ಕನ್ನಡ ಚಿತ್ರರಂಗದ ದಂತಕಥೆ, ಅಣ್ಣಾವ್ರು ಎಂಬ ಅದ್ಭುತ ಡಾ.ರಾಜ್‍ ಕುಮಾರ್

 

ಕನ್ನಡ ಚಿತ್ರರಂಗದ ದಂತಕಥೆ, ಅಣ್ಣಾವ್ರು ಎಂಬ ಅದ್ಭುತ ಡಾ.ರಾಜ್‍ ಕುಮಾರ್

rajkumarsource and pic credit: google.com

ಚಂದನವನದ ಧ್ರುವತಾರೆ, ಕನ್ನಡಿಗರ ಕಣ್ಮಣಿ ಎಂದೇ ಕರೆಸಿಕೊಳ್ಳುವ ನಟ ಸಾರ್ವಭೌಮ ಡಾ.ರಾಜ್‍ ಕುಮಾರ್‍ ಇಂದಿಗೂ ಆರೂವರೆ ಕೋಟಿ ಜನರ ಹೃದಯ ಸಿಂಹಾಸನದಲ್ಲಿ ಉಳಿದಿರುವ ಏಕೈಕ ನಟ. ಸುಮಾರು ಐದು ದಶಕಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ.

rajkumarsource and pic credit: google.com

ಮುತ್ತುರಾಜ್, ಡಾ.ರಾಜ್ ಕುಮಾರ್ ಆದ ಕಥೆ

ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ ಎಪ್ರಿಲ್ 24 1929ರಂದು ರಾಜ್‌ಕುಮಾರ್ ಜನಿಸಿದರು. ಮುತ್ತುರಾಜನ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರಿಗೆ ಕನ್ನಡ ರಂಗಭೂಮಿಯಲ್ಲಿ ದೊಡ್ಡ ಹೆಸರಿತ್ತು. ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮುನ್ನ ಡಾ.ರಾಜ್ ಅವರ ಹೆಸರು ಮುತ್ತುರಾಜ ಎಂದಿತ್ತು.

ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತುರಾಜ್‌ಗೆ ಅವರಿಂದಲೇ ತರಬೇತಿಯಾಯಿತು. ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರ ನಿರ್ವಹಿಸುತ್ತಿದ್ದರು. ಮುತ್ತುರಾಜ್ 8ನೇ ವಯಸಿನಲ್ಲೇ ಶಾಲೆ ಬಿಟ್ಟರು. ತನ್ನ 25 ನೇ ವಯಸಿನವರೆಗೂ ಗುಬ್ಬಿ ವೀರಣ್ಣ ಅವರ ನಾಟಕ ಮಂಡಳಿಯಲ್ಲಿ ಅಭಿನಯ ಮಾಡುತ್ತಿದ್ದರು. ಈ ಮಧ್ಯೆ ಅಪ್ಪಾಜಿ ಗೌಡ ಅವರ ಮಗಳು ಪಾರ್ವತಮ್ಮಅವರ ಕೈ ಹಿಡಿದ್ರು. ಅಲ್ಲಿಂದ ಶುರುವಾದ ಮುತ್ತುರಾಜ್ ಪಯಣ ನಟಸಾರ್ವಭೌಮ ರಾಜ್ ಕುಮಾರ್ ಎಂಬ ಹೆಸರಿನ ವರೆಗೆ ಬಂದು ತಲುಪಿತು.

rajkumar

source and pic credit: google.com

ಸಿನಿಮಾ ಜೀವನ

ಮುತ್ತುರಾಜ್‍ ಗುಬ್ಬಿ ವೀರಣ್ಣ ನಾಟಕ ಮಂಡಳಿಯಲ್ಲಿ ಅಭಿನಯ ಮಾಡುತ್ತಿದ್ದರು. ಆ ಸಮಯದಲ್ಲಿ ನಿರ್ದೇಶಕ ಸಿಂಹ ಮುತ್ತುರಾಜ್ ಅಭಿನಯವನ್ನು ನೋಡಿ ಮೆಚ್ಚಿಕೊಂಡರು. ಅವರು ಇದೇ ಸಂದರ್ಭದಲ್ಲಿ  ಬೇಡರ ಕಣ್ಣಪ್ಪ ಪಾತ್ರಕ್ಕೆ ಹೊಸ ಕಲಾವಿದರನ್ನು ಹುಡುಕುತ್ತಿದ್ದರು. ಹಾಗಾಗಿ ರಾಜ್ ಅವರ ಅಭಿನಯ ಮೆಚ್ಚಿ ತಮ್ಮ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಮಾಡಿದರು. ಮುತ್ತುರಾಜ್ ಹೆಸರು ಬದಲಿಸಿ ರಾಜ್‌ಕುಮಾರ್ ಎಂದು ನಾಮಕರಣ ಮಾಡಿದರು.ಅದು ರಾಜ್ ಅವರ ಮೊದಲ ಚಿತ್ರ. ಚಿತ್ರದಲ್ಲಿ ರಾಜ್‍ ಕುಮಾರ್ ತಮ್ಮ ಅದ್ಭುತ ನಟನೆಯಿಂದ ನೋಡುಗರನ್ನು ಬೆರಗುಗೊಳಿಸಿದ್ದರು. ಚಿತ್ರ ಸಹ ಯಶಸ್ವಿಯಾಗಿತ್ತು.

rajkumarsource and pic credit: google.com

ಆ ನಂತರ ಬಬ್ರುವಾಹನ, ಕೃಷ್ಣ ದೇವರಾಯ, ಕಾಳಿದಾಸ ಹೀಗೆ ಹಲವು ಪಾತ್ರಗಳಲ್ಲಿ ರಾಜ್ ಕುಮಾರ್ ಅಭಿನಯಿಸಿದ್ದಾರೆ. ರಾಜ್ ಕುಮಾರ್ ಮಾಡದ ಪಾತ್ರಗಳೇ ಇಲ್ಲ. ಭಿನ್ನ-ವಿಭಿನ್ನ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಅಷ್ಟೇ ಅಲ್ಲ, ಕನ್ನಡದ ಎಲ್ಲಾ ನಾಯಕಿಯರ ಜೊತೆ ಅಭಿನಯಿಸಿದ್ದಾರೆ. ಭಾರತಿ, ಜಯಂತಿ, ಲೀಲಾವತಿ, ಪಂಡರೀಬಾಯಿ, ಮಂಜುಳಾ ಹೀಗೆ ಎಲ್ಲರ ಜೊತೆಗೂ ಅಭಿನಯ ಮಾಡಿದ್ದಾರೆ. ಶಂಕರ್‌ನಾಗ್, ಪಂತುಲು ಸೇರಿದಂತೆ ಎಲ್ಲ ಪ್ರಸಿದ್ಧ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.

rajkumarsource and pic credit: google.com

ರಾಜ್ ಅವರು ಹಲವು ಚಿತ್ರಗಳಲ್ಲಿ ನಿರ್ಮಾಪಕ ಮತ್ತು ಕಲಾವಿದರಾಗಿ ಕೆಲಸ ಮಾಡಿದ್ದಾರೆ. ಶಂಕರ್ ಗುರು, ಕವಿರತ್ನ ಕಾಳಿದಾಸ ಮುಂತಾದ ಚಿತ್ರಗಳು ಆಲ್​​ಟೈಮ್​​ ಹಿಟ್​​ಲಿಸ್ಟ್​​ನಲ್ಲಿ ಸೇರಿಕೊಂಡಿವೆ . ಆಪರೇಶನ್ ಡೈಮಂಡ್ ರಾಕೆಟ್, ಗೋವಾದಲ್ಲಿ ಸಿ ಐ ಡಿ 999 ನಂತಹ ಚಿತ್ರಗಳಲ್ಲಿ ಡಾ.ರಾಜ್​​ ಸಾಹಸ ಪ್ರಧಾನ ಪಾತ್ರಗಳನ್ನು ಮಾಡಿದ್ದಾರೆ. ಅಚ್ಚರಿ ಎಂದರೆ ಆಪರೇಶನ್ ಡೈಮಂಡ್ ರಾಕೆಟ್ ನಲ್ಲಿ ಇಂಗ್ಲೀಷ್​​ ಹಾಡು ಕೂಡ ಡಾ.ರಾಜ್​​ ಹಾಡಿದ್ದರು.

ಡಾ.ರಾಜ್ ವಜ್ರೇಶ್ವರಿ ಬ್ಯಾನರ್ ಅಂತ ಹೊಸ ಸಿನೆಮಾ ಪ್ರೊಡಕ್ಷನ್​​ ನನ್ನು ಆರಂಭಿಸಿದ್ದರು. ಬೇರೆ ನಾಯಕರ ಚಿತ್ರಗಳನ್ನೂ ಕೂಡ ನಿರ್ಮಾಣ ಮಾಡಿದ್ದರು. ತಮ್ಮ ಬ್ಯಾನರ್ ಮೂಲಕ ಹಲವು ನಾಯಕಿಯರನ್ನು ಕನ್ನಡ ಚಿತ್ರಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ರಮ್ಯಾ, ಪ್ರೇಮ, ರಕ್ಷಿತಾ ರಂತಹ ಸೂಪರ್​ ಸ್ಟಾರ್​​ಗಳು ಮೊದಲು ನಾಯಕಿಯರಾಗಿ ಕಾಣಿಸಿಕೊಂಡಿದ್ದು ವಜ್ರೇಶ್ವರಿ ಕಂಬೈನ್ಸ್​​ನಿಂದಲೇ.

rajkumarsource and pic credit: google.com

ಹಾಡುಗಾರ ಡಾ.ರಾಜ್ ಕುಮಾರ್‍

ಗುಬ್ಬಿ ನಾಟಕ ಕಂಪನಿಯಲ್ಲಿ ನಟನೆ ಮಾಡುವ ಸಮಯದಲ್ಲೇ ರಾಜ್ ಕುಮಾರ್‌ ಅವರನ್ನು ಅಣ್ಣಾವ್ರ ತಂದೆ ಪುಟ್ಟಸ್ವಾಮಯ್ಯ ಅವರು, ಪಾರ್ವತಮ್ಮ ರಾಜ್​​ಕುಮಾರ್ ತಂದೆ ಅಪ್ಪಾಜಿ ಗೌಡ ಹತ್ತಿರ ಸಂಗೀತ ಕಲಿಯೋದಕ್ಕೆ ಹಾಕಿದ್ದರಂತೆ.. ದಿನಕ್ಕೆ ಸತತ ಎರಡು ಗಂಟೆಗಳ ಕಾಲ ರಾಜ್​​​ಕುಮಾರ್ ಸಂಗೀತ ಕಲಿಯಬೇಕಾಗಿತ್ತು. ಅಣ್ಣಾವ್ರು ತಮ್ಮ ತಂದೆಯವರ ಭಯಕ್ಕೆ ಕರ್ನಾಟಿಕ್‌ ಹಾಗೂ ಹಿಂದುಸ್ತಾನಿ ಸಂಗೀತವನ್ನ ಕಲಿತುಕೊಂಡಿದ್ದರು. ಹೀಗಾಗಿ ಡಾ.ರಾಜ್​​ಕುಮಾರ್​​ಗೆ ಹಾಡುವ ವ್ಯಾಮೋಹವಿತ್ತು ಅನ್ನೋದು ಹಿರಿಯ ನಿರ್ದೇಶಕ ಭಗವಾನ್ ಹೇಳುವ ಮಾತು.

singer rajkumarsource and pic credit: google.com

ಡಾ.ರಾಜ್ ಕುಮಾರ್ ಮೊದಲಾಗಿ 1956ರಲ್ಲಿ ಬಂದ ಓಹಿಲೇಶ್ವರ ಚಿತ್ರದಲ್ಲಿ. ಶರಣು ಶಂಭೋಎಂಬ ಗೀತೆಯೊಂದನ್ನು ಹಾಡಿದ್ದರು. ಆ ನಂತರ ಮಹಿಷಾಸುರ ಮರ್ಧಿನಿ ಚಿತ್ರದಲ್ಲಿ ಎಸ್.ಜಾನಕಿಯವರೊಡನೆ ತುಂಬಿತು ಮನವ ತಂದಿತು ಸುಖವಎಂಬ ಯುಗಳ ಗೀತೆಯನ್ನ ಹಾಡಿದ್ದರು. ರಾಜ್‍ಕುಮಾರ್ ಸಿನಿಮಾಗಳಿಗೆ ಹೆಚ್ಚಾಗಿ ಹಾಡುತ್ತಿದ್ದುದ್ದು ಪಿ.ಬಿ ಶ್ರೀನಿವಾಸ್‍. ಅಣ್ಣಾವ್ರು ಹಾಗೂ ಶ್ರೀನಿವಾಸ್  ಧ್ವನಿ ಒಂದೇ ರೀತಿ ಇದ್ದ ಕಾರಣ ಹೆಚ್ಚಾಗಿ ರಾಜ್​​ಕುಮಾರ್ ಚಿತ್ರಗಳಲ್ಲಿ ಪಿ.ಬಿ.ಶ್ರೀನಿವಾಸ್ ಆಲ್ ಟೈಮ್ ಗಾಯಕರಾಗಿದ್ದರು. ಇಂತಹ ಸಂದರ್ಭದಲ್ಲಿ 1974ರಲ್ಲಿ ತೆರೆ ಕಂಡ ಸಂಪತ್ತಿಗೆ ಸವಾಲ್ ಚಿತ್ರಕ್ಕೆ ಪಿ.ಬಿ.ಶ್ರೀನಿವಾಸ್ ಹಾಡಬೇಕಾಗಿತ್ತು. ಆದರೆ ಆ ಹೊತ್ತಿನಲ್ಲಿ ಪಿ.ಬಿ.ಶ್ರೀನಿವಾಸ್ ಸಿಂಗಾಪುರ್​​​ನಲ್ಲಿದ್ದ ಕಾರಣ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಸದ್ಯಕ್ಕೆ ಟ್ರ್ಯಾಕ್‌ ಆಡಿಯೋಕ್ಕಾಗಿ ರಾಜ್​​ಕುಮಾರ್ ಅವರನ್ನೇ ಹಾಡುವುದಕ್ಕೆ ಹೇಳಿದ್ದರು.

rajkumarsource and pic credit: google.com

ಅಣ್ಣಾವ್ರ ಹಾಡಿನ ಶೈಲಿ, ಕಂಠವನ್ನು ಕೇಳಿ ಸ್ವತಃ ಪಿ.ಬಿ ಶ್ರೀನಿವಾಸ್ ಅವರು ಇದೇ ಹಾಡು ಇರಲಿ ಎಂದು ಹೇಳಿದ್ದರು. ಅದುವೇ ರಾಜ್ ಕುಮಾರ್ ಹಾಡಿದ ಮೊದಲ ಹಾಡು, ‘ಯಾರೇ ಕೂಗಾಡಲಿ, ಊರೇ ಹೋರಾಡಲಿಎಂಬ ಹಾಡು. ಈ ಹಾಡು ಎಮ್ಮೆ ಹಾಡೆಂದೇ ಪ್ರಸಿದ್ಧಿಯಾದ ಕಾರಣ ಅಂದಿನಿಂದ ಡಾ. ರಾಜ್​​ಕುಮಾರ್ ಪೂರ್ಣ ಪ್ರಮಾಣದ ಗಾಯಕರಾಗಿ ಹೊರ ಹೊಮ್ಮಿದರು. ಈ ಹಾಡು ಸೂಪರ್ ಹಿಟ್ ಆದ ನಂತ್ರ 1975ರಲ್ಲಿ ಬಂದ ಮಯೂರ ಚಿತ್ರದಲ್ಲಿ ನಾನಿರುವುದೇ ನಿಮಗಾಗಿ, ನಾಡಿರುವುದೆ ನಮಗಾಗಿ ಗೀತೆಅಣ್ಣಾವ್ರ ಸಂಗೀತ ವ್ಯಾಮೋಹಕ್ಕೆ ಸಾಕ್ಷಿಯಾಯಿತು.

Raj actingsource and pic credit: google.com

ರಾಜ್​ಕುಮಾರ್ ಅಭಿನಯದ ಜೀವನ ಚೈತ್ರ ಚಿತ್ರದಲ್ಲಿನ ನಾದಮಯ ಈ ಲೋಕವೆಲ್ಲಾ ಹಾಡಿನ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ಅಶ್ವಮೇಧ, ಓಂ, ಕಸ್ತೂರಿ ನಿವಾಸ, ನಾನಿನ್ನ ಮರೆಯಲಾರೆ, ಗಿರಿಕನ್ಯೆ, ಬಂಗಾರದ ಮನುಷ್ಯ, ಶಂಕರ್ ಗುರು, ಬಹದ್ದೂರ್ ಗಂಡು, ಹೊಸ ಬೆಳಕು, ಶೃತಿ ಸೇರಿದಾಗ, ಚಿಗುರಿದ ಕನಸು, ಅಭಿ ಚಿತ್ರದ ವಿಧಿ ಬರಹ ಎಂಥ ಘೋರ, ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡನಾಡಲ್ಲೇ ಹುಟ್ಟಬೇಕುಹೀಗೆ 150ಕ್ಕೂ ಹೆಚ್ಚು ಸಿನಿಮಾಗಳಿಗೆ ಡಾ. ರಾಜ್​​ಕುಮಾರ್ ಹಾಡಿದ್ದಾರೆ.

rajkumarsource and pic credit: google.com

ಪ್ರಶಸ್ತಿ ಪುರಸ್ಕಾರಗಳು

ಅಣ್ಣಾವ್ರ ಅದ್ಭುತ ನಟನೆಗೆ ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಸಹ ಪುರಸ್ಕೃತರಾದವರು.

ಕಾಡುಗಳ್ಳನಿಂದ ಅಪಹರಣ

rajkumarsource and pic credit: google.com

2000ನೇ ವರ್ಷದಲ್ಲಿ ಕಾಡುಗಳ್ಳ ವೀರಪ್ಪನ್‍ ನಿಂದ ಅಪಹರಣವಾಗಿದ್ದ ರಾಜ್‌ಕುಮಾರ್, 108 ದಿನಗಳ ನಂತರ ಬಿಡುಗಡೆಯಾಗಿದ್ದರು. 2006ರ ಏಪ್ರಿಲ್ 12ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು. ಇಡೀ ಕರ್ನಾಟಕದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಎಲ್ಲರೂ ಕಣ್ಣೀರಿಟ್ಟರು. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ದೌಡಾಯಿಸಿದ್ದರು. ಆ ಸಮಯದಲ್ಲಿ ಹಲವು ಗಲಾಟೆಗಳು ಕೂಡ ನಡೆದಿತ್ತು. ಹಲವು ಅಭಿಮಾನಿಗಳು ಪ್ರಾಣವನ್ನು ಕೂಡ ಬಿಟ್ಟರು.ಕಂಠೀರವ ಸ್ಟುಡಿಯೋ ದಲ್ಲಿ ಡಾ. ರಾಜ್​​ ಸ್ಮಾರಕ ಇದೆ. ಅವರ ಹೆಸರಿನ ರಸ್ತೆಯು ಕೂಡ ಬೆಂಗಳೂರಿನಲ್ಲಿದೆ. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada

https://www.youtube.com/Planet Tv Kannada 

 

► Follow us on Facebook

https://www.facebook.com/Planettvkannada 

 

► Follow us on Twitter

https://twitter.com/Planettvkannada 

 

► Follow us on Instagram

https://www.instagram.com/planettvkannada

 

► Follow us on Pinterest

https://www.pinterest.com/Planettvkannada 

 

► Follow us on Koo app

https://www.kooapp.com/planettvkannada

 

► Follow us on share chat

https://sharechat.com/planettvkannada 

 

► Join us on Telegram

https://t.me/planettvkannada

 

► Follow us on Tumblr

https://www.tumblr.com/planet-tv-kannada

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author