ತಿ ಆಗುವಂತದ್ದು ಎಂದರ್ಥ. ಹಾಗಾಗಿ ಈ ದಿನದಲ್ಲಿ ಕೈಗೊಂಡ ಯಾವುದೇ ಕಾರ್ಯಗಳೂ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.ಹೀಗಾಗಿ ಚಿನ್ನವನ್ನು ಖರೀದಿಸಲು ಇದು ಉತ್ತಮ ದಿನವೆಂದು ನಂಬಲಾಗಿದೆ. ಈ ದಿನ ಚಿನ್ನ ಖರೀದಿಸಿದರೆ ಅದು ಕ್ಷಯವಾಗದೆ ಹೆಚ್ಚುತ್ತಾ ಹೋಗುತ್ತದೆ ಅನ್ನೋ ನಂಬಿಕೆಯಿದೆ.

ಅಕ್ಷಯ ತೃತೀಯದಂದು ಚಿನ್ನ ಏಕೆ ಖರೀದಿಸಬೇಕು?

goldsource and pic credit: google.com

ಅಕ್ಷಯ ತೃತೀಯ ದಿನ ಅತ್ಯಂತ ಶುಭ ಎಂಬ ನಂಬಿಕೆಯಿದೆ. ಹೀಗಾಗಿ ಈ ದಿನ ಯಾವುದೇ ಲೋಹ ಖರೀದಿಸಿದರೂ, ಅದು ಪುನರಾವರ್ತನೆ ಆಗುತ್ತದೆ ಎಂಬುದು ನಂಬಿಕೆ.  ಹಾಗಾಗಿ  ಈ ದಿನ ಚಿನ್ನ ಖರೀದಿಸಿದರೆ, ಸುಖ ಸಮೃದ್ಧಿ ಉಕ್ಕಿ ಹರಿಯುತ್ತದೆ ಎನ್ನುವ ನಂಬಿಕೆ ಇದೆ.ಪಂಚಾಂಗದ ಪ್ರಕಾರ, ಅಕ್ಷಯ ತೃತೀಯ ದಿನದಂದು ಅಬುಜಾ ಮುಹೂರ್ತ ಯೋಗವಿದೆ. ಹೀಗಾಗಿ ಈ ಶುಭ ದಿನದಂದು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಇದಲ್ಲದೆ ಜನರು ಈ ದಿನ ಬೆಳ್ಳಿ, ಇತರ ಪಾತ್ರೆಗಳು ಮತ್ತು ಇತರ ಅಮೂಲ್ಯ ವಸ್ತುಗಳನ್ನು ಸಹ ಖರೀದಿಸುತ್ತಾರೆ.

goldsource and pic credit: https://www.prameyanews.com

ಅಕ್ಷಯ ತೃತೀಯವು ಅತ್ಯಂತ ಶುಭದಾಯಕ ದಿನಗಳಲ್ಲಿ ಒಂದಾಗಿದ್ದು ಈ ದಿನವನ್ನು ತ್ರೇತಾಯುಗ ಮಾತ್ರವಲ್ಲದೇ ಸತ್ಯ ಯುಗದ್ವಾಪರ ಯುಗ ಹಾಗೂ ಕಲಿಯುಗದಲ್ಲೂ ವಿಶೇಷವಾಗಿ ಗುರುತಿಸಲಾಗಿದೆ. ಹಾಗಾಗಿ ಯಾವುದೇ ಒಂದು ಕೆಲಸವನ್ನು ಈ ದಿನದಲ್ಲಿ ಆರಂಭಿಸಿದರೆ ಖಂಡಿತವಾಗಿಯೂ ದೈವ ಕೃಪೆಯಿಂದ ಅದು ಯಶಸ್ಸಾಗಬಹುದು ಎಂಬ ನಂಬಿಕೆಯಿದೆ. ಅದರಲ್ಲೂ ಈ ದಿನದಂದು ಚಿನ್ನ ಖರೀದಿಸಿದರೆ ವರ್ಷ ಪೂರ್ತಿ ನಿಮ್ಮ ಆದೃಷ್ಟ ಖುಲಾಯಿಸಿ ಚಿನ್ನವನ್ನು ಮತ್ತೆ ಮತ್ತೆ ಖರೀದಿ ಮಾಡಬಹುದು

goldsource and pic credit: https://www.google.com

ಅದೃಷ್ಟ ಲಕ್ಷ್ಮಿಯ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರುತ್ತದೆ ಎಂದರ್ಥಹಣದ ದೇವತೆ ಕುಬೇರನು ಲಕ್ಷ್ಮಿಯನ್ನು ಆರಾಧಿಸಿದ್ದೂ ಇದೇ ದಿನವಾದುದರಿಂದ ನಮ್ಮಲ್ಲಿಯೂ ಧನಕನಕಗಳು ತುಂಬಲಿ ಎಂಬ ಭಾವದಿಂದ ಆತನನ್ನು ಭಕ್ತಿಯಿಂದ ಕಾಣುವುದು ಕೂಡ ನಂಬಿಕೆಯಲ್ಲಿದೆ.

goldsource and pic credit: https://www.deccanherald.com

ಶ್ರಾವಣ ಮಾಸ (ಜುಲೈ ಆಗಸ್ಟ್) ದಲ್ಲಿ ಹೆಚ್ಚಾಗಿ ಚಿನ್ನ ಖರೀದಿ ಮಾಡುವುದೂ ಇದೇ ಕಾರಣಕ್ಕೆ.ಅಲ್ಲದೇ ಈ ತಿಂಗಳುಗಳ ಮಧ್ಯೆ ಶುಭಕಾರ್ಯವಾದ ನಿಶ್ಚಿತಾರ್ಥ ಅಥವಾ ವಿವಾಹ ಮಾಡಿಕೊಳ್ಳುವವರಿಗೂ ಅತ್ಯಂತ ಒಳ್ಳೆಯ ಮಾಸವಾಗಿದೆ. ಈ ಮಾಸದಲ್ಲಿ ಮದುವೆ ದಾಂಪತ್ಯದಲ್ಲಿ ಸುಭದ್ರತೆ ಹಾಗೂ ಅನ್ಯೋನ್ಯತೆಯು ಇರುತ್ತದೆ ಎಂಬ ಪ್ರತೀತಿಯಿದೆ.ಹಿಂದೂ ಸಂಪ್ರದಾಯದ ಕೆಲವು ಕುಟುಂಬದವರು ಶ್ರಾವಣ ಮಾಸದ ಎರಡು ತಿಂಗಳು ಮೊದಲೇ ಚಿನ್ನವನ್ನು ಖರೀದಿಸುತ್ತಾರೆ.

ಅಕ್ಷಯ ತೃತೀಯ ಮುಹೂರ್ತ
ಅಕ್ಷಯ ತೃತೀಯ ದಿನಾಂಕ - 14 ಮೇ 2021 ದಿನ ಶುಕ್ರವಾರ
ಮುಹೂರ್ತ ಆರಂಭ - ಮೇ 14 ರಂದು ಬೆಳಿಗ್ಗೆ 5:38 ಕ್ಕೆ
ಮುಹೂರ್ತ ಅಂತ್ಯ  - 15 ಮೇ ಬೆಳಿಗ್ಗೆ 07:59ವರೆಗೆ

gold ringsource and pic credit: https://www.financialexpress.com

 

ಅಕ್ಷಯ ತೃತೀಯ ಪೂಜೆಯ ಉಪಯೋಗ

akshaya poojasource and pic credit: https://www.aajtak.in

ಅಕ್ಷಯ ತೃತೀಯವು ಇಡೀ ವರ್ಷದಲ್ಲಿ ಬರುವ ಒಂದು ಅತ್ಯಂತ ಶುಭದಿನವಾಗಿರುವ ಕಾರಣ ಈ ದಿನ ವಿಶೇಷ ಪೂಜೆಯನ್ನೂ ಮಾಡುತ್ತಾರೆ.ಇದರಿಂದ ಮನೆಯಲ್ಲಿ ಮತ್ತಷ್ಟು ನಮ್ಮಲ್ಲಿ ಸುಖ, ಸಮೃದ್ದಿ ಸಂಪತ್ತು ಹೇರಳವಾಗುತ್ತದೆಎನ್ನಲಾಗುತ್ತದೆ.ಅಲ್ಲದೇ ಈ ದಿನದಂದು ವಿಷ್ಣು, ಲಕ್ಷ್ಮಿ ಹಾಗೂ ಕುಬೇರನನ್ನು ಜನರು ಭಕ್ತಿಯಿಂದ ಪೂಜಿಸುತ್ತಾರೆ. ಪೂಜೆಯಿಂದ ವಿಷ್ಣು , ಲಕ್ಷ್ಮಿ ಹಾಗೂ ಕುಬೇರ ಅರಸನ ಕೃಪಾಕಟಾಕ್ಷ ಸಿಗುತ್ತದೆ. ಸಂಪತ್ತು ಹಾಗೂ ಒಳ್ಳೆಯ ಆದೃಷ್ಟ ಲಭಿಸುತ್ತದೆ. ಉದ್ಯೋಗದಲ್ಲಿ ಒಳ್ಳೆಯ ಹೆಸರು ಹಾಗೂ ಖ್ಯಾತಿ ಲಭಿಸುತ್ತದೆಎಂದು ಹೇಳಲಾಗುತ್ತದೆ.

ದಾನ, ಧರ್ಮಗಳನ್ನು ಮಾಡಿದರೆ ಒಳ್ಳೆಯದು

ಅಕ್ಷಯ ತೃತೀಯ ದಿನದಂದು ದಾನ ಮಾಡುವುದರಿಂದ ಸಂಪತ್ತು ಹೆಚ್ಚುತ್ತದೆ ಎಂದು ಹೇಳುತ್ತಾರೆ. ಅಕ್ಷಯ ತೃತೀಯದಂದು ಕುಬೇರನಿಗೆ ಶಿವನ ಆಶೀರ್ವಾದ ಲಭಿಸಿತು ಎಂದು ಹೇಳಲಾಗಿದೆ. ಇದೇ  ದಿನದಂದು ಶಿವನು ಸಹ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಆಶೀರ್ವಾದ ಮಾಡಿದರು ಎಂದು ನಂಬಲಾಗುತ್ತದೆ. ಹೀಗಾಗಿ ಅಕ್ಷಯ ತೃತೀಯಾದಂದು ಮಾಡಿದ ದಾನ ಶುಭ ಎಂದು ಪರಿಗಣಿಸಲಾಗುತ್ತದೆ.  

danasource and pic credit: google.com

 

ಇಷ್ಟೇ ಅಲ್ಲದೆಬ್ರಾಹ್ಮಣರಿಗೆ ದಾನ ಮಾಡುವುದು,ಗಿಡ ಮರಗಳಿಗೆ ನೀರು ಉಣಿಸುವುದು, ಬಡವರಿಗೆ ದಾನ ನೀಡುವುದು, ವಿದ್ಯಾದಾನ ಮಾಡುವುದು ಇತ್ಯಾದಿ ಶುಭ ಕಾರ್ಯಗಳನ್ನು ಈ ಅಕ್ಷಯ ತೃತೀಯದಂದು ಮಾಡಿದರೆ ಬಹಳ ಒಳ್ಳೆಯದು. ಈ ರೀತಿಯ ಶುಭಕಾರ್ಯಗಳನ್ನು ಅಕ್ಷಯ ತೃತೀಯದಂದು ನೆರವೇರಿಸಿದರೆ ನಮಗೆ ಇನ್ನಷ್ಟು ಇಂತಹ ಕಾರ್ಯಗಳನ್ನು ನೆರವೇರಿಸಲು ಆಧ್ಯಾತ್ಮಿಕ ಶಕ್ತಿ ಸಿಗುತ್ತದೆ. ನಿರಂತರವಾಗಿ ಈ ಪ್ರಕ್ರಿಯೆಯನ್ನು ಮಾಡುವ ಮೂಲಕ ನಮಗೆ ಕ್ರಮೇಣ ಆಧ್ಯಾತ್ಮಿಕ ಹಾಗೂ ಸಂಪತ್ತುತುಂಬುತ್ತದೆ ಎಂದು ನಂಬಲಾಗುತ್ತದೆ.

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author