ಕಡುಬಡತನವಿರಬಹುದು ಆದರೆ ಜ್ಞಾನದಲ್ಲಿ ಶ್ರೀಮಂತ ಈ ಬಾಲಕ.

ಕಡುಬಡತನವಿರಬಹುದು ಆದರೆ ಜ್ಞಾನದಲ್ಲಿ ಶ್ರೀಮಂತ ಈ ಬಾಲಕ.

ಕರೋನ ಮಹಾಮಾರಿ ಯಿಂದಾಗಿ ಇಷ್ಟು ದಿನ ಶಾಲೆಯಿಂದ ದೂರ ಉಳಿದ್ದ ವಿದ್ಯಾರ್ಥಿಗಳು ಈಗ ತಪ್ಪದೇ ಶಾಲೆ ಹೋಗಬೇಕಾಗಿದೆ. ಆದರೆ ಈ ಬಾರಿ ಕರೋನ ಸಮಸ್ಯೆಯಿಂದ ಮಕ್ಕಳಿಗೆ ಸೈಕಲ್ ಭಾಗ್ಯವಿಲ್ಲ. ಆದರೆ ಇಲ್ಲೊಬ್ಬ ಬಾಲಕ ಮನೆಯಲ್ಲಿ ಗುಜರಿಗೆ ಹಾಕಲು ಇಟ್ಟಿದ್ದ ಸೈಕಲ್ ಅನ್ನೇ ನವೀಕರಿಸಿ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾನೆ.

ಈ ಬಾಲಕನ ಹೆಸರು ಶ್ರೀಕಾಂತ ಹುಲಗುಪ್ಪ ಈಗ 8ನೇ ತರಗತಿ ಓದುತ್ತಿದ್ದಾನೆ. ವಿಜಯಪುರದ ನಾಕಾ ಬಳಿ ಇರುವ ಶಹಾಪುರ ಗೇಟ್ ನ ಪಟೇಲ್ ಗಲ್ಲಿಯಲ್ಲಿ ವಾಸವಾಗಿರುವ ಈತ ಸರ್ಕಾರಿ ಶಾಲೆಯ ವಿದ್ಯಾರ್ಥಿ. ಶಾಲೆ ಪ್ರಾರಂಭವಾದ ನಂತರ ಶಾಲೆಗೆ ಹೋಗಲು ತಂದೆಯನ್ನು ಸೈಕಲ್ ಕೊಡಿಸುವಂತೆ ಕೇಳಿದ್ದಾನೆ. ಸದ್ಯ ನಿರುದ್ಯೋಗಿಯಾಗಿರುವ ಬಾಲಕನ ತಂದೆ ಕೆಲಸ ಸಿಕ್ಕ ನಂತರ ಸೈಕಲ್ ಕೊಡಿಸುವುದಾಗಿ ಹೇಳಿದ್ದಾರೆ.

ಆದರೆ ಇಷ್ಟಕ್ಕೆ  ಸುಮ್ಮನಾಗದ ಈ ಬಾಲಕ ಮನೆಯಲ್ಲೇ ಗುಜರಿಗೆ ಹಾಕಲು ಇಟ್ಟಿದ್ದ ಸೈಕಲ್ ಅನ್ನೇ ತೆಗೆದು ತನ್ನ ಸೃಜನಶೀಲತೆಯನ್ನು ತೋರಿದ್ದಾನೆ. ಈ ಸೈಕಲ್ ನ ಹಾಳಾಗಿದ್ದ ಟಯರ್, ಟ್ಯೂಬ್ ಗಳನ್ನ ತೆಗೆದು, ಕಬ್ಬಿಣದ ಗಾಲಿಗೆ ಪೈಪ್ ಹಾಕಿ ಅಲುಗಾಡಾದಂತೆ ತಂತಿ ಬಿಗಿದಿದ್ದಾನೆ. ನಂತರ ಇದರ ಮೇಲೆ ಮೊದಲೇ ತೆಗೆದಿದ್ದ ಟ್ಯೂಬ್ ಅನ್ನು ಮತ್ತೆ ಸುತ್ತಿ ಮತ್ತೊಮ್ಮೆ ತಂತಿ ಬಿಗಿದಿದ್ದಾನೆ. ಈ ಸೈಕಲ್ ಗೆ ಅಳವಡಿಸಿರು ಡಿಸ್ಕ್ ಬ್ರೇಕ್ ಕಾರು, ಬೈಕ್ ಬ್ರೇಕ್ ಗಳಿಗಿಂತಲೂ ಸೂಕ್ಷ್ಮವಾಗಿವೆ. ಈಗ ಸೈಕಲ್ ನ ಚಕ್ರಗಳು ಟಯರ್ ಟ್ಯೂಬ್ ಇದ್ದಾಗ ಹೇಗೆ ಸುಲಲಿತವಾಗಿ ಚಲಿಸುತ್ತಿದ್ದವೋ ಅದೇ ರೀತಿ ಈಗಲೂ ನಾಜೂಕಾಗಿ ಚಲಿಸುವಂತೆ ಮಾಡಿದ್ದಾನೆ ಈ ಬುದ್ದಿವಂತ ಬಾಲಕ. ಅಷ್ಟೇ ಅಲ್ಲ ಇದೇ ಸೈಕಲ್ ನಲ್ಲಿ ಈತ ಪ್ರತೀ ದಿನ ಶಾಲೆಗೆ ಹೋಗುತ್ತಿದ್ದಾನೆ.

ಬಾಲಕನ ಕ್ರಿಯಾಶೀಲತೆಗೆ ಶಿಕ್ಷಕರೂ ಹಾಗೂ ವಿದ್ಯಾರ್ಥಿಗಳೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೇ ಅಲ್ವೇ ಬೆಳೆಯುವ ಸಿರಿ ಮೊಳಕೆಯಲ್ಲೇ ಅನ್ನೋದು.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author