ಆರ್ಸಿಬಿ ಮ್ಯಾಕ್ವೆಲ್, ಜೇಮಿಸನ್‍ರನ್ನು ಖರೀದಿಸಿದ್ದು ಏಕೆ?

ಆರ್ಸಿಬಿ ಮ್ಯಾಕ್ವೆಲ್, ಜೇಮಿಸನ್ರನ್ನು ಖರೀದಿಸಿದ್ದು ಏಕೆ?

2021 ಐಪಿಎಲ್ಗೆ ಆರ್ಸಿಬಿ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ಗೆ 14.25 ಕೋಟಿ, ನ್ಯೂಜಿಲೆಂಡ್ ವೇಗದ ಬೌಲರ್ ಕೈಲ್ ಜೇಮಿಸನ್ಗೆ 15 ಕೋಟಿ ಖರೀದಿ ಮಾಡಿದೆಉಳಿದ ತಂಡಗಳ ಜೊತೆ ಜಿದ್ದಿಗೆ ಬಿದ್ದು ಇಬ್ಬರು ಆಟಗಾರರನ್ನ ಆರ್ಸಿಬಿ ಖರೀದಿಸಿದ್ದರೆ ಹಿಂದೆ ಇಂಪಾರ್ಟ್ಟೆಂಟ್ ಕಾರಣಗಳಿವೆ.

ಎಬಿಡಿಯಂತೆ ಲಕ್ ತರ್ತಾರಾ ಮ್ಯಾಕ್ಸ್ವೆಲ್?: 2010 ಐಪಿಎಲ್ನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತಂಡದ ಪರ ಆಡಿದ್ದ ಎಬಿ ಡಿ ವಿಲಿಯರ್ಸ್ ಇಡೀ ಸೀಸನ್ನಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಿರಲಿಲ್ಲ. ಆದರೆ 2011 ಐಪಿಎಲ್ಗೆ ಎಬಿಡಿಯನ್ನ ಆರ್ಸಿಬಿ ಖರೀದಿ ಮಾಡ್ತು. ವಿಲಿಯರ್ಸ್ ಬೆಂಗಳೂರು ತಂಡದ ಇಮೇಜ್ ಬದಲಿಸಿದ್ರು. ಪ್ರತಿ ಸೀಸನ್ನಲ್ಲೂ ರಾಶಿ ರಾಶಿ ಸಿಕ್ಸರ್ ಬಾರಿಸಿದ್ರು.

ಮ್ಯಾಕ್ಸ್ವೆಲ್ 2020 ಐಪಿಎಲ್ನಲ್ಲಿ ಒಂದೇ ಒಂದು ಸಿಕ್ಸರ್ ಸಹ ಹೊಡೆಯಲಿಲ್ಲ. ವರ್ಷ ಆರ್ಸಿಬಿ ಮ್ಯಾಕ್ಸ್ವೆಲ್ರನ್ನ ಖರೀದಿ ಮಾಡಿದೆ. ಮ್ಯಾಕ್ಸ್ವೆಲ್, ಎಬಿಡಿ ಥರ ಸಿಕ್ಸರ್ ಸುಗ್ಗಿ ಮಾಡ್ತಾರಾ, ಆರ್ಸಿಬಿ ಲಕ್ ಬದಲಿಸ್ತಾರಾ ಅನ್ನೋ ಕುತೂಹಲ ಆರ್ಸಿಬಿ ಅಭಿಮಾನಿಗಳನ್ನ ಕಾಡ್ತಾಯಿದೆ.

 

ಮ್ಯಾಕ್ಸ್ವೆಲ್ರನ್ನ ಯಾಕೆ ಖರೀದಿ ಮಾಡಿದ್ವಿ ಅನ್ನೋದಕ್ಕೆ ಆರ್ಸಿಬಿ ತಂಡದ ನಿರ್ದೇಶಕ ಮೈಕ್ ಹೆಸನ್ ಬಲವಾದ ಕಾರಣ ನೀಡಿದ್ದಾರೆ... ಆಸ್ಟ್ರೇಲಿಯಾದ ಆಲ್ರೌಂಡರ್ ಅನ್ನು ಬೇರೆ ತಂಡಗಳು ಹೇಗೆ ಬಳಸಿಕೊಂಡವು ಅನ್ನೋದು ನಮಗೆ ತಿಳಿದಿಲ್ಲ. ಅವರಿಗೆ ಯಾವ್ಯಾವ ಜವಾಬ್ದಾರಿ ಕೊಟ್ಟಿದ್ವು ಅನ್ನೋದು ನಮಗೆ ಗೊತ್ತಿಲ್ಲ. ಆದ್ರೆ ನಾವು ಮ್ಯಾಕ್ಸ್ವೆಲ್ಗೆ ಏನು ಜವಾಬ್ದಾರಿ ಕೊಡಬೇಕು ಅನ್ನೋದನ್ನ ನಿರ್ಧಾರ ಮಾಡಿಕೊಂಡೇ ಅವರನ್ನ ಖರೀದಿಸಿದ್ದೇವೆ ಎಂದಿದ್ದಾರೆ.

ಮ್ಯಾಕ್ಸ್ವೆಲ್ ಸೇರ್ಪಡೆಯಿಂದ ಎಬಿ ಡಿ ವಿಲಿಯರ್ಸ್ ಮೇಲಿನ ಒತ್ತಡ ಕಡಿಮೆ ಆಗಲಿದೆ.. ಮ್ಯಾಕ್ಸ್ವೆಲ್ ಫಿನಿಶರ್ ಆಗಿ ತಂಡಕ್ಕೆ ನೆರವಾಗಬಹುದು. ಅವರ ಆಫ್ಬ್ರೇಕ್ ಬೌಲಿಂಗ್ ಕೊಹ್ಲಿಗೆ ಒಳ್ಳೆಆಯ್ಕೆಯಾಗಲಿದೆ. ಮ್ಯಾಕ್ಸ್ವೆಲ್ ಸೂಪರ್ ಫೀಲ್ಡರ್ ಅನ್ನೋದು ಎಲ್ರಿಗೂ ಗೊತ್ತೇ ಇದೆ.

ಜೇಮಿಸನ್ರಿಂದ ಆರ್ಸಿಬಿಗೇನು ಲಾಭ? : ನ್ಯೂಜಿಲೆಂಡ್ ಆರೂವರೆ ಅಡಿ ವೇಗಿ ಕೈಲ್ ಜೇಮಿಸನ್, 2020ರಲ್ಲಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿದ್ದಾಗ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದರು., ನ್ಯೂಜಿಲೆಂಡ್ ಹಸಿರು ಪಿಚ್ಗಳಲ್ಲಿ ಜೇಮಿಸನ್ ಬೌಲಿಂಗ್ ಎದುರಿಸಲು ಭಾರತೀಯರು ಹೆಣಗಾಡಿದ್ರುಕೊಹ್ಲಿಯನ್ನು ಇಂಪ್ರೆಸ್ ಮಾಡಿದ್ದ ಜೇಮಿಸನ್ ಸ್ಥಿರ ಪ್ರದರ್ಶನ ನೀಡ್ತಲೇ ಬಂದಿದ್ದಾರೆಟಿ20 ಕ್ರಿಕೆಟ್ನಲ್ಲಿ ಅಬ್ಬಬ್ಬಾ ಎನ್ನುವ ಆಟ ತೋರದಿದ್ದರೂ, ನ್ಯೂಜಿಲೆಂಡ್ನವರೇ ಆದ ಆರ್ಸಿಬಿ ಡೈರೆಕ್ಟರ್ ಮೈಕ್ ಹೆಸನ್ಗೆ ಜೇಮಿಸನ್ ಮೇಲೆ ಭಾರೀ ನಂಬಿಕೆ ಇದ್ದಂಗಿದೆ.

ನ್ಯೂಜಿಲೆಂಡ್ ಪಿಚ್ಗಳಲ್ಲಿ ಎಕ್ಸ್ಪ್ರೆಸ್ ವೇಗದಲ್ಲಿ ಬ್ಯಾಟ್ಸ್ಮನ್ಗಳನ್ನು ನಡುಗಿಸಿದ್ದ ಜೇಮಿಸನ್, ಭಾರತದ ಪಿಚ್ಗಳಲ್ಲೂ ಸಕ್ಸಸ್ ಕಾಣ್ತಾರಾ, ಗೊತ್ತಿಲ್ಲ. ನಿರೀಕ್ಷೆ ಉಳಿಸಿಕೊಂಡ್ರೆ ಸರಿ ಇಲ್ಲಾಂದ್ರೆ ಆರ್ಸಿಬಿಗೆ 15 ಕೋಟಿ ಖೋತಾ ಗ್ಯಾರಂಟಿ...

ಇಬ್ಬರು ಸೂಪರ್ ಟ್ಯಾಲೆಂಟೆಡ್ ಸ್ಟಾರ್ಗಳು ತಂಡಕ್ಕೆ ಬಂದ್ಮೇಲೆ ಆರ್ಸಿಬಿ ಅಭಿಮಾನಿಗಳು ಸಲ ಗ್ಯಾರಂಟಿ ಕಪ್ ನಮ್ದೆ ಅಂತಿದ್ದಾರೆಆರ್ಸಿಬಿ ಕಪ್ ಗೆಲ್ಲುತ್ತಾ, ಇಬ್ಬರು ತಮಗೆ ಸಿಗೋ ದುಡ್ಡಿಗೆ ತಕ್ಕ ಆಟವಾಡ್ತಾರಾ ನೋಡೋಣ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author