ಚೈತ್ರ ನವರಾತ್ರಿಯಂದು ಲೋಕ ಸಂಚಾರಕ್ಕೆ ಬರುವ ದೇವಿಯ ವಾಹನ ನೀಡುವ ಸೂಚನೆ ಶುಭವೇ.. ಅಶುಭವೇ..?

ವಸಂತ ಕಾಲದಲ್ಲಿ ಬರುವ ಚೈತ್ರ ನವರಾತ್ರಿಯ ಬಗ್ಗೆ ನಿಮಗೆಷ್ಟು ಗೊತ್ತು..?

ಚೈತ್ರ ನವರಾತ್ರಿಯನ್ನು ವಸಂತ ನವರಾತ್ರಿ, ಶಾರ್ದಿಯಾ ನವರಾತ್ರಿ ಎಂದೂ ಕರೆಯಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ವಸಂತ ಕಾಲದ ಆರಂಭದಲ್ಲಿ ಅಂದರೆ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಚೈತ್ರ ನವರಾತ್ರಿಯನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲ ಚೈತ್ರ ಅಂದರೆ ಶಾರ್ದಿಯಾ ನವರಾತ್ರಿಯಂದು ದೇವಿಯು ಪ್ರತೀ ಬಾರಿ ವಿವಿಧ ವಾಹನಗಳಲ್ಲಿ ಭೂಮಿಗೆ ಬರುತ್ತಾಳೆ ಎನ್ನುವ ನಂಬಿಕೆಯಿದೆ. ದೇವತೆ ಬರುವ ವಾಹನಕ್ಕೆ ವಿಶೇಷ ಮಹತ್ವವಿದೆ ಎಂದು ನಂಬಲಾಗಿದೆ. ಚೈತ್ರ ನವರಾತ್ರಿಯನ್ನು ಉತ್ತರ ಭಾರತದಲ್ಲಿ ಬಹಳ ಉತ್ಸಾಹದಿಂದ ಆಚರಿಸಲಾಗುವ ಒಂಬತ್ತು ದಿನಗಳ ಉತ್ಸವವಾಗಿದೆ.

ಎಲ್ಲರಿಗೂ ತಿಳಿದಂತೆ ದುರ್ಗಾ ದೇವಿಯ ವಾಹನ ಸಿಂಹ. ಆದರೆ ಚೈತ್ರ ನವರಾತ್ರಿಯ ದಿನಗಳಲ್ಲಿ ದೇವಿಯು ವಿವಿಧ ವಾಹನಗಳಲ್ಲಿ ಲೋಕ ಸಂಚಾರ ಮಾಡುತ್ತಾಳೆ ಎನ್ನಲಾಗುತ್ತದೆ. ದೇವಿ ಭಾಗವತ ಪುರಾಣದ ಪ್ರಕಾರ, ದುರ್ಗಾ ದೇವಿಯು ಭೂಮಿಗೆ ಯಾವ ವಾಹನಗಳಲ್ಲಿ ಬರುತ್ತಾಳೆ ಎಂಬುದನ್ನು ಆಧರಿಸಿ ಭೂ ಮಂಡಲದ ಮುಂದಿನ ಘಟನೆಗಳ ಬಗ್ಗೆ ಸುಳಿವು ನೀಡುತ್ತದೆ ಎಂದು ನಂಬಲಾಗುತ್ತದೆ. 

ನವರಾತ್ರಿ ಯಾವ ದಿನ ಪ್ರಾರಂಭವಾದರೆ ತಾಯಿಯು ಯಾವ ಯಾವ ವಾಹನದಲ್ಲಿ ಲೋಕ ಸಂಚಾರಕ್ಕೆ ಭೂಮಿಗೆ ಬರುತ್ತಾಳೆ ಎಂಬುದನ್ನು ನೋಡುವುದಾದರೆ.. ನವರಾತ್ರಿ ಸೋಮವಾರ ಅಥವಾ ಭಾನುವಾರ ಪ್ರಾರಂಭವಾದರೆ ಆನೆಯ ಮೇಲೆ ಬರುತ್ತಾಳೆ ಎಂದು ನಂಬಲಾಗುತ್ತದೆ. ಹಾಗೆಯೇ ಶನಿವಾರ ಅಥವಾ ಮಂಗಳವಾರ ಕಲಶವನ್ನು ಸ್ಥಾಪಿಸುತ್ತಿದ್ದರೆ, ತಾಯಿ ಕುದುರೆಯ ಮೇಲೆ ಬರುತ್ತಾಳೆ. ನವರಾತ್ರಿ ಗುರುವಾರ ಅಥವಾ ಶುಕ್ರವಾರ ಪ್ರಾರಂಭವಾದರೆ ಪಲ್ಲಕ್ಕಿಯನ್ನೇರಿ ಬರುತ್ತಾಳೆ. ಇನ್ನು ಬುಧವಾರ ನವರಾತ್ರಿ ಬಂದರೆ ತಾಯಿಯು ತನ್ನ ದೋಣಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಾಳೆ.

ಇನ್ನು ಈ ಬಾರಿ ಚೈತ್ರ ನವರಾತ್ರಿ ಏಪ್ರಿಲ್ 13 ರಂದು ಅಂದರೆ ಮಂಗಳವಾರದಿಂದ ಪ್ರಾರಂಭವಾಗುತ್ತಿರುವುದರಿಂದ ದುರ್ಗಾ ದೇವಿಯು ಕುದುರೆಯನ್ನೇರಿ ಬರುತ್ತಾಳೆ ಎನ್ನಲಾಗುತ್ತಿದೆ. ಇದು ರಾಜಕೀಯ ವಿಚಾರಗಳಿಗೆ, ದೇಶದ ಅಭಿವೃದ್ಧಿಗೆ ಅಶುಭವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ ಈ ಸೂಚನೆಯ ಪ್ರಕಾರ ಸಾಮಾನ್ಯ ಜನರಿಗೆ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತಿದೆ..

ಲೋಕ ಸಂಚಾರಕ್ಕಾಗಿ ಭೂಮಿಗೆ ಬರುವ ದೇವಿಯನ್ನು ವಿಶೇಷ ರೀತಿಯಲ್ಲಿ ಪೂಜಿಸಲಾಗುತ್ತದೆ. ತಾಯಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಿ ಆಕೆಯನ್ನು ಭೂಲೋಕಕ್ಕೆ ಆಹ್ವಾನಿಸಲಾಗುತ್ತದೆ. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author