ಅಡುಗೆಗಷ್ಟೇ ಅಲ್ಲ-ಅಂದಕ್ಕು ಬೇಕು ಅರಿಶಿಣ..!

ಅರಿಶಿನದಿಂದ ತ್ವಚೆಯ ಅಂದ..

ಅರಿಶಿಣ ಹಲವು ಆರೋಗ್ಯ ಸಮಸ್ಯೆಗಳಿಗೆ ಮದ್ದು, ಹಾಗೆಯೇ ಈ ಅರಿಶಿನ ಆರೋಗ್ಯ ಸಮಸ್ಯೆಗಳ ಜೊತೆಗೆ ಸೌಂದರ್ಯ ಸಮಸ್ಯೆಗಳಿಗೂ ರಾಮಬಾಣವಾಗಿದೆ.. ಅರಿಶಿಣವನ್ನು ನಿಯಮಿತವಾಗಿ ಬಳಸಿದ್ರೆ ತ್ವಚೆಯ ಅಂದ ಹೆಚ್ಚಿಸಬಹುದು.. 

ಮುಖದ ಮೇಲಿನ ಕಲೆಗಳನ್ನ ತೊಲಗಿಸಿ ತ್ವಚೆಯ ಹೊಳಪನ್ನ ಹೆಚ್ಚಿಸಲು ಅರಿಶಿನ ಬಳಸಿ ಮಾಡಬಹುದಾ ವಿಧಾನ ಅಂದ್ರೆ ಒಂದು ಬೌಲ್ ಗೆ 2 ಟೀ ಸ್ಪೂನ್ ಅಲೋವೆರಾ, 1 ಟೀ ಸ್ಪೂನ್ ಜೇನು ತುಪ್ಪ, ಚಿಟಿಕೆ ಅರಿಶಿಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ನಿಮಿಷದ ನಂತರ ಮುಖ ತೊಳೆಯಿರಿ.. ಈ ವಿಧಾನವನ್ನ ವಾರದಲ್ಲಿ 3 ಬಾರಿ ಅನುಸರಿಸುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳನ್ನ ನಿಯಂತ್ರಿಸಬಹುದು..

ಅರಿಶಿನದಿಂದ ಮಾಡಬಹುದಾದ ಮತ್ತೊಂದು ಫೇಸ್ ಪ್ಯಾಕ್ ಅನ್ನ ಅಂದ್ರೆ ಮೊದಲು ಒಂದು ಬೌಲ್ ಗೆ ಅರ್ಧ ಟೀ ಸ್ಪೂನ್ ಅರಿಶಿನ, 1 ಅಥವಾ 2 ಟೀ ಸ್ಪೂನ್ ಕಡಲೇ ಹಿಟ್ಟು, 2 ಟಿ ಸ್ಪೂನ್ ರೋಸ್ ವಾಟರ್, ನಾಲ್ಕೈದು ಹನಿ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ 1 ಟಿ ಸ್ಪೂನ್ ಅಲೋವೆರಾ ಜೆಲ್ ಸೇರಿಸಿ. ನಂತರ ಅರಿಶಿಣದ ಫೇಸ್ ಪ್ಯಾಕ್ ಅನ್ನ ಅಪ್ಲೇ ಮಾಡುವ ಮುನ್ನ ಮೇಕಪ್ ರಿಮೂ ಮಾಡಿ. ರೋಸ್ ವಾಟರ್ ಅನ್ನು ಮುಖಕ್ಕೆ ಸ್ಪ್ರೇ ಮಾಡಿ ಟಿಶ್ಯು ನಿಂದ ಮುಖವನ್ನ ಕ್ಲೀನ್ ಮಾಡಿ. ನಂತರ ಅರಿಶಿನದ ಫೇಸ್ ಪ್ಯಾಕ್ ಅನ್ನ ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. 15 ನಿಮಿಷದ ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ..

ಅರಿಶಿನದ ಮತ್ತೊಂದು ಫೇಸ್ ಪ್ಯಾಕ್ ಮಾಡುಲು ಬೌಲ್ ಗೆ ಅರ್ಧ ಟೀ ಸ್ಪೂನ್ ಕಸ್ತೂರಿ ಅರಿಶಿನ, ಅರ್ಧ ಟೀ ಸ್ಪೂನ್ ನಿಂಬೆ ರಸ, 2 ರಿಂದ ಮೂರು ಟಿ ಸ್ಪೂನ್ ಮೊಸರು ಹಾಕಿ ಮಿಕ್ಸ್ ಮಾಡಿ. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ರಿಂದ 15 ನಿಮಿಷದ ನಂತ ಮುಖ ತೊಳೆಯಿರಿ.

ಹೀಗೆ ನಿಯಮಿತವಾಗಿ ಅರಿಶಿನ ಬಳಸುವುದರಿಂದ ಮುಖದಲ್ಲಿ ಮೂಡಿದ ನೆರಿಗೆಗಳಿಂದ ಮುಕ್ತಿ ಪಡೆಯಬಹುದು. ಅಕಾಲಿಕವಾಗಿ ಮುಖದಲ್ಲಿ ಮೂಡುವ ಮೊಡವೆಗಳನ್ನೂ ದೂರ ಮಾಡಬಹುದು. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author