ಎರಡು ಸಮುದ್ರಗಳು ಸಂಧಿಸಿದರೂ ನೀರು ಬೆರೆಯುವುದಿಲ್ಲ..!

ಎರಡು ಸಮುದ್ರಗಳು ಸಂಧಿಸಿದರೂ ನೀರು ಬೆರೆಯುವುದಿಲ್ಲ..!

ಜಗತ್ತಿನಲ್ಲಿ ಅದೆಷ್ಟೋ ವಿಸ್ಮಯಕಾರಿ ಪ್ರದೇಶಗಳಿವೆ, ಪ್ರತಿ ಕ್ಷಣ ಅದೆಷ್ಟೋ ಅಚ್ಚರಿಯ ಘಟನೆಗಳು ನಡೆಯುತ್ತಿರುತ್ತವೆ. ಇಂತಹ ಅದ್ಭುತ ಹಾಗೂ ಅಚ್ಚರಿಗೆ ಹಲವಾರು ಕಾರಣಗಳಿರುತ್ತವೆ. ಹೀಗೆ ಜನರಲ್ಲಿ ಕುತೂಹಲ ಅಚ್ಚರಿ ಮೂಡಿಸುವ ಒಂದು ವಿಷಯ ಅಂದ್ರೆ ಅದು ಸಮುದ್ರದ ನೀರು ಸಂಧಿಸಿದರೂ ಬೆರೆಯದಿರುವುದು.

ಅಚ್ಚರಿ ಎನಿಸಿದರೂ ನಂಬಲೇ ಬೇಕಾದ ವಿಷಯ. ಜಗತ್ತಿನಲ್ಲಿರು 5 ಸಮುದ್ರಗಳಿದ್ದು ಅವುಗಳು ಒಂದನ್ನೊಂದು ಸಂಧಿಸಿದರೂ ಸಹ ಆ ಸಮುದ್ರಗಳ ನೀರು ಬೆರೆಯದೆ ತಟಸ್ಥವಾಗಿರುತ್ತವೆ.

ನೀರು ಬೆರೆಯುವುದಿಲ್ಲ:

ಭೂನಮಿಯನ್ನು ಶೇ. 70 ರಷ್ಟು ನೀರು ಆವರಿಸಿದೆ. ಇನ್ನು 30ರಷ್ಟು ಮಾತ್ರವೇ ಭೂಮಿ ಕಂಡುಬರುತ್ತದೆ. ಈ ಭೂ ಮಂಡಲದಲ್ಲಿ 5 ಸಮುದ್ರಗಳಿದ್ದು ಅವುಗಳ ಅಂತ್ಯವನ್ನು ಕಂಡು ಹಿಡಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಆದರೆ ಈ ಸಮುದ್ರಗಳು ಒಂದನ್ನೊಂದು ಸಂಧಿಸಿದಾಗ ಯಾವ ಕಾರಣಕ್ಕೂ ಬೆರೆಯುವುದೇ ಇಲ್ಲ. ಎರಡೂ ಸಮುದ್ರಗಳು ಸೇರುವ ಸ್ಥಳವನ್ನು ಸ್ಪಷ್ಟವಾಗಿ ಕಾಣಬಹುದು. ಜೊತೆಯಾಗಿ ಅಂಟಿಕೊಂಡಿದ್ದರೂ ಸಹ ನೀರು ಮಾತ್ರ ಬೆರೆಯುವುದಿಲ್ಲ.

ನೀರು ಬೆರೆಯದಿರಲು ಕಾರಣ:

ಎರಡು ಸಮುದ್ರಗಳು ಸಂಧಿಸಿದರೂ ನೀರು ಬೆರೆಯದೆ, ಬಣ್ಣವೂ ಬದಲಾಗದೆ ಇರಲು ಕಾರಣ ಆ ಸಮುದ್ರಗಳ ನೀರಿನ ಲವಣಾಂಶಗಳ ಏರುಪೇರು. ಹೌದು ಒಂದೊಂದು ಸಮುದ್ರದ ನೀರಿನಲ್ಲೂ ಆಯಾ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ ಉಪ್ಪಿನಂಶವಿರುತ್ತದೆ. ಉಪ್ಪಿನಂಶ ಹೆಚ್ಚಿರುವ ನೀರು ಗಡುಸಾಗಿ ಹಾಗೂ ಉಪ್ಪಿನಂಶ ಕಡಿಮೆ ಇರುವ ನೀರು ತೆಳುವಾಗಿರುತ್ತದೆ. ಆದ್ದರಿಂದ ಸಮುದ್ರದ ನೀರು ಸಂಧಿಸಿದರೂ ಸಹ ಒಂದಕ್ಕೊಂದು ಬೆರೆಯುವುದಿಲ್ಲ.

ನೀರು ಬೆರೆಯಲು ಏನಾಗಬೇಕು:

ಹೀಗೆ ಒಂದಕ್ಕೊಂದು ಸಂಧಿಸಿದ ನೀರು ಬೆರೆಯಬೇಕಾದರೆ ನೀರು ನಿಂತಲ್ಲೇ ನಿಲ್ಲದೆ ಹರಿಯುತ್ತಿರಬೇಕು, ಇಲ್ಲವೇ ದೊಡ್ಡ ಅಲೆಗಳು ಏಳಬೇಕು ಅಥವಾ ಚಂಡಮಾರುತಗಳು ಬರಬೇಕು. ಈ ಸಂದರ್ಭದಲ್ಲಿ ಮಾತ್ರ ಎರಡು ಸಮುದ್ರಗಳ ನೀರು ಸೇರುವ ಸಾಧ್ಯತೆ ಇರುತ್ತದೆ. ಲವಣಾಂಶ ಹೆಚ್ಚಿರುವ ನೀರಿನಲ್ಲಿ ಯಾವ ವಸ್ತುವೂ ಬೇಗ ಮುಳುಗುವುದಿಲ್ಲ. 

ಅಲಾಸ್ಕಾ:

ಹಿಂದೂ ಮಹಾ ಸಾಗರ ಮತ್ತು ಫೆಸಿಫಿಕ್ ಮಹಾ ಸಾಗರಗಳು ಅಲಾಸ್ಕಾ ಕೊಲ್ಲಿಯಲ್ಲಿ ಸಂಧಿಸುತ್ತವೆ. ಆದರೆ ಇವರೆಡೂ ಸಮುದ್ರಗಳು ಅಂಟಿಕೊಂಡಂತೆ ಇದ್ದರೂ ನೀರು ಮಾತ್ರ ಬೆರೆಯುವುದಿಲ್ಲ. ಎರಡೂ ಸಮುದ್ರಗಳ ನೀರಿನ ಬಣ್ಣ ಭಿನ್ನವಾಗಿದ್ದು ಇವುಗಳು ಸಂಧಿಸುವ ಸ್ಥಳದಲ್ಲಿ ಗೆರೆ ಎಳೆದಂತೆ ಕಂಡು ಬರುತ್ತದೆ. ಈ ದೃಷ್ಯವನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.

 

ಯಾವ ಸಮುದ್ರದ ನೀರೂ ಬೆರೆಯುವುದಿಲ್ಲ:

ಕೇವಲ ಹಿಂದೂ ಮಹಾ ಸಾಗರ ಹಾಗೂ ಅಟ್ಲಾಂಟಿಕ್ ಮಹಾ ಸಾಗರದ ನೀರು ಅಷ್ಟೆ ಅಲ್ಲ, ಜಗತ್ತಿನಲ್ಲಿರುವ ಐದು ಮಹಾಸಾಗರಗಳು ಸಂಧಿಸಿದರೂ ನೀರು ಮಾತ್ರ  ಬೆರೆಯುವುದಿಲ್ಲ. ಜಿಬ್ರಾಲ್ಟರ್ ಜಲ ಸಂಧಿಯಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು, ಅಟ್ಲಾಂಟಿಕ್ ಸಾಗರಗಳು ಸಂಧಿಸುತ್ತವೆ. ಲವಣಾಂಶಗಳ ವ್ಯತ್ಯಯದಿಂದ ಈ ಸಮುದ್ರಗಳ ನೀರು ಬೆರೆಯುವುದಿಲ್ಲ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author