ಕೊರೊನದಿಂದ ಉಸಿರಾಟ ತೊಂದರೆ ಇರೋರಿಗೆ ಪ್ರೋನಿಂಗ್ ಸಂಜೀವಿನಿ

ಕೊರೊನದಿಂದ ಉಸಿರಾಟ ತೊಂದರೆ ಇರೋರಿಗೆ ಪ್ರೋನಿಂಗ್ ಸಂಜೀವಿನಿ

ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ಜೊತೆಗೆ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಕೊರೊನ ಎರಡನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾದವರ ಸಂಖ್ಯೆಯೇ ಜಾಸ್ತಿ. ಈ ರೀತಿ ಆಕ್ಸಿಜನ್ ಸಮಸ್ಯೆಯನ್ನು ಅನುಭವಿಸುತ್ತಿರುವ ರೋಗಿಗಳಿಗೆ ಪ್ರೋನಿಂಗ್ ವಿಧಾನ ಸಂಜೀವಿನಿಯಂತೆ ಕಂಡುಬರ್ತಿದೆ

 

ಏನಿದು ಪ್ರೋನಿಂಗ್ ವಿಧಾನ..?

 

ಇದೊಂದು ಹಳೆಯ ವಿಧಾನವಾಗಿದ್ದು ಉಸಿರಾಟದ ತೀವ್ರ ತೊಂದರೆ ಅನುಭವಿಸುತ್ತಿರೋ ರೋಗಿಗಳ ಮೇಲೆ ಪ್ರಯೋಗ ಮಾಡಲಾಗ್ತದೆ. ಸರಳವಾಗಿ ಇದನ್ನ ಹೇಳಬೇಕಂದರೆ ಇದೊಂದು ಉಸಿರಾಟದ ಪದ್ಧತಿ ಅಷ್ಟೆ. ಈ ಸರಳ ಉಸಿರಾಟ ಪದ್ಧತಿಯು ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುತ್ತೆ

 

ಈ ಉಸಿರಾಟ ವಿಧಾನ ಪ್ರಕ್ರಿಯೆ ಹೇಗೆ..?

 

ಪ್ರೋನಿಂಗ್ ವಿಧಾನದಲ್ಲಿ ವ್ಯಕ್ತಿಯನ್ನ ಬೋರಲಾಗಿ ಮಲಗಿಸಿ ಮೂರು ದಿಂಬುಗಳನ್ನ ಬಳಸಲಾಗ್ತದೆ.. ಒಂದು ದಿಂಬನ್ನ ಕತ್ತಿನ ಕೆಳಭಾಗದಲ್ಲಿ ಇರಿಸಬೇಕು. ಇನ್ನೊಂದು ದಿಂಬನ್ನ ಎದೆಯ ಕೆಳಭಾಗದಲ್ಲಿ ಮತ್ತೊಂದನ್ನ ಕಾಲಿನ ಕೆಳಗೆ ಇಡಲಾಗುತ್ತೆ.. ಹೀಗೆ ಮಲಗುವುದರಿಂದ ಶ್ವಾಸಕೋಶಕ್ಕೆ ಗಾಳಿಯು ಸಲೀಸಾಗಿ ಸಂಚರಿಸಲು ಸಹಕಾರಿಯಾಗುತ್ತೆ. ಇದನ್ನು ವೈದ್ಯರ ಮತ್ತು ಪರಿಣಿತರ ಸಲಹೆ ತೆಗೆದುಕೊಂಡೇ ಮಾಡುವುದು ಸೂಕ್ತ

 

ಆದರೆ ನೆನಪಿರಲಿ ಈ ಉಸಿರಾಟ ವಿಧಾನವನ್ನು ಹೃದಯ ಸಂಬಂಧಿ ತೊಂದರೆ ಇದ್ದವರು, ಬೆನ್ನು ಮೂಳೆ ಸಮಸ್ಯೆ ಇದ್ದವರು,ಗರ್ಭಿಣಿಯರು ಮಾಡಬಾರದು

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author