ಆಯುರ್ವೇದದಲ್ಲಿ ಕೆಮ್ಮಿಗೆ ಇರುವ ಪರಿಹಾರವೇನು..?

ಸದಾ ಕಾಡುತ್ತಿದೆಯೇ ಕೆಮ್ಮು..? ಆಯುರ್ವೇದದಲ್ಲಿದೆ ಪರಿಹಾರ..

ಸಂಜೀವಿನಿಯಯಾಗಿರುವ ಆಯುರ್ವೇದದಲ್ಲಿ ಹಲವು ರೋಗಗಳಿಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸುಲಭವಾಗಿ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜನರಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಅದು ಕೆಮ್ಮು. ಇನ್ನು ಚಳಿಗಾಲ ಬಂತೆಂದರೆ ಸಾಕು ಹಲವರು ಈ ಕೆಮ್ಮಿನಿಂದ ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ಆಯುರ್ವೇದ ತಜ್ಞರು ತಿಳಿಸಿರುವಂತಹ ಕೆಲವೊಂದು ಮನೆ ಮದ್ದುಗಳನ್ನು ಅನುಸರಿಸುವ ಮೂಲಕ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಕೆಮ್ಮಿನಿಂದ ಮುಕ್ತಿ ಪಡೆಯಬಹುದು.

ಶುಂಠಿ: ಹೆಚ್ಚಾಗಿ ಒಣ ಕೆಮ್ಮಿನಿಂದ ಬಳಲುತ್ತಿರುವವರು ಸ್ವಲ್ಪ ಹಸಿ ಶುಂಠಿಯನ್ನು ಜಗಿದು ತಿನ್ನಲು ಪ್ರಯತ್ನಿಸಿ. ಇಲ್ಲವಾದರೆ ಶುಂಠಿಯನ್ನಿ ನೀರಿನಲ್ಲಿ ಕುದಿಸಿ ಕುಡಿಯಬಹುದು. ಆಗೆಯೇ ಶುಂಠಿಯನ್ನು ನೀರಿನಲ್ಲಿ ಚಿನ್ನಾಗಿ ಕುದಿಸಿ ಈ ನೀರಿಗೆ ಜೇನು ತುಪ್ಪ ಮಿಶ್ರಣ ಮಾಡಿ ನಿಯಮಿತವಾಗಿಸ ಸೇವಿಸಿ. ಶುಂಠಿಯು ಆಂಟಿವೈರಲ್ ಗುಣ ಹೊಂದಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತುಳಸಿ: ಆಯುರ್ವೇದ ಚಿಕಿತ್ಸೆಗಳಲ್ಲಿ ತುಳಸಿಗೆ ಮಹತ್ವ ಸ್ಥಾನವಿದೆ. ಹಲವು ರೋಗಗಳಿಗೆ ತುಳಸಿಯನ್ನು ಮನೆಮದ್ದಾಗಿ ಬಳಸಲಾಗುತ್ತದೆ. ಆಯುರ್ವೇದದಲ್ಲಿ ತುಳಸಿ ಎಲೆ ಹಾಗೂ ಬೀಜವನ್ನು ಸೋಂಕು ನಿವಾರಕವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.

ಇನ್ನು ಕಾಡುವ ಕೆಮ್ಮು ನಿಯಂತ್ರಣಕ್ಕೆ ತುಳಸಿ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ನೀರು ಉಗುರಬೆಚ್ಚಗಾದ ಮೇಲೆ ಸೀವಿಸಿ. ಬೇಕಾದಲ್ಲಿ ನೀರು ಕುದಿಯುವಾಗ ತುಳಸಿ ಎಲೆಗಳ ಜೊತೆಗೆ ಶುಂಠಿ, ಕರಿಮೆಣಸು, ಅಮೃತಬಳ್ಳಿಯನ್ನು ಸೇರಿಸಬಹುದು. ಈ ವಿಧಾನವನ್ನು ನಿಯಮಿತವಾಗಿ ಅನುಸರಿಸಿದಲ್ಲಿ ಒಣಕೆಮ್ಮನ್ನು ನಿಯಂತ್ರಿಸಬಹುದು.

ಜೇನು ತುಪ್ಪ: ಜೇನು ತುಪ್ಪವನ್ನು ಗಂಟಲು ನೋವು ನಿವಾರಕವಾಗಿ ಬಳಸಬಹುದು. ಕಫ ಗಟ್ಟಿಯಾಗಿದ್ದಲ್ಲಿ ಅದನ್ನು ಕರಗಿಸಿ ದೇಹದಿಂದ ಹೊರ ಹಾಕಲು ಜೇನು ಸಹಕಾರಿಯಾಗಿದೆ. ಅಷ್ಟೇ ಅಲ್ಲ ಕೆಮ್ಮನ್ನು ಸಹ ಕಡಿಮೆ ಮಾಡುತ್ತದೆ. ಕೆಮ್ಮು ಹೆಚ್ಚಾಗಿ ಕಾಡುತ್ತಿದ್ದಲ್ಲಿ ರಾತ್ರಿ ಮಲಗುವ ಮುನ್ನ ಒಂದು ಟೀ ಸ್ಪೂನ್ ಜೇನು ತುಪ್ಪ ಸೇವಿಸಿ. ಮಲಗುವ ಮುನ್ನ ಜೇನು ತುಪ್ಪವನ್ನು ಸೇವಿಸುವಾಗ ಸಾಧ್ಯವಾದರೆ ಇದಕ್ಕೆ ಶುಂಠಿ ರಸವನ್ನು ಸೇರಿಸಬಹುದು.

ಅಮೃತಬಳ್ಳಿ: ಅಮೃತಬಳ್ಳಿಯು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಮಾಲಿನ್ಯ, ಹೊಗೆ, ಅಲರ್ಜಿಯಿಂದ ಉಂಟಾಗುವ ಕೆಮ್ಮಿಗೆ ಉತ್ತಮ ಮನೆಮದ್ದಾಗಿದೆ. ಖಾಲಿ ಹೊಟ್ಟೆಗೆ ಅಮೃತ ಬಳ್ಳಿಯ ಕಷಾಯ ಅಥವಾ ಜ್ಯೂಸ್ ಸೇವಿಸಿ, ಇದರಿಂದ ಕ್ರಮೇಣ ಕೆಮ್ಮು ಕಡಿಮೆಯಾಗುತ್ತದೆ. ಅಮೃತ ಬಳ್ಳಿಯ ನಿಯಮಿತ ಸೇವನೆಯು ಕೆಮ್ಮಿಗಷ್ಟೇ ಅಲ್ಲದೆ ಇತರೆ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತದೆ.

ಜಾಗತಿಕ ಸಮಸ್ಯೆಯಾಗಿ ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದ ದೂರವಿರಬೇಕಾದರೂ ಸಹ ಆಯುರ್ವೇದಲ್ಲಿ ತಿಳಿಸಿರುವ ನಿಯಮಗಳನ್ನು ಪಾಲಿಸಬಹುದು. ಆದರೆ ಯಾವುದೇ ಆಹಾರವಾಗಲಿ, ಆರೋಗ್ಯಕ್ಕೆ ಒಳ್ಳೆಯದು ಎಂದು ಮಿತಿಮೀರಿ ಸೇವಿಸುವುದು ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲಾ ಆಹಾರ ಪದಾರ್ಥಗಳ ಸೇವನೆ ನಿಯಮಿತವಾಗಿರಲಿ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author