ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ..!

ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ..!

 

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ. ಇದು ನಾಲ್ವರು ದೈವಗಳ ಕ್ಷೇತ್ರ. ಕರ್ನಾಟಕದ ಗಡಿಭಾಗದ ಕಾಸರಗೋಡಿನಲ್ಲಿರುವ ಈ ಕ್ಷೇತ್ರವನ್ನು ಕಾನತ್ತೂರು ಕ್ಷೇತ್ರ ಎಂದು ಕರೆಯುತ್ತಾರೆ. ಕೇರಳ ಕರ್ನಾಟಕದ ಜನರು ಈ ಕ್ಷೇತ್ರವನ್ನು ಅಪಾರವಾಗಿ ನಂಬುತ್ತಾರೆ. ಜನರು ಈ ಕ್ಷೇತ್ರದ ಹೆಸರು ಕೇಳಿದರೇನೆ ಭಯ ಪಡುತ್ತಾರೆ.ಹೆಚ್ಚಿನವರು ಅನಗತ್ಯವಾಗಿ ಈ ಕ್ಷೇತ್ರದ ಹೆಸರನ್ನು ಸಹ ಹೇಳಲು ಇಚ್ಛಿಸುವುದಿಲ್ಲ. ಅಷ್ಟೊಂದು ಪವರ್ ಫುಲ್ ಈ ಕಾನತ್ತೂರು ಕ್ಷೇತ್ರ. 

kanathur templesource and pic credit: google.com

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಿಷ್ಣುಮೂರ್ತಿ, ರಕ್ತೇಶ್ವರಿ, ರಕ್ತ ಚಾಮುಂಡಿ, ಉಗ್ರಮೂರ್ತಿ, ಪ್ರಧಾನ ದೈವಗಳಾಗಿದ್ದಾರೆ. ಹಾಗಾಗಿ ಇದನ್ನು ನಾಲ್ವರು ದೈವಗಳ ಕ್ಷೇತ್ರ ಎನ್ನಲಾಗುತ್ತದೆ. ಕಾನತ್ತೂರು ನಾಲ್ವರ್‌ ದೈವಸ್ಥಾನವು ಪುದುಕೋಡಿ ನಾಯರ್‌ ತರವಾಡಿನವರಿಗೆ ಸೇರಿದ್ದು, ದೈವಸ್ಥಾನದ ಆಡಳಿತ ನಡೆಸುವ ಹಕ್ಕು ಪಡೆದಿದ್ದಾರೆ

ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು

ಕಾನತ್ತೂರು ಕ್ಷೇತ್ರ.ಈ ಕ್ಷೇತ್ರವು ದೇವರ ನ್ಯಾಯಾಲಯ ಎಂದೇ ಹೆಸರು ವಾಸಿಯಾಗಿದೆ..ಇದೊಂದು ಪರ್ಯಾಯ ಪರಮೋನ್ನತ ನ್ಯಾಯಪೀಠ. ಹೈಕೋರ್ಟ್‌, ಸುಪ್ರೀಂಕೋರ್ಟ್‌ಗಳಲ್ಲಿ ಬಗೆಹರಿಯದ ಅದೆಷ್ಟೋ ಕೇಸುಗಳು ಇಲ್ಲಿ ಇತ್ಯರ್ಥವಾಗುತ್ತವೆ. ಕೆಲವು ನ್ಯಾಯಾಲಯಗಳೇ ಇಲ್ಲಿನ ತೀರ್ಪಿನ ಪ್ರತಿಯನ್ನು ದಾಖಲೆಯಾಗಿ ಸ್ವೀಕರಿಸುತ್ತವೆ. ಪೊಲೀಸ್‌ ಠಾಣೆಗಳಲ್ಲಿ ಆಗದ ಸಾವಿರ ಸಾವಿರ ನ್ಯಾಯಗಳು ಇಲ್ಲಿತೀರ್ಮಾನವಾಗುತ್ತವೆ. ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಜನರು ಇಲ್ಲಿ ತಮ್ಮ ದೂರು ಸಲ್ಲಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ

kanathur templesource and pic credit: google.com

ಬ್ರಿಟಿಷ್‌ ಕಾಲದಿಂದಲೇ ನ್ಯಾಯಕ್ಕಾಗಿ ಕಾನತ್ತೂರನ್ನು ಆಶ್ರಯಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಪ್ರಸ್ತುತ ದಕ್ಷಿಣಕನ್ನಡ ಹಾಗೂ ಮಲಬಾರ್‌ನ ಅನೇಕ ಪೊಲೀಸ್‌ ಠಾಣೆಗಳಲ್ಲಿ ಮೊಕದ್ದಮೆ ದಾಖಲಿಸಿ ಸಮಸ್ಯೆ ಬಗೆಹರಿಯಲಿಲ್ಲವೆಂದಾದರೆ ಪೊಲೀಸರು ತೋರಿಸುವುದು ಶ್ರೀ ಕಾನತ್ತೂರು ದೈವಸ್ಥಾನವನ್ನೇ. ಜಾತಿ, ಮತ ಭೇದವಿಲ್ಲದೆ ದಿನಂಪ್ರತಿ ಹಲವಾರು ಮಂದಿಇಲ್ಲಿಗೆ ಬಂದು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡು ಹಿಂತಿರುಗುತ್ತಾರೆ. ವ್ಯವಹಾರದಲ್ಲಿ ವಂಚನೆ, ಆಸ್ತಿ ತಕರಾರು, ಕಳವು, ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರಕ್ಕೆಂದೇ ಹೆಚ್ಚಾಗಿ ಇಲ್ಲಿಗೆ ಜನರು ಬರುತ್ತಾರೆ.

kanathur templesource and pic credit: google.com

ಕಾನತ್ತೂರು ಶ್ರೀ ನಾಲ್ವರ್‍ ದೈವಸ್ಥಾನದಲ್ಲಿ ಮನಸ್ಸಿನಿಂದ ಸಂಕಲ್ಪಿಸಿರೆ ಅದು ಹರಕೆಯಾಗಿ ಮಾರ್ಪಡುತ್ತದೆ ಎಂದು ಹೇಳುತ್ತಾರೆ. ಮಲಬಾರ್‌ ಹಾಗೂ ದಕ್ಷಿಣ ಕನ್ನಡದ ಪರ್ಯಾಯ ಪರಮೋನ್ನತ ನ್ಯಾಯ ದೇಗುಲವೆಂದೇ ಇದು ಪ್ರಸಿದ್ಧಿಹೊಂದಿದೆ. ಸತ್ಯ ಮತ್ತು ನಂಬಿಕೆಯ ಮೂಲಕ ಸಹಸ್ರಾರು ತಕರಾರುಗಳನ್ನು ಇತ್ಯರ್ಥಪಡಿಸಿ ನ್ಯಾಯ ಒದಗಿಸಿಕೊಡುವುದು ಈ ದೈವಸ್ಥಾನದ ವಿಶೇಷತೆ.

kanathur templesource and pic credit: google.com

ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ..!

ಕಾನತ್ತೂರು ದೈವಸ್ಥಾನದಲ್ಲಿ ಭಕ್ತರು, ಸಂತ್ರಸ್ತರು ಕ್ಷೇತ್ರಕ್ಕೆ ಖುದ್ದಾಗಿ ತಾವೇ ಬಂದು ದೂರು ಸಲ್ಲಿಸಬೇಕು.ಹೀಗೆ ದೂರು ಸಲ್ಲಿಸಿದ ತಕ್ಷಣ ಅವರನ್ನು ನಂಬಿ ದೂರನ್ನು ಸ್ವೀಕರಿಸಲಾಗುವುದಿಲ್ಲ. ಮೊದಲಿಗೆ ಅವರೆಷ್ಟು ಸತ್ಯವಾದಿಗಳು ಎಂಬುದನ್ನು ಹಲವಾರು ಪ್ರಶ್ನೆಗಳ ಮೂಲಕ ಪರಿಶೀಲಿಸಲಾಗುತ್ತದೆ.ಬಳಿಕವಷ್ಟೇ ದೂರು ಸ್ವೀಕಾರಮಾಡಲಾಗುತ್ತದೆ.ಇಂಥ ದೂರುಗಳಿಗೆ ಒಂದು ದಾಖಲಾತಿ ಪುಸ್ತಕವನ್ನೇ ಇಡಲಾಗಿದೆ.

kanathur templesource and pic credit: google.com

ನೋಟಿಸ್ ಕೈ ಸೇರಿದ ತಕ್ಷಣ ನಿಗದಿತ ದಿನಾಂಕದಂದು ಈ ಎರಡು ಕಡೆಯವರೂ ಕ್ಷೇತ್ರಕ್ಕೆ ಆಗಮಿಸುತ್ತಾರೆ.ಮೂರು ಬಾರಿಯೂ ನೋಟಿಸ್‌ನ್ನು ಕಡೆಗಣಿಸಿಲ್ಲಿ ಕ್ಷೇತ್ರದ ಮೋಕ್ತೇಸರರು ಅದನ್ನು ದೇವರಿಗೆ ಬಿಟ್ಟು ಬಿಡುತ್ತಾರೆ. ಅದಾದ ಕೆಲವೇ ದಿನಗಳಲ್ಲಿ ಆರೋಪಿಗೆ ಶಿಕ್ಷೆಯಾಗಿರುವ ಹಲವಾರು ಘಟನೆಗಳು ನಡೆದಿವೆ. ಹಣ ಬರಬೇಕಿದ್ದಲ್ಲಿ ಅದು ನ್ಯಾಯವಾದವರಿಗೆ ತಲುಪುತ್ತದೆ. ಭೂ ವ್ಯವಹಾರದಲ್ಲಿ ಬಂದ ಸಮಸ್ಯೆ ಬಗೆಹರಿಯುತ್ತದೆ..ಈ ದೇವಾಲಯಕ್ಕೆ ಹರಕೆ ಕಟ್ಟಿಕೊಂಡು ತಮ್ಮ ಸಮಸ್ಯೆ ಪರಿಹಾರವಾದ ಮೇಲೆ ಜನರು ಇಲ್ಲಿಗೆ ಬಂದು ಸೇವೆ ಸಲ್ಲಿಸುತ್ತಾರೆ. ಒಂದು ವೇಳೆ ಸಮಸ್ಯೆಗಳು ಬಗೆಹರಿದ ಮೇಲೂ ಹರಕೆ ತೀರಿಸಲು ಕ್ಷೇತ್ರಕ್ಕೆ ಹೋಗದಿದ್ದಲ್ಲಿ ದೈವ ಸುಮ್ಮನೆ ಬಿಡುವುದಿಲ್ಲ ಎಂಬ ನಂಬಿಕೆಯಿದೆ. ಈ ಕ್ಷೇತ್ರದಲ್ಲಿ ನಡೆಯುವ ಕಡಿಯಾಳಿ ಮಹೋತ್ಸವದಲ್ಲಿ ದೈವಗಳನ್ನು ಕಣ್ಣಾರೆ ನೋಡಬಹುದು. 

 

ಸಾಕ್ಷಿ ಪ್ರಮಾಣವೂ ಸತ್ಯ ಪ್ರಮಾಣವೂ

kanathur temple
source and pic credit: google.com

ನ್ಯಾಯಾಲಯ ಸಾಕ್ಷಿ ಪ್ರಮಾಣವನ್ನು ಅವಲಂಬಿಸಿದ್ದರೆ, ಕಾನತ್ತೂರು ಸನ್ನಿಧಿ ಸತ್ಯ ಪ್ರಮಾಣವನ್ನು ಅವಲಂಬಿಸಿದೆ.ಕೋರ್ಟಿನಲ್ಲಿ ನೀಡಿದ ತೀರ್ಪು ಸಮಾಧಾನವಾಗದೆ ಇಲ್ಲಿಗೆ ಬರುವವರು, ಮೊದಲಿಗೆ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು. ಬಳಿಕವಷ್ಟೇ ಇಲ್ಲಿ ದೂರು ಸಲ್ಲಿಸಬಹುದು.ಆದರೆ ಅಂಥ ಪ್ರಕರಣಗಳಲ್ಲಿ ಇಲ್ಲಿಂದ ಸೂಚನಾ ಪತ್ರ ಕಳುಹಿಸುವ ಕ್ರಮವಿಲ್ಲ. ಎರಡೂ ಪಕ್ಷಗಳವರು ಒಮ್ಮತದಿಂದ ಬಂದರೆ, ಇಲ್ಲಿ ಮಾತುಕತೆಗೆ, ಪ್ರಾರ್ಥನೆಗೆ ಅವಕಾಶವಿದೆ. ನಾವು ಪರ್ಯಾಯ ಕೋರ್ಟ್ ಆಗಿ ಕಾರ್ಯ ನಿರ್ವಹಿಸುವುದಿಲ್ಲ, ಕೋರ್ಟಿನ ರ್ತೀಪನ್ನು ನಾವು ಪ್ರಶ್ನಿಸುವುದಿಲ್ಲಎಂದು ದೇವಸ್ಥಾನದ ಆಡಳಿತ ಮಂಡಳಿಯವರುಸ್ಪಷ್ಟವಾಗಿ ಹೇಳುತ್ತಾರೆ.

kanathur templesource and pic credit: http://www.mangaloretoday.com

ಪಯಸ್ವಿನಿ ನದಿಯ ಮಡಿಲಲ್ಲಿರುವ ಈ ಪ್ರದೇಶದಲ್ಲಿ ಬಹಳ ಹಿಂದೆ ಕನಕ ಮಹರ್ಷಿ ತಪಸ್ಸು ಮಾಡುತ್ತಿದ್ದರಂತೆ. ಆಗ ಇಲ್ಲಿ ಅಗ್ನಿಯಾಜನ, ಮಹಾಯಾಗಗಳು ನಡೆಯುತ್ತಿದ್ದವು. ಹಾಗಾಗಿ ಇಲ್ಲಿಗೆ ಕನಕತ್ತೂರು ಎಂದು ಹೆಸರು ಬಂತು ಎಂದು ಹೇಳಲಾಗುತ್ತಿದೆ.ಕಾಲಕ್ರಮೇಣ ಅದೇ ಕಾನತ್ತೂರು ಎಂದಾಗಿದೆ. ಇಲ್ಲಿನ ಅರಮನೆಗೆ ಈಗಲೂ ಕನಕತ್ತೂರು ಅರಮನೆಎಂದೇ ಹೆಸರು. ವರ್ಷದಲ್ಲಿ ಸುಮಾರು ಮೂರು ಸಾವಿರಕ್ಕೂ ದೂರುಗಳು ಈ ದೈವಸ್ಥಾನಕ್ಕೆ ಬರುತ್ತವೆ..ಕೇವಲ ದೂರುಗಳ ವಿಲೇವಾರಿಯಲ್ಲದೆ, ಭಕ್ತರ ಇತರ ಬೇಡಿಕೆಗಳಿಗೆ ಅನುಗುಣವಾಗಿ ಕವಡೆ ಪ್ರಶ್ನೆ, ಸ್ವರ್ಣ ಪ್ರಶ್ನೆ, ರಾಶಿ ನೋಡುವುದು ಮೊದಲಾದ ಸೇವೆಗಳೂ ಇಲ್ಲಿ ದೊರೆಯುತ್ತವೆ.

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author