ಇನ್ಮುಂದೆ ಪ್ಲಾಸ್ಟಿಕ್ ಬಳಸೋ ಮುನ್ನ ಒಮ್ಮೆ ಯೋಚಿಸಿ..!

ಇನ್ಮುಂದೆ ಪ್ಲಾಸ್ಟಿಕ್ ಬಳಸೋ ಮುನ್ನ ಒಮ್ಮೆ ಯೋಚಿಸಿ..!

ಈಗಂತು ಎಲ್ಲೆಲ್ಲಿಯೂ ಪ್ಲಾಸ್ಟಿಕ್ ನದ್ದೇ ಕಾರುಬಾರು. ಮನೆ, ಆಫೀಸ್, ಅಡುಗೆ ಮನೆ, ಬೆಡ್ ರೂಮ್, ಬಾತ್ ರೂಮ್ ಎಲ್ಲಿ ನೋಡಿದ್ರೂ ಪ್ಲಾಸ್ಟಿಕ್ ರಾರಾಜಿಸುತ್ತಿರುತ್ತದೆ. ಅಡುಗೆ ಮನೆಯಲ್ಲಿ ಆಹಾರವನ್ನ ಇಡಲು, ಊಟ ಮಾಡಲು, ನೀರು ಕುಡಿಯಲು ಪ್ಲಾಸ್ಟಿಕ್ ಬೌಲ್, ತಟ್ಟೆ, ಪ್ಲಾಸ್ಟಿಕ್ ವಾಟರ್ ಬಾಟಲ್, ಲೋಟ ಇದ್ದೇ ಇರುತ್ತವೆ. ಇನ್ನು ಬಾತ್ ರೂಮ್ ನಲ್ಲಿ ಅಗತ್ಯ ವಸ್ತುಗಳನ್ನ ಇಡಲು ಹಲವಾರು ರೀತಿಯ ಪ್ಲಾಸ್ಟಿಕ್ ಪ್ರಾಡಕ್ಟ್ ಗಳು ಇದ್ದೇ ಇರುತ್ತವೆ. ಮನೆಯ ಹಾಲ್ ನಲ್ಲಿ, ಬೆಡ್ ರೂಮ್ ಗಳಲ್ಲಿ, ಆಫೀಸ್ ಗಳಲ್ಲಿ ಅಲಂಕಾರಕ್ಕಾಗಿ ಪ್ಲಾಸ್ಟಿಕ್ ನಿಂದ ಮಾಡಿದ ಅಲಂಕಾರಿಕ ವಸ್ತುಗಳು ಇಲ್ಲದೆ ಇರೊಲ್ಲ ಬಿಡಿ.

ಈ ಪ್ಲಾಸ್ಟಿಕ್ ಬಳಕೆಯಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ.. ಮನುಷ್ಯನ ಆರೋಗ್ಯದ ಮೇಲೆ, ಪರಿಸರದ ಮೇಲೆ ಪ್ಲಾಸ್ಟಿಕ್ ಕೆಟ್ಟ ಪರಿಣಾಮ ಬೀರುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರು ಪ್ಲಾಸ್ಟಿಕ್ ಬಳಕೆ ಮಾತ್ರ ಕಡಿಮೆಯಾಗಿಲ್ಲ. ಇದರ ದುಷ್ಟರಿಣಾಮದ ಬಗ್ಗೆ ಇನ್ನಷ್ಟು ಜಾಗೃತಿ ಅಗತ್ಯವಿದೆ. 

ಪ್ಲಾಸ್ಟಿಕ್ ಅನ್ನು ಅಡುಗೆ ಮನಯಲ್ಲಿ ಹೆಚ್ಚು ಬಳಸೋದ್ರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯಗಳನ್ನ ಎದುರಿಸಬೇಕಾಗುತ್ತದೆ. ಸಿಕ್ಕ ಸಿಕ್ಕ ಬಾಟಲಿಗಳನ್ನು ನೀರು ತುಂಬಿಟ್ಟು ಕುಡಿಯಲು ಬಳಸೋದ್ರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ನೀವು ನೀರಿನ ಬಾಟಲಿ ಕೊಂಡುಕೊಳ್ಳಲು ಅಂಗಡಿಗೆ ಹೋದಾಗ ತಪ್ಪದೆ ಅವುಗಳ ತಳಬಾಗವನ್ನು ಗಮನಿಸಿ. ಯಾಕಂದ್ರೆ ಬಾಟಲಿಗಳ ತಳ ಬಾಗದಲ್ಲಿ ಪಿಇಟಿ ಅಥಾವಾ ಪಿಇಟಿಇ ಎಂದು ಬರದಿದ್ದರೆ ಅವುಗಳನ್ನ ಕೊಂಡುಕೊಳ್ಳದಿರುವುದೆ ಉತ್ತಮ.. ಈ ಬಾಟಲಿಗಳಲ್ಲಿ ನೀರು ಸಂಗ್ರಹಿಸುವುದರಿಂದ ವಿಷ ಪದಾರ್ಥ ಬಿಡುಗಡೆಯಾಗುತ್ತದೆ. ಈ ಬಾಟಲಿಗಳಲ್ಲಿನ ನೀರು ಕುಡಿಯಲು ಯೋಗ್ಯವಲ್ಲ. 

ಇನ್ನು ಕೆಲವೊಂದು ಬಾಟಲಿಗಳ ಮೇಲೆ ಪಿಸಿ ಎಂದು ಮುದ್ರಿಸಿದ್ದರೆ ಅವುಗಳನ್ನ ಬಳಸದೇ ಇರುವುದು ಉತ್ತಮ. ಅಷ್ಟೇ ಅಲ್ಲ ಪಿವಿಸಿ ಅಥವಾ 3ವಿ ಎಂದು ಬರೆದಿರುವ ಪ್ಲಾಸ್ಟಿಕ್ ಬಾಟೆಲ್ ಗಳ ಬಳಕೆಯಿಂದ ಹಾರ್ಮೊನ್ ಇಂಬ್ಯಾಲೆನ್ಸ್ ಚಾನ್ಸಸ್ ಹೆಚ್ಚಿರುತ್ತದೆ.. ಕೆಲವೊಂದು ಪ್ಲಾಸ್ಟಿಕ್ ವಸ್ತುಗಳ ಬಳಕೆ ಕ್ಯಾನ್ಸರ್ ಗೂ ಕಾರಣವಾಗುತ್ತವೆ ಎನ್ನುತ್ತವೆ ಸಂಶೋಧನೆÀಗಳು.. ಇನ್ನು ಮನೆಯಲ್ಲಿ ಕಲವೊಮ್ಮೆ ಮಿಕ್ಕ ಆಹಾರವನ್ನು ಎತ್ತಿಡಲು ಪ್ಲಾಸ್ಟಿ ವಸ್ತುಗಳನ್ನ ಬಳಸದೇ ಇರೋದು ಉತ್ತಮ.   

ಈ ಪ್ಲಾಸ್ಟಿಕ್ ಬಳಸೋದ್ರಿಂದ ಇದರಲ್ಲಿರು ವಿಷಕಾರಿ ಅಂಶಗಳು ನಮ್ಮ ದೇಹ ಸೇರುತ್ತಿವೆ. ಅಷ್ಟೇ ಅಲ್ಲ ಕೆಲವೊಮ್ಮೆ ವೇಸ್ಟ್ ಎಂದು ಪ್ಲಾಸ್ಟಿಕ್ ನಲ್ಲಿ ಸುತ್ತಿ ಬಿಸಾಡುವ ಆಹಾರವನ್ನು ಸೇವಿಸುವ ಪ್ರಾಣಿಗಳೂ ಸಹ ಮೂಖ ರೋಧನೆ ಅನುಭವಿಸುತ್ತಿವೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

► Follow us on Reddit
https://www.reddit.com/Planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author