ಟಿಬೆಟಿಯನ್ನರ ಹೊಸ ವರ್ಷ ‘ಲೋಸರ್’ ಹಬ್ಬದ ಮಹತ್ವ..

ಬೌದ್ಧ ಧರ್ಮೀಯರ ಪ್ರಮುಖ ಹಬ್ಬಗಳಲ್ಲೊಂದು ‘ಲೋಸರ್’

ಹಲವು ಧರ್ಮಗಳ ನೆಲೆಬೀಡಾಗಿರುವ ಭಾರತದಲ್ಲಿ, ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಆಚರಣೆಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಲೋಸರ್ ಆಚರಣೆಯೂ ಒಂದು. ಈ ಲೋಸರ್ ಟಿಬೆಟಿಯನ್ನರ ಹೊಸ ವರ್ಷಾಚರಣೆಯ ಹಬ್ಬವಾಗಿದೆ. ಟಿಬೆಟಿಯನ್ ಕ್ಯಾಲೆಂಡರ್ ಪ್ರಕಾರ ಲೋಸರ್ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. 

ಬೌದ್ಧ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಈ ಹಬ್ಬವನ್ನು ಟಿಬೆಟಿಯನ್ನರು 15ದಿನಗಳ ಕಾಲ ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ಮೊದಲ ಮೂರು ದಿನಗಳು ಪ್ರಮುಖವಾಗಿರುತ್ತದೆ. ದೇವರಿಗೆ ಕೃತಜ್ಞತೆ ಸಲ್ಲಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಫೆಬ್ರವರಿ ಕೊನೆ ಅಥವಾ ಮಾರ್ಚ್ ತಿಂಗಳಲ್ಲಿ ಬರು ಈ ಹಬ್ಬವನ್ನು ನೇಪಾಳ, ಟಿಬೆಟ್, ಸಿಕ್ಕಿಂ, ಭೂತಾನ್ ನಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಲೋಸರ್ ಪದದ ಅರ್ಥ: ಲೋ ಎಂಬ ಪದ ವರ್ಷ ಎಂಬ ಅರ್ಥವನ್ನು ನೀಡುತ್ತದೆ. ಇನ್ನು ಸರ್ ಎಂಬ ಪದ ಹೊಸ ಎಂಬ ಅರ್ಥವನ್ನು ಸೂಚಿಸುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಎಲ್ಲರು ಒಂದೆಡೆ ಸೇರಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಟ್ಟು ಹಾಡು, ನೃತ್ಯ ಪ್ರದರ್ಶನ ಮಾಡಿ ಸಂಭ್ರಮಿಸುತ್ತಾರೆ. 

ಹೆಚ್ಚು ಬೌದ್ಧ ಧರ್ಮೀಯರು ಇರುವ ಲಡಾಕ್ ನಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಬೀದಿ ದೀಪಗಳನ್ನು ಬೆಳಗಿಸಿ, ಮಠಮಾನ್ಯಗಳನ್ನು ಅಲಂಕರಿಸಲಾಗುತ್ತದೆ. ಹೋಸ ವರ್ಷದ ಆರಂಭ ಸೂಚಿಸುವ ಈ ಹಬ್ಬದಂದು ಮುಂದಿನ ಸಮೃದ್ಧಿಯ ಜೀವನಕ್ಕಾಗಿ ದೇವರಿಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

15 ದಿನಗಳ ಲೋಸರ್ ಆಚರಣೆಯಲ್ಲಿ ಮೊದಲ ಮೂರು ದಿನಗಳು ಪ್ರಮುಖವಗಿರುತ್ತವೆ. ಈ ಮೂರುದಿನಗಳಲ್ಲಿ ಮೊದಲನೆಯ ದಿನ ಜನರು ಮಠಮಾನ್ಯಗಳಲ್ಲಿ ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸಿದ ಪಾನೀಯಾವನ್ನು ಎಲ್ಲರಿಗೂ ವಿತರಿಸಲಾಗುತ್ತದೆ.

ಎರಡನೇ ದಿನವನ್ನು ಕಿಂಗ್ಸ್ ಲೋಸರ್ ಎಂದು ಕರೆಯಲಾಗುತ್ತೆ. ಈ ದಿನ ಎಲ್ಲರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಮಠಗಳಿಗೆ ಭೇಟಿ ನೀಡಿ, ಸನ್ಯಾಸಿಗಳನ್ನು ಗೌರವಿಸಿ, ಉಡುಗೊರೆಗಳನ್ನು ನೀಡುತ್ತಾರೆ. ಪಟಾಕಿ ಸಿಡಿಸುವ ಮೂಲಕ ದುಷ್ಟ ಶಕ್ತಿಗಳನ್ನು ಹೆದರಿಸುವ ಪ್ರಕ್ರಿಯೆ ನಡೆಯುತ್ತದೆ. 

ಮೂರನೆ ದಿನ ಜನರು ಬೇಗ ಎದ್ದು ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿ, ದೇವರು ಹಾಗೂ ಇಹಲೋಕ ತ್ಯಜಿಸಿದ ತಮ್ಮ ಹಿರಿಯರಿಗೆ ಪೂಜೆ ಸಲ್ಲಿಸುತ್ತಾರೆ. ಹಬ್ಬಕ್ಕೆ ಮಾಡಿರುವ ಬಗೆ ಬಗೆಯ ಖಾದ್ಯಗಳನ್ನು ದೇವರಿಗೆ-ಹಿರಿಯರಿಗೆ ಅರ್ಪಿಸುತ್ತಾರೆ. ಇನ್ನುಳಿದ ದಿನಗಳನ್ನು ವಿವಿಧ ಪೂಜೆ ಪುನಸ್ಕಾರ, ಸಾಂಸ್ಕೃತಿ-ಧಾರ್ಮಿಕ ಕಾರ್ಯಕ್ರಮ ನಡೆಸುವ ಮೂಲಕ ಸಂಭ್ರಮಿಸುತ್ತಾರೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

► Follow us on Reddit
https://www.reddit.com/Planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author