ಆಯುರ್ವೇದಲ್ಲಿ ಮಾನಸಿಕ ಸಮಸ್ಯೆಗಳಿಗೂ ಇದೆ ಪರಿಹಾರ..!

ಆಯುರ್ವೇದಲ್ಲಿ ಮಾನಸಿಕ ಸಮಸ್ಯೆಗಳಿಗೂ ಇದೆ ಪರಿಹಾರ..!

ಆಯುರ್ವೇದ ಇದು ಭಾರತೀಯ ವೈದ್ಯಶಾಸ್ತ್ರ.. ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿರುವ ಈ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಸರ್ವರೋಗಗಳಿಗೂ ಚಿಕಿತ್ಸೆ ಉಂಟು..  ಇದು ವಿಶ್ವದ ಪುರಾತನ ಚಿಕಿತ್ಸಾ ವಿಧಾನವೂ ಆಗಿದ್ದು ಸಂಪೂರ್ಣ ಪ್ರಾಕೃತಿಕಾ ಚಿಕಿತ್ಸೆಯಾಗಿದೆ. ಈ ಅಯುರ್ವೇದ ಚಿಕಿತ್ಸೆಯಲ್ಲಿ ಕೇವಲ ದೇಹದ ಸಮಸ್ಯೆಗಳಿಗಷ್ಟೇ ಅಲ್ಲ ಮಾನಸಿಕ ಸಮಸ್ಯೆಗಳಿಗೂ ಪರಿಹಾರವಿದೆ. ಅಷ್ಟೇ ಅಲ್ಲ ಇದು ದೀರ್ಘ ಆಯುಷ್ಯದ ವಿಜ್ಞಾನವೂ ಹೌದು. 

ಈ ಆಯುರ್ವೇಧ ಚಿಕಿತ್ಸಾ ಪದ್ಧತಿಯಲ್ಲಿ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಕಾಲಾನುಸಾರವಾಗಿ ಹಾಗೂ ಪ್ರಕೃತಿಗೆ ಅನುಸಾರವಾಗಿ ಆಹಾರ ಸೇವನೆಯ ಕುರಿತು ತಿಳಿಸಿಕೊಡಲಾಗುತ್ತದೆ. ಹೀಗೆ ಋತುವಿಗೆ ಅನುಸಾರವಾಗಿ ಆಹಾರ ಸೇವಿಸೋದ್ರಿಂದ ದೇಹದ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಬಹುದಾಗಿದೆ. ಮನುಷ್ಯರಿಗೆ ಆಯುರ್ವೇದ ಉಪಚಾರದಿಂದ ಆನಾರೋಗ್ಯ ಆವರಿಸುವುದನ್ನು ತಡೆಯಬಹುದಾಗಿದೆ.. 

ರೋಗ ಬಂದಮೇಲೆ ಚಿಕಿತ್ಸೆಗಾಗಿ ಪರದಾಡುವುದಕ್ಕಿಂತ, ರೋಗ ದೇಹವನ್ನು ಆವರಿಸುವ ಮುನ್ನವೇ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಹೇಗೆ ಅನ್ನೋದನ್ನ ಈ ಆಯುರ್ವೇದದಿಂದ ತಿಳಿಯಬಹದಾಗಿದೆ. ಇದು ಮನುಷ್ಯರ ಮಾನಸಿಕ ಹಾಗೂ ದೈಹಿಕ ಸದೃಢತೆ ಸಾಧಿಸಲು ಸಹಕಾರಿಯಾಗಿದೆ.  ತ್ರಿದೋಷಗಳು ಎಂದೇ ಕರೆಯುವ ವಾತ, ಪಿತ್ತ, ಕಫವನ್ನು ಸಮತೋಲನದಲ್ಲಿಡುವಲ್ಲಿ ಆಯುರ್ವೇದ ಪ್ರಮುಖ ಪಾತ್ರವಹಿಸುತ್ತದೆ. ಈ ಆಯುರ್ವೇದದಲ್ಲಿ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಯಾಕೆಂದರೆ ಇಲ್ಲಿ ಸಂಪೂರ್ಣವಾಗಿ ನಿಸರ್ಗದಲ್ಲಿ ಸಿಗುವ ಅಂಶಗಳಿಂದಲೇ ಚಿಕಿತ್ಸೆ ನೀಡಲಾಗುತ್ತದೆ..

ಆಧುನಿಕತೆ ಬೆಳೆದಂತೆ ಆಯುರ್ವೇದ ಚಿಕಿತ್ಸೆ ಹಿನ್ನೆಲೆಗೆ ಸೇರಿದರೂ ಕೂಡ ಅದರ ಮಹತ್ವ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ.. ಇಂದು ಇಡೀ ವಿಶ್ವವೇ ಭಾರತದ ಈ ಪುರಾತನ ವೈದ್ಯಶಾಸ್ತ್ರದತ್ತ ಮುಖ ಮಾಡುತ್ತಿದೆ. ದೇಶ ವಿದೇಶದಲ್ಲಿ ಈ ಪ್ರಕೃತಿ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿರುವುದು ಭಾರತದ ಹೆಮ್ಮೆಯ ವಿಷಯ..  

ಈಗಂತೂ ಹಲವರು ವಿದೇಶಿ ಔಷಧಿಗಳಿಗೆ ಮಾರು ಹೋಗಿದ್ದಾರೆ. ಅದೇನೇ ಆಗ್ಲಿ ಅದೆಷ್ಟೇ ಖರ್ಚಾಗ್ಲಿ ವಿದೇಶಿ ಔಷಧಿಗಳೇ ಬೇಕು ಎನ್ನುತ್ತಾರೆ. ಇದಕ್ಕೆ ಕಾರಣ ಆಯುರ್ವೇದ  ಚಿಕಿತ್ಸೆಯ ಬಗ್ಗೆ ನಂಬಿಕೆ ಇಲ್ಲದಿರುವುದು. ಆದರೆ ಇದರಲ್ಲಿ ಒಂದು ವಿಪರ್ಯಾಸ ಅಂದ್ರೆ ಭಾರತೀಯರಿಗಿಂತಲೂ ವಿದೇಶಿಗರೇ ಹಚ್ಚು ಈ ಆಯುರ್ವೇದ ಚಿಕಿತ್ಸೆಯ ಬಗ್ಗೆ ಒಲವು ಹೊಂದಿದ್ದಾರೆ ಅಂದ್ರೆ ತಪ್ಪೇನಿಲ್ಲ ಅನ್ಸತ್ತೆ. ಆದರೆ ಭಾರತೀಯರಿಗೇ ಹಿಂದೂ ಧರ್ಮದ ಪಾರಂಪರಿಕ ಚಿಕಿತ್ಸಾ ಪದ್ಧತಿಯಾದ ಆಯುರ್ವೇದ ಚಿಕಿತ್ಸೆಯ ಬಗ್ಗೆ ಅನುಮಾನದ ಜೊತೆಗೆ ಭಯವೂ ಇದೆ ಅನಿಸುತ್ತದೆ. ಆದರೆ ಇದು ಸಂಪೂರ್ಣ ಪ್ರಕೃತಿ ಚಿಕಿತ್ಸೆಯಾಗಿದ್ದು ದೇಹದ ಆರೋಗ್ಯಕ್ಕು ಮತ್ತು ಮಾನಸಿಕ ಆರೊಗ್ಯಕ್ಕೂ  ಉತ್ತಮ.. ಆಯುರ್ವೇದದ ಬಗ್ಗೆ ಜನರಲ್ಲಿ ಇನ್ನು ಹೆಚ್ಚು ಅರಿವು ಮೂಡಿಸಬೇಕಾಗಿದೆ.   

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

► Follow us on Reddit
https://www.reddit.com/Planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author