ಕಾಶಿ ವಿಶ್ವನಾಥನ ವಿಸ್ಮಯಕಾರಿ ಮಾಹಿತಿ!

ಕಾಶಿ ವಿಶ್ವನಾಥನ ವಿಸ್ಮಯಕಾರಿ ಮಾಹಿತಿ!

ಶಿವನ ಜ್ಯೋತಿರ್ಲಿಂಗವನ್ನು ಕಾಶಿ ವಿಶ್ವನಾಥ ದೇವಾಲಯದ ಗರ್ಭ ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಲಿಂಗವು ಕಾಶಿ ವಿಶ್ವನಾಥ ದೇವಾಲಯದ ಪ್ರಾಮುಖ್ಯತೆಯನ್ನು ಹಾಗೂ ನಗರದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ. ಗರ್ಭಗ್ರಹದಲ್ಲಿನ ಜ್ಯೋತಿಲಿರ್ಂಗವು ಗಾಢ ಕಂದು ಬಣ್ಣದಿಂದ ಕೂಡಿದ್ದು, ಇದನ್ನು ಬೆಳ್ಳಿಯಿಂದ ವೇದಿಕೆಯಂತೆ ಮಾಡಿ ಅದರಲ್ಲಿ ಇರಿಸಲಾಗಿದೆ.

ಕಾಶಿ ವಿಶ್ವನಾಥ ದೇವಾಲಯವು ಶಿವನಿಗೆ ಅರ್ಪಿತವಾದ ಪ್ರಸಿದ್ಧ ದೇವಾಲಯ. ಸಾಮಾನ್ಯವಾಗಿ ಹೆಚ್ಚಿನ ಹಿಂದೂ ಧರ್ಮೀಯರು ದೇವಾಲಯವನ್ನು ನೋಡಿರುತ್ತಾರೆ, ಕೊನೆ ಪಕ್ಷ ದೇವಾಲಯದ ಬಗ್ಗೆ ಕೇಳಿರುತ್ತಾರೆ. ದೇವಾಲಯವು ಉತ್ತರ ಪ್ರದೇಶದ ವಾರಣಾಸಿಯಲ್ಲಿನ ಗಂಗಾ ನದಿಯ ಪಶ್ಚಿಮ ದಂಡೆಯಲ್ಲಿದೆ. ಕಾಶಿ ವಿಶ್ವನಾಥ ದೇವಾಲಯವು ಶಿವನ ಹನ್ನೆರೆಡು ಜ್ಯೋತಿರ್ಲಿಂಗಗಳಲ್ಲಿ ಒಂದು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡ ದೇವಾಲಯವಾಗಿದೆ.

ಇಲ್ಲಿನ ಮುಖ್ಯ ದೇವರನ್ನು ಅಥವಾ ಅಧಿಪತಿಯನ್ನು ಶ್ರೀ ವಿಶ್ವನಾಥ ಮತ್ತು ವಿಶ್ವೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ವಿಶ್ವನಾಥ ಅಥವಾ ವಿಶ್ವೇಶ್ವರ ಎಂದರೆ ಜಗತ್ತಿನ ದೇವರು ಎಂದರ್ಥ. ಪ್ರಾಚೀನ ಕಾಲದಲ್ಲಿ ವಾರಣಾಸಿಯನ್ನು ಕಾಶಿ ಎಂದು ಕರೆಯಲಾಗುತ್ತಿತ್ತು. ಆದ್ದರಿಂದ ದೇವಾಲಯವನ್ನು ಕಾಶಿ ವಿಶ್ವನಾಥ ದೇವಾಲಯವೆಂದು ಕರೆಯಲಾಗುತ್ತದೆ.

ಸಾಯಿಬಾಬಾ, ವಿವೇಕಾನಂದರು ಭೇಟಿ ನೀಡಿದ್ದ ದೇಗುಲವಿದು : ಕೆಲವು ಗ್ರಂಥಗಳ ಪ್ರಾಕಾರ, ದೇವಾಲಯಕ್ಕೆ ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ, ಸತ್ಯ ಸಾಯಿಬಾಬಾ ಮತ್ತು ಗುರುನಾನಕ್ರಂತಹ ಹಲವಾರು ಸಂತರು ಹಾಗೂ ಧಾರ್ಮಿಕ ಮುಖಂಡರು ಭೇಟಿ ನೀಡಿದ್ದಾರೆಂದು ಹೇಳಲಾಗುತ್ತದೆ. ಶಿವನು ದೇವಾಲಯದಲ್ಲಿ ವಾಸಿಸುತ್ತಾನೆ. ಹಾಗಾಗಿ ದೇವಾಲಯಕ್ಕೆ ಭೇಟಿ ನೀಡಿದವರಿಗೆ ಜೀವನದಲ್ಲಿ ಮೋಕ್ಷ ಮತ್ತು ಸಂತೋಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಕಾಶಿ ವಿಶ್ವನಾಥ ಧೇವಾಲಯಕ್ಕೆ ಭೇಟಿ ನೀಡಿ, ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಒಂದು ವೇಳೆ ಅನಿರೀಕ್ಷಿತವಾಗಿ ದೇವಾಲಯದಲ್ಲೇ ಮರಣ ಹೊಂದಿದರೆ ವ್ಯಕ್ತಿಯು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಹಾಗೂ ಸ್ವತಃ ಶಿವನೇ ಇಲ್ಲಿ ಮರಣ ಹೊಂದಿದವರ ಕಿವಿಯಲ್ಲಿ ಮೋಕ್ಷದ ಮಂತ್ರವನ್ನು ಹೇಳುತ್ತಾನೆಂಬ ನಂಬಿಕೆಯಿದೆ.

ಅಷ್ಟು ಮಾತ್ರವಲ್ಲ, ಮಾನವ ಜನ್ಮವೇ ಕೊನೆಯ ಜನ್ಮವೆಂದು ಹಲವರು ಹೇಳುತ್ತಾರೆ, ಆದರೆ ಇಲ್ಲಿ ಸತ್ತವರಿಗೆ ಪುನರ್ಜನ್ಮವಿಲ್ಲವೆಂದು ದಂತಕಥೆಗಳು ಉಲ್ಲೇಖಿಸುತ್ತದೆ.

ಕಾಶಿ ವಿಶ್ವನಾಥ ದೇವಾಲಯದ ಐತಿಹಾಸ ಬಹಳ ರೋಚಕ : ಸಾಕಷ್ಟು ವರ್ಷಗಳ ಹಿಂದೆ ಹಲವಾರು ಬಾರಿ ಕಾಶಿ ವಿಶ್ವನಾಥ ದೇವಾಲಯವನ್ನು ನಾಶಗೊಳಿಸಲಾಗಿತ್ತು, ಆದರೂ ಕೂಡ ಅದನ್ನು ಪುನಃ ನಿರ್ಮಿಸಲಾಗಿದೆ. ದೇವಾಲಯವನ್ನು 1490ರಲ್ಲಿ ನಿರ್ಮಿಸಲಾಯಿತೆಂದು ಹೇಳಲಾಗುತ್ತದೆ. ಮೊಹಮ್ಮದ್ ಘೋರಿಯ ಆದೇಶದ ಮೇರೆಗೆ ಕುತುಬ್-ಉದ್ದಿನ್-ಐಬಾಕ್ ಮತ್ತು ಆತನ ಸೈನ್ಯವು ಮೂಲ ವಿಶ್ವನಾಥ ದೇವಾಲಯವನ್ನು ನಾಶಗೊಳಿಸಿತ್ತು ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಮೊಘಲರು ಸಾಕಷ್ಟು ಬಾರಿ ದೇವಾಲಯವನ್ನು ಲೂಟಿ ಮಾಡಿದ್ದರು. ಮೊಘಲ್ ಚಕ್ರವರ್ತಿ ಅಕ್ಬರ್ನು ದೇವಾಲಯವನ್ನು ನಿರ್ಮಿಸಲು ಅನುಮತಿ ನೀಡಿದರೆ ಆತನ ಮೊಮ್ಮಗ ಔರಂಗಜೇಬನು 17 ನೇ ಶತಮಾನದಲ್ಲಿ ದೇವಾಲಯವನ್ನು ನಾಶಪಡಿಸಿದನು. ಔರಂಗಜೇಬನು ದೇವಾಲಯವನ್ನು ನೆಲಸಮ ಮಾಡಿ ಅಲ್ಲಿ ಜ್ಞಾನವಪಿ ಮಸೀದಿಯನ್ನು ನಿರ್ಮಿಸಿದನು. ಮೂಲ ದೇವಾಲಯದ ಅವಶೇಷಗಳನ್ನು ಮಸೀದಿ ಹಿಂದೆ ನೋಡಬಹುದಾಗಿತ್ತು.

ಅನೇಕ ಆಡಳಿತಗಾರರು ಮಸೀದಿಯನ್ನು ನಾಶಗೊಳಿಸಿ ಅಲ್ಲಿ ಮತ್ತೊಮ್ಮೆ ದೇವಾಲಯವನ್ನು ನಿರ್ಮಿಸಲು ಪ್ರಯತ್ನಿಸಿದರು. ಆದರೆ ಯಾರಿಂದಲೂ ಅದು ಸಾಧ್ಯವಾಗಲಿಲ್ಲ. ನಂತರ 18 ನೇ ಶತಮಾನದಲ್ಲಿ ಪ್ರಸ್ತುತ ದೇವಾಲಯದ ರಚನೆಯನ್ನು ಮಸೀದಿಯ ಪಕ್ಕದಲ್ಲೇ ಇಂದೋರ್ ರಾಣಿ, ರಾಣಿ ಅಹಲ್ಯಾ ಬಾಯಿ ಹೋಳ್ಕರ ನಿರ್ಮಿಸಿದಳು. ಈಕೆಯ ಕನಸಿನಲ್ಲಿ ಶಿವನು ಕಾಣಿಸಿಕೊಂಡಿರುವುದರಿಂದ ಈಕೆ ದೇವಾಲಯವನ್ನು ನಿರ್ಮಿಸಲು ಮುಂದಾದಳು. ಈಗ ಪ್ರಸ್ತುತ ದೇವಾಲಯವು ಉತ್ತರ ಪ್ರದೇಶದ ಸರ್ಕಾರದ ಆಡಳಿದಲ್ಲಿದೆ.

ದೇವಾಲಯದ ಸಂಕೀರ್ಣವು ಇನ್ನಿತರ ದೇವರುಗಳ ದೇವಾಲಯವನ್ನು ಕೂಡ ಒಳಗೊಂಡಿದೆ. ಇಲ್ಲಿನ ಮುಖ್ಯ ದೇವಾಲಯವು 60 ಸೆ.ಮೀ ಎತ್ತರದ ದೊಡ್ಡ ಶಿವಲಿಂಗವನ್ನು ಹೊಂದಿದೆ. ದೇವಾಲಯವನ್ನು ಚತುರ್ಭುಜ ಆಕಾರದಲ್ಲಿ ನಿರ್ಮಿಸಲಾಗಿದ್ದು, ದೇವಾಲಯದ ಸುತ್ತಲೂ ಇತರೆ ದೇವರುಗಳ ಶಿಲ್ಪಗಳಿವೆ.

ವಿರೂಪಾಕ್ಷ ಗೌರಿ, ಶನೇಶ್ವರ, ವಿಷ್ಣು, ವಿರೂಪಾಕ್ಷ, ಧಂಡಪಾಣಿ, ವಿನಾಯಕ, ಕಾಲಭೈರವ ಮತ್ತು ಅವಿಮುಕ್ತೇಶ್ವರ ಇತ್ಯಾದಿ ದೇವಾರುಗಳ ಸಣ್ಣ ದೇವಾಲಯಗಳು ಇಲ್ಲಿವೆ.

ದೇವಾಲಯದ ಸಂಕೀರ್ಣದಲ್ಲಿ ನಾವು ಸಣ್ಣ ಬಾವಿಯನ್ನು ಕೂಡ ನೋಡಬಹುದಾಗಿದೆ. ಬಾವಿಯನ್ನು ಜ್ಞಾನವಪಿ ಬಾವಿಯೆಂದು ಕರೆಯಲಾಗುತ್ತದೆ. ಬಾವಿಯಲ್ಲಿ ವಿಶ್ವನಾಥನ ಜ್ಯೋತಿಲಿರ್ಂಗವನ್ನು ಆಕ್ರಮಣಕಾರರಿಂದ ರಕ್ಷಿಸಲು ಅಡಗಿಸಿಡಲಾಗಿತ್ತು. ಸಮಯದಲ್ಲಿ ದೇವಾಲಯದ ಮುಖ್ಯ ಅರ್ಚಕರು ಶಿವಲಿಂಗವನ್ನು ಮರೆಮಾಡಲು ಶಿವಲಿಂಗದೊಂದಿಗೆ ತಾವು ಸಹ ಬಾವಿಗೆ ಹಾರಿದ್ದಾರೆಂದು ಹೇಳಲಾಗುತ್ತದೆ.

ದೇವಾಲಯವು ಚಿನ್ನದ ಗುಮ್ಮಟವನ್ನು ಹೊಂದಿರುವುದರಿಂದ ಕಾಶಿ ವಿಶ್ವನಾಥ ದೇವಾಲಯವನ್ನು ಸುವರ್ಣ ದೇವಾಲಯವೆಂದೂ ಕೂಡ ಕರೆಯಲಾಗುತ್ತದೆ.

ದೇಶ, ವಿದೇಶಗಳಿಂದ ಭಕ್ತರು ದೇವಾಲಯಕ್ಕೆ ಬಂದು ಶಿವನ ಆಶೀರ್ವಾದವ್ನನು ಪಡೆಯುತ್ತಾರೆ. ಮೋಕ್ಷದ ಹಾದಿಗಾಗಿ ಸಾಕಷ್ಟು ಜನರು ಇಲ್ಲಿನ ಗಂಗೆಯಲ್ಲಿ ಸ್ನಾನ ಮಾಡಿ, ಪಾಪ ಪರಿಹಾರ ಮಾಡಿಕೊಳ್ಳುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಬೇಕೆನ್ನುವುದು ಹಿಂದೂ ಧರ್ಮಿಯರ ಆಶಯವಾಗಿರುತ್ತದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author