ಕ್ರಿಸ್ ಮಸ್ ಯಾಕೆ ಆಚರಿಸುತ್ತಾರೆ? ಕ್ರೈಸ್ತರ ಪವಿತ್ರ ಹಬ್ಬದ ಮಹತ್ವ ಗೊತ್ತಿದೆಯಾ?

ಕ್ರಿಸ್ ಮಸ್ ಹಬ್ಬದ ಮಹತ್ವವೇನು.? ಆಚರಣೆ ಹೇಗೆ..?

ಲೋಕ ಕಲ್ಯಾಣಕ್ಕಾಗಿ ಯೇಸು ಹುಟ್ಟಿದ ದಿನವನ್ನು ಕ್ರಶ್ಚಿಯನ್ನರು ಕ್ರಿಸ್ ಮಸ್ ಎಂದು ಡಿಸೆಂಬರ್ 25ರಂದು ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ.. ಕ್ರಿಸ್ಮಸ್ ಯೆಂದರೆ ಯೇಸು ಪ್ರಪಂಚದಲ್ಲಿ ಮನುಷ್ಯನಾಗಿ ಜನಿಸಿ, ಎಲ್ಲಾ ಮನುಷ್ಯರನ್ನು ದೇವರತ್ತ ಕರೆದುಕೊಂಡು ಹೋಗುವುದಕ್ಕೆ ಬಂದಂತಹ ಅದ್ಭುತ ದಿನ.

ಕ್ರಿಸ್ ಮಸ್ ಕ್ರಿಶ್ಚಿಯನ್ ಅಥವಾ ಕ್ರೈಸ್ತ ಧರ್ಮದ ಪ್ರಮುಖ ಹಬ್ಬವಾಗಿದ್ದು, ಗ್ರೀಕ್ ಲಿಪಿಯಲ್ಲಿ ಕ್ರಿಸ್ತನ ಮೊದಲ ಅಕ್ಷರವು ಇಂಗ್ಲಿಷಿನ ಎಕ್ಸ್ ನಂತೆ ತೋರುವುದರಿಂದ ಕೆಲವರು ಕ್ರಿಸ್ ಮಸ್ ಅನ್ನು ಎಕ್ಸ್ ಮಸ್ ಎಂದೂ ಹೇಳುತ್ತಾರೆ. ಕ್ರಿ.ಶ 336 ರಲ್ಲಿ ರೋಮ್ ನಲ್ಲಿ ವಿಶ್ವದ ಮೊದಲ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಯಿತು. ಈ ದಿನವನ್ನು ಯೇಸುಕ್ರಿಸ್ತನ ಜನ್ಮದಿನವಾಗಿ ಆಚರಿಸುವುದು ಸಂಪ್ರದಾಯ. ಅಂದಿನಿಂದ ಪ್ರತೀ ವರ್ಷ ಯೇಸುವಿನ ಜನ್ಮದಿನವನ್ನು ಡಿಸೆಂಬರ್ 25 ರಂದು ಆಚರಿಸಿಕೊಂಡು ಬರಲಾಗುತ್ತಿದೆ.

ಇನ್ನು ಈ ದಿನದದಂದು ಪರಸ್ಪರ ಶುಭ ಹಾರೈಸಿ, ಉಡುಗೊರೆಗಳನ್ನು ನೀಡಿ, ಮನೆಗಳಲ್ಲಿ ಚರ್ಚ್ ಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದರ ಜೊತೆಗೆ ಪ್ರತಿ ಮನೆಗಳಲ್ಲೂ ಕ್ರಿಸ್ ಮಸ್ ಟ್ರೀ ಯನ್ನು ಅಲಂಕರಿಸಲಾಗುತ್ತದೆ.  ಕ್ರಿಸ್ ಮಸ್ ಗಿಡವನ್ನು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಸಾಂತಾ ಕ್ಲಾಸ್ ತಾತ ಮಕ್ಕಳಿಗೆ ಸುಂದರವಾದ ಉಡುಗೊರೆಗಳನ್ನು ನೀಡಿ ಅವರನ್ನು ಸಂತೋಷಗೊಳಿಸುತ್ತಾನೆ.

ಯೇಸುವಿನ ಜನನ: ಯೇಸುಕ್ರಿಸ್ತರು ಮೇರಿ ಮತ್ತು ಜೋಸೆಫರ ಮಗನಾಗಿ ಇಸ್ರೇಲ್ ನ ಬೆತ್ಲಹೆಮ್ ನಲ್ಲಿ ಜನಿಸುತ್ತಾರೆ. ತಾಯಿ ಮೇರಿ ತನ್ನ  ಕನಸಿನಲ್ಲಿ ಕರ್ತನಾದ ಯೇಸುವಿಗೆ ನೀನು ಜನ್ಮ ನೀಡಬೇಕೆಂಬ ಭವಿಷ್ಯವಾಣಿಯನ್ನು ಕೇಳುತ್ತಾರೆ, ಅದರಂತೆಯೇ ಮೇರಿ ರ‍್ಭಾವತಿಯಾಯಾಗುತ್ತಾರೆ. ಒಮ್ಮೆ ಗರ್ಭಾವಸ್ಥೆಯಲ್ಲಿ, ಮೇರಿ ಹಾಗೂ ಜೋಸೆಫ್ ಬೆತ್ಲಹೆಮ್ ಗೆ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಕತ್ತಲಾಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಉಳಿಯಲು ಸ್ಥಳ  ಸಿಗುವುದಿಲ್ಲ. ಈ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ಕುರುಬನೊಬ್ಬನ ಮನೆ ಕಾಣಿಸುತ್ತದೆ.. ಆ ಪುಟ್ಟ ಗುಡಿಸಲಿನಲ್ಲಿ ತಂಗಲು ಸ್ಥಳವನ್ನು ಕೇಳಿದಾಗ ಕುರುಬ ಉಳಿಯಲು ಅವಕಾಶ ನೀಡುತ್ತಾನೆ. ರಾತ್ರಿ ಇಲ್ಲಿ ತಂಗಿದ್ದಾಗ ತಾಯಿ ಮೇರಿಗೆ ಯೇಸುವಿನ ಜನನವಾಗುತ್ತದೆ.

ಕ್ರಿಸ್ ಮಸ್ ಆಚರಣೆ ಹೇಗೆ.? : ಕ್ರಿಸ್ ಮಸ್ ಸಂದರ್ಭದಲ್ಲಿ ಯೇಸುವಿನ ಜನನವನ್ನು ನೆನೆಯಲು ಕೆಲವೆಡೆ ಮಣ್ಣಿನಿಂದ ಕ್ರಿಸ್ತನ ಜನನದ ಕಥೆಯನ್ನು ಚಿತ್ರಿಸುತ್ತಾರೆ ಪ್ರತಿ ಕ್ರೆöÊಸ್ತರ ಮನೆಯಲ್ಲೂ ಕ್ರಿಸ್ ಮಸ್ ಟ್ರೀಯನ್ನು ತಂದಿಡುತ್ತಾರೆ. ಚಾಕ್ಲೆಟ್ಸ್, ಚಿಕ್ಕ ಚಿಕ್ಕ ಗಿಫ್ಟ್ಸ್, ಹೊಳೆಯುತ್ತಿರುವ ನಕ್ಷತ್ರಗಳು ಹಾಗೂ ಬಣ್ಣ ಬಣ್ಣದ ದೀಪಗಳಿಂದ ಟ್ರೀಯನ್ನು ಸಿಂಗರಿಸಲಾಗುತ್ತದೆ .  ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ ಮಸ್ ನ ವಿಶೇಷಗಳಲ್ಲೊಂದು. ಅಷ್ಟೇ ಅಲ್ಲ ಈ ದಿನದಂದು  ಕೆಂಪು ಬಣ್ಣದ ಬಟ್ಟೆ ಧರಿಸಿರುವ, ಖುಷಿ ಖುಷಿಯಾಗಿರುವ, ಬಿಳಿಗಡ್ಡದ, ಕೆಂಪು ಕೆನ್ನೆಯ ತಾತ ಸಾಂತಾಕ್ಲಾಸ್ ಬರುತ್ತಾನೆ ಎಂಬುದು ಜನರ ನಂಬಿಕೆಯಾಗಿದೆ.  ಸಾಂತಾಕ್ಲಾಸ್ ಎಂದರೆ ಸಂತ ನಿಕೋಲಾಸ್.. ಸಂತ ನಿಕೋಲಾಸ್ ನಾಲ್ಕನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿಯಾಗಿದ್ದು, ಇವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಆದ್ದರಿಂದ ಪ್ರತಿ ವರ್ಷ ಕ್ರಿಸ್ ಮಸ್ ಸಂದರ್ಭದಲ್ಲಿ ಮಕ್ಕಳಿಗೆ ಉಡುಗೊರೆ ನೀಡಲು ಸಾಂತಾಕ್ಲಾಸ್ ಬರುತ್ತಾನೆ ಎಂಬ ನಂಬಿಕೆ ಇದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author