ಅಂಬಿ ಅಭಿಮಾನಿಯನ್ನೇ ವರಿಸಿದ ಸುಮಲತಾ ಅಭಿಮಾನಿ.!

ಅಂಬಿ ಅಭಿಮಾನಿಯನ್ನೇ ವರಿಸಿದ ಸುಮಲತಾ ಅಭಿಮಾನಿ.!

ಮಂಡ್ಯ: ಹಾವೇರಿ ಹುಡುಗಿಗೆ ಮಂಡ್ಯ ಸೊಸೆಯಾಗುವ ಆಸೆ. ಸುಮಲತಾ ಅವರ ಅಪ್ಪಟ ಅಭಿಮಾನಿಯಾಗಿರುವ ಈಕೆಗೆ ಅಂಬಿ ಅಭಿಮಾನಿಯನ್ನೇ ಮದುವೆಯಾಗಬೇಕೆಂಬ ಹಠ. ಕೊನೆಗೂ ತನ್ನ ಹಠ ಮತ್ತು ಆಸೆಯನ್ನು ನನಸು ಮಾಡಿಕೊಳ್ಳುವಲ್ಲಿ ಏಲಕ್ಕಿ ನಾಡಿನ ಯುವತಿ ಸಫಲಳಾಗಿದ್ದಾಳೆ.

ಮಂಡ್ಯದ ಸೊಸೆಯಾದ ಯುವತಿಯ ಹೆಸರು ಸವಿತಾ. ಈಕೆಯ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂಬಿ ಅಭಿಮಾನಿ ಡಣಾಯಕನಪುರ ಗ್ರಾಮದ ಶ್ರೀನಿವಾಸ್. ಫೇಸ್ಬುಕ್ ಮೂಲಕ ಬೆಳೆದ ಇವರಿಬ್ಬರ ಸ್ನೇಹ ಪ್ರೀತಿಯಾಗಿ ಬೆಳೆದು ವೈವಾಹಿಕ ಬದುಕಿಗೆ ಕಾಲಿರಿಸುವಂತೆ ಮಾಡಿದೆ.

ಹಾವೇರಿ ಜಿಲ್ಲೆ ರಾಣಿ ಬೆನ್ನೂರು ತಾಲೂಕಿನ ಅಂತರವಳ್ಳಿ ಗ್ರಾಮದ ಲಲಿತಮ್ಮ ಪುತ್ರಿ ಸವಿತಾ. ಈಕೆ ಸಂಸದೆ ಸುಮಲತಾ ಅಂಬರೀಶ್ ಅವರ ಅಪ್ಪಟ ಅಭಿಮಾನಿ. ಸುಮಲತಾ ಅವರನ್ನು ಅಮ್ಮ ಎಂದು ಕರೆಯಬೇಕೆನ್ನುವುದು ಸವಿತಾಳ ದೊಡ್ಡ ಕನಸಾಗಿತ್ತು.

ಅದಕ್ಕಾಗಿ ಸವಿತಾ ತಾನು ಮಂಡ್ಯದ ಸೊಸೆಯಾಗಬೇಕು, ಅದರಲ್ಲೂ ಅಂಬರೀಶ್ ಅಭಿಮಾನಿಯನ್ನೇ ಮದುವೆಯಾಗಬೇಕೆಂದು ನಿಶ್ಚಯಿಸಿದಳುಅದಕ್ಕಾಗಿ ಅಂಬರೀಶ್ ಹಾಗೂ ಸುಮಲತಾ ಅವರ ಫೇಸ್ಬುಕ್ ಪೇಜ್ನಲ್ಲಿ ಸವಿತಾ ಆಕ್ಟೀವ್ ಆದಳು. ಇದೇ ವೇಳೆ ಫೇಸ್ಬುಕ್ನಲ್ಲಿ  ಮಂಡ್ಯ ತಾಲೂಕಿನ ಡಣಾಯಕನಪುರ ಗ್ರಾಮದ ಶ್ರೀನಿವಾಸ್  ಪರಿಚಯವಾಗಿದೆ. ಆತನೊಂದಿಗೆ ತನ್ನ ಕನಸನ್ನು ಹಂಚಿಕೊಂಡಿದ್ದಾಳೆ. ಅದಕ್ಕೆ ಆತನ ಕಡೆಯಿಂದ ಸಮ್ಮತಿಯೂ ಸಿಕ್ಕಿತು.

ಸವಿತಾಳ ತಂದೆ ತಿಪ್ಪಣ್ಣ 10 ವರ್ಷಗಳ ಹಿಂದೆಯೇ ತೀರಿಕೊಂಡಿದ್ದುತಾಯಿ ಲಲಿತಮ್ಮ ಕ್ಯಾಂಟೀನ್ ಇಟ್ಟುಕೊಂಡು ಇಬ್ಬರು ಹೆಣ್ಣು ಮಕ್ಕಳನ್ನು ಬೆಳೆಸಿದ್ದರು. ಸವಿತಾ ಪಿಯುಸಿವರೆಗೂ ಓದಿಸಿದ್ದು, ಬಳಿಕ ಕ್ಯಾಂಟೀನ್ನಲ್ಲಿ ತಾಯಿಗೆ ಸಹಾಯ ಮಾಡಿಕೊಂಡಿದ್ದಳು. ಇಬ್ಬರು ಒಂದೇ ಜಾತಿಯಾಗಿದ್ದರಿಂದ ಎರಡು ಕುಟುಂಬಗಳೂ ಒಪ್ಪಿ ಇಬ್ಬರಿಗೂ ಮದುವೆ ಸಮ್ಮತಿಸಿದರು.

ಸುಮಲತಾ ಆಶೀರ್ವಾದ: ಮದ್ದೂರು ತಾಲೂಕಿನ ಹೊಸಕೆರೆಯ ಬೀರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸರಳ ವಿವಾಹಕ್ಕೆ ತಡವಾಗಿ ಬಂದ ಸಂಸದೆ ಸುಮಲತಾ, ನವ ಜೋಡಿ ಸವಿತಾ ಹಾಗೂ ಶ್ರೀನಿವಾಸ್ ಗೆ ಶುಭ ಹಾರೈಸಿದರು. ಮಂಡ್ಯ ಸೊಸೆಯಾಗಿರುವ ಸವಿತಾಗೆ ಮಂಡ್ಯದ ಸೇವೆ ಮಾಡುವ ಅವಕಾಶ ಬರಲಿ ಎಂದು ಆಶೀರ್ವದಿಸಿದರು.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-

Enjoyed this article? Stay informed by joining our newsletter!

Comments

You must be logged in to post a comment.

About Author