ಕರ್ನಾಟಕದ ಪ್ರಮುಖ ಟಾಪ್ 5 ಡ್ಯಾಮ್ ಗಳು..

ಕರ್ನಾಟಕದ ಪ್ರಮುಖ ಟಾಪ್ 5 ಡ್ಯಾಮ್ ಗಳು..

ಪ್ರವಾಸಿಗರಿಗೆ ಕರ್ನಾಟಕ  ಅಚ್ಚುಮೆಚ್ಚಿನ ತಾಣ. ದೇವಸ್ಥಾನಗಳು, ಐತಿಹಾಸಿಕ ಕೋಟೆಗಳು, ನದಿಗಳು. ಬೆಟ್ಟಗುಡ್ಡಗಳು, ಡ್ಯಾಮ್ ಗಳು ಹೀಗೆ ಹಲವಾರು ತಾಣಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಅವುಗಳಲ್ಲಿ ಒನ್ ಡೇ ಟ್ರಿಪ್ ಗಳಿಗೆ ಡ್ಯಾಮ್ ಗಳು ಹೇಳಿಮಾಡಿಸಿದಂತಿವೆ, ಕುಟುಂಬ ಸಮೇತ, ಅಥವಾ ಫ್ರೆಂಡ್ಸ್ ಜೊತೆ ಟ್ರಿಪ್ ಗೆ ಹೋದಲ್ಲಿ ಫೋಟೋಗ್ರಫಿ, ಬೋಟಿಂಗ್ ಸೇರಿದಂತೆ ಇತರೆ ಮನರಂಜನೆಯಲ್ಲಿ ತೊಡಗಬಹುದಾಗಿದೆ.

ಕೆ.ಆರ್.ಎಸ್ ಡ್ಯಾಮ್: 

ಕೃಷ್ಣರಾಜ ಸಾಗರ ಅಂದ್ರೆ ಕೆ.ಆರ್.ಎಸ್ ಡ್ಯಾಮ್ ಯಾರಿಗೆ ಗೊತ್ತಿಲ್ಲ ಹೇಳಿ..? ಪ್ರಸಿದ್ಧ ಹಾಗೂ ಸುಂದರ ಪ್ರವಾಸಿ ತಾಣವಾಗಿದೆ ಈ ಕೆ.ಆರ್.ಎಸ್ ಡ್ಯಾಮ್. ಕನ್ನಡ ನಾಡಿನ ಜೀವನದಿಯಾದ ಕಾವೇರಿಗೆ ಅಡ್ಡಲಾಗಿ ಈ ಡ್ಯಾಮ್ ಅನ್ನು ನಿರ್ಮಿಸಲಾಗಿದೆ. ಈ ಅಣೆಕಟ್ಟು ಕಟ್ಟಿದ ಸಂದರ್ಭದಲ್ಲಿ ಇಡೀ ಭಾರತದಲ್ಲಿ ಅತೀ ದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಅಣೆಕಟ್ಟು ನಿರ್ಮಾಣದಲ್ಲಿ ಸರ್.ಎಮ್ ವಿಶ್ವೇಶ್ವರಯ್ಯ ಅವರ ಪಾತ್ರ ಪ್ರಮುಖವಾಗಿದೆ. ಡ್ಯಾಮ್ ಬಳಿಯೇ ಬೃಂದಾವನ ಉದ್ಯಾನವನ ನಿರ್ಮಿಸಲಾಗಿದೆ. ಸಂಗೀತ ಕಾರಂಜಿ ಇಲ್ಲಿನ ಮತ್ತೊಂದು ಆಕರ್ಶಣೆಯಾಗಿದೆ. ಕೆ.ಆರ್.ಎಸ್ ಸುತ್ತಮುತ್ತಲು ಮತ್ತಷ್ಟು ಹಲವು ಪ್ರವಾಸಿ ಸ್ಥಾನಗಳನ್ನು ಕಾಣಬಹುದಾಗಿದೆ.

2 ತುಂಗಭದ್ರಾ ಡ್ಯಾಮ್:

ಬಳ್ಳಾರಿಯ ಹೊಸಪೇಟೆ ಬಳಿ ಇರುವ ಈ ಡ್ಯಾಮ್ ಅನ್ನು ಕೃಷ್ಣಾ ನದಿಯ ಉಪನದಿಯಾದ ತುಂಗಭದ್ರ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶ ಸರ್ಕಾರ ಜಂಟಿಯಾಗಿ ಈ ಅಣೆಕಟ್ಟನ್ನು ನಿರ್ಮಿಸಿವೆ. ಕರ್ನಾಟಕದಲ್ಲಿಯೇ ಅತಿ ದೊಡ್ಡ ಟಣೆಕಟ್ಟು ಎಂಬ ಹಿರಿಮೆ ಈ ತುಂಗಭ್ರದಾ ಡ್ಯಾಮ್ ಗೆ ಇದೆ. ಅಣೆಕಟ್ಟಿನಲ್ಲಿ ಸಂಗ್ರಹಿಸಿದ ನೀರನ್ನು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ ಹಾಗೂ ಆಂಧ್ರಪ್ರದೇಶದ ಕರ್ನೂಲು, ಮೆಹಬೂಬ್ ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೀರಾವರಿ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

3 ವಾಣಿ ವಿಲಾಸ ಸಾಗರ (ಮಾರಿಕಣಿವೆ ಡ್ಯಾಮ್)

ಭಾರತದ ಭೂಪಟದಂತೆ ಕಾಣುವ ಕರ್ನಾಟಕ ರಾಜ್ಯದ ಅತ್ಯಂತ ಹಳೆಯ ಡ್ಯಾಮ್ ವಾಣಿವಿಲಾಸ ಅಣೆಕಟ್ಟನ್ನು ಸ್ವತಂತ್ರ ಪೂರ್ವದಲ್ಲಿ ಮೈಸೂರು ಮಹಾರಾಜರು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದರು. ಶತಮಾನ ಕಳೆದಿರುವ ವಾಣಿವಿಲಾಸ ಅಣೆಕಟ್ಟು ಸುತ್ತ ಹಲವು ಹಳ್ಳಿಗೆಳಿಗೆ ಜೀವಾಧಾರವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿರುವ ಏಕೈಕ ಹಾಗೂ ಶತಮಾನವನ್ನು ಕಳೆದಿರುವ ಕರ್ನಾಟದಲ್ಲಿಯೇ ಅತಿ ಹಳೆಯದಾದ ಜಲಾಶಯವೆಂದರೆ ಅದು ಮಾರಿಕಣಿವೆಯ ವಾಣಿವಿಲಾಸ ಅಣೆಕಟ್ಟು. ಬಾಬಾ ಬುಡನ್ ಗಿಯಲ್ಲಿ ಜನಿಸುವ 'ವೇದಾ' ನದಿ ಕಾಡುಮೇಡುಗಳನ್ನು ಅಲೆದು ಕಡೂರಿನ ಬಳಿ 'ಆವತಿ' ಎಂಬ ನದಿ ಸೇರಿ ವೇದಾವತಿಯಾಗಿ ಹರಿಯುತ್ತಾಳೆ.

4 ಸುಪಾ ಡ್ಯಾಮ್

ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲೂಕಿನ ಸುಪಾದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಹಲವು ಡ್ಯಾಮ್ ಗಳಲ್ಲಿ ಇದೂ ಒಂದು. ಈ ಅಣೆಕಟ್ಟು ಅತಿ ಎತ್ತರದ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1985ರಲ್ಲಿ ಉದ್ಘಾಟನೆಯಾದ ಈ ಡ್ಯಾಮ್ ಕರ್ನಾಟಕದ 2ನೇ ಅತಿ ದೊಡ್ಡ ಅಣೆಕಟ್ಟು ಎಂಬ ಖ್ಯಾತಿಗೆ ಪಾತ್ರವಾಗಿದೆ. ವಿದ್ಯುತ್ ಉತ್ಪಾದನೆಗಾಗಿಯೇ ಈ ಅಣೆಕಟ್ಟನ್ನು ನಿರ್ಮಿಸಲಾಗಿದ್ದು, 50ಮೆ. ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

5 ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಡ್ಯಾಮ್ ಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ವಿದ್ಯುತ್ ಉತ್ಪಾನೆ ಹಾಗೂ ನೀರಾವರಿ ಯೋಜನೆಗಾಗಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇನ್ನು ಈ ಡ್ಯಾಮ್ ನ ಬಳಿ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ. ಬೋಟಿಂಗ್, ಸಂಗೀತ ಕಾರಂಜಿಗಳಿವೆ. ಅಷ್ಟೇ ಅಲ್ಲದೆ ಅಣೆಕಟ್ಟಿನ ಒಂದು ಬದಿಯಲ್ಲಿ "ರಾಕ್ ಹಿಲ್" ಎಂಬ ಕೃತಕ ಅರಣ್ಯವನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಅಣೆಕಟ್ಟುಗಳು ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆಯ ಉದ್ದೇಶದಿಂದ ನಿರ್ಮಿಸಲಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಸುಂದರವಾದ ಉದ್ಯಾನವನಗಳು, ಕಾರಂಜಿಗಳು, ದೋಣಿ ವಿಹಾರವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಶಿಸಲಾಗುತ್ತಿದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author