ಇದು ರಾಕ್ಷಸಿ ಹಿಡಿಂಬಿಯನ್ನುಆರಾಧಿಸುವ ದೇವಾಲಯ..!

ಇದು ರಾಕ್ಷಸಿ ಹಿಡಿಂಬಿಯನ್ನುಆರಾಧಿಸುವದೇವಾಲಯ..!

ಭಾರತೀಯ ಗ್ರಂಥಗಳು, ಪುರಾಣಗಳು, ಕಾವ್ಯಗಳೇ ಅಂಥವು. ಓದಿದಷ್ಟೂ ವಿಸ್ಮಯಕಾರಿ ಕಥೆಗಳು ಹುಟ್ಟಿಕೊಳ್ಳುತ್ತವೆ. ರಾಮಾಯಣವೇ ಆಗಲಿ, ಮಹಾಭಾರತವೇ ಆಗಲಿ ಓದಿದಾಗ ಪಾತ್ರದ ಪರಿಚಯ, ಘಟನಾವಳಿಗಳಿಂದ ಅಚ್ಚರಿಯೆನಿಸುವ ಹಲವು ವಿಚಾರಗಳು ತಿಳಿದುಬರುತ್ತವೆ. ಪುರಾಣದಲ್ಲಿರುವ ಕಥೆಗೆ ತಕ್ಕಂತೆ ಹಲವು ತಾಣಗಳು ಭಾರತದಾದ್ಯಂತ ಕಂಡು ಬರುತ್ತವೆ. ಸದ್ಯ ಈ ಪ್ರದೇಶಗಳು ಐತಿಹಾಸಿಕ, ಧಾರ್ಮಿಕ ಸ್ಥಳಗಳಾಗಿ ಎಲ್ಲರನ್ನೂ ಕುತೂಹಲ ಮೂಡಿಸುತ್ತಿವೆ.

hindimba temple manalisource and pic credit:Times of India

ಮಹಾಭಾರತದ ಕಥೆ ಸಂಪೂರ್ಣವಾಗಿ ತಿಳಿದಿರುವವರು ಹಿಡಿಂಬಿ ಎಂಬ ರಾಕ್ಷಸಿಯ ಬಗ್ಗೆ ತಿಳಿದಿರುತ್ತಾರೆ. ಪಾಂಡವರು ವನವಾಸಕ್ಕೆ ತೆರಳಿದ್ದ ಸಂದರ್ಭ ಸಿಕ್ಕ ರಾಕ್ಷಸಿ ಹಿಡಿಂಬಿ. ಅಚ್ಚರಿ ಎಂದರೆ ಈ ರಾಕ್ಷಸಿಯನ್ನು ಪೂಜಿಸುವ ದೇವಾಲಯವು ಭಾರತದಲ್ಲಿದೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ಹಿಡಂಬಾ ದೇವಿ ದೇವಾಲಯದಲ್ಲಿ ಹಿಡಿಂಬಿಯನ್ನು ಪೂಜಿಸಲಾಗುತ್ತಿದ್ದು, ನವರಾತ್ರಿಯ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆಯೂ ನಡೆಯುತ್ತದೆ.

hindimba temple manalisource and pic credit: https://www.sushanttravels.com

ಹಿಡಿಂಬಿ ಯಾರು..?

ಮಹಾಭಾರತದ ಆದಿಪರ್ವದಲ್ಲಿ  ಹಿಡಿಂಬಿಯ ಕಥೆ ಬರುತ್ತದೆ. ವನವಾಸದ ಸಂದರ್ಭದಲ್ಲಿ ಪಾಂಡವರು ಕಾಡಿನಲ್ಲಿ ಅಲೆಯುತ್ತಿರುವಾಗ ಅಣ್ಣ-ತಂಗಿಯರಾದ ಹಿಡಿಂಬ ಹಾಗೂ ಹಿಡಿಂಬಿಯರ ಕಣ್ಣಿಗೆ ಬೀಳುತ್ತಾರೆ. ಹಿಡಿಂಬ ಮಾಯಾಶಕ್ತಿಯುಳ್ಳ ನರಭಕ್ಷಕ ರಕ್ಕಸನಾಗಿದ್ದರಿಂದ ಪಾಂಡವರಲ್ಲಿ ಬಲಶಾಲಿಯಾಗಿದ್ದ ಭೀಮನನ್ನು ತಿನ್ನಲು ಬಯಸುತ್ತಾನೆ. ರಾತ್ರಿ ಕಾಡಿನಲ್ಲಿ ಪಾಂಡವರು ಮಲಗಿರುವಾಗ ಭೀಮನೊಬ್ಬ ಮಾತ್ರ ಎಚ್ಚರದಿಂದಿದ್ದು ಕಾಯುತ್ತಿರುತ್ತಾನೆ. ಈ ಸಮಯದಲ್ಲಿ ಅಣ್ಣನ ಆದೇಶದಂತೆ ಮೋಹಕ ಸ್ತ್ರೀಯ ವೇಷ ತೊಟ್ಟು ಬಂದ ಹಿಡಿಂಬಿ ಭೀಮನ ರೂಪಕ್ಕೆ ಸೋತು ಪ್ರೀತಿಯಲ್ಲಿ ಬೀಳುತ್ತಾಳೆ.

bheema and hidimbasource and pic credit: https://unclekatha.com

ಭೀಮನಲ್ಲಿ ತನ್ನ ಅಣ್ಣ ರೂಪಿಸಿದ ಸಂಚಿನ ಬಗ್ಗೆ ತಿಳಿಸುತ್ತಾಳೆ. ಭೀಮನು ಹಿಡಿಂಬನೊಂದಿಗೆ ಯುದ್ಧ ಮಾಡಿ ಅವನನ್ನು ಸಂಹರಿಸಿ ಹಿಡಿಂಬೆಯನ್ನು ಹತ್ಯೆಗೈಯ್ಯಲು ಮುಂದಾಗುತ್ತಾನೆ. ಆದರೆ ತಾಯಿ ಕುಂತಿಯು ಆತನನ್ನು ತಡೆದು ಮನಃಪರಿವರ್ತನೆಗೊಂಡ ಹಿಡಿಂಬಿಯನ್ನು ಮದುವೆ ಮಾಡಿಕೊಳ್ಳಲು ಹೇಳುತ್ತಾಳೆ. ಅದರಂತೆ ಭೀಮ-ಹಿಡಿಂಬಿಯ ಮದುವೆಯಾಗುತ್ತದೆ, ಅವರಿಗೆ ಹುಟ್ಟಿದ ಮಗನೇ ಘಟೋತ್ಕಚ. ಮದುವೆಯ ಮೊದಲೇ ವಿಧಿಸಿದ ಷರತ್ತಿನಂತೆ ಭೀಮ, ಮಗುವಾದ ನಂತರ ಹಿಡಿಂಬಿಯನ್ನು ಬಿಟ್ಟು ಹೋಗುತ್ತಾನೆ. ಆ ಬಳಿಕ ಹಿಡಿಂಬಿ ಘೋರ ತಪಸ್ಸಿನಲ್ಲಿ ನಿರತಳಾಗುತ್ತಾಳೆ. 

ಮನಾಲಿಯಲ್ಲಿದೆ ಹಿಡಿಂಬಿ ದೇವಾಲಯ

hindimba templesource and pic credit: https://www.tripoto.com

ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಈ ಹಿಡಿಂಬಿ ದೇವಾಲಯವಿದೆ. ದಟ್ಟವಾದ ಅರಣ್ಯದಲ್ಲಿ ದೈತ್ಯ ಮರಗಳ ಮಧ್ಯದಲ್ಲಿ ಮೂರು ಸ್ಥರಗಳ ಗೋಪುರದಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯದ ಆವರಣದಲ್ಲಿ ಇರುವ ಶಾಸನದ ಪ್ರಕಾರ ಈ ದೇವಾಲಯವು 1553ರಲ್ಲಿ ರಾಜಾ ಬಹೂದ್ದರ್ ಸಿಂಗ್ ಎಂಬಾತನಿಂದ ನಿರ್ಮಿಸಲ್ಪಟ್ಟಿದೆ. ದೇವಾಲಯದಲ್ಲಿ ದೊಡ್ಡದಾದ ಬಂಡೆಯಿದ್ದು, ಅದರ ಮೇಲೆ ಹಿಡಿಂಬಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಹಿಮಾಲಯದ ಕೆಳಭಾಗದಲ್ಲಿನ ಢುಂಗಿರಿ ವನ್ ವಿಹಾರ್ ಎಂಬ ಸೀಡರ್ ಮರಗಳ ಅರಣ್ಯದಿಂದ ದೇವಾಲಯವು ಸುತ್ತುವರಿಯಲ್ಪಟ್ಟಿದೆ.

hidimba templesource and pic credit: https://www.thrillophilia.com

ಪಗೋಡಾ ಆಕಾರದಲ್ಲಿರುವ ಈ ದೇವಾಲಯದಲ್ಲಿ ಅದ್ಭುತವೆನಿಸುವ ಕೆತ್ತನೆ ಕೆಲಸದ ಮರದ ಬಾಗಿಲುಗಳು, ರಥಗಳು, ಹೆಜ್ಜೆ ಗುರುತುಗಳನ್ನು ನೋಡಬಹುದು. ಇದು 500 ವರುಷಗಳಷ್ಟು ಹಳೆಯದು ಎಂದು ತಿಳಿದುಬಂದಿದೆ. ಈ ದೇವಾಲಯದ ಕಲಾಕೃತಿಯ ಕೆತ್ತನೆಗಾರನು ತನ್ನ ಕೆಲಸವನ್ನು ಪೂರ್ಣಗೊಳಿಸಿದ ನಂತರ ಅವನ ಕೈಗಳನ್ನು ಕತ್ತರಿಸಲಾಯಿತು ಎಂದು ಹೇಳಲಾಗುತ್ತದೆ. ಹೀಗಾಗಿಯೇ ಇಂಥಹಾ ಅದ್ಭುತ ಕೆತ್ತನೆಗಳು ಮತ್ತೆಲ್ಲಿಯೂ ಕಂಡುಬರುವುದಿಲ್ಲ. 

hidimba templesource and pic credit:Times of India

ದೇವಾಲಯವು ಮುಖ್ಯವಾಗಿ ಮರ ಮತ್ತು ಕಲ್ಲುಗಳಿಂದ ನಿರ್ಮಾಣವಾಗಿದೆ. ದೇವಾಲಯದ ಮೇಲೆ 24 ಮೀಟರ್ ಎತ್ತರದ ಮರದ ಗೋಪುರವಿದೆ. ದೇವಾಲಯದ ಮುಖ್ಯ ಬಾಗಿಲು ದುರ್ಗಾ ದೇವಿಯನ್ನು ಚಿತ್ರಿಸುವ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿದೆ. ದೇವಾಲಯದ ಬುಡವನ್ನು ಬಿಳಿಚಿದ ಕಲ್ಲುಗಳಿಂದ ಮಾಡಲಾಗಿದೆ. ಸ್ಥಳೀಯವಾಗಿ ಈ ದೇವಾಲಯವು ಢುಂಗರಿ ದೇವಾಲಯ ಎಂದೇ ಪರಿಚಿತವಾಗಿದೆ. ದೇವಾಲಯದಲ್ಲಿ ಮುಖ್ಯ ದೇವತೆಯಾಗಿ ಹಿಡಿಂಬೆಯನ್ನು ಆರಾಧಿಸಲಾಗುತ್ತದೆಯಾದರೂ ಇಲ್ಲಿ ಶಿವ-ಪಾರ್ವತಿ, ವಿಷ್ಣು-ಲಕ್ಷ್ಮಿ, ನವಗ್ರಹ, ಗಣೇಶ, ದುರ್ಗೆಯರ ವಿಗ್ರಹಗಳನ್ನು ಸಹ ನೋಡಬಹುದು. ಮನಾಲಿಯಲ್ಲಿನ ಜನರು ಹಿಡಿಂಬಾ ದೇವಿಯನ್ನು ದೇವತೆಯಾಗಿ ಪೂಜಿಸುತ್ತಾರೆ.

hidimba temple manalisource and pic credit:Times of India

ನವರಾತ್ರಿಯ ಸಮಯದಲ್ಲಿ ರಾಷ್ಟ್ರದಾದ್ಯಂತದ ಎಲ್ಲಾ ಹಿಂದೂಗಳು ದುರ್ಗಾ ದೇವಿಯನ್ನು ಪೂಜಿಸುತ್ತಾರೆ, ಆದರೆ ಮನಾಲಿಯಲ್ಲಿನ ಜನರು ಹಿಡಿಂಬಾ ದೇವಿಯನ್ನು ಪೂಜಿಸುತ್ತಾರೆ. ದಸರಾ ಹಬ್ಬದ ಸಮಯದಲ್ಲಿ, ದೇವಿ ಹಿಡಿಂಬಿ ವಿಗ್ರಹವನ್ನು ಧಲ್ಪುರ್ ಮೈದಾನಕ್ಕೆ ಕೊಂಡೊಯ್ಯಲಾಗುತ್ತದೆ. ಈ ಸಂಪ್ರದಾಯವನ್ನು "ಘೋರ್ ಪೂಜಾ" ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಮೇ 14 ರಂದು ಹಿಡಿಂಬಿ ದೇವಿಯ ಜನ್ಮದಿನಾಚರಣೆಯಲ್ಲಿ ಮತ್ತೊಂದು ಜಾತ್ರೆ ನಡೆಯುತ್ತದೆ.  

Enjoyed this article? Stay informed by joining our newsletter!

Comments

You must be logged in to post a comment.

About Author