ಆರೋಗ್ಯಕ್ಕೂ, ಸೌಂದರ್ಯಕ್ಕೂ ಎಳನೀರು ಉಪಕಾರಿ

ಆರೋಗ್ಯಕ್ಕೂ, ಸೌಂದರ್ಯಕ್ಕೂ ಎಳನೀರು ಉಪಕಾರಿ

ಬೇಸಿಗೆ ಬಂತು ಅಂದರೆ ಸಾಕು ಎಳನೀರಿಗೆ ಸಿಕ್ಕಾಪಟ್ಟೆ ಬೇಡಿಕೆ. ಆದರೆ ಇವತ್ತಿನ ದಿನಗಳಲ್ಲಿ ಜನರು ಎಳನೀರು ಕುಡಿಯುವ ಬದಲು ಕೂಲ್ಕೂಲ್ಅಂತ ಕೂಲಡ್ರಿಂಕ್ಸ್ಮೊರೆ ಹೋಗುವುದೇ ಹೆಚ್ಚು. ಕಲರಫುಲ್‍, ಡಿಫರೆಂಟ್ಫ್ಲೇವರ್ಅಂತ ರಾಸಾಯನಿಕ ಯುಕ್ತ ತಂಪು ಪಾನೀಯಗಳ ಮೊರೆ ಹೋಗುವವರಿಗೇನು ಗೊತ್ತು ಎಳನೀರಿನ ಮಹತ್ವ.

 

ಎಳನೀರೊಂದುು ಅಪ್ಪಟ ನೈಸರ್ಗಿಕ ಉತ್ಪನ್ನ. ಇದರಲ್ಲಿ ಯಾವುದೇ ರೀತಿಯ ರಾಸಾಯನಿಕ ಅಂಶ ಇರುವುದಿಲ್ಲ. ಭೂಮಿಯಿಂದ ಜಲವನ್ನು ಹೀರಿಕೊಂಡು ನಿಸರ್ಗದ ಮಡಿಲಲ್ಲಿ ಸೊಂಪಾಗಿ ಬೆಳೆದ ತೆಂಗಿನ ಮರ ನೀಡುವ ಆರೋಗ್ಯಕರ ಪಾನೀಯ ಎಳನೀರು.

tender coconutsource and pic credit: https://www.swiggy.com

ಹಿಂದಿನಿಂದಲೂ ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದುನಮ್ಮ ಹಿರಿಯರು ನಂಬಿದ್ದಾರೆ. ಎಳನೀರಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಖನಿಜಾಂಶಗಳಿದ್ದು, ಇದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು. ಎಳನೀರಿನಲ್ಲಿ ಲೌರಿಕ್ ಆಮ್ಲವಿದ್ದು, ಇದು ಪ್ರತಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಸಹ ಹೇಳಲಾಗುತ್ತದೆ

tender coconutsource and pic credit: wikipedia

 

ಆರೋಗ್ಯಕ್ಕೆ ಎಳನೀರು

 

ಊಟಕ್ಕೆ ಮೊದಲು ಒಂದು ಲೋಟ ಎಳನೀರು ಕುಡಿದರೆ ಅದರಿಂದ ಹೊಟ್ಟೆ ತುಂಬಿದಂತೆ ಆಗುವುದು ಮತ್ತು ಅತಿಯಾಗಿ ತಿನ್ನುವುದನ್ನು ಇದು ಕಡಿಮೆ ಮಾಡುವುದುಎಂದು ಹೇಳಲಾಗುತ್ತದೆ. ಅಲ್ಲದೆಎಳನೀರು ಕುಡಿಯುವುದು ಜೀರ್ಣಕ್ರಿಯೆಗೂ ಸಹಕಾರಿ. ನಿಯಮಿತವಾಗಿ ಎಳನೀರು ಕುಡಿದರೆ ಇದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ಸ್ ಸಮತೋಲನ ಕಾಪಾಡಬಹುದು ಮತ್ತು ಇದರಿಂದ ರಕ್ತದೊತ್ತಡ ಸಹ ಸರಿಯಾಗಿರುತ್ತದೆ.

tender coconutsource and pic credit: https://www.mumbailive.com

ಮಲಗುವ ಮೊದಲು ಒಂದು ಲೋಟ ಎಳನೀರು ಕುಡಿದರೆ ಒತ್ತಡ ನಿವಾರಣೆ ಆಗುವುದು. ಅಲ್ಲದೆ ದೇಹದಲ್ಲಿನ ವಿಷಕಾರಿ ಅಂಶವು ಹೊರಗೆ ಹಾಲು ಮತ್ತು ಮೂತ್ರಕೋಶವನ್ನು ಶುಚಿಗೊಳಿಸಲು ಇದು ಸಹಕಾರಿಯಾಗಿದೆ. ಆಲ್ಕೋಹಾಲ್ ನಿಂದಾಗಿ ನಿರ್ಜಲೀಕರಣ ಉಂಟಾಗುವುದು ಮತ್ತು ಇದರಿಂದಾಗಿ ತಲೆನೋವು, ವಾಕರಿಕೆ ಬರುವುದು. ಎಳನೀರು ಕುಡಿದರೆಈ ಸಮಸ್ಯೆ ಪರಿಹಾರವಾಗುತ್ತದೆ.

ಎಳನೀರು ಕುಡಿದರೆ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಉತ್ತಮಅದೇ ರೀತಿ ಸೌಂದರ್ಯ ವರ್ಧನೆಗೂ  ಎಳನೀರು ಸಹಕಾರಿಎಳನೀರಿನಲ್ಲಿ ಅತ್ಯಧಿಕ ಪ್ರಮಾಣದ ಪೋಷಕಾಂಶಗಳುವಿಟಮಿನ್ ಗಳು ಇರುವುದರಿಂದ ಇದು ತ್ವಚೆಯ ಹೊಳಪಿಗೆದಟ್ಟ ಕೇಶರಾಶಿ ನಿಮ್ಮದಾಗಲು ನೆರವಾಗುತ್ತದೆ.

tender coconutsource and pic credit: https://parenting.firstcry.com

ಎಳನೀರಿನ ಬ್ಯೂಟಿಟಿಪ್ಸ್

ದೇಹವು ಶುದ್ಧವಾಗಿದ್ದರೆ ಚರ್ಮ ಕೂಡ ಹೊಳೆಯುತ್ತದೆಪ್ರತಿನಿತ್ಯ ಎಳನೀರು ಕುಡಿಯುವುದರಿಂದಚರ್ಮಕ್ಕೆ ಆರೋಗ್ಯ ಹಾಗೂ ಕಾಂತಿ ಸಿಗುತ್ತದೆಬೆಳಗ್ಗೆ ಎದ್ದು ತಾಜಾ ಎಳನೀರನ್ನು ಮುಖಕ್ಕೆ ಚಿಮುಕಿಸಿ 10 ನಿಮಿಷಗಳ ಕಾಲ ಹಾಗೆಯೇ ಇಡಬೇಕುನಂತರ ಮುಖ ತೊಳೆಯುವುದರಿಂದ ಇಡೀ ದಿನ ಚರ್ಮ ತಾಜಾತನದಿಂದ ಕೂಡಿರುತ್ತದೆ.

tender coconutsource and pic credit: https://oleafy.in/product

 

ಅಲ್ಲದೆ, ಎಳನೀರಿಗೆ ಅರಿಶಿನ ಪುಡಿ ಹಚ್ಚಿಕೊಂಡು ಮುಖಕ್ಕೆ ಹಚ್ಚುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಎಳನೀರಿಗೆ ಸೌತೆಕಾಯಿ ರಸಮಿಕ್ಸ್ಮಾಡಿ ಹಚ್ಚುವುದರಿಂದಲೂ ತ್ವಚೆ ಆರೋಗ್ಯಯುತವಾಗಿ ಕಂಗೊಳಿಸುತ್ತದೆ. ಬಿಸಿಲಿನಿಂದ ಚರ್ಮದ ಮೇಲಾಗುವ ಟ್ಯಾನ್ಸ ಹನಿಯ ಮಿತವಾಗಿಕೈ, ಮುಖಕ್ಕೆ ಎಳನೀರು ಹಚ್ಚುವುದರಿಂದ ಕಡಿಮೆ ಯಾಗುತ್ತದೆ. ಮುಲ್ತಾನಿಮಿಟ್ಟಿ ಜತೆ ಎಳನೀರು ಸೇರಿಸಿ ಹಚ್ಚುವುದರಿಂದ ಟ್ಯಾನ್ಜತೆಗೆ ಮುಖದ ಮೇಲಿರುವ ಕಲೆ ಸಹ ನಿವಾರಣೆಯಾಗುತ್ತದೆ.

tender coconut for hairsource and pic credit: malayalam manorama

 

 

ಕಾಂತಿಯುತಕೂದಲಿಗೆಎಳನೀರು

ಎಳನೀರನ್ನು ತಲೆಯ ಬುಡಕ್ಕೆ ಹಚ್ಚಿ ಮಸಾಜ್ ಮಾಡಿಕೊಂಡರೆ ಅದರಿಂದ ಬಲಿಷ್ಠಕಾಂತಿಯುತ ಹಾಗೂ ಉದ್ದವಾದ ಕೂದಲು ಪಡೆಯಬಹುದು. ಎಳನೀರಿನಲ್ಲಿರುವ ಪ್ರೊಟೀನ್ ನಿಂದ ಕೂದಲು ಉದುರುವ ಸಮಸ್ಯೆ ಸಹ ಕಡಿಮೆಯಾಗುತ್ತದೆಅಲ್ಲದೆತೇವಾಂಶ ಗುಣ ಹೊಂದಿರುವ ಎಳನೀರು ಮಾಯ್ಚಿರೈಸರ್ ಆಗಿಯೂ ಕೆಲಸ ಮಾಡುತ್ತದೆಕೂದಲು ಗಂಟಾಗುವುದನ್ನು ತಡೆದು ಕೂದಲನ್ನು ಕೋಮಲವಾಗಿಸುತ್ತದೆ.

 

 

Enjoyed this article? Stay informed by joining our newsletter!

Comments

You must be logged in to post a comment.

About Author