ಆಕಳಿಕೆ ಬರುವುದು ನಿದ್ದೆ ಆಗದೇ ಇರುವುದರಿಂದ, ಸೋಮಾರಿತನದಿಂದಲ್ಲ..ಮತ್ಯಾಕೆ..?

 

ಆಕಳಿಕೆ ಬರುವುದು ನಿದ್ದೆ ಆಗದೇ ಇರುವುದರಿಂದ, ಸೋಮಾರಿತನದಿಂದಲ್ಲ..ಮತ್ಯಾಕೆ..?

sleepy feelingsource and pic credit: https://cathe.com

ಮನುಷ್ಯನ ಜೀವನದಲ್ಲಿ ಆಕಳಿಸುವುದು, ತೂಕಡಿಸುವುದು, ಏಳುವುದು, ಬೀಳುವುದು ಇದೆಲ್ಲಾ ಸಹಜಕ್ರಿಯೆಗಳು. ಆದರೆ ಅದರ ಹಿಂದಿರುವ ಕಾರಣಗಳು ಮಾತ್ರ ನಮ್ಮ ಊಹೆಗೂ ನಿಲುಕದ್ದು. ಎಲ್ಲರಿಗೂ ತಿಳಿದಂತೆ ಆಕಳಿಸುವುದು ಬಹಳ ಸಾಮಾನ್ಯ ಹಾಗೂ ಸಹಜ ಕ್ರಿಯೆ. ಹಲವರು, ಹಲವು ಸಂದರ್ಭಗಳಲ್ಲಿ ಆಕಳಿಸುತ್ತಾರೆ. ಕೆಲವು ಗಂಭೀರವಾದ ಸಂದರ್ಭಗಳಲ್ಲಿ ಆಕಳಿಸುವುದು ನಗೆಪಾಟಲಿಗೀಡಾಗುತ್ತದೆ. ಪ್ರಮುಖ ಮೀಟಿಂಗ್ನಲ್ಲೋ, ಸತ್ತ ಮನೆಯಲ್ಲೋ ಆಕಳಿಸಿದರೆ ಅದೂ ಅಭಾಸವೇಸರಿ.

sleepy feelingsource and pic credit:https://www.medicalnewstoday.com

ಆಕಳಿಸುವವರನ್ನು ಸೋಮಾರಿ ಎನ್ನುವುದನ್ನು ನಾವು ನೋಡಿದ್ದೇವೆ.ಆದರೆ ನಿಮಗೆ ಗೊತ್ತಾ, ಆಕಳಿಕೆಗೂ ಸೋಮಾರಿತನ ಅಥವಾ ನಿದ್ರೆಗೂ ಯಾವುದೇ ಸಂಬಂಧ ಇಲ್ಲ.ವಿಚಿತ್ರವೆಂದರೆ ತಾಯಿಯ ಗರ್ಭದಲ್ಲಿ ಭ್ರೂಣ11ನೇ ವಾರದಲ್ಲಿಯೂ ಆಕಳಿಸುತ್ತದೆಯಂತೆ. ಕೆಲವು ವೈದ್ಯರುಗಳು, ಆಕಳಿಕೆ ಜ್ವರದ ತೀಕ್ಷ್ಣತೆಯನ್ನು ಕಡಿಮೆ ಮಾಡುವ ಒಂದು ಕ್ರಿಯೆ ಎನ್ನುತ್ತಾರೆ. ಆಕಳಿಕೆಯ ಮೂಲಕ ದೇಹವು ತನಗೆ ಅವಶ್ಯವಿರುವ ಹೆಚ್ಚುವರಿ ಆಮ್ಲಜನಕವನ್ನು ಪಡೆಯುತ್ತದೆ ಎಂದು ವಿಜ್ಞಾನಿಗಳು  ಪ್ರತಿಪಾದಿಸುತ್ತಾರೆ.

sleepy feelingsource and pic credit: https://www.asiaone.com

ಮಕ್ಕಳು ಶಾಲೆಯಲ್ಲಿ ಪಾಠ ಕೇಳುವಾಗ, ಯುವಕರು ಇಷ್ಟವಿಲ್ಲದ ಪೂಜೆಪುನಸ್ಕಾರಕ್ಕೆ ಹೋದಾಗ, ಹಿರಿಯರು ಸಿನಿಮಾ ಥಿಯೇಟರ್ಗೆ ಹೋದಾಗ ಹೀಗೆ ಹಲವರು ಹಲವು ಸಂದರ್ಭದಲ್ಲಿ ಆಕಳಿಸುತ್ತಾರೆ. ಸಾಮಾನ್ಯವಾಗಿ ಸೋಮಾರಿತನ ಉಂಟಾದರೆ, ನಿದ್ದೆ ಕಡಿಮೆಯಾದರೆ ಆಕಳಿಕೆ ಬರುತ್ತದೆ ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಆಕಳಿಸುವುದರ ಹಿಂದಿರುವ ಕಾರಣಗಳು ಅದಲ್ಲ.

ತೂಕಡಿಕೆ ಬಂದಾಗಲೂ ಆಕಳಿಕೆ ಬರುತ್ತದೆ ಎಂಬುದು ಮತ್ತೊಂದು ಅನಿಸಿಕೆ. ಆದರೆ ಇದು ಶುದ್ಧ ಸುಳ್ಳುಎನ್ನುತ್ತದೆ ಅಧ್ಯಯನ. ಬಹಳಷ್ಟು ಮಂದಿ ರಾತ್ರಿಯಿಡೀ ಮಲಗಿದ್ದರೂ ಬೆಳಗ್ಗೆಯೆದ್ದು ಆಕಳಿಸುತ್ತಾರೆ. ಹೀಗಾಗಿ ಇದು ನಿದ್ದೆಯಿಂದಲ್ಲ ಅನ್ನೋದು ಸ್ಪಷ್ಟವಾಗುತ್ತದೆ.

sleepy feelingsource and pic credit: https://www.freepik.com

ವೈದ್ಯರುಗಳು, ಆಕಳಿಕೆ ಜ್ವರದ ತೀಕ್ಷ್ಣತೆಯನ್ನು ಕಡಿಮೆ ಮಾಡುವ ಒಂದು ಕ್ರಿಯೆ ಎಂದು ವ್ಯಾಖ್ಯಾನಿಸುತ್ತಾರೆ. ಆಕಳಿಕೆಯ ಮೂಲಕ ದೇಹವು ತನಗೆ ಅವಶ್ಯವಿರುವ ಹೆಚ್ಚುವರಿ ಆಮ್ಲಜನಕವನ್ನು ಪಡೆಯುತ್ತದೆ ಎಂದು ಪ್ರತಿಪಾದಿಸುತ್ತಾರೆ. ಮನುಷ್ಯನ ಆಕಳಿಕೆಯ ಅವಧಿ ಕೇವಲ 6 ಸೆಕೆಂಡ್. ಮನುಷ್ಯ ಆಕಳಿಸುವ ಸಂದರ್ಭದಲ್ಲಿ ಹೃದಯದ ಬಡಿತ ಹೆಚ್ಚಾಗಿರುತ್ತದೆಎಂದು ಹೇಳಲಾಗುತ್ತದೆ.

20 ವಾರಗಳ ಭ್ರೂಣವೂಆಕಳಿಸುತ್ತದೆ

fetussource and pic credit: Times of India

 

ಭ್ರೂಣದ4ಡಿ ಅಲ್ಟ್ರಾಸೌಂಡ್ ಇಮೇಜ್‍ನ ಅದ್ಯಯನಗಳ ಪ್ರಕಾರ ಅತಿ ಕಡಿಮೆ ಅಂದರೆ 11 ವಾರದ ಭ್ರೂಣಕ್ಕೂ ಆಕಳಿಕೆಯ ವಿದ್ಯೆಕರಗತವಾಗಿರುತ್ತದೆ ಎನ್ನಲಾಗುತ್ತದೆ. ವಿಜ್ಞಾನಿಗಳು ಇದನ್ನು ಮೆದುಳು ಬೆಳವಣಿಗೆಯ ಆರಂಭವೆಂದು ಗುರುತಿಸಿದ್ದಾರೆ. 

ಆಕಳಿಕೆ ಒಂದು ರೀತಿಯಲ್ಲಿ ಸಾಂಕ್ರಾಮಿಕ

feel sleepysource and pic credit: https://www.bbc.com

ಆಕಳಿಕೆ ಸಾಂಕ್ರಾಮಿಕ ಎಂಬುದನ್ನು ಎಲ್ಲರೂ ಗಮನಿಸಿರಬಹುದು.ಅಧ್ಯಯನದಲ್ಲಿ ಕಂಡುಕೊಂಡಂತೆ ಗುಂಪಿನ ಯಾರಾದರೊಬ್ಬರು ಆಕಳಿಸಿದರೆ ಸುತ್ತಮುತ್ತಲಿರುವ ಐದಾರು ಮಂದಿ ಕೆಲವೇ ನಿಮಿಷಗಳಲ್ಲಿ ಆಕಳಿಸುತ್ತಾರಂತೆ.

 ಇನ್ನು, ನಿಮಗೆ ರಾತ್ರಿ ಪೂರ್ತಿ ನಿದ್ದೆಯಾಗಿದ್ದು, ನಿಮಗೆ ಹಗಲು ಪೂರ್ತಿ ಸುಸ್ತಾಗುವ ಅನುಭವವಾಗುತ್ತಿದ್ದರೆ, ಆಗಿಂದಾಗೆ ಆಕಳಿಕೆ ಬರುತ್ತಿದ್ದರೆ ಇದು ಹೃದಯ ಸಂಬಂಧಿ ಕಾಯಿಲೆಯ ಲಕ್ಷಣವೂ ಇರಬಹುದು ಎನ್ನುತ್ತಾರೆ ತಜ್ಞರು. ಈ ರೀತಿ ವಿನಾಕಾರಣ ಪದೇ ಪದೇ ಆಕಳಿಕೆ ಬರುವುದರಿಂದ ಹಾರ್ಟ್‍ ಅಟ್ಯಾಕ್, ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತದೆ.

ಆಕಳಿಕೆಯ ಪ್ರಯೋಜಗಳುyawningsource and pic credit: https://www.huffpost.com

ಕಾರಣ ಏನೇ ಇರಲಿ ಆದರೆ ಈ ರೀತಿ ಆಕಳಿಸುವುದರಿಂದ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಹಲವು ಪ್ರಯೋಜನಗಳಿದೆ ಎಂದು ಹೇಳಲಾಗುತ್ತದೆ. ಆಕಳಿಸಿದಾಗ ಮೆದುಳು ತಂಪಾಗುತ್ತದಂತೆ. ಹಾಗಾಗಿ ಇದರಿಂದ ನಮ್ಮ ಮೆದುಳಿನ ಆರೋಗ್ಯ ಯಾವಾಗಲೂ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ನಾವು ಮಾನಸಿಕವಾಗಿ ಹೆಚ್ಚು ಸಧೃಡರಾಗುತ್ತೇವೆ ಎಂದು ತಿಳಿದುಬಂದಿದೆ

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author