ಐಪಿಎಲ್ 14ನೇ ಆವೃತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ ಸಿದ್ಧತೆ ಹೇಗಿದೆ?

ಚೆನ್ನೈ ಸೂಪರ್ ಕಿಂಗ್ಸ್ ಕಪ್ ಗೆಲ್ಬೇಕು ಅಂದ್ರೆ ಏನ್ ಮಾಡ್ಬೇಕು?

ಕಳೆದ ಆವೃತ್ತಿಯಲ್ಲಿ ಸಾಧಾರಣ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಬಾರಿಗೆ ಲೀಗ್ ಹಂತದಲ್ಲೇ ಹೊರಬಿದ್ದು ಆಘಾತ ಅನುಭವಿಸಿತ್ತು. 2021ರ ಐಪಿಎಲ್‍ನಲ್ಲಿ ಎಂ.ಎಸ್.ಧೋನಿ ನೇತೃತ್ವದ ಸಿಎಸ್‍ಕೆ ತಮ್ಮ ಎಂದಿನ ಶೈಲಿಯಲ್ಲಿ ಅಬ್ಬರದ ಆಟವಾಡಿ ಪುಟಿದೇಳಲು ಹಾತೊರೆಯುತ್ತಿದೆ. ಧೋನಿ ತಂಡಕ್ಕೆ ಪುಟಿದೇಳುವ ಸಾಮರ್ಥ್ಯ ಖಂಡಿತ ಇದೆ. ಆದರೆ ಹಿರಿಯರಿಂದಲೇ ಕೂಡಿರುವ ತಂಡ ಯುವಕರ ಆರ್ಭಟಕ್ಕೆ ಎದೆಯೊಡ್ಡಿ ನಿಲ್ಲುತ್ತಾ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. 

ಸ್ಟ್ರೆಂಥ್: 2020ರ ಐಪಿಎಲ್‍ನಲ್ಲಿ ಸುರೇಶ್ ರೈನಾ ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡಿತ್ತು. ಆದರೆ ಈ ವರ್ಷ ರೈನಾ ವಾಪಸಾಗಿದ್ದಾರೆ. ಜೊತೆಗೆ ರಾಬಿನ್ ಉತ್ತಪ್ಪ, ರವೀಂದ್ರ ಜಡೇಜಾ, ಧೋನಿ, ಅಂಬಟಿ ರಾಯುಡು, ಫಾಫ್ ಡು ಪ್ಲೆಸಿಯಂತಹ ಅನುಭವಿ ಆಟಗಾರರ ದಂಡೇ ತಂಡದಲ್ಲಿದೆ. ಬೌಲಿಂಗ್ ವಿಭಾಗವೂ ಟಿ20 ತಜ್ಞರಿಂದ ಕೂಡಿದೆ. ಲುಂಗಿ ಎನ್‍ಗಿಡಿ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಡ್ವೇನ್ ಬ್ರಾವೋ ಇದ್ದಾರೆ. 

 

ವೀಕ್‍ನೆಸ್: ವೇಗಿ ಜೋಶ್ ಹೇಜಲ್‍ವುಡ್ ದಿಢೀರನೆ ಐಪಿಎಲ್‍ನಿಂದ ಹೊರಬಿದ್ದಿರುವುದು ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ. ಅಲ್ಲದೇ ಧೋನಿ, ತಾಹಿರ್, ರಾಯುಡು ಹೆಚ್ಚೂ ಕಡಿಮೆ 6 ತಿಂಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಜಡೇಜಾ, ಬ್ರಾವೋ ಗಾಯದಿಂದ ಈಗಷ್ಟೇ ಚೇತರಿಸಿಕೊಂಡಿದ್ದು ಅವರಿಂದ ಪೂರ್ಣ ಪ್ರಮಾಣದ ಪ್ರದರ್ಶನ ಮೂಡಿಬರಲಿದೆಯೇ ಎನ್ನುವ ಸಂಶಯವಿದೆ. ತಂಡದ ಸಮತೋಲನದಲ್ಲಿ ಸ್ವಲ್ಪ ಸಮಸ್ಯೆಯಾದರೂ ಸಿಎಸ್‍ಕೆಗೆ ಹಿನ್ನಡೆ ಆಗೋದು ಖಚಿತ. 

ಬಲಿಷ್ಠ ಪ್ಲೇಯಿಂಗ್ ಇಲೆವೆನ್ : ಉತ್ತಪ್ಪ, ಡು ಪ್ಲೆಸಿ, ರಾಯುಡು, ಗಾಯಕ್ವಾಡ್, ಧೋನಿ, ಮೋಯಿನ್/ಬ್ರಾವೋ, ಜಡೇಜಾ, ಕರ್ರನ್, ಶಾರ್ದೂಲ್, ದೀಪಕ್ ಚಹರ್, ತಾಹಿರ್/ಎನ್‍ಗಿಡಿ 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author