ಈ ಗ್ರಾಮದಲ್ಲಿ ಎಲ್ಲಿ ನೋಡಿದರೂ ಅವಳಿ ಮಕ್ಕಳು.! ವಿಜ್ಞಾನಿಗಳಿಗೂ ಸವಾಲಾಗಿದೆ ರಹಸ್ಯ..!

ನಾವು ವಿಜ್ಞಾನದಲ್ಲಿ ಎಷ್ಟೇ ಮುಂದುವರಿದಿದ್ರೂ ನಮ್ಮ ಊಹೆಗೂ ನಿಲುಕದ ವಿಚಾರಗಳು ಪ್ರಕೃತಿಯಲ್ಲಿ ಸಾಕಷ್ಟಿವೆ. ಇಲ್ಲಿ ಹುಡುಕಿದಷ್ಟು ವಿಸ್ಮಯಗಳು ಕಾಣಸಿಗುತ್ವೆ. ಅಂತಹ ವಿಸ್ಮಯಗಳ ಪೈಕಿ ಕೇರಳದ ಅವಳಿಗಳ ಊರು ಕೂಡ ಒಂದು.

image source : ripleys.com

ಇದು ಅವಳಿ ಮಕ್ಕಳ ಊರು..!

ನಾವು ನೋಡಿರುವಂತೆ ಅವಳಿ ಮಕ್ಕಳಾಗುವುದು ತುಂಬಾ ಅಪರೂಪ. ಆದರೆ ಈ ಊರಲ್ಲಿ ಇದು ಸರ್ವೇ ಸಾಮಾನ್ಯ. ಈ ಊರಲ್ಲಿ ಕಣ್ಣು ಹಾಯಿಸಿದಲೆಲ್ಲಾ ಅವಳಿ ಮಕ್ಕಳ ದರ್ಶನವಾಗುತ್ತೆ. ಅಂದಹಾಗೆ ಇಂತಹ ವಿಸ್ಮಯ ನಡೆಯುತ್ತಿರೋದು ಕೇರಳದ ಮಲಪ್ಪುರಂ ಜಿಲ್ಲೆಯ ಪುಟ್ಟ ಹಳ್ಳಿಯಾದ ಕೋಡಿನ್ಹಿಯಲ್ಲಿ. ಇಲ್ಲಿ ಅವಳಿ ಮಕ್ಕಳು ಹೆಚ್ಚಾಗಿರುವ ಕಾರಣಕ್ಕೆ ಇದು ಟ್ವಿನ್ಸ್ ಸಿಟಿ ಅಂತಲೇ ಫೇಮಸ್ ಆಗಿದೆ.

image source : ripleys.com

ಸುಮಾರು 400ಕ್ಕೂ ಹೆಚ್ಚು ಅವಳಿ ಮಕ್ಕಳಿದ್ದಾರೆ..!

ಭಾರತದ ಮಕ್ಕಳ ಜನನ ಪ್ರಮಾಣದ ಅಂಕಿ ಅಂಶಗಳನ್ನು ಗಮನಿಸಿದಾಗ, ಪ್ರತಿ 1000 ಮಕ್ಕಳಲ್ಲಿ ಸರಾಸರಿ 9 ರಿಂದ 10 ಅವಳಿಗಳ ಜನನವಾಗಬಹುದು. ಆದ್ರೆ ಈ ಗ್ರಾಮದಲ್ಲಿ ಮಾತ್ರ ವಿಸ್ಮಯವೇ ಜರುಗುತ್ತಿದೆ. ಸುಮಾರು 2000 ಕುಟುಂಬಗಳಿರೋ ಈ ಊರಿನಲ್ಲಿ 400ಕ್ಕೂ ಹೆಚ್ಚು ಅವಳಿ ಮಕ್ಕಳಿದ್ದಾರೆ. 

ಸಂಶೋಧಕರಿಗೂ ಸಿಗುತ್ತಿಲ್ಲ ನಿಖರ ಕಾರಣ

ಯಾವಾಗ ಈ ಗ್ರಾಮದಲ್ಲಿ ಅವಳಿ ಮಕ್ಕಳ ಜನನ ಹೆಚ್ಚಾಗಿರೋದು ವರದಿ ಆಗೋಕೆ ಶುರು ಆಯ್ತೋ, ಆಗ ಅದರ ರಹಸ್ಯ ತಿಳಿಯಲು ಹಲವಾರು ಸಂಶೋಧನೆಗಳು ನಡೆದವು. ಆದರೆ ಈ ವರೆಗೂ ನಿಖರ ಕಾರಣ ತಿಳಿಯುತ್ತಿಲ್ಲ. ಕೆಲವು ಸಂಶೋಧಕರು ಇಲ್ಲಿನ ಪರಿಸರ ಮತ್ತು ನೀರು ಕಾರಣವೆಂದರೆ ಕೆಲವು ಸಂಶೋಧಕರು ಅನುವಂಶಿಯತೆ ಕಾರಣವೆಂದು ಹೇಳಿದ್ದಾರೆ. ಆದರೆ ಯಾರಿಂದಲೂ ಇದರ ಬಗ್ಗೆ ಸ್ಪಷ್ಟ ಕಾರಣವನ್ನು ಹೇಳಲು ಸಾಧ್ಯವಾಗಿಲ್ಲ

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author