ಮನೆಯನ್ನು ಆಕರ್ಶಕವಾಗಿ ಇಟ್ಟುಕೊಳ್ಳೋದು ಹೇಗೆ..?

ಚೆಂದದ ಮನೆಗೆ ಅಂದದ ಅಲಂಕಾರ..!

ಮನೆ ಚಿಕ್ಕದಾದರೂ ಚೊಕ್ಕವಾಗಿರಬೇಕು.. ಮನೆ ಸುಂದರವಾಗಿ ಅಲಂಕಾರಗೊಂಡರೆ ಮನಸ್ಸಿಗೂ ಶಾಂತಿ ಸಿಗುತ್ತದೆ.. ಜೊತೆಗೆ ಆಕರ್ಷಕವಾಗಿಯೂ ಇರುತ್ತದೆ.. ಅತಿಯಾಗಿ ಅಲಂಕಾರಿಕ ವಸ್ತುಗಳಿಂದ ಮನೆಯನ್ನು ಸಿಂಗರಿಸಿದರೂ ಕಣ್ಣಿಗೆ ಕಿರಿಕಿರಿ ಎನಿಸುತ್ತದೆ..

ಮನೆ ಸ್ವಚ್ಚವಾಗಿರುವುದರ ಜೊತೆಗೆ ಸುಂದರವಾಗಿ ಅಲಂಕಾರಗೊಂಡಿದ್ದರೆ ಮನಸ್ಸಿಗೆ ಮುದವಾಗಿರುತ್ತದೆ.. ಕೆಲವರು ಅಲಂಕಾರಿಕ ವಸ್ತುಗಳನ್ನ ಬಳಸಿ ಮನೆಯನ್ನ ಸಿಂಗರಿಸಲು ಇಷ್ಟ ಪಡುತ್ತಾರೆ.. ಮತ್ತೆ ಕೆಲವರು ಸಸ್ಯಗಳನ್ನ ಬಳಸಿ ಮನೆಯನ್ನು ಅಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಬಯಸುತ್ತಾರೆ.. ಮನೆಯನ್ನ ಅಲಂಕಾರ ಮಾಡುವುದರ ಜೊತೆಗೆ ಅವುಗಳನ್ನು ಸುಂದರವಾಗಿ ಕಾಪಾಡಿಕೊಳ್ಳುವುದೂ ಮುಖ್ಯ..

ಒಂದು ಮನೆಗೆ ಮುಖ್ಯವಾಗಿ ಬೇಕಿರುವುದು ಗಾಳಿ ಬೆಳಕು.. ಮನೆಯನ್ನು ಸುಂದರವಾಗಿ ಅಲಂಕಾರ ಮಾಡಲು ಸೂಕ್ತವಾದ ಬೆಳಕಿರಬೇಕಾಗುತ್ತದೆ. ಉತ್ತಮ ಬೆಳಕಿಲ್ಲದಿದ್ದರೆ ಅಲಂಕಾರ ಪೂರ್ಣಗೊಳ್ಳುವುದಿಲ್ಲ.. ಆದ್ದರಿಂದ ಮನೆಯ ಪ್ರತಿ ಕೋಣೆಗೂ ಸೂಕ್ತ ಬೆಳಕಿರುವಂತೆ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.. ಈಗಲಂತೂ ಮನೆಗೆ ಬೆಳಕಿನ ವ್ಯವಸ್ಥೆ ಮಾಡಲು ಡಿಫ್ರೆಂಟ್ ಡಿಸೈನ್ ನ ಕಿಟಕಿಗಳೂ ಲಭ್ಯವಿವೆ.. ಮನೆಕಟ್ಟಿಸುವವರು ಮೊದಲೇ ಯೋಚಿಸಿ ಮನೆಗೆ ಹೊಂದುವ ಡಿಫ್ರೆಂಟ್ ಡಿಸೈನ್ ನ ಕಿಟಕಿಗಳನ್ನ ಮನೆಗೆ ಅಳವಡಿಸಿಕೊಳ್ಳಬಹುದು..

ಮನೆಗೆ ಬೆಳಕು ಮುಖ್ಯವಾದ್ದರಿಂದ ಪ್ರತಿ ಕೋಣೆಗಳಿಗೂ ವಿವಿಧ ವಿನ್ಯಾಸಗಳ ದೀಪಗಳನ್ನು ಅಳವಡಿಸಿ. ಇದರಿಂದ ಕೋಣೆ ರಾತ್ರಿ ವೇಳೆಯೂ ಪರಿಪೂರ್ಣವಾಗಿ ಕಾಣಿಸುತ್ತದೆ.. ಅಲ್ಲದೆ ಸುಂದರವಾಗಿಯೂ ಕಾಣಿಸುತ್ತದೆ. ಹಗಲಿನ ವೇಳೆ ಸೂರ್ಯನ ಬೆಳಕು ಮನೆ ತುಂಬವುಂತೆ ರಾತ್ರಿ ವೇಳೆ ವಿವಿಧ ವಿನ್ಯಾಸದ ದೀಪಗಳನ್ನ ಬಳಸುವುದರಿಂದ ಅಲಂಕಾರ ಸದಾ ಹೊಸತನದಿಂದ ಕೂಡಿರುತ್ತದೆ..

ಕೆಲವೊಮ್ಮೆ ಮನೆಯ ಗೋಡೆಗಳು ಖಾಲಿ ಖಾಲಿ ಇದ್ದರೆ ಏನೋ ಮಿಸ್ ಆದಂತೆ ಅನಿಸುತ್ತದೆ.. ಅಲ್ಲದೆ ಯಾವುದೇ ಕಲಾಕೃತಿಗಳಿಲ್ಲದ ಕೋಣೆಗಳು ಅಪೂರ್ಣವೆನಿಸುತ್ತದೆ ಮತ್ತು ನೋಡಲು ಕೂಡಾ ಬೋರಿಂಗ್ ಆಗಿರುತ್ತವೆ. ಆದ್ದರಿಂದ ಕೋಣೆಗಳಲ್ಲಿ ಕೆಲವು ಕಲಾತ್ಮಕ ವಸ್ತುಗಳನ್ನು ಮತ್ತು ನಿಮ್ಮಿಷ್ಟದ ವರ್ಣಚಿತ್ರಗಳನ್ನು ಅಳವಡಿಸಿದರೆ ಮನಸ್ಸಿಗೆ ಹಿತವೆನಿಸುತ್ತದೆ.

ಮನೆಯಲ್ಲಿ ಎಷ್ಟೇ ಕಾಷ್ಟ್ಲಿ ಅಲಂಕಾರಿಕ ವಸ್ತುಗಳಿದ್ದರು ಅವುಗಳನ್ನು ಸುಂದರವಾಗಿ ಜೋಡಿಸದಿದ್ದಲ್ಲಿ ಎಲ್ಲವೂ ವ್ಯರ್ಥವಾಗಿಬಿಡುತ್ತದೆ.. ಮನೆಯ ಅಲಂಕಾರ ಮಾಡುವುದೂ ಒಂದು ಕಲೆ.. ಅಲಂಕಾರಿಕ ವಸ್ತುಗಳನ್ನು ಸುಂದರವಾಗಿ ಜೋಡಿಸದಿದ್ದರೆ ಮನೆಯ ಅಂದವೇ ಹಾಳಾಗುತ್ತದೆ,.. ಮನೆಯಲ್ಲಿ ವಸ್ತುಗಳನ್ನ ಜೋಡಿಸುವ ರೀತಿಯೂ ಕಲಾತ್ಮಕವಾಗಿರಬೇಕು. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author