ಇವರೇ ಬಿಗ್ ಬಾಸ್ ಮನೆಗೆ ಹೋದ ಸ್ಪರ್ಧಿಗಳು

ಇವರೇ ಬಿಗ್ ಬಾಸ್ ಮನೆಗೆ ಹೋದ ಸ್ಪರ್ಧಿಗಳು 

https://youtu.be/jdCMRtptWro

ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಕೊಂಡು ಕಾಯ್ತಾ ಇದ್ದ ಬಿಗ್‍ಬ್ಯಾಸ್ ಸೀಸನ್‍ಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ... ದೊಡ್ಮನೆಗೆ ಯಾರ್ಯಾರ್ ಹೋಗಿದ್ದಾರೆ. ಅವರ ಆಯ್ಕೆ ಹಿಂದಿರೋ ಸೀಕ್ರೆಟ್ ಏನು ಅಂತಾ ತಿಳ್ಕೋಬೇಕಾ?  

 

ಬಿಗ್‍ಬಾಸ್ ಸೀಸನ್ 8ನ ಮೊದಲ ಸ್ಪರ್ಧಿ ಟಿಕ್‍ಟಾಕ್ ಸ್ಟಾರ್ ಧನುಶ್ರೀ.... ಸಾಮಾಜಿಕ ತಾಣಗಳಲ್ಲಿ ಸೂಪರ್ ಹಿಟ್ ಆಗಿರೋ ಈ ಬೆಡಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ... 

 

2ನೇ ಕನ್‍ಟೆಸ್ಟೆಂಟ್ ಮೊಗ್ಗಿನ ಮನಸಿನ ಮೋಹಕ ತಾರೆ ಶುಭಾ ಪೂಂಜಾ... ಒಂದೆರಡು ಸಿನಿಮಾ ಬಳಿಕ ಸ್ಯಾಂಡಲ್‍ವುಡ್‍ನಿಂದ ಕಣ್ಮರೆ ಆಗಿದ್ದ ಕರಾವಳಿ ಸುಂದರಿ, ಈಗ ಮತ್ತೆ ತಮ್ಮ ಅದೃಷ್ಟ ಪರೀಕ್ಷೆ ನಡೆಸಿಕೊಳ್ಳೋಕೆ ಬಿಗ್‍ಬಾಸ್‍ಗೆ ಬಂದಿದ್ದಾರೆ.... ಶುಭಾ ಸ್ಯಾಂಡಲ್‍ವುಡ್‍ಗೆ ಕಮ್‍ಬ್ಯಾಕ್ ಮಾಡೋಕೆ ಬಿಗ್‍ಬಾಸ್ ಸಹಾಯ ಮಾಡುತ್ತಾ ನೋಡ್ಬೇಕು... 

 

ಕನ್ನಡದ ಹಿರಿಯ ನಟ, ಚಾಮಯ್ಯ ಮೇಷ್ಟ್ರು ಅಂತಲೇ ಫೇಮಸ್ ಆಗಿರೋ ಅಶ್ವತ್ಥ್ ಅವರ ಪುತ್ರ ಶಂಕರ್ ಅಶ್ವತ್ಥ್ ಸಹ ಬಿಗ್‍ಬಾಸ್‍ಗೆ ಬಂದಿದ್ದಾರೆ... ಮೈಸೂರಿನಲ್ಲಿ ಊಬರ್ ಕ್ಯಾಬ್ ಚಾಲಕರಾಗಿ ಕೆಲಸ ಮಾಡೋ ಶಂಕರ್, ಹಲವಾರು ಸಿನಿಮಾ ಹಾಗೂ ಸೀರಿಯಲ್‍ಗಳಲ್ಲೂ ನಟಿಸಿದ್ದಾರೆ... 

 

 

ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗಿದ್ದ ಹಾಡು ಕರ್ನಾಟಕ ರಿಯಾಲಿಟಿ ಶೋನ ಯುವ ಪ್ರತಿಭೆ ವಿಶ್ವನಾಥ ರವೀಂದ್ರ ಹಾವೇರಿ, ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಮನೆಮಾತಾಗಿದ್ದ ನಟಿ ವೈಷ್ಣವಿ ಗೌಡ, ವಿಶ್ವದ ಅತ್ಯಂತ ಅಪಾಯಕಾರಿ ಮೋಟಾರ್ ರೇಸ್ ಡಕಾರ್‍ನಲ್ಲಿ ಭಾರತವನ್ನು ಪ್ರತಿನಿಧಿಸಿರುವ, 17 ಬಾರಿ ರಾಷ್ಟ್ರೀಯ ಬೈಕ್ ರ್ಯಾಲಿ ಚಾಂಪಿಯನ್ ಕೆ.ಪಿ.ಅರವಿಂದ್ ಸಹ ಬಿಗ್‍ಬಾಸ್ ಮನೆಗೆ ಬಂದಿದ್ದಾರೆ... 

 

ಸ್ಯಾಂಡಲ್‍ವುಡ್‍ನಲ್ಲಿ ಕೆಲ ಸಿನಿಮಾಗಳನ್ನು ಮಾಡಿ, ಬಾಲಿವುಡ್‍ನಲ್ಲೂ ಒಂದೆರಡು ಮೂವಿಯಲ್ಲಿ ಕಾಣಿಸಿಕೊಂಡಿದ್ದ ನಟಿ ನಿಧಿ ಸುಬ್ಬಯ್ಯ, ವೆಬ್ ಸೀರೀಸ್ ಮೂಲಕ ಬ್ರೋ ಗೌಡ ಎಂದು ಫೇಮಸ್ ಆದ ಶಮಂತ್, ಬ್ರಹ್ಮಗಂಟು ಗುಂಡಮ್ಮ ಖ್ಯಾತಿಯ ಗೀತಾ ಭಾರತಿ ಭಟ್, ಮಜಾ ಭಾರತದ ಮೂಲಕ ಕರ್ನಾಟಕವನ್ನೇ ನಗಿಸಿದ್ದ ನಟ ಮಂಜು ಪಾವಗಡ ಬಲಗಾಲಿಟ್ಟು ದೊಡ್ಮನೆ ಪ್ರವೇಶಿಸಿದ್ದಾರೆ.. 

ಸಿಸಿಎಲ್ ಕ್ರಿಕೆಟ್‍ನಲ್ಲಿ ಅಬ್ಬರಿಸಿದ್ದ, ಕೆಲ ಸಿನಿಮಾಗಳಲ್ಲೂ ನಟಿಸಿರುವ, ಕಿಚ್ಚ ಸುದೀಪ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಜೀವ್ ಹನು ಈ ವರ್ಷ ಬಿಗ್‍ಬಾಸ್‍ನ ಫೈನಲ್ ಕಂಟೆಸ್ಟೆಂಟ್ ಅಂತ ಮೊದಲ ದಿನವೇ ಕರೆಸಿಕೊಳ್ತಿದ್ದಾರೆ... 

 

 

ಇನ್ನುಳಿದಂತೆ ಹಲವು ವರ್ಷಗಳ ಕಾಲ ಪ್ರಸಾರವಾಗಿದ್ದ ಪುಟ್ಟಗೌರಿ ಮದುವೆ ಸೀರಿಯಲ್‍ನ ಅಜ್ಜಮ್ಮ ಪಾತ್ರಧಾರಿ ಚಂದ್ರಕಲಾ, ಕಿರುತೆರೆ ನಟಿ ದಿವ್ಯಾ, ಇತ್ತೀಚೆಗೆ ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದ ಮೂಲಕ ಗಮನ ಸೆಳೆದ ಪ್ರಶಾಂತ ಸಂಬರಗಿ, ನಟಿ, ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ, ಟಿಕ್‍ಟಾಕ್ ಮೂಲಕ ಜನಪ್ರಿಯರಾದ ರಾಘು ಗೌಡ, ಸೀರಿಯಲ್ ನಟಿ ದೀಪಿಕಾ ಬಿಗ್‍ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು. 

 

ಇವರಲ್ಲಿ ಬಿಗ್‍ಬಾಸ್ ಮನೆಯಲ್ಲಿ ನೂರು ದಿನಗಳ ಕಾಲ ಇದ್ದು ವಿಜೇತರಾಗುವ ಸ್ಪರ್ಧಿ ಯಾರು ಅನ್ನುವುದು ಸದ್ಯದ ಕುತೂಹಲ. ಬಿಗ್‍ಬಾಸ್ ಸೀಸನ್ 8 ಎಷ್ಟು ಜನಪ್ರಿಯತೆ ಪಡೆಯುತ್ತೆ ಅನ್ನೋದನ್ನ ಕಾದು ನೋಡ್ಬೇಕು... 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author