ಆಯುರ್ವೇದ ಚಿಕಿತ್ಸಾ ಪದ್ಧತಿ ಬೆಳೆದು ಬಂದ ದಾರಿ..

ಆಯುರ್ವೇದ ಚಿಕಿತ್ಸಾ ಪದ್ಧತಿ ಬೆಳೆದು ಬಂದ ದಾರಿ..

ಆಯುರ್ವೇದ ಭಾರತದ ಪ್ರಚೀನ ವೈದ್ಯಕೀಯ ಪದ್ಧತಿ. ವೇದಗಳಲ್ಲೂ ಆಯುರ್ವೇದ ಚಿಕಿತ್ಸೆಯ ಬಗ್ಗೆ ಉಲ್ಲೇಖಗಳಿವೆ. ಈ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದ್ದು, ಒಂದೊಂದು ಅಂಶವವೂ ಕುತೂಹಲಕಾರಿಯಾಗಿವೆ.

ಇಡೀ ಜಗತ್ತಿಗೆ ಭಾರತದ ಅಮೂಲ್ಯವಾದ ಕೊಡುಗೆ ಎಂದರೆ ಅದು ಆಯುರ್ವೇದ ಪದ್ಧತಿ. ಇಡೀ ವಿಶ್ವಕ್ಕೇ ವೈದಯಕೀಯ ಕ್ಷೇತ್ರದಲ್ಲಿ ಗುರುವಾಗಿದ್ದ ಆಯುರ್ವೇದ ಪದ್ಧತಿ ಚಿಕಿತ್ಸೆಗೆ ಸರಿಯಾದ ಪೋಷಣೆ ಸಿಗಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡುತ್ತಿದೆ ಆಯುರ್ವೇದ ಚಿಕಿತ್ಸಾ ಪದ್ಧತಿ.

 

ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿಅಡ್ಡಪರಿಣಾಮಗಳಿಲ್ಲ:

ಭಾರತದಲ್ಲೇ ಹುಟ್ಟಿದ ಈ ಆಯುರ್ವೇದ ಚಿಕಿತ್ಸಾ ಪದ್ದತಿ ದೇಹ, ಮನಸ್ಸು ಮತ್ತು ಆತ್ಮದ ಸಾಂಗತ್ಯವಾಗಿದೆ. ಈ ವೈದ್ಯಕೀಯ ಪದ್ಧತಿಯನ್ನು ಕ್ರಿ.ಪೂರ್ವ ಆರನೇ ಶತಮಾನದಿಂದಲೂ ಅನುಸರಿಸುತ್ತಿರುವುದಾಗಿ ನಂಬಲಾಗಿದೆ. ಯಾವುದೇ ಅಡ್ಡಪರಿಣಾಮಗಳಾಗದಂತೆ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು, ಗಿಡಮೂಲಿಕೆಗಳನ್ನು ಬಳಸಿ ಔಷಧಿಗಳನ್ನು ತಯಾರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

 

ಆಯುರ್ವೇದದ ಪಿತಾಮಹ ಚರಕ ಮಹರ್ಷಿ

‘ಚರಕ ಮಹರ್ಷಿ’ ಅವರನ್ನು ಆಯುರ್ವೇದದ ಪಿತಾಮಹ ಎಂದು ಹೇಳಲಾಗುತ್ತದೆ. ಚರಕ ಮಹರ್ಷಿಗಳ ಶಿಷ್ಯರೂ ಸಹ ಈ ಚಿಕಿತ್ಸಾ ಪದ್ಧತಿಯಲ್ಲಿ ಹಲವು ರೀತಿಯ ಹೊಸ ಪ್ರಯೋಗಗಳನ್ನು ಮಾಡಿ ಯಾಶಸ್ವಿಯಾದರು ಎಂದು ಹೇಳಲಾಗುತ್ತದೆ. ಶುಶ್ರೂಷ ಎಂಬ ಮಹಾ ವೈದ್ಯ ಆಯುರ್ವೇದ ಪದ್ಧತಿಯನ್ನು ಮತ್ತಷ್ಟು ಉತ್ತಮಗೊಳಿಸಿ, ಹಲವಾರು ಶಸ್ತ್ರ ಚಿಕಿತ್ಸೆ ಮಾಡಿರುವ ಬಗ್ಗೆ ಉಲ್ಲೇಖಗಳಿವೆ.

 

‘ಚರಕ ಮಹರ್ಷಿ’ ಅವರ ದಾಖಲೆಗಳು:

ಆಯುರ್ವೇದದ ಪಿತಾಮಹ ಚರಕ ಮಹರ್ಷಿ ಅವರು ತಮಗೆ ತಿಳಿದ ವಿದ್ಯೆಯನ್ನು ‘ಚರಕ ಸಂಹಿತೆ’ ಎಂಬ ಪುಸ್ತಕದಲ್ಲಿ ದಾಕಲಿಸಿದ್ದಾರೆ. ಹಾಗೆಯೇ ಶೂಶ್ರತ ಮಹಾ ವೈದ್ಯರೂ ಸಹ ತಮ್ಮ ವಿದ್ಯೆಯನ್ನು ‘ಶುಶ್ರುತ ಸಂಹಿತೆ’ಯಲ್ಲಿ ತಮಗೆ ತಿಳಿದ ವಿದ್ಯೆಯನ್ನು ದಾಖಲಿಸಿದ್ದಾರೆ.

 

ಮಹರ್ಷಿ ಚರಕ ಸಂಹಿತ:

ಕ್ರಿ.ಪೂ 300ರಲ್ಲಿ ಜೀವಿಸಿದ್ದ ಚರಕ ಮಹರ್ಷಿಗಳು ತಮ್ಮ ಗ್ರಂಥ ‘ಚರಕ ಸಂಹಿತೆ’ಯಲ್ಲಿ ಸುಮಾರು 125 ಜ್ವರಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಸುಮಾರು 600 ಗಿಡಮೂಲಿಕೆಗಳನ್ನು, ಹಾಗೂ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನ ಬಳಸಿ ಔಷಧಿ ತಯಾರಿಸುವ ವಿಧಾನದ ಬಗ್ಗೆ ವಿವರಿಸಿದ್ದಾರೆ. ಚರಕ ಸಂಹಿತೆ ಪುಸ್ತಕವು ವಿಶ್ವದ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ.

 

ಆಯುರ್ವೇದ ಗ್ರಂಥ ಶುಶ್ರುತ ಸಂಹಿತೆ:

‘ಶುಶ್ರುತ ಸಂಹಿತೆಯಲ್ಲಿ ಮೂರು ಸಾವಿರ ಶಸ್ತ್ರ ಚಿಕಿತ್ಸೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಹಾಗೂ ಮೂಳೆ ಮುರಿತದ ಸಂದರ್ಭದಲ್ಲಿ ಚಿಕಿತ್ಸೆ ನೀಡುವ ಕುರಿತಾಗಿ, ಮೆದುಳಿನ ಶಸ್ತ್ರ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಯೂರೋಪಿನಲ್ಲಿ ಶಸ್ತ್ರ ಚಿಕಿತ್ಸೆ ಇನ್ನು ಅಂಬೆಗಾಲಿಡುತ್ತಿದ್ದ ಸಂದರ್ಭದಲ್ಲಿ ಶುಶ್ರುತರು ಶಸ್ತ್ರ ಚಿಕಿತ್ಸೆಗಾಗಿ 125 ರೀತಿಯ ಉಪಕರಣಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ.

ಆಯುರ್ವೇದ ಮಹಾನ್ ವೈದ್ಯರೆಂದರೆ ವಾಗ್ಭಟ:

ಆಯುರ್ವೇದ ಮತ್ತೊಬ್ಬ ಮಹಾನ್ ವೈದ್ಯರೆಂದರೆ ವಾಗ್ಭಟ. ಇವರು ‘ಅಷ್ಟಾಂಗ ಸಂಗ್ರಹ’ ಹಾಗೂ ‘ಅಷ್ಟಾಂಗ ಹೃದಯ’ ಎಂಬ ಎರಡು ಆಯುರ್ವೇದ ಗ್ರಂಥಗಳನ್ನು ರಚಿಸಿದ್ದಾರೆ. ಇವರೂ ಸಹ ಆಯುರ್ವೇದ ಚಿಕಿತ್ಸಾ ಪದ್ದತಿಯ ಹಲವಾರು ಮಾಹಿತಿಗಳನ್ನು ಈ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ ಎನ್ನಲಾಗಿದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe us on Youtube: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author