ಕನ್ನಡ ಚಿತ್ರರಂಗ ಬೆಳೆದುಬಂದ ಹಾದಿ..

'ಚಂದನವನದ' ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು..?

ಇಂದು ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಕನ್ನಡ ಚಿತ್ರರಂಗದ ಹಿಂದೆ ಅದೆಷ್ಟೋ ಕಲಾವಿದರ, ನಿರ್ದೇಶಕರ, ತಂಜ್ಞರ ಶ್ರಮವಿದೆ.. ಸ್ಯಾಂಡಲ್ವುಡ್ ಎಂದು ಕರೆಯಲಾಗುವ ಈ ಕನ್ನಡ ಚಿತ್ರರಂಗವು ರಂಗಭೂಮಿಯನ್ನ ಅವಲಂಭಿಸಿ ಪ್ರಾರಂಭವಾಯಿತು. ಕನ್ನಡದ ಮೊಟ್ಟ ಮೊದಲ ವಾಕ್ ಚಿತ್ರವೆಂದರೆ ಅದು 1934ರಲ್ಲಿ ತೆರೆಕಂಡ ಸತಿ ಸುಲೋಚನ. ಈ ಚಿತ್ರ ಬಿಡುಗಡೆಯ ನಂತರ ಕನ್ನಡದಲ್ಲಿ ಮೂಕಿ ಚಿತ್ರಗಳ ಅಂತ್ಯವಾಯಿತು.. 

85 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಕನ್ನಡ ಚಿತ್ರರಂಗದ ಖಾತೆಯಲ್ಲಿ ಈಗ 4000ಕ್ಕೂ ಹೆಚ್ಚು ಸಿನಿಮಾಗಳಿವೆ. ಕನ್ನಡ ಸಿನಿರಂಗ ತನ್ನ ಜರ್ನಿಯಲ್ಲಿ ಅದೆಷ್ಟೋ ಜನರಿಗೆ ಹೆಸರು ತಂದುಕೊಟ್ಟಿದೆ. 1964ರಲ್ಲಿ ಬಿಡುಗಡೆಯಾದ ಅಮರ ಶಿಲ್ಪಿ ಜಕ್ಕಣಾಚಾರಿ ಕನ್ನಡದ ಮೊದಲ ವರ್ಣಮಯ ಚಿತ್ರ. 

ಇನ್ನು ಕನ್ನಡ ಚಿತ್ರರಂಗ ಶುರುವಾದ 20 ವರ್ಷಗಳ ಆಸುಪಾಸಿನಲ್ಲಿ ಬೇಡರ ಕಣ್ಣಪ್ಪ ಚಿತ್ರ ನಿರ್ಮಾಣವಾಯ್ತು. ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ ಮುತ್ತುರಾಜ್ ಕನ್ನಡಿಗರ ರಾಜಕುಮಾರರಾದರು. ಆಗಲೇ ಈ ಬೇಡರ ಕಣ್ಣಪ್ಪ ಚಿತ್ರವನ್ನು ತಮಿಳಿಗೆ ಡಬ್ ಮಾಡಲಾಯ್ತು ಅಷ್ಟೇ ಅಲ್ಲ, ತೆಲುಗು ಮತ್ತು ಹಿಂದಿಯಲ್ಲಿ ರಿಮೇಕ್ ಸಹ ಮಾಡಲಾಯ್ತು. 

ಇನ್ನು ಕನ್ನಡ ಚಿತ್ರರಂಗದಲ್ಲಿ ಎಂದೂ ಮರೆಯಲಾಗದ ನಿರ್ದೇಶಕರೆಂದರೆ ಅದು ಪುಟ್ಟಣ್ಣ ಕಣಗಾಲ್.. 1967ರಲ್ಲಿ ಗೆಜ್ಜೆಪೂಜೆ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ಯಾಂಡಲ್ ವುಡ್ಗೆ ಪಾದಾರ್ಪಣೆ ಮಾಡಿದರು. ಸಿನಿಪ್ರಿಯರ ಮನಸ್ಸಿನಲ್ಲಿ ಉಳಿಯುವ ಅದೆಷ್ಟೋ ಸಿನಿಮಾಗಳನ್ನ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಅಷ್ಟೇ ಅಲ್ಲ ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯಗಳಾದ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರನ್ನು ಸಹ ಕಣಗಾಲ್ ಅವರು ಚಿತ್ರರಂಗಕ್ಕೆ ಪರಿಚಯಿಸುತ್ತಾರೆ. 

ಅದೆಷ್ಟೋ ಪ್ರಯೋಗಾತ್ಮಕ ಚಿತ್ರಗಳನ್ನು ನೀಡಿರುವ ಸ್ಯಾಂಡಲ್ ವುಡ್ ಇಂದು ಭಾರತದ ಅತಿದೊಡ್ಡ ಚಿತ್ರರಂಗವಾಗಿದೆ. ಕನ್ನಡ ಚಿತ್ರಗಳಲ್ಲಿ ಗುರುತಿಸಿಕೊಂಡ ಅದೆಷ್ಟೋ ನಟ ನಟಿಯರು ಭಾರತದ ಇತರೆ ಭಾಷೆಗಳಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕನ್ನಡ ಚಿತ್ರಗಳನ್ನು ಇತರೆ ಭಾಷೆಗಳಿಗೆ ಡಬ್ ಮಾಡುವ ಮೂಲಕ ಬೇರೆ ರಾಜ್ಯಗಳಲ್ಲಿಯೂ ಕನ್ನಡದ ಕಂಪು ಮೂಡಿಸುತ್ತಿದ್ದಾರೆ.

ಪ್ರಸ್ತುತ ಬಿಡುಗಡೆಯಾಗತ್ತಿರುವ ಹಲವು ಚಿತ್ರಗಳು ಸಿನಿರಸಿಕರ ಮನದಲ್ಲಿ ಅಚ್ಚಳಿಯದೆ ಉಳಿಯುವಂತಹ ಚಿತ್ರಗಳಾಗಿವೆ. ಕನ್ನಡ ಚಿತ್ರರಂಗದಿಂದ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದು, ಇತರೆ ಭಾಷೆಗಳಲ್ಲಿಯೂ ಸಹ ಮಿಂಚುತ್ತಿದ್ದಾರೆ. ಇದರ ಜೊತೆಗೆ ಬೇರೆ ಭಾಷೆಯ ಕಲಾವಿದರು ಸಹ ಕನ್ನಡದ ಸಿನಿಮಾಗಳತ್ತ ಹಚ್ಚಿನ ಒಲವು ತೋರಿಸುತ್ತಿದ್ದಾರೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author