ಈ ದೇಗುಲದಲ್ಲಿ ಪ್ರಸಾದ ಸೇವಿಸಿದರೆ ಗಂಡು ಮಗುವಾಗುತ್ತೆ! ವರದ ವಿನಾಯಕನ ಮಹಿಮೆ ಬಗ್ಗೆ ನಿಮಗೆಷ್ಟು ಗೊತ್ತು?

ಈ ದೇಗುಲದಲ್ಲಿ ಪ್ರಸಾದ ಸೇವಿಸಿದರೆ ಗಂಡು ಮಗುವಾಗುತ್ತೆ!

 

                 ವರದ ವಿನಾಯಕನ ಮಹಿಮೆ ಬಗ್ಗೆ ನಿಮಗೆಷ್ಟು ಗೊತ್ತು?

varadvinayak temple is one among ashtavinayakaImage source and credits : Lordshreeganesh

ಅಷ್ಟ ವಿನಾಯಕ ದೇಗುಲಗಳ ಪೈಕಿ ಕೊನೆಯದ್ದು ವರದ ವಿನಾಯಕ. ಈ ದೇವಾಲಯವು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯ ಮಹಾದ್ ಗ್ರಾಮದಲ್ಲಿದೆ. ಇಲ್ಲಿರುವ ವರದವಿನಾಯಕ ಸ್ವಯಂಭು. 1690ರಲ್ಲಿ ಇಲ್ಲೇ ಪಕ್ಕದಲ್ಲಿರುವ ಕೆರೆಯಲ್ಲಿ ವಿನಾಯಕನ ವಿಗ್ರಹವು ದೊರೆಯಿತು ಎನ್ನಲಾಗಿದೆ. 

 

 

130 ವರ್ಷದಿಂದ ಉರಿಯುತ್ತಲೇ ಇದೆ ದೀಪ!

 

ಈ ದೇವಾಲಯದಲ್ಲಿ 1892ರಿಂದ ಒಂದು ದೀಪವು ನಿರಂತರವಾಗಿ ಉರಿಯುತ್ತಿದೆ. ಭಕ್ತರು ಆ ದೀಪವು ಆರದಂತೆ ಬಹಳ ಎಚ್ಚರಿಕೆಯಿಂದ ನೋಡಿಕೊಂಡು ಬಂದಿದ್ದಾರೆ. ಗಣೇಶನ ವಿಗ್ರಹವು ಪೂರ್ವಕ್ಕೆ ಮುಖ ಮಾಡಿದ್ದು, ಸೊಂಡಿಲು ಎಡಕ್ಕಿದೆ. ಈ ದೇಗುಲದಲ್ಲಿ ಮೂಶಿಕ, ನವಗ್ರಹ, ಶಿವಲಿಂಗಗಳೂ ಇವೆ. ದೇವಾಲಯದ 4 ದಿಕ್ಕುಗಳಲ್ಲಿ 4 ಆನೆಗಳ ವಿಗ್ರಹಗಳಿವೆ. ಇಲ್ಲಿನ ವಿಶೇಷವೆಂದರೆ ಭಕ್ತರೇ ಗರ್ಭಗುಡಿಯೊಳಗೆ ಪ್ರವೇಶಿಸಿ ಗಣೇಶನಿಗೆ ಪೂಜೆ ಮಾಡಬಹುದು. 

Diya infront of ganesha or vinayakImage source or credit : Freepik

ಗಣೇಶ ವರದವಿನಾಯಕನಾಗಿದ್ದು ಹೇಗೆ?

 

ದಂತಕಥೆಯ ಪ್ರಕಾರ ಮಕ್ಕಳಿಲ್ಲದ ರಾಜ ಕೌದಿನಾಪುರದ ಭೀಮಾ ಮತ್ತು ಅವನ ಹೆಂಡತಿ ವಿಶ್ವಮಿತ್ರ ಋಷಿಯು ತಪಸ್ಸಿಗಾಗಿ ಅರಣ್ಯಕ್ಕೆ ಬಂದಾಗ ಅವರನ್ನು ಭೇಟಿಯಾಗಿ ಮಕ್ಕಳನ್ನು ಪಡೆಯುವುದು ಹೇಗೆ ಎಂದು ಕೇಳಿದರು. ಆಗ ವಿಶ್ವಮಿತ್ರರು ರಾಜನಿಗೆ `ಏಕಶರ್ ಗಜಾನ' ಮಂತ್ರವನ್ನು ಜಪಿಸಲು ಸೂಚಿಸಿದರು. ಈ ಮಂತ್ರವನ್ನು ಜಪಿಸಿದ ರಾಜನಿಗೆ ರುಕ್ಮಂಗದನೆಂಬ ಸುಂದರವಾದ ಮಗನು ಹುಟ್ಟಿದ. 

 

ರುಕ್ಮಂಗದನು ಬೆಳೆದು ದೊಡ್ಡವನಾದ ಬಳಿಕ ಒಮ್ಮೆ ಬೇಟೆಗೆಂದು ಕಾಡಿಗೆ ತೆರಳಿದಾಗ, ಅಲ್ಲಿದ್ದ ರಿಷಿ ವಚಕ್ನವಿಯ ಆಶ್ರಮದಲ್ಲಿ ವಿಶ್ರಾಂತಿ ಪಡೆಯುವಾಗ ಆತನನ್ನು ಕಂಡ ಋಷಿಯ ಪತ್ನಿ ಮುಕುಂದ ಆಕರ್ಷಿತಳಾದಳು. ರುಕ್ಮಂಗದನನ್ನು ಮುಕುಂದ ಪ್ರೀತಿಸತೊಡಗಿದಳು. ಹಾಗೇ, ತನ್ನ ಆಸೆಗಳನ್ನು ಈಡೇರಿಸುವಂತೆ ರುಕ್ಮಂಗದನನ್ನು ಕೇಳಿಕೊಂಡಳು. ಸದ್ಗುಣನಾದ ರಾಜಕುಮಾರನು, ಮುಕುಂದಾಳ ಕೋರಿಕೆಯನ್ನು ತಿರಸ್ಕರಿಸಿದನು. 

 

ಆಕೆಯ ಅವಸ್ಥೆಯನ್ನು ತಿಳಿದ ಇಂದ್ರ ದೇವನು, ರುಕ್ಮಂಗದನ ರೂಪತಾಳಿ ಮುಕುಂದಾಳೊಂದಿಗೆ ಪ್ರೇಮ ಸಲ್ಲಾಪದಲ್ಲಿ ತೊಡಗಿದನು. ಮುಕುಂದ ಗರ್ಭವತಿಯಾದಳು ಹಾಗೂ ಗ್ರಿತ್ಸಮದ ಎನ್ನುವ ಪುತ್ರನಿಗೆ ಜನ್ಮ ನೀಡಿದಳು.  

varad vinayak temple maharashtraImage source and credits : My photo blog

ಕಾಲಾನಂತರದಲ್ಲಿ ಗ್ರಿತ್ಸಮದ ತನ್ನ ಜನ್ಮ ರಹಸ್ಯವನ್ನು ತಿಳಿದಾಗ ಅವನು ತನ್ನ ತಾಯಿಯನ್ನು ದ್ವೇಷಿಸತೊಡಗಿದನು, ಹಾಗೂ ಆಕೆಯೂ ಕುರೂಪಿಯಾಗಿ, ಮುಳ್ಳನ್ನು ಹೊಂದಿರುವ `ಭೋರ್' ಸಸ್ಯವಾಗುವಂತೆ ಶಾಪ ನೀಡಿದನು. ಮುಕುಂದ ಸಹ ಸಿಟ್ಟಿನಲ್ಲಿ, ಗ್ರಿತ್ಸಮದನಿಗೆ ಹುಟ್ಟುವ ಮಕ್ಕಳು ರಾಕ್ಷಸರಾಗಿ ಹುಟ್ಟಲಿ ಎಂದು ಶಪಿಸಿದಳು.

 

ಇಬ್ಬರು ಪರಸ್ಪರ ಶಪಿಸುತ್ತಿದ್ದ ವೇಳೆ ಗ್ರಿತ್ಸಮದ ಇಂದ್ರನ ಮಗ ಎನ್ನುವ ವಿಷಯ ಎನ್ನುವ ಸ್ವರ್ಗೀಯ ಧ್ವನಿ ಕೇಳಿಸಿತು. ಈ ವಿಷಯ ಕೇಳಿ ಇಬ್ಬರೂ ಆಘಾತಕ್ಕೊಳಗಾದರು. ಆದರೆ ಪರಸ್ಪರ ಶಾಪಗಳನ್ನು ಹಾಕಿಕೊಂಡಿದ್ದಿ ಇವರಿಬ್ಬರಿಗೆ ಅವುಗಳನ್ನು ವಾಪಸ್ ಪಡೆಯಲು ಸಾಧ್ಯವಿರಲಿಲ್ಲ. ಮುಕುಂದ ಭೋರ್ ಸಸ್ಯವಾಗಿ ಬದಲಾದಳು. 

 

ಪ್ರಸಾದ ಸೇವಿಸಿದರೆ ಗಂಡು ಮಗು ಹುಟ್ಟುತ್ತಂತೆ! 

coconut pooja and prasad for the birth of baby

ಗ್ರಿತ್ಸಮದ ತನ್ನಿಂದಾ ತಪ್ಪಿನ ಅರಿವಾಗಿ ಪಶ್ಚಾತಾಪಪಟ್ಟು ಪುಷ್ಪಕ ಅರಣ್ಯಕ್ಕೆ ತೆರಳಿ, ಗಣೇಶನನ್ನು ಪ್ರಾರ್ಥಿಸಿದನು. ಗ್ರಿತ್ಸಮದನ ಪ್ರಾರ್ಥನೆಗೆ ಮೆಚ್ಚಿದ ಗಣೇಶನು, ಆತನಿಗೆ ಶಿವನಿಂದ ಮಾತ್ರ ಸೋಲಿಗೆ ಒಳಗಾಗುವ ಪುತ್ರ ಹುಟ್ಟುತ್ತಾನೆಂದು ವರ ನೀಡಿದನು. ಜೊತೆಗೆ ಈ ಅರಣ್ಯವನ್ನು ಆಶೀರ್ವದಿಸಿ ಇಲ್ಲಿ ಯಾರೇ ಭಕ್ತರು ಪ್ರಾರ್ಥಿಸಿದರು ಅವರ ಕೋರಿಕೆಗಳನ್ನು ಈಡೇರಿಸುವಂತೆ ಗಣೇಶನಿಗೆ ಗ್ರಿತ್ಸಮದ ಮನವಿ ಮಾಡಿದನು. 

 

ಅಲ್ಲದೇ, ಈ ಅರಣ್ಯದಲ್ಲೇ ನೆಲೆಸುವಂತೆ ಗಣೇಶನನ್ನು ಗ್ರಿತ್ಸಮದ ಬೇಡಿಕೊಂಡನು. ಗಣೇಶನಿಗೆ ಒಂದು ಗುಡಿ ಕಟ್ಟಿ, ಒಂದು ಮೂರ್ತಿಯನ್ನು ಸ್ಥಾಪಿಸಿದನು. ಈ ಗಣೇಶನನ್ನು `ವರದ ವಿನಾಯಕ' ಎಂದು ಕರೆದನು. ಈಗ ಆ ಆರಣ್ಯವನ್ನು ಭದ್ರಕಾ ಎಂದು ಕರೆಯಲಾಗುತ್ತದೆ. 

 

ಇಲ್ಲಿ ಮಾಘ ಚತುರ್ಥಿಯಂದು ಪೂಜೆ ನಡೆದ ಬಳಿಕ ನೀಡುವ ತೆಂಗಿನ ಕಾಯಿಯ ಪ್ರಸಾದವನ್ನು ಸೇವಿಸಿದವರಿಗೆ ಗಂಡು ಮಗು ಆಗಲಿದೆ ಎನ್ನುವ ನಂಬಿಕೆ ಇದೆ. ಹೀಗಾಗಿ, ಮಾಘ ಉತ್ಸವದ ವೇಳೆ ಇಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ. 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author