ಇಲ್ಲಿ ಹೆಣದ ಮೇಲೆ ಕೂತಿದ್ದಾಳೆ ಶಕ್ತಿ ದೇವತೆ!

ಇಲ್ಲಿ ಹೆಣದ ಮೇಲೆ ಕೂತಿದ್ದಾಳೆ ಶಕ್ತಿ ದೇವತೆ!

Jogulamba temple

ಜೋಗುಳಾಂಬ ದೇವಿಯ ಮಹಿಮೆ ಅರಿಯಿರಿ

ದಕ್ಷ ಯಜ್ಞದಿಂದ ಸತಿಯನ್ನು ಕಳೆದುಕೊಂಡ ಶಿವನು, ಆಕೆಯ ದೇಹವನ್ನು ಹೊತ್ತು ತಾಂಢವವಾಡುವಾಗ ಲೋಕದ ಹಿತಕ್ಕಾಗಿ ವಿಷ್ಣುವು ಸುದರ್ಶನ ಚಕ್ರ ಪ್ರಯೋಗಿಸಿ ಸತಿಯ ದೇಹವನ್ನು ತುಂಡರಿಸಿದನು. ಆಗ ಸತಿಯ ದವಡೆಯ ಮೇಲ್ಭಾಗ ಬಿದ್ದಿದ್ದು ಈಗಿನ ತೆಲಂಗಾಣ ರಾಜ್ಯದಲ್ಲಿರುವ ಆಲಂಪುರದಲ್ಲಿ. 

 

ಸತಿ ದೇವಿಯ 18 ಮಹಾ ಶಕ್ತಿ ಪೀಠಗಳಲ್ಲಿ ದೇವಿಯನ್ನು ಒಂದೊಂದು ಹೆಸರಿನಲ್ಲಿ ಪೂಜಿಸಲಾಗುತ್ತದೆ. ಒಂದೊಂದು ಕ್ಷೇತ್ರಕ್ಕೂ ತನ್ನದೇ ಆದ ಇತಿಹಾಸ, ಮಹಿಮೆಗಳಿವೆ. ಆಲಂಪುರದಲ್ಲಿರುವ ಸತಿ ದೇವಿಯ ಅವತಾರವನ್ನು ಜೋಗುಳಾಂಬ ದೇವಿ ಎಂದು ಕರೆಯಲಾಗುತ್ತದೆ. 

 

ಜೋಗುಳಾಂಬ ಎನ್ನುವ ಪದವು ತೆಲುಗಿನ `ಯೋಗುಲ ಅಮ್ಮ' ಎನ್ನುವ ಪದದಿಂದ ಬಂದಿದೆ. ಅಂದರೆ ಯೋಗಿಗಳ ತಾಯಿ ಎಂದರ್ಥ. 18 ಶಕ್ತಿಪೀಠಗಳಲ್ಲಿ ಜೋಗುಳಾಂಬ ದೇವಿಯ ಯೋಗಿನಿ ಪೀಠವು 5ನೇಯದ್ದು. 

 

ದೇವಿಯ ವಿಗ್ರಹವು ಭಯಂಕರವಾಗಿದೆ!

ಈ ಕ್ಷೇತ್ರದಲ್ಲಿರುವ ಜೋಗುಳದೇವಿಯ ವಿಗ್ರಹವು ಉಗ್ರ ಸ್ವರೂಪದ್ದಾಗಿದೆ. ದೇವಿಯು ಹೆಣದ ಮೇಲೆ ಕೂತಿದ್ದು, ಆಕೆಯ ತಲೆಯ ಮೇಲೆ ಚೇಳು, ಕಪ್ಪೆ, ಹಲ್ಲಿ, ಗೂಬೆ ಕೂತಿದ್ದು, ತಲೆಯ ಮೇಲೆ ಕೂದಲಿನ ರಾಶಿ ಇದೆ. 

 

ದೇವಿಯು ನಗ್ನಳಾಗಿದ್ದು, ತನ್ನ ನಾಲಿಗೆಯನ್ನು ಹೊರ ಚಾಚಿದ್ದಾಳೆ. ದೇವಿಯ ಈ ಉಗ್ರ ಅವತಾರವನ್ನು ಆರಾಧಿಸುವ ಯೋಗಿಗಳಿಗೆ ಆಕೆ ಸಿದ್ಧಿಯನ್ನು ಪ್ರಾಪ್ತಿ ಮಾಡುತ್ತಾಳೆ ಎಂದು ನಂಬಲಾಗಿದ್ದು, ಇದೇ ಕಾರಣಕ್ಕೆ ದೇವಿಯನ್ನು ಜೋಗುಲಾಂಭ ಎನ್ನುವ ಹೆಸರು ಬಂದಿದೆ. 

Jogulamba ariel viewImage Credits : Youtube

ತುಂಗಭದ್ರ, ಕೃಷ್ಣಾ ನದಿಗಳ ಸಂಗಮ

ಈ ಕ್ಷೇತ್ರದಲ್ಲಿ ತುಂಗಭದ್ರ ಹಾಗೂ ಕೃಷ್ಣಾ ನದಿಗಳ ಸಂಗಮವಾಗಲಿದ್ದು, ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಜ್ಯೋತಿರ್ಲಿಂಗ ಕ್ಷೇತ್ರವಾದ ಶ್ರೀಶೈಲಕ್ಕೆ  ಆಲಂಪುರವು ಪಶ್ಚಿಮದ ಬಾಗಿಲು ಎಂದೇ ಪ್ರಸಿದ್ಧಿ ಪಡೆದಿದೆ. ಆಲಂಪುರದ ಪಾವಿತ್ರ್ಯತೆ ಬಗ್ಗೆ ಸ್ಕಂದ ಪುರಾಣದಲ್ಲೂ ಉಲ್ಲೇಖಿಸಲಾಗಿದೆ. 

 

ಈ ಕ್ಷೇತ್ರವು ನಲ್ಲಮಲ್ಲ ಅರಣ್ಯದಿಂದ ಸುತ್ತುವರೆದಿದ್ದು, ತುಂಗಭದ್ರ ನದಿಯ ಎಡ ದಂಡೆಯ ಮೇಲೆ ಸ್ಥಾಪಿತವಾಗಿದೆ. ಇಲ್ಲಿ ಜೋಗುಳಾಂಬ ದೇವಿ ಶಕ್ತಿಪೀಠ ಮಾತ್ರವಲ್ಲ, ನವಬ್ರಹ್ಮ ದೇಗುಲಗಳೂ ಇರುವುದು ವಿಶೇಷ. 

 

ಬಹಮನಿ ಸುಲ್ತಾನರಿಂದ ನಾಶವಾಗಿದ್ದ ದೇಗುಲ 

ಇಲ್ಲಿನ ಜೋಗುಳಾಂಬ ದೇವಿಯ ದೇಗುಲ ಬಹಳ ಪುರಾತನವಾದದ್ದು. ಆದರೆ 14ನೇ ಶತಮಾನದಲ್ಲಿ ಬಹಮನಿ ಸುಲ್ತಾನರು ದೇಗುಲವನ್ನು ನಾಶ ಪಡಿಸಿದರು. ಅವರು ದೇಗುಲದ ಮೇಲೆ ಆಕ್ರಮಣ ಮಾಡಿದಾಗ, ಜೋಗುಳಾಂಬ ದೇವಿ, ಚಂಡಿ ಹಾಗೂ ಮುಂಡಿಯರ ವಿಗ್ರಹಗಳನ್ನು ಸುರಕ್ಷಿತವಾಗಿ ಪಕ್ಕದಲ್ಲೇ ಇರುವ ಬಾಲ ಬ್ರಹ್ಮೇಶ್ವರ ಸ್ವಾಮಿ ದೇಗುಲದಲ್ಲಿ ಇರಿಸಲಾಗಿತ್ತು.

Jogulamba TempleImage Credits : Make Heritage Fun

2005 ರಲ್ಲಿ ನಿರ್ಮಾವಾಯ್ತು ಹೊಸ ದೇಗುಲ 

ಜೋಗುಳಾಂಬ ದೇವಿಯ ನೂತನ ದೇಗುಲವನ್ನು ಹಳೆಯ ದೇಗುಲವಿದ್ದ ಸ್ಥಳದಲ್ಲೇ ಹೊಸದಾಗಿ ನಿರ್ಮಿಸಿ, ಬಾಲ ಬ್ರಹ್ಮೇಶ್ವರ ಸ್ವಾಮಿ ದೇಗುಲದಲ್ಲಿದ್ದ ವಿಗ್ರಹವನ್ನು ಹೊಸ ದೇಗುಲಕ್ಕೆ ಸ್ಥಳಾಂತರಿಸಿ, ಪ್ರತಿಷ್ಠಾಪಿಸಲಾಯಿತು. ಹೊಸ ದೇಗುಲ ರಮ್ಯ ರಮಣೀಯವಾಗಿದ್ದು, ಪಕ್ಕದಲ್ಲೇ ಕೊಳವೊಂದನ್ನು ಹೊಂದಿದೆ. 

 

ಜೋಗುಳಾಂಬ ದೇವಿಯು ಉಗ್ರ ಸ್ವರೂಪದಲ್ಲಿದ್ದು, ಈ ಕೊಳದ ನೀರು ಹಾಗೂ ಬೀಸುವ ತಣ್ಣನೆಯ ಗಾಳಿಯು ದೇವಿಯನ್ನು ಶಾಂತವಾಗಿಸಿ, ಭಕ್ತರು ದೇವಿಯನ್ನು ಸುಲಭವಾಗಿ ಪ್ರಾರ್ಥಿಸಲು ಅನುಕೂಲವಾಗಲಿದೆ ಎಂದು ಸ್ಥಳೀಯರು ನಂಬಿದ್ದಾರೆ. 

 

ಆಲಂಪುರವನ್ನು ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದಾಗಿದೆ. ನೀವೂ ಈ ಮಹಾ ಶಕ್ತಿಪೀಠಿವಿರುವ ಕ್ಷೇತ್ರಕ್ಕೆ ಭೇಟಿ ನೀಡಿ, ದೇವಿಯ ಕೃಪೆಗೆ ಪಾತ್ರರಾಗಿ. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

Subscribe to Planet Tv Kannada
https://www.youtube.com/Planet Tv Kannada

Follow us on Facebook
https://www.facebook.com/Planettvkannada

Follow us on Twitter
https://twitter.com/Planettvkannada

Follow us on Instagram
https://www.instagram.com/planettvkannada

Follow us on Pinterest
https://www.pinterest.com/Planettvkannada

Follow us on Koo app
https://www.kooapp.com/planettvkannada

Follow us on share chat
https://sharechat.com/planettvkannada

Join us on Telegram
https://t.me/planettvkannada

Follow us on Tumblr
https://www.tumblr.com/planet-tv-kannada

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author