ಕಪ್ಪು ದಾರವನ್ನು ಕೈ, ಕಾಲಿಗೆ ಕಟ್ಟಿಕೊಳ್ಳುವುದು ಯಾಕಾಗಿ..?

 

ಕಪ್ಪು ದಾರವನ್ನು ಕೈ, ಕಾಲಿಗೆ ಕಟ್ಟಿಕೊಳ್ಳುವುದು ಯಾಕಾಗಿ..?

black threadsource and pic credit: google.com

ಹಿಂದಿನ ಕಾಲದಿಂದ ಅನುಸರಿಸಿಕೊಂಡು ಬಂದ ಯಾವುದೇ ಪದ್ಧತಿಯಿರಲಿ ಅದಕ್ಕೇ ಅದರದ್ದೇ ಆದ ಪ್ರಾಮುಖ್ಯತೆಯಿರುತ್ತದೆ. ಹಲವರು ಅದನ್ನು ತಿಳಿದುಕೊಂಡು ಅನುಸರಿಸಿದೆ, ಇನ್ನೂ ಕೆಲವರು ಅರ್ಥದ ಬಗ್ಗೆ ತಿಳಿಯದೆ ಮೌಢ್ಯವಾಗಿ ಅದನ್ನು ಪಾಲಿಸುತ್ತಾರೆ. ಅಂಥದ್ದೇ ಒಂದು ಪದ್ಧತಿ ಕೈ, ಕಾಲಿಗೆ ದಾರ ಕಟ್ಟಿಕೊಳ್ಳುವುದು. ಹಲವರು ತಮ್ಮ ಕೈಗಳಿಗೆ ಕಪ್ಪು, ಕೆಂಪು, ಹಳದಿ ದಾರವನ್ನು ಕಟ್ಟಿಕೊಳ್ಳುವುದು ನೀವು ನೋಡಿರಬಹುದು. ಕಾಲಿಗೆ ಕಪ್ಪು ಬಣ್ಣದ ದಾರವನ್ನು ಕಟ್ಟುತ್ತಾರೆ. ಇದನ್ನು ಕಟ್ಟಿಕೊಳ್ಳುವುದರ ಹಿಂದೆಯೂ ಕೆಲವೊಂದು ನಿಯಮಗಳಿವೆ.

black threadsource and pic credit: https://www.newscrab.com

ಕೆಲವರು ಕಾಲಿಗೆ ಕಪ್ಪುದಾರವನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಬಹುಪಾಲು ಜನರಿಗೆ ಯಾಕೆ ಕಪ್ಪುದಾರ ಕಟ್ಟಿಕೊಂಡಿದ್ದೇವೆ ಎಂಬುದು ನಿಜವಾಗಿ ತಿಳಿದಿಲ್ಲ. ಎಲ್ಲರಂತೆ ತಾನೂ ಕೂಡ ಕಪ್ಪುದಾರವನ್ನು ಕಟ್ಟಿಕೊಂಡಿರುವವರು ಹಲವರಿದ್ದಾರೆ. ಅದರಲ್ಲೂ ಕೆಲವರು ಫ್ಯಾಷನ್​ಗಾಗಿ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ಅದರ ಬಗ್ಗೆ ತಿಳಿದುಕೊಂಡು ದಾರ ಕಟ್ಟಿಕೊಂಡಿರುತ್ತಾರೆ.

black threadsource and piccredit: google.com

ಕಪ್ಪು ದಾರವನ್ನು ಕಾಲಿಗೆ ಕಟ್ಟುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಇತ್ತು. ಧರ್ಮಗ್ರಂಥಗಳ ಪ್ರಕಾರ ಈ ಕಪ್ಪು ದಾರವನ್ನು ಕಟ್ಟುವುದರಿಂದ ಅನೇಕ ಪ್ರಯೋಜನಗಳಿವೆ. ಕೆಲವರು ಸಂಪ್ರದಾಯದಂತೆ ಇಂದಿಗೂ ಮನೆಯಲ್ಲಿ ಮಗು ಜನಿಸಿದಾಗ ಕಪ್ಪುದಾರವನ್ನು ಕಾಲಿಗೆ ಕಟ್ಟುತ್ತಾರೆ. ಇದನ್ನು ಹಾಕುವುದರಿಂದ ಕೆಟ್ಟದೃಷ್ಟಿಯಿಂದ ಮಗುವನ್ನು ರಕ್ಷಿಸಬಹುದು ಎನ್ನುವ ನಂಬಿಕೆ ಇದೆ. ಆದರೆ ಕಪ್ಪುದಾರ ಕಟ್ಟಿದರೆ ನಿಜವಾಗಿಯೂ ಪ್ರಯೋಜನವಿದೆಯಾಈ ಬಗ್ಗೆ ಇಲ್ಲಿದೆ ಮಾಹಿತಿ.

black threadsource and pic credit: google.com

ಕಪ್ಪು ದಾರ ಕಟ್ಟಿದರೆ ಕೆಟ್ಟ ದೃಷ್ಟಿಗಳಿಂದ ರಕ್ಷಣೆ

 

 

ಕಪ್ಪು ದಾರವನ್ನು ಧರಿಸುವುದರಿಂದ ಕೆಟ್ಟ ದೃಷ್ಟಿಗಳಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ತಾಯಂದಿರು ಪುಟ್ಟ ಮಕ್ಕಳ ಕೈಗೆ ಕಪ್ಪು ದಾರಕಪ್ಪು ಮಣಿಗಳ ಬಳೆಯನ್ನು ಹಾಕುತ್ತಾರೆ. ಕೆಟ್ಟದೃಷ್ಟಿಯಿಂದ ರಕ್ಷಿಸಿಕೊಳ್ಳಲು ಈ ದಾರವನ್ನು ಕೈಕಾಲುಕತ್ತಿನಲ್ಲಿಯೂ ಧರಿಸಲಾಗುತ್ತದೆ. ಕೆಟ್ಟ ಶಕ್ತಿಯು ವ್ಯಕ್ತಿಯ ಮೇಲೆ ಪರಿಣಾಮ ಬೀರದಂತೆ ಬದಲಾಗಿ  ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಪ್ಪು ದಾರ ಹೊಂದಿದೆ ಎಂಬ ನಂಬಿಕೆಯಿದೆ. ಹೀಗಾಗಿ ದೃಷ್ಟಿಯಿಂದ ಕೆಡುಕಾಗುತ್ತದೆ ಎಂದುಕೊಳ್ಳುವವರು ಕಪ್ಪು ದಾರವನ್ನು ಧರಿಸುವುದು ಒಳ್ಳೆಯದು.

black threadsource and pic credit: https://www.newscrab.com

ಪುಟ್ಟ ಮಕ್ಕಳ ಕಾಲುಕೈಗಳಲ್ಲಿ ಕಪ್ಪುದಾರವನ್ನು ಕಾಣಬಹುದು. ಕಪ್ಪು ಬಣ್ಣಕ್ಕೆ ದುಷ್ಟ ಶಕ್ತಿಯನ್ನು ತಡೆಯುವ ಶಕ್ತಿಯಿದೆ ಎಂಬ ನಂಬಿಕೆ ಮತ್ತು ಯಾರ ದೃಷ್ಟಿಯು ಮಗುವಿನ ಮೇಲೆ ಬೀರದಿರಲಿ ಎಂದು ಕಪ್ಪುದಾರವನ್ನು ಮಕ್ಕಳ ಕಾಲಿಗೆ ಕಟ್ಟುತ್ತಾರೆ. ಕಣ್ಣ ಬಣ್ಣವು ಶಾಖವನ್ನು ಹೀರುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ ಎಂದು ನಂಬುತ್ತಾರೆ.baby threadsource and pic credit: https://www.desertcart.com

ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುವ ರಕ್ಷಾಕವಚವಾಗಿ ಕಪ್ಪು ದಾರ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಈ ದಾರವು ಶನಿದೋಷದ ಋಣಾತ್ಮಕ ಪರಿಣಾಮಗಳಿಂದಲೂ ನಮ್ಮನ್ನು ರಕ್ಷಿಸುತ್ತದೆ ಎನ್ನುತ್ತಾರೆ. ಆದರೆ, ಶುಭ ಸಮಯದಲ್ಲಿ ಮಾತ್ರವೇ ಈ ದಾರವನ್ನು ಕಟ್ಟಬೇಕು ಎಂದು ಹೇಳುತ್ತಾರೆ. ಶುಭ ಸಮಯವನ್ನು ಪರಿಣಿತ ಜ್ಯೋತಿಷಿಯಲ್ಲಿ ಕೇಳಿಯೂ ದಾರವನ್ನು ಧರಿಸಬಹುದು.

 

 

ಹಣಕಾಸಿನ ಸಮಸ್ಯೆಗೆ ಪರಿಹಾರpiggy banksource and pic credit: https://www.freepik.com

ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದವರು ಕಪ್ಪು ದಾರ ಕಟ್ಟಿಕೊಂಡರೆ ಸಮಸ್ಯೆ ಬಗೆಹರಿಯುತ್ತದೆ ಎಂದು ನಂಬಲಾಗುತ್ತದೆ, ಮಂಗಳವಾರದಂದು ಕಪ್ಪು ದಾರವನ್ನು ಕಟ್ಟಿದರೆ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ. ಮತ್ತು ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಎಂದು ಹೇಳುತ್ತಾರೆ.

ಕಾಲಿನಲ್ಲಿರುವ ಗಾಯಗಳು ಗುಣವಾಗುತ್ತವೆblack threadhttps://metrojournalonline.com

ಕೆಲವೊಮ್ಮೆ ಕಾಲಿಗೆ ಗಾಯಗಳಾದರೆ ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಕಪ್ಪು ದಾರವನ್ನು ಕಾಲಿಗೆ ಕಟ್ಟಿಕೊಳ್ಳುತ್ತಾರೆ. ಇದರಿಂದ ಶೀಘ್ರವಾಗಿ ಗಾಯವು ಗುಣವಾಗಲು ಪ್ರಾರಂಭವಾಗುತ್ತದೆ ಬ ನಂಬಿಕೆಯಿದೆ. ಕೆಲವೊಮ್ಮೆ ಅತಿಯಾದ ಕೆಲಸ ಅಥವಾ ನಡಿಗೆಯಿಂದ ಪಾದಗಳಲ್ಲಿ ನೋವು ಪ್ರಾರಂಭವಾಗುತ್ತದೆ. ಇಂತಹ ಸಂದರ್ಭದಲ್ಲಿಯೂ ಈ ದಾರವನ್ನು ಕಟ್ಟುವುದರಿಂದ ಪಾದಗಳ ನೋವಿನಿಂದ ಪರಿಹಾರ ಸಿಗುವುದು ಎನ್ನುತ್ತಾರೆ.black threadsource and pic credit: google.ocm

ಆದರೆ, ಈ ರೀತಿ ದಾರವನ್ನು ಕಟ್ಟುವಾಗ ಹಲವು ನಿಯಮವನ್ನು ಪಾಲಿಸಬೇಕಾದ ಅಗತ್ಯವಿದೆ. ಕಪ್ಪು ದಾರವನ್ನು ಈ ರೀತಿ ಕಟ್ಟುವಾಗ ಈ ದಾರದಲ್ಲಿ ಒಂಭತ್ತು ಗಂಟುಗಳನ್ನು ಕಟ್ಟಿದ ನಂತರ ಮಾತ್ರ ಧರಿಸಬೇಕು.ಕಪ್ಪು ದಾರವನ್ನು ಕಟ್ಟಿರುವ ಕೈ ಅಥವಾ ಕಾಲುಗಳಲ್ಲಿ ಬೇರೆ ಯಾವುದೇ ಬಣ್ಣದ ದಾರವನ್ನು ಕಟ್ಟಬಾರದು. ಈ ದಾರವನ್ನು ಧರಿಸಿದ ನಂತರ ಪ್ರತಿದಿನ ಗಾಯತ್ರಿ ಮಂತ್ರವನ್ನು ಜಪಿಸುವುದು ಮುಖ್ಯ. ಆದರೆ ಗಾಯತ್ರಿ ಮಂತ್ರವನ್ನು ಪಠಿಸುವಾಗ ಸಮಯವೂ ಮುಖ್ಯವಾಗುತ್ತದೆ. ಪ್ರತಿದಿನ ಒಂದೇ ಸಮಯದಲ್ಲಿ ಪಠಿಸಬೇಕು.

black threadsource and pic credit: https://www.amarujala.com

ಕಪ್ಪು ಬಣ್ಣವು ಶನಿ ಗ್ರಹಕ್ಕೆ ಸಂಬಂಧಿಸಿದೆ. ಆದ್ದರಿಂದ ನಿಮ್ಮ ಜಾತಕದಲ್ಲಿ ಗ್ರಹದ ಸ್ಥಾನವು ಅಥವಾ ಶನಿದೋಷವು ಈ ದಾರವನ್ನು ಕಟ್ಟಿದರೆ ದುರ್ಬಲಗೊಳ್ಳಬಹುದು. ಮನೆಬಾಗಿಲಿಗೆ ನಿಂಬೆಯೊಂದಿಗೆ ಕಪ್ಪು ದಾರವನ್ನು ಕಟ್ಟಬಹುದು, ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ ಎಂದು ಹೇಳಲಾಗುತ್ತದೆ.

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author