ಈ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ವಿಮಾನವಿದೆ..!?

ಈ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ವಿಮಾನವಿದೆ..!?

ನಾವೆಲ್ಲರೂ ನೋಡಿರುವಂತೆ ಗ್ರಾಮ ಅಂದ್ರೆ ಕೆಲವೊಬ್ಬರ ಮನೆಯಲ್ಲಿ ಕಾರು, ಮತ್ತೆ ಕೆಲವರ ಮನೆಯಲ್ಲಿ ಬೈಕ್ ಗಳು, ಇನ್ನೊಂದಷ್ಟ ಜನ ಕಾರು ಬೈಕು, ಟ್ರಾಕ್ಟರ್ ಗಳನ್ನು ಹೊಂದಿರುತ್ತಾರೆ. ಹೆಚ್ಚು ದೂರ ಪ್ರಯಾಣಿಸಬೇಕು ಅಂದಾಗ ಕಾರುಗಳನ್ನು ಬಳಸುತ್ತಾರೆ. ಇಲ್ಲವಾದ್ರೆ ಬೈಕ್‍ಗಳನ್ನ ಬಳಸುತ್ತಾರೆ. ಕೆಲಸವಿದ್ದ ಸಂದರ್ಭದಲ್ಲಿ ಅಥವಾ ಹೊರದೇಶ, ಹೊರ ರಾಜ್ಯಗಳಿಗೆ ಪ್ರಯಾಣ ಬೆಳೆಸುವವರು ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ. ಎಲ್ಲರಿಗೂ ಇದು ಅಷ್ಟೋಂದು ವಿಶೇಷತೆ ಎನಿಸುವುದಿಲ್ಲ. ಆದರೆ ಇಲ್ಲೊಂದು ಗ್ರಾಮದಲ್ಲಿ ನಾವು ಹೇಗೆ ಮನೆ ಮುಂದೆ ಕಾರು ಬೈಕ್ ಗಳನ್ನ ಪಾರ್ಕ್ ಮಾಡುತ್ತೇವೆಯೋ ಅದೇ ರೀತಿ ಇಲ್ಲಿನ ಗ್ರಾಮಸ್ಥರು ಮನೆಗಳ ಮುಂದೆ ವಿಮಾನಗಳನ್ನ ಪಾರ್ಕ್ ಮಾಡುತ್ತಾರೆ.

ಪ್ರತಿಯೊಂದು ಮನೆಯಲ್ಲೂ ವಿಮಾನ: ಇಲ್ಲೊಂದು ಗ್ರಾಮದಲ್ಲಿ ಪ್ರತಿ ಮನೆಯಲ್ಲೂ ವಿಮಾನಗಳಿವೆ. ಇಲ್ಲಿ ನಾವು ಕಾರು, ಬೈಕುಗಳನ್ನು ಬಳಸುವಂತೆ ಆ ಗ್ರಾಮದ ಜನರು ವಿಮಾನಗಳನ್ನು ಬಳಸುತ್ತಾರೆ. ಹೀಗೆ ಪ್ರತಿ ಮನೆಯಲ್ಲೂ ವಿಮಾನಗಳನ್ನ ಹೊಂದಿರವ ಗ್ರಾಮವೇ ಅಮೆರಿಕಾದ ಸ್ಪ್ರೋಸ್ ಕ್ರೀಕ್ ಗ್ರಾಮ. ಫ್ಲೊರಿಡಾದ ಡೆಟೋನಾ ಬೀಚ್ ಪ್ರದೇಶದಿಂದ 11 ಕಿ.ಮೀ ದೂರದಲ್ಲಿ ಈ ಗ್ರಾಮವಿದೆ. ಪ್ರತಿಯೊಂದು ಮನೆಯಲ್ಲೂ ಒಂದೊಂದು ವಿಮಾನವಿದ್ದು, ಕೆಲವೊಂದು ಮನೆಗಳಲ್ಲಿ ಎರಡು ಮೂರು ವಿಮಾನಗಳಿವೆ. ಈ ಗ್ರಾಮದಲ್ಲಿ 700 ವಿಮಾನಗಳನ್ನು ನಿಲ್ಲಿಸಬಹುದಾದ ಸುಸಜ್ಜಿತವಾದ ಶೆಡ್ ನಿರ್ಮಿಸಲಾಗಿದೆ. ಕೆಲವೊಬ್ಬರು ಮನೆಯ ಮುಂದೆ ವಿಮಾನಗಳನ್ನು ನಿಲ್ಲಿಸಿಕೊಂಡರೆ, ಮತ್ತೆ ಕೆಲವೊಂದಷ್ಟು ಜನ ಪ್ರತ್ಯೇಕವಾಗಿ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಇನ್ನು ಕೆಲವು ವಿಮಾನ ಪಾರ್ಕಿಂಗ್ ಬೇಕಾದ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಸ್ಥಳವನ್ನು ಬಾಡಿಗೆ ಸಹ ನೀಡುತ್ತಾರೆ.

ವಿಶೇಷ ತಂತ್ರಜ್ಞಾನ: ಈ ಗ್ರಾಮಸ್ಥರು ವಿಮಾನಗಳ ಸುಗಮ ಸಂಚಾರಕ್ಕೆ ತಂತ್ರಜ್ಞಾನವನ್ನು ಬಳಸುತ್ತಾರೆ. ಇದರಿಂದ ಯಾವ ವಿಮಾನ ಹಾರಾಡುತ್ತಿದೆ, ಯಾವ ವಿಮಾನ ಲ್ಯಾಂಡ್ ಆಗುತ್ತಿದೆ, ಯಾವ ವಿಮಾನ ಟೇಕ್ ಆಫ್ ಆಗುತ್ತಿದೆ ಎಂಬ ಬಗ್ಗೆ ಗ್ರಾಮಸ್ಥರಿಗೆ ಸುಲಭವಾಗಿ ತಿಳಿಯುತ್ತದೆ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಈ ಗ್ರಾಮಸ್ಥರೇ ಸುಸಜ್ಜಿತವಾದ ವಿಮಾನ ರನ್ ವೇಯನ್ನು ನವೀಕರಣಗೊಳಿಸಿ ಅಭಿವೃದ್ಧಿಪಡಿಸಿಕೊಂಡಿದ್ದಾರೆ.. ರಾತ್ರಿ ವೇಳೆಯಲ್ಲಿ ವಿಮಾನ ಟೇಕ್ ಆಫ್ ಆಗಲು, ಲ್ಯಾಂಡ್ ಆಗಲು ವಿದ್ಯುತ್ ದೀಪಗಳನ್ನು ಅಳವಡಿಸಿದ ರನ್ ವೇ ಯನ್ನು ನಿರ್ಮಿಸಿಕೊಂಡಿದ್ದಾರೆ. 14 ಕಿಲೋ ಮೀಟರ್ ಟ್ಯಾಕ್ಸಿ ವೇ, ವಿಮಾನಗಳಿಗೆ ಇಂಧನ ತುಂಬುವ ವ್ಯವಸ್ಥೆ, ವಿಮಾನಗಳ ದುರಸ್ಥಿಗೆ ಸ್ಟೇಷನ್ ಸಹ ಇದೆ. 

ಮಹಾಯುದ್ಧದ ಸಂಬಂಧ: ಈ ಗ್ರಾಮದಲ್ಲಿರುವ ವಿಮಾನ ನಿಲ್ದಾಣವನ್ನು ವಿಶ್ವ ಮಹಾ ಯುದ್ಧದ ಸಂದರ್ಭದಲ್ಲಿ ಅಮೆರಿಕಾ ನೌಕಾ ಸೇನೆಯ ಎರಡು ವಿಮಾನಗಳನ್ನು ನಿಲ್ಲಿಸಲು ನಿಲ್ದಾಣವನ್ನು ನಿರ್ಮಿಸಿತ್ತು. ಇಲ್ಲಿ ಸುಮಾರು 4000/176 ಅಡಿ ಉದ್ದದ ನಾಲ್ಕು ರನ್ ವೇಗಳಿವೆ. 1946 ರಲ್ಲಿ ಅಮೆರಿಕಾ ನೌಕಾ ಸೇನೆ ಈ ಸ್ಥಳವನ್ನು ಬಳಸದೆ ಕೈ ಬಿಟ್ಟಿತ್ತು. ನಂತರ ಇದನ್ನು ಗ್ರಾಮಸ್ಥರು ಬಳಸಲು ಪ್ರಾರಂಭಿಸಿ, ಮತ್ತಷ್ಟು ಅಭಿವೃದ್ಧಿಡಿಸಿಕೊಂಡು ಬಳಸುತ್ತಿದ್ದಾರೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author