ಈ ಕ್ಷೇತ್ರದಲ್ಲಿ ಜ್ಯೋತಿರ್ಲಿಂಗ, ಮಹಾಶಕ್ತಿಪೀಠ ಎರಡೂ ಇದೆ!

ಈ ಕ್ಷೇತ್ರದಲ್ಲಿ ಜ್ಯೋತಿರ್ಲಿಂಗ,  ಮಹಾಶಕ್ತಿಪೀಠ ಎರಡೂ ಇದೆ!

Bhramarambika temple srisailamImage Credits : IPL Tours

ಶ್ರೀ ಕ್ಷೇತ್ರ ಶ್ರೀಶೈಲದ ಬಗ್ಗೆ ಸಂಪೂರ್ಣ ಮಾಹಿತಿ 

ಭಾರತದಲ್ಲಿ ಶಿವನಿಗೆಂದೇ ನೂರಾರು ದೇವಾಲಯಗಳು ಇದ್ದರೂ, 12 ಜ್ಯೋತಿರ್ಲಿಂಗ ದೇಗುಲಗಳು ಬಹಳ ಪ್ರಸಿದ್ಧವಾದದ್ದು. ಅದೇ ರೀತಿ ಸತಿ ದೇವಿಯ 51 ಶಕ್ತಿಪೀಠಗಳ ಪೈಕಿ 18 ಕ್ಷೇತ್ರಗಳನ್ನು ಮಹಾಶಕ್ತಿ ಪೀಠಗಳು ಎಂದು ಕರೆಯಲಾಗುತ್ತದೆ. ಜ್ಯೋತಿರ್ಲಿಂಗ ಹಾಗೂ ಮಹಾಶಕ್ತಿ ಪೀಠ ಎರಡೂ ಒಂದೇ ಕಡೆ ಇರುವ ಏಕೈಕ ಕ್ಷೇತ್ರ ಆಂಧ್ರಪ್ರದೇಶದ ಶ್ರೀಶೈಲಂ. 

 

ಶಿವನು ಇಲ್ಲಿ ಮಲ್ಲಿಕಾರ್ಜುನನಾಗಿ ನೆಲೆಸಿದ ಸತಿ ದೇವಿಯೂ ಬ್ರಹ್ಮರಾಂಭ ದೇವಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಾಳೆ. ಈ ಕ್ಷೇತ್ರಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ತಮ್ಮ ಇಷ್ಟಾರ್ಥಗಳು ಈಡೇರುವಂತೆ ಬೇಡಿಕೊಳ್ಳುತ್ತಾರೆ. 

 

ಸತಿ ದೇವಿಯ ಕುತ್ತಿಗೆ ಬಿದ್ದ ಸ್ಥಳವಿದು 

ದಕ್ಷ ಯಜ್ಞದಿಂದಾಗಿ ಸತಿಯನ್ನು ಕಳೆದುಕೊಂಡ ಶಿವನು, ಆಕೆಯ ದೇಹವನ್ನು ಹೊತ್ತು ತಾಂಢವವಾಡುವಾಗ, ಲೋಕದ ಹಿತಕ್ಕಾಗಿ ವಿಷ್ಣುವು ಸುದರ್ಶನ ಚಕ್ರ ಪ್ರಯೋಗಿಸಿ ಸತಿಯ ದೇಹವನ್ನು ತುಂಡರಿಸಿದನು. ಆಗ ಸತಿಯ ಕುತ್ತಿಗೆಯು ಬಿದ್ದಿದ್ದು ಶ್ರೀಶೈಲದಲ್ಲಿ. 

 

ಈ ದೇಗುಲದಲ್ಲಿ ದೇವಿಯನ್ನು ಭ್ರಹ್ಮಣಿ ಶಕ್ತಿಯ ರೂಪದಲ್ಲಿ ಪೂಜಿಸಲಾಗುತ್ತದೆ. ದೇವಿಯ ವಿಗ್ರಹವು 8 ತೋಳುಗಳನ್ನು ಹೊಂದಿದ್ದು, ಸದಾ ರೇಶ್ಮೆ ಸೀರೆಯನ್ನು ತೊಡಿಸಲಾಗಿರುತ್ತದೆ. ಗರ್ಭಗುಡಿಯಲ್ಲಿ ಅಗಸ್ತ್ಯ ಮುನಿಗಳ ಪತ್ನಿ ಲೋಪಮುದ್ರಾಳ ವಿಗ್ರಹವಿದೆ. ಗರ್ಭಗುಡಿಯ ಮುಂದೆ ಶ್ರೀ ಯಂತ್ರವಿದೆ. 

Bhramarambika honeybeeImage credits : Webdunia

ಬ್ರಹ್ಮರಾಂಭ ಎಂದರೆ ಏನು ಗೊತ್ತಾ?

ಬ್ರಹ್ಮರಾಂಭ ಎಂದರೆ `ಜೇನು ನೊಣಗಳ ತಾಯಿ' ಎಂದರ್ಥ. ಪುರಾಣಗಳ ಪ್ರಕಾರ, ಬ್ರಹ್ಮರಾಂಭ ದೇವಿಯು ರಾಕ್ಷಸ ಅರುಣಾಸುರನನ್ನು ಸಂಹರಿಸಲು ಸಾವಿರಾರು 6 ಕಾಲುಗಳುಳ್ಳ ಜೇನು ನೊಣಗಳನ್ನು ಬಿಟ್ಟಿದ್ದಳು. 

 

ಅರುಣಾಸುರನನ್ನು ಸಂಹರಿಸಿದ್ದು ಹೇಗೆ ತಿಳಿದಿದ್ಯಾ?

ಬ್ರಹ್ಮಾರಾಂಭ ದೇವಿಯ ಬಗ್ಗೆ ಪುರಾಣಗಳಲ್ಲಿ ಬಹಳಷ್ಟು ಕಥೆಗಳಿವೆ. ಆ ಪೈಕಿ ಅರುಣಾಸುರ ಸಂಹಾರದ ಕಥೆ ಪ್ರಮುಖವಾದದ್ದು. ಅರುಣಾಸುರನೆಂಬ ರಾಕ್ಷಸನು ಬ್ರಹ್ಮದೇವನನ್ನು ಕುರಿತು 40 ಸಾವಿರ ವರ್ಷಗಳ ಕಾಲ ತಪ್ಪಸ್ಸನ್ನು ಕೈಗೊಂಡಿದ್ದನು. ಮೊದಲ 10 ಸಾವಿರ ವರ್ಷ ಆತ ಬರೀ ಒಣಗಿದ ಎಲೆಗಳನ್ನು ತಿಂದು ಬದುಕಿದ್ದನ್ನು. 2ನೇ 10 ಸಾವಿರ ವರ್ಷ ನೀರನ್ನು ಕುಡಿದು ಬದುಕಿದನು. 3ನೇ 10 ಸಾವಿರ ವರ್ಷ ಬರಿ ಗಾಳಿ ಕುಡಿದು ಬದುಕಿದನು. 4ನೇ 10 ಸಾವಿರ ವರ್ಷ ಆತ ಏನನ್ನೂ ಸೇವಿಸದೆ ತಪ್ಪಸ್ಸನ್ನಾಚರಿಸಿದನು. 

 

40000 ವರ್ಷಗಳ ತಪ್ಪಸ್ಸಿನ ಬಳಿಕ ಆತನ ಜಟರ ಬರಿದಾಗಿತ್ತು. ದೇಹವು ಒಣಗಿ ಹೋಗಿತ್ತು. ನರಗಳು ಬರಿಗಣ್ಣಿಗೆ ಕಾಣತೊಡಗಿದವು. ಮೇಲುಸಿರು ಮಾತ್ರ ಉಳಿದುಕೊಂಡಿತ್ತು. ಈ ಸಮಯದಲ್ಲಿ ಆತನ ದೇಹದಿಂದ ಬೆಳಕಿನ ಕಿರಣಗಳು ಹೊರಬಂದು, ಭೂ ಲೋಕವನ್ನು ಸುಡಲು ಆರಂಭಿಸಿದವು. ತನ್ನ ಕಣ್ಣುಗಳನ್ನು ಮುಚ್ಚಿ ಆತ ತಾನೇ ಬೆಂಕಿ ಎನ್ನುವ ರೀತಿಯಲ್ಲಿ ಸುಡಲಾರಂಭಿಸಿದ. 

 

ಇದನ್ನು ಕಂಡ ಬ್ರಹ್ಮ ದೇವನು ಪ್ರತ್ಯಕ್ಷನಾಗಿ, ಅರುಣಾಸುರನಿಗೆ ವರವನ್ನು ನೀಡದನು. ಆ ವರವು ಏನೆಂದರೆ, ಯಾವುದೇ 2 ಇಲ್ಲವೇ 4 ಕಾಲುಗಳ ಜೀವಿಯು ಆತನನ್ನು ಕೊಲ್ಲಲು ಸಾಧ್ಯವಿಲ್ಲ ಎನ್ನುವುದಾಗಿತ್ತು. 

 

ಈ ವರ ಪಡೆದ ಅರುಣಾಸುರನನ್ನು ರಾಕ್ಷಸರು ತಮ್ಮ ನಾಯಕನೆಂದು ಪರಿಗಣಿಸಿ, ದೇವತೆಗಳ ಮೇಲೆ ಯುದ್ಧಕ್ಕಿಳಿದರು. ಅರುಣಾಸುರನು ಸೂರ್ಯ, ಚಂದ್ರ, ಯಮರಾಜ, ಅಗ್ನಿ ಎಲ್ಲವನ್ನೂ ತನ್ನ ಹಿಡಿತಕ್ಕೆ ಪಡೆದುಕೊಂಡನು. ಇದರಿಂದ ಆತಂಕಗೊಂಡ ದೇವತೆಗಳು ಕೈಲಾಸಕ್ಕೆ ತೆರಳಿ, ಶಿವನಿಗೆ ವರದಿ ಒಪ್ಪಿಸಿದರು. 

 

ಶಿವನು ಆದಿ ಪರಾಶಕ್ತಿಯಾದ ಪಾರ್ವತಿಯ ಕಡೆಗೆ ನೋಡಿದನು. ಪಾರ್ವತಿಗೆ ಅರುಣಾಸುರನಿಗೆ ಇದ್ದ ವರದ ಬಗ್ಗೆ ತಿಳಿದಿತ್ತು. ಇದಕ್ಕಾಗಿಯೇ ಆಕೆ 6 ಕಾಲುಗಳನ್ನು ಹೊಂದಿರುವ ಜೀವಿಯಿಂದ ಆತನನ್ನು ಸಂಹರಿಸಲು ನಿರ್ಧರಿಸಿದಳು.

Bhramaramba deviImage Credits : Orissa Post

ಪಾರ್ವತಿ ಮುಂದೆ ನಡೆಯದ ಅರುಣಾಸುರನ ಆಟ!

ಶಿವನೊಂದಿಗೆ ಅರುಣಾಸುರನು ಯುದ್ಧ ಮಾಡುವಾಗ, ಪಾರ್ವತಿಯು ಶಿವನ ಬೆನ್ನ ಹಿಂದೆ ನಿಂತಳು. ವಿಶ್ವರೂಪ ತಾಳಿದ ಆಕೆಯ ಕೈಗಳಲ್ಲಿ ಗಧೆ, ತ್ರಿಶೂಲ, ಕತ್ತಿ, ಗುರಾಣಿಗಳು ಇದ್ದವು. ಆಕೆಯ ಕಣ್ಣುಗಳಿಂದ ಅಗ್ನಿಯ ಜ್ವಾಲೆಗಳು ಹೊರಬರಲಾರಂಭಿಸಿದವು. 

 

ತನ್ನ ಕಣ್ಣುಗಳನ್ನು ಮುಚ್ಚಿದ ಪಾವರ್ತಿಯು ಏಕಾಗ್ರತೆಯಿಂದ ಸಾವಿರಾರು ಜೇನು ನೊಣ, ಕಣಜದ ಹುಳು, ನೊಣಗಳನ್ನು ಕರೆದಳು. ಅವು, ಆಕೆಯ ದೇಹಕ್ಕೆ ಅಂಟಿಕೊಂಡು ಕವಚದಂತಾದವು. ಇದರಿಂದ ರಾಕ್ಷಸರ ಅಸ್ತ್ರಗಳು ದೇವಿಯನ್ನು ತಾಕಲಿಲ್ಲ. 

 

ಇದೇ ವೇಳೆ ದೇವಿಯು ತನ್ನ ಕೈಯಲ್ಲಿದ್ದ ಆಯುಧಗಳಿಂದ ರಾಕ್ಷಸರ ಸೇನೆಯನ್ನು ಚೆಂಡಾಡಿದಳು. ಕೊನೆಯಲ್ಲಿ ಅರುಣಾಸುರನೊಬ್ಬನೇ ಉಳಿದುಕೊಂಡಾಗ, ಹುಳುಗಳ ಸೈನ್ಯವನ್ನು ಅವನೆಡೆಗೆ ಕಳುಹಿಸಿದಳು. ಅವು ಅರುಣಾಸುರನ ಕೈ, ಕಾಲು, ಎದೆ ಹೀಗೆ ಎಲ್ಲಾ ಭಾಗಗಳನ್ನು ತುಂಡು ತುಂಡಾಗಿಸಿದವು. ಅರುಣಾಸುರನು ಸತ್ತು ಬಿದ್ದ ಮೇಲೆ ಆ ಹುಳುಗಳು, ದೇವಿಯತ್ತ ವಾಪಸಾಗಿ, ಆಕೆಯ ಮೈಗೆ ಪುನಃ ಅಂಟಿಕೊಂಡವು. 

 

ದೇವಿಯು ಈ ಅವತಾರವನ್ನು ಕಂಡ ದೇವತೆಗಳು ಆಕೆಯನ್ನು ಶ್ಲಾಘಿಸಿ, ತಮ್ಮ ತಮ್ಮ ಸ್ಥಾನಗಳಿಗೆ ಮರಳಿದರು. ಆ ಬಳಿಕ ದೇವಿಗೆ ಬ್ರಹ್ಮರಾಂಭ ಎನ್ನುವ ಹೆಸರು ಬಂತು. 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

Subscribe to Planet Tv Kannada
https://www.youtube.com/Planet Tv Kannada

Follow us on Facebook
https://www.facebook.com/Planettvkannada

Follow us on Twitter
https://twitter.com/Planettvkannada

Follow us on Instagram
https://www.instagram.com/planettvkannada

Follow us on Pinterest
https://www.pinterest.com/Planettvkannada

Follow us on Koo app
https://www.kooapp.com/planettvkannada

Follow us on share chat
https://sharechat.com/planettvkannada

Join us on Telegram
https://t.me/planettvkannada

Follow us on Tumblr
https://www.tumblr.com/planet-tv-kannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author