ಕೊರೋನಾ ಲಸಿಕೆ 2 ಡೋಸ್ ಯಾಕೆ ಹಾಕ್ತಾರೆ?

ಕೊರೋನಾ ಲಸಿಕೆ 2 ಡೋಸ್ ಯಾಕೆ ಹಾಕ್ತಾರೆ?

vaccine doseImage credits : GPonline

ಕೊರೋನಾ ಸೋಂಕು ಇಡೀ ಮನುಕುಲವನ್ನೇ ಅಲುಗಾಡಿಸಿದ್ದು, ಪ್ರಾಣ ಉಳಿಸಿಕೊಳ್ಳಲು ಎಲ್ಲರೂ ಹೋರಾಡುತ್ತಿದ್ದಾರೆ. ಈ ಸೋಂಕು ಶುರುವಾಗಿ ಕೇವಲ ಒಂದು ವರ್ಷದಲ್ಲೇ, ಸೋಂಕನ್ನು ತಡೆಗಟ್ಟಲು ಲಸಿಕೆಗಳನ್ನು ತಯಾರಿಸಲು ವಿಜ್ಞಾನಿಗಳು ಯಶಸ್ವಿಯಾಗಿದ್ದು, ಭಾರತ ಸೇರಿದಂತೆ ಎಲ್ಲಾ ದೇಶಗಳು ತನ್ನ ನಾಗರಿಕರಿಗೆ ಲಸಿಕೆ ಹಾಕುವ ಪ್ರಕ್ರಿಯೆ ಆರಂಭಿಸಿವೆ. 

 

ಭಾರತದಲ್ಲಿ ಲಸಿಕೆ ಪ್ರಕ್ರಿಯೆಯಲ್ಲಿ ಸ್ವಲ್ಪ ಗೊಂದಲಗಳು ಇದ್ದರೂ, ಎಲ್ಲರಿಗೂ ಲಸಿಕೆ ನೀಡುವ ಪ್ರಯತ್ನವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಮಾಡುತ್ತಿವೆ. ಬಹು ಮುಖ್ಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎನ್ನುವ ಅರಿವು ಜನರಲ್ಲೂ ಮೂಡಿದ್ದು, ಲಸಿಕೆಗಾಗಿ ಹಾತೊರೆಯುತ್ತಿದ್ದಾರೆ.

 

ಕೋವಿಡ್-19 ಲಸಿಕೆಯನ್ನು 2 ಡೋಸ್ ನೀಡಲಾಗುತ್ತದೆ. ಮೊದಲ ಡೋಸ್ ಪಡೆದ ಕೆಲ ವಾರಗಳ ಬಳಿಕ 2ನೇ ಡೋಸ್ ತೆಗೆದುಕೊಳ್ಳಬೇಕು. ಯಾಕೆ 2 ಬಾರಿ ಲಸಿಕೆ ತೆಗೆದುಕೊಳ್ಳಬೇಕು. 2 ಬಾರಿ ತೆಗೆದುಕೊಳ್ಳುವುದರಿಂದ ಇರುವ ಉಪಯೋಗಗಳೇನು? 2ನೇ ಬಾರಿಗೆ ಲಸಿಕೆ ಹಾಕಿಸಿಕೊಳ್ಳದಿದ್ದರೆ ಆಗುವ ಸಮಸ್ಯೆಗಳು ಏನು? ಆ ವಿವರ ಇಲ್ಲಿವೆ ಓದಿ. 

 

ಮೊದಲ ಡೋಸ್ ಪಡೆದಾಗ ಏನಾಗುತ್ತೆ? 

 

ಕೊರೋನಾ ಲಸಿಕೆ ಮೊದಲ ಡೋಸ್ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಪೂರ್ಣವಾಗಿ ಒದಗಿಸುವುದಿಲ್ಲ. ಆದರೆ ಸೋಂಕಿನ ವಿರುದ್ಧ ಹೋರಾಡಲು ನಿಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಅಣಿಗೊಳಿಸುತ್ತದೆ. ಹಾಗೆಯೇ ಭಾಗಶಃ ನಿಮ್ಮ ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ. 

Vaccine for covidImage credits : Houston Methodist

2ನೇ ಡೋಸ್ ಪಡೆದಾಗ ಏನಾಗುತ್ತೆ? 

 

ನೀವು 2ನೇ ಡೋಸ್ ಲಸಿಕೆಯನ್ನು ಹಾಕಿಸಿಕೊಂಡಾಗ ನಿಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದ ಪ್ರತಿಕಾಯಗಳು            ( Antibodies ) ಸೃಷ್ಟಿಯಾಗುತ್ತವೆ. ಇದದಿಂದ ಜೀವಕೋಶ ರೋಗನಿರೋಧಕ ಶಕ್ತಿಯನ್ನು ಊರ್ಜಿತಗೊಳಿಸುತ್ತದೆ. 

 

ಅಷ್ಟೇ ಅಲ್ಲ, ದೇಹದ ನೆನಪಿನ ಕೋಶಗಳನ್ನು ( Memory Cells ) ಪ್ರಚೋದಿಸಿ, ರೋಗ ನಿರೋಧಕ ವ್ಯವಸ್ಥೆ ಸೋಂಕಿನ ಬಗ್ಗೆ ದೀರ್ಘ ಕಾಲದವರೆಗೂ ಜಾಗೃತವಾಗಿದ್ದು, ಭವಿಷ್ಯದಲ್ಲಿ ಕೊರೋನಾ ವೈರಸ್ ನಿಮ್ಮ ದೇಹದ ಮೇಲೆ ದಾಳಿಗೈದಾಗ, ಪ್ರತಿಕಾಯಗಳನ್ನು ಕೂಡಲೇ ಸೃಷ್ಟಿಸಿ ನಿಮ್ಮನ್ನು ಸೋಂಕಿತರಾಗುವುದರಿಂದ ರಕ್ಷಿಸುತ್ತದೆ. 

Vaccine for covidImage credits : India.com

ಹೀಗಾಗಿ, ತಪ್ಪದೇ ಎಲ್ಲರೂ ಎರಡು ಡೋಸ್ ಲಸಿಕೆಗಳನ್ನು ಹಾಕಿಸಿಕೊಳ್ಳಿ. ಈಗಾಗಲೇ ಮೊದಲನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೆ 2ನೇ ಡೋಸ್ ಪಡೆಯುವುದನ್ನು ಮರೆಯಬೇಡಿ. ಒಮ್ಮೆಯೂ ಪಡೆದಿಲ್ಲವೆಂದರೆ ನಿಮಗೆ ಲಭ್ಯವಾದಾಗ ತಪ್ಪದೇ ಹೋಗಿ ಲಸಿಕೆ ಹಾಕಿಸಿಕೊಳ್ಳಿ. 

 

ಲಸಿಕೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ, ನಿಮ್ಮವರನ್ನೂ ರಕ್ಷಿಸಿ. ಈ ಬರಹವನ್ನು ತಪ್ಪದೇ ಶೇರ್ ಮಾಡಿ, ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ. 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ .

 

Subscribe to Planet Tv Kannada
https://www.youtube.com/Planet Tv Kannada

Follow us on Facebook
https://www.facebook.com/Planettvkannada

Follow us on Twitter
https://twitter.com/Planettvkannada

Follow us on Instagram
https://www.instagram.com/planettvkannada

Follow us on Pinterest
https://www.pinterest.com/Planettvkannada

Follow us on Koo app
https://www.kooapp.com/planettvkannada

Follow us on share chat
https://sharechat.com/planettvkannada

Join us on Telegram
https://t.me/planettvkannada

Follow us on Tumblr
https://www.tumblr.com/planet-tv-kannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author