ತಮಿಳುನಾಡು ರಾಜಕಾರಣದ ಕ್ರಾಂತಿಕಾರಿ ನಾಯಕ ಎಂ.ಕರುಣಾನಿಧಿ; ಕಪ್ಪು ಕನ್ನಡಕದ ಹಿಂದಿನ ಕತೆಯೇನು ಗೊತ್ತಾ..?

ಕ್ರಾಂತಿಕಾರಿ ನಾಯಕ ಎಂ.ಕರುಣಾನಿಧಿ; ಕಪ್ಪು ಕನ್ನಡಕದ ಹಿಂದಿನ ಕತೆಯೇನು ಗೊತ್ತಾ..?

M Karunanidhisource and pic credit: https://www.thenewsminute.com

ತಮಿಳುನಾಡು ರಾಜಕೀಯ ರಂಗದಲ್ಲಿ ಮುಳುಗದ ಸೂರ್ಯ ಕಲೈಗ್ನಾರ್ ಕರುಣಾನಿಧಿ. ತಮಿಳುನಾಡಿನ ಈ ಪೆರಿಯಾರ್ ರಾಜಕೀಯ ರಂಗದಲ್ಲಿ ಬೆಳೆದು ಬಂದ ಹಾದಿಯೇ ರೋಚಕ-ರೋಮಾಂಚನ. 60 ವರ್ಷದ ರಾಜಕಾರಣದಲ್ಲಿ  ಒಂದೇ ಒಂದು ಸೋಲನ್ನು ಅರಿಯದ ಗೆಲುವಿನ ಸರದಾರನೆಂದರೆ ಅದು ಎಂ.ಕರುಣಾನಿಧಿ. ರಾಜಕಾರಣದ ಈ ಪೆರಿಯಾರ್ ಎದೆಗೂಡಲ್ಲಿ ರಾಜನೀತಿಗಿಂತ ಕವಿ ಹೃದಯದ ಮನಸ್ಸಿದೆ. ಕೈಗಳಲ್ಲಿ ಬರವಣಿಗೆ ಮೂಲಕ ಜನರನ್ನು ಬಡಿದೆಬ್ಬಿಸುವ ತಾಕತ್ತಿದೆ. ಒಂದು ವೇಳೆ, ಕರುಣಾನಿಧಿ ರಾಜಕಾರಣಿ ಆಗಿರದಿದ್ದರೆ, ಒಬ್ಬ ಉತ್ಕಷ್ಟ ಬರಹಗಾರನಾಗಿರುತ್ತಿದ್ದರು. ಯಾಕಂದ್ರೆ, ಅವರೊಬ್ಬ ಸರ್ವಶ್ರೇಷ್ಠ ಕತೆಗಾರ.

ಕಲೈಗ್ನಾರ್ ಕರುಣಾನಿಧಿ.. ರಾಜನೀತಿಯಲ್ಲಿ ಸಕ್ರಿಯವಾಗಿದ್ದ ರಾಜಕಾರಣಿ. ವಯಸ್ಸಾದರೂ, ಕಪ್ಪು ಕನ್ನಡಕದಲ್ಲಿ ಎದುರಾಳಿಗಳನ್ನು ಅಳೆಯುತ್ತಿದ್ದ ಚತುರ....60 ವರ್ಷದ ರಾಜಕಾರಣದಲ್ಲಿ ಒಂದೇ ಒಂದು ಸೋಲನ್ನು ಅರಿಯದ ಗೆಲುವಿನ ಸರದಾರ. 

ಪೆರಿಯಾರ್ ವಿಚಾರಧಾರೆಯಿಂದ ಪ್ರೇರೇಪಿತ

M Karunanidhi with peiryarsource and pic credit: https://www.deccanchronicle.com

ಕರುಣಾನಿಧಿ ರಾಜಕೀಯ ಬದುಕಿನ ವರ್ಣರಂಜಿತ ಪುಟಗಳನ್ನು ತೆರೆಯುವ ಮುನ್ನ, ಬಾಲ್ಯದ ಬದುಕಿನ ಕತೆ ತಿಳಿಯದಿದ್ದರೆ, ಈ ಕಥೆ ಅರ್ಥ ಹೀನ..ರಾಜಕೀಯ ರಂಗಕ್ಕಿಂತ  ತಮಿಳುನಾಡಿನ ಸಾಂಸ್ಕೃತಿಕ ಲೋಕಕ್ಕೆ ಈ ಮಹಾನ್ ವ್ಯಕ್ತಿ ನೀಡಿದ್ದ ಕೊಡುಗೆ ಅರ್ಥೈಸದಿದ್ದರೆ ಇತಿಹಾಸಕ್ಕೆ ದೊಡ್ಡ ಅಪಚಾರ..ಕರುಣಾನಿಧಿ ಒಬ್ಬ ಉತ್ತಮ ರಾಜಕಾರಣಿ ಅನ್ನುವುದಕ್ಕಿಂತ ಉತ್ತಮ ಬರಹಗಾರ, ಕತೆಗಾರ....ತಮಿಳುನಾಡಿನ ಇಸೈ ವೆಳ್ಳಲಾರ್ ಸಮುದಾಯದ ಬಡ ಕುಟುಂಬದಲ್ಲಿ ಹುಟ್ಟಿದರೂ, ರಾಜಕೀಯದಲ್ಲಿ ಮೇರು ಪರ್ವತವಾಗಿ ಬೆಳೆದು ನಿಲ್ಲಲ್ಲು ಕಾರಣವಾಗಿದ್ದು ಅವತ್ತಿನ ಮಟ್ಟಿಗಿನ ಕ್ರಾಂತಿಕಾರಿ ನಾಯಕ ಪೆರಿಯಾರ್.

M Karunanidhi with peiryarsource and pic credit: https://www.edexlive.com

ಪೆರಿಯಾರರ ಸ್ವಾಭಿಮಾನಿ ಹೋರಾಟದಲ್ಲಿ ಭಾಗಿಯಾದ ಕರುಣಾನಿಧಿ ತನ್ನ ಹರಿತವಾದ ಕೈಬರಹದಿಂದಲೇ ಅಪಾರ ಜನಮನ್ನಣೆಗಳಿಸಿದ್ದರು. ತಮಿಳುನಾಡು ತಮಿಳು ಮಾನವರ್ ಮನ್ರಮ್ಎಂಬ ವಿದ್ಯಾರ್ಥಿ ಸಂಘ ಕಟ್ಟಿಕೊಂಡು ದ್ರಾವಿಡ ಹೋರಾಟಕ್ಕೆ ಅಡಿಯಿಟ್ಟಿದ್ದರು..ಈ ಮೂಲಕ ಚಿಕ್ಕಂದಿನಿಂದಲೇ ಸಂಘಟನಾ ಚತುರನಾಗಿ ಗುರುತಿಸಿಕೊಂಡಿದ್ದರು.

20ನೇ ವಯಸ್ಸಿನಲ್ಲೇ  ಚಿತ್ರರಂಗದ ನಂಟು

karunanidhi with MGRsource and pic credit: https://www.outlookindia.com

ಇನ್ನು,  ಕರುಣಾನಿಧಿ ರಾಜಕೀಯದ ಜೊತೆ ಜೊತೆಗೆ ಥಿಯೇಟರ್ ನಲ್ಲೂ ಕೆಲಸ ನಿರ್ವಹಿಸುತ್ತಿದ್ದರು. ತಮ್ಮ 20ನೇ ವಯಸ್ಸಿನಲ್ಲೇ ತಮಿಳಿನ ರಾಜಕುಮಾರಿ ಚಿತ್ರಕಥೆ ಬರೆದರು. ಇದು ಕರುಣಾನಿಧಿ ಚಿತ್ರಕಥೆ ಬರೆದ ಮೊದಲ ಚಿತ್ರ. ಈ ಚಿತ್ರದಿಂದಾಗಿ ತಮಿಳಿನ ಸೂಪರ್ ಸ್ಟಾರ್ ಎಂ.ಜಿ ರಾಮಚಂದ್ರನ್ ಜೊತೆ ಕರುಣಾ ಸ್ನೇಹ ವೃದ್ಧಿಯಾಯ್ತು.ಚಿತ್ರರಂಗದ ಜೊತೆ ಜೊತೆಗೆ ರಾಜಕೀಯ ನಂಟು ಬೆಳೆಯುವುದಕ್ಕೆ ಒಂದೇ ಒಂದು ಹೋರಾಟ ಸಾಕಾಗಿತ್ತು. ಅದುವೇ ಹಿಂದಿ ವಿರೋಧಿ ಚಳವಳಿ.

karunanidhi in electionsource and pic credit: https://www.thenewsminute.com

ಅದು 1937. ಭಾರತ ಬ್ರಿಟಿಷರ ದಾಸ್ಯದಲ್ಲಿದ್ದ ದಿನಗಳದು.. ಈಗಿನ ತಮಿಳುನಾಡು ಅಂದು ಮದ್ರಾಸ್ ಪ್ರೆಸಿಡೆನ್ಸಿಯಾಗಿದ್ದ ಸಮಯ.. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ವರಿಷ್ಠ ಮುತ್ಸದ್ದಿ ಸಿ.ರಾಜಗೋಪಾಲಾಚಾರಿ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಸರ್ಕಾರ ರಚನೆ ಆಯ್ತು.. ರಾಜಗೋಪಾಲಾಚಾರಿ ಸರ್ಕಾರ ಶಾಲೆಗಳಲ್ಲಿ  ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿತ್ತು. ಇದನ್ನ ಜಸ್ಚೀಸ್ ಪಾರ್ಟಿಯ ಪೆರಿಯಾರ್ ಮತ್ತು ಅಣ್ಣಾದುರೈ ಅವರಂತಹ ದಕ್ಷಿಣ ಭಾರತದ ನಾಯಕರುಗಳು ವಿರೋಧಿಸಿದ್ರು.. ತಮಿಳುನಾಡಿನಾದ್ಯಂತ ಹಿಂದಿ ವಿರೋಧಿ ಚಳುವಳಿ ಆರಂಭಗೊಂಡಿತ್ತು. ಈ ಸಮಯದಲ್ಲಿ ವಿದ್ಯಾರ್ಥಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಒಬ್ಬ ಚಿಗುರು ಮೀಸೆಯ ಯುವಕ ಹೋರಾಟಕ್ಕೆ ಧುಮುಕಿದ್ದ ಆತನೇ ಎಂ.ಕರುಣಾನಿಧಿ.

ಕರುಣಾನಿಧಿ ಬದುಕಿನಲ್ಲಿಲ್ಲ ಸೋಲು..!

karunanidhi in electionsource and pic credit: https://www.oneindia.com

ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ. 1947ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟು ಚುನಾವಣೆಗೆ  ಸ್ಪರ್ಧಿಸಿದ ಬಳಿಕ ಕರುಣಾನಿಧಿ ಸೋತೇ ಇಲ್ಲ. ಡಿಎಂಕೆಯನ್ನು ಮತಪ್ರಭುಗಳು ಸೋಲಿಸಿದರೂ, ಕರುಣಾನಿಧಿಯನ್ನು ಮಾತ್ರ ಗೆಲ್ಲಿಸಿದ್ದಾರೆ. 1944ರಲ್ಲಿ  ಜಸ್ಟೀಸ್ ಪಾರ್ಟಿಯಿಂದ ಹೊರಬಂದ ಅಣ್ಣಾದುರೈ ಮತ್ತು ಕರುಣಾನಿಧಿ ದ್ರಾವಿಡ ಮುನೇತ್ರ ಕಜಗಂ (ಡಿಎಂಕೆ) ಪಕ್ಷ ಕಟ್ಟಿದರು. ಅಣ್ಣಾದುರೈ ಖಾಸಾ ಶಿಷ್ಯನಾಗಿದ್ದ ಕರುಣಾನಿಧಿ ಪಕ್ಷ ಕಟ್ಟಲು ಹೆಗಲಿಗೆ ಹೆಗಲುಕೊಟ್ಟು ನಿಂತ್ರು. ಸ್ಪರ್ಧಿಸಿದ್ದ ಮೊದಲ ಚುನಾವಣೆಯಲ್ಲೇ ಕರುಣಾನಿಧಿ ಗೆದ್ದರೂ, ಕಾಂಗ್ರೆಸ್ ಎದುರು ಡಿಎಂಕೆ ಸೋತಿತ್ತು. 1962ರಲ್ಲಿ ಚುನಾವಣೆಯಲ್ಲೂ ಇದೇ ಸ್ಥಿತಿ. ಸಂಘಟನೆಯ ಮೂಲಕ ಅತ್ಯುತ್ತಮ ಇಮೇಜ್ ಹೊಂದಿದ್ದ ಕರುಣಾನಿಧಿ ಅವರನ್ನು ವಿಧಾನಸಭೆಯ ವಿರೋಧಪಕ್ಷದ ಉಪನಾಯಕನಾಗಿ ಅಣ್ಣಾದುರೈ ನೇಮಿಸಿ ದೊಡ್ಡ ಜವಾಬ್ದಾರಿಯನ್ನೇ ವಹಿಸಿದ್ದರು.

ಡಿಎಂಕೆಗೆ ಮೊದಲ ಅಧಿಕಾರ

1965ರ ಹೊತ್ತಿಗೆ ದೇಶದಲ್ಲಿ ಹಿಂದಿ ವಿರೋಧಿ ಹೋರಾಟ ತೀವ್ರವಾಗಿತ್ತು. ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತ ಕನಲಿ ಕೆಂಡವಾಗಿತ್ತು.  ಸಂಘಟನಾ ಚತುರ ಕರುಣಾನಿಧಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಇಡೀ ರಾಜ್ಯವನ್ನೆಲ್ಲಾ ಸುತ್ತಾಡಿದ್ರು. ಪಕ್ಷವನ್ನು ಸಂಘಟಿಸಿದ್ರು. ಇದಾದ ಐದೇ ವರ್ಷಗಳಲ್ಲಿ ರಾಜ್ಯದ ಚಿತ್ರಣ ಬದಲಾಗಿ ಹೋಗಿತ್ತು. ಡಿಎಂಕೆಯ ಹಿಂದಿ ವಿರೋಧಿ ಹೋರಾಟ ತಮಿಳುನಾಡಿನ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. 1967ರ ಚುನಾವಣೆಯಲ್ಲಿ ಡಿಎಂಕೆ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು. ತಮಿಳುನಾಡಿನ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಅಣ್ಣಾದುರೈ ಅಧಿಕಾರ ವಹಿಸಿಕೊಂಡ್ರು. ಪ್ರಭಾವಿ ಮುಖಂಡ ಕರುಣಾನಿಧಿಗೆ ಲೋಕ ಪ್ರಬಂಧನ ಹಾಗೂ ರಾಜಮಾರ್ಗ ಸಚಿವ ಸ್ಥಾನ ನೀಡಲಾಯ್ತು.

ಕರುಣಾನಿಧಿಗೆ ಒಲಿದ ಸಿಎಂ ಸ್ಥಾನ

karunanidhi in electionsource and pic credit: https://www.thenewsminute.com

ಅಧಿಕಾರಕ್ಕೇರಿದ ಕೇವಲ ಎರಡೇ ವರ್ಷಕ್ಕೆ ಕ್ಯಾನರ್ ನಿಂದಾಗಿ ಅಣ್ಣಾದುರೈ ವಿಧಿವಶವಾದ್ರು. ತೆರವಾದ  ಮುಖ್ಯಮಂತ್ರಿ ಸ್ಥಾನ ಕರುಣಾನಿಧಿಗೆ ಒಲಿದು ಬಂದಿತ್ತು. ಆ ಸಮಯದಲ್ಲಿ ಎಂ.ಜಿ ರಾಮಚಂದ್ರನ್ ಕೂಡಾ ಕರುಣಾ ಬೆಂಬಲಕ್ಕೆ ನಿಂತರು. ಹೀಗಾಗಿ ಅನಾಯಾಸವಾಗಿ ಸಿಎಂ ಸ್ಥಾನ ಅಲಂಕರಿಸಿದ್ರು. ಆದ್ರೆ ಸರ್ಕಾರದಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದರಿಂದ ಡಿಎಂಕೆ ಸರ್ಕಾರವನ್ನೇ ಪ್ರಧಾನಿ ಇಂದಿರಾಗಾಂಧಿ ವಜಾಗೊಳಿಸಿಬಿಟ್ಟರು.

ರಾಜ್ಯ ಸರ್ಕಾರವನ್ನು ವಜಾಗೊಳಿಸಿದ್ದು ಡಿಎಂಕೆಗೆ ವರದಾನವಾಗಿ ಪರಿಣಮಿಸಿತ್ತು. 1971ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು  ಎರಡನೇ ಬಾರಿಗೆ ಕರುಣಾನಿಧಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ರು. ಆದರೆ, ಪಕ್ಷದಲ್ಲಿ ಎಂಜಿಆರ್ ಹಾಗೂ ಕರುಣಾನಿಧಿ ನಡುವೆ ಸಂಬಂಧ ಹಳಸಿ ಹೋಗಿತ್ತು. ಭ್ರಷ್ಟಾಚಾರ ಆರೋಪ ಹೊರಿಸಿದ್ದ ಎಂಜಿಆರ್, ಕರುಣಾನಿಧಿ ವಿರುದ್ಧ ಸಿಡಿದೆದ್ದು ಹೊಸ ಪಕ್ಷವೊಂದನ್ನು ಹುಟ್ಟು ಹಾಕಿದ್ದರು. ಅದುವೇ ಅಣ್ಣಾಡಿಎಂಕೆ.

ರಾಜಕೀಯದಲ್ಲಿ ಹಾವು-ಏಣಿಯಾಟ

karunanidhi and jayalalithasource and pic credit: https://scroll.in/article

ಅಣ್ಣಾಡಿಎಂಕೆಯನ್ನು ಎಂಜಿಆರ್  ಹುಟ್ಟು ಹಾಕಿದ ಬಳಿಕ ತಮಿಳುನಾಡು ರಾಜಕೀಯದಲ್ಲಿ ಬಹಳಷ್ಟು ಏರಿಳಿತ ಉಂಟಾಯ್ತು. 1976ರಲ್ಲಿ ಕರುಣಾನಿಧಿ ವಿರುದ್ಧ ತೊಡೆತಟ್ಟಿದ್ದ ಎಂಜಿ ರಾಮಚಂದ್ರನ್ ಮುಖ್ಯಮಂತ್ರಿಯಾದ್ರು.. ಇದಾದ ಬಳಿಕ ಕರುಣಾನಿಧಿ ಬಹುದಿನಗಳ ಕಾಲ ಅಧಿಕಾರದಿಂದ ದೂರವೇ ಉಳಿಯಬೇಕಾಯ್ತು.  ಸತತ ಮೂರು ಚುನಾವಣೆಯಲ್ಲಿ  ಸೋತು ಸುಣ್ಣವಾದ ಕರುಣಾನಿಧಿಗೆ ಗೆಲುವು ದಕ್ಕಿದ್ದು 1989ರ ಚುನಾವಣೆಯಲ್ಲೇ....

ಮುಂದೆ 1996 ಹಾಗೂ 2006ರಲ್ಲಿಯೂ ಕರುಣಾನಿಧಿ ಮುಖ್ಯಮಂತ್ರಿಯಾದ್ರು. 60 ವರ್ಷದ ರಾಜಕಾರಣದಲ್ಲಿ ಐದು ಬಾರಿ ಮುಖ್ಯಮಂತ್ರಿ, ಸೋಲನ್ನೇ ಅರಿಯದ ಸರದಾರನ ಜಂಘಾಬಲವನ್ನು ಅಡಗಿಸಿದ್ದು  ಓರ್ವ ಮಹಿಳೆ. ಆಕೆಯೇ ಕುಮಾರಿ ಜಯಲಲಿತಾ.ತಮಿಳುನಾಡಿನಲ್ಲಿ ಈಗಲೂ ಕರುಣಾನಿಧಿ ಹಾಗೂ ಜಯಲಲಿತಾ ಹಾವು-ಮುಂಗುಸಿ ಇದ್ದಂತಿದ್ದರು ಎಂಬ ಮಾತಿದೆ. ತಮಿಳುನಾಡು ರಾಜಕಾರಣದ ಮೇರುಪರ್ವ ಎಂ.ಕರುಣಾನಿಧಿಗೆ ಜಂಘಾಬಲವನ್ನು ಅಡಗಿಸಿದ್ದು ಮಾಜಿ ಮುಖ್ಯಮಂತ್ರಿ ಜಯಲಲಿತಾ. ಬಹುಶಃ ಅದೊಂದು ತಪ್ಪು ಮಾಡದಿದ್ರೆ, ಇಬ್ಬರ ಮಧ್ಯೆ ದ್ವೇಷ ಹುಟ್ಟುತ್ತಿರಲಿಲ್ಲವೇನೋ? ಜಯಲಲಿತಾ ಕೂಡ ಹಗೆತನ ಸಾಧಿಸುತ್ತಿರಲಿಲ್ಲವೇನೋ? ಇಷ್ಟಕ್ಕೂ ಇವರಿಬ್ಬರ ನಡುವೆ ಆಗಿದ್ದೇನು? ಇಲ್ಲಿದೆ ಮಾಹಿತಿ

ಎಂತಹ ಬುದ್ದಿವಂತನಾದರೂ ಒಂದಲ್ಲ ಒಂದು ವಿಷ್ಯದಲ್ಲಿ ಎಡವಿಯೇ ತೀರುತ್ತೇನೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಕೂಡ ಹೊರತಲ್ಲ.. ಡಿಎಂಕೆ ಮೂಲೆಗುಂಪಾಗಲು ಎರಡೇ ಕಾರಣ...ಒಂದು ತಮಿಳುನಾಡು ಮುಖ್ಯಮಂತ್ರಿ ಕುಮಾರಿ ಜಯಲಲಿತಾ...ಮತ್ತೊಂದು ಕುಟುಂಬದಲ್ಲಿನ ವೈರತ್ಯ...

ದಿನಾಂಕ; ಮಾ. 25, 1989, ಸ್ಥಳ: ತಮಿಳುನಾಡು ವಿಧಾನಸಭೆ

jayalalithasource and pic credit: https://twitter.com

ಅದು 1989..ಮಾರ್ಚ್ 25. ತಮಿಳುನಾಡಿನ ವಿಧಾನಸಭೆಯಲ್ಲಿ ಗಂಭೀರ ಚರ್ಚೆಯಾಗುತ್ತಿತ್ತು. ಈ ಸಂದರ್ಭದಲ್ಲಿಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಜಯಲಲಿತಾ ಮೇಲೆ ಡಿಎಂಕೆ ಶಾಸಕರು ಸಿಟ್ಟಾಗಿದ್ದರು. ಏಕಾಏಕಿ ಪ್ರತಿಪಕ್ಷ ನಾಯಕಿಯ ಮೇಲೆರಗಿದ್ದರು. ಈ ಘಟನೆಯಿಂದ ಜಯಲಲಿತಾ ಕನಲಿ ಕೆಂಡವಾಗಿದ್ದರು. ಕಣ್ಣೀರಿಡುತ್ತಲೇ ತಮಿಳುನಾಡಿಗೆ ಒಂದೇ ಸಂದೇಶ ರವಾನಿಸಿದ್ರು. ಕರುಣಾನಿಧಿ ಎಲ್ಲಿಯವರೆಗೆ ಮುಖ್ಯಮಂತ್ರಿ ಆಗಿರುತ್ತಾರೋ ಅಲ್ಲಿಯವರೆಗೆ ನಾನು ವಿಧಾನಸಭೆಗೆ ಕಾಲಿಡುವುದೇ ಇಲ್ಲ. ಮುಖ್ಯಮಂತ್ರಿಯಾಗಿ ಈ ಸದನಕ್ಕೆ ಕಾಲಿಡುತ್ತೇನೆಎಂದು ಸದನದಿಂದ ಹೊರ ನಡೆದೇ ಬಿಟ್ಟರು.

ವಿಧಾನಸಭೆಯಲ್ಲಿ ಆದ ಅಪಮಾನವನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡ ಜಯಲಲಿತಾ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಮಿಳುನಾಡಿನಾದ್ಯಂತ ಮಿಂಚಿನ ಸಂಚಾರ ನಡೆಸಿದ್ರು. ಅಣ್ಣಾಡಿಎಂಕೆ ಮುಖಂಡರು ಕರುಣಾನಿಧಿಯನ್ನು ದುರ್ಯೋಧನ ಎಂದೂ, ಜಯಲಲಿತಾರನ್ನು ದ್ರೌಪದಿ ಎಂದು ಜನರ ಮುಂದೆ ಜಯಾ ಸಾರಿದ್ರು. ಇದರಿಂದಾಗಿ 1991ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ನೆಲಕಚ್ಚಿ ಹೋಯ್ತು. ಯಂಗ್ ಸಿಎಂ ಜಯಲಲಿತಾ ಪ್ರಮಾಣವಚನ ಸ್ವೀಕರಿಸಿದ್ರು.ಚೆನ್ನೈಯಲ್ಲಿನ ಮೇಲುಸೇತುವೆಗಳ ನಿರ್ಮಾಣ ಕಾರ್ಯದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದಡಿಕರುಣಾನಿಧಿಯನ್ನು ಬಂಧಿಸುವಂತೆ ಆದೇಶಿಸಿದ್ರು.

jayalalitha win in electionsource and pic credit: google.com

ಅಧಿಕಾರಕ್ಕಾಗಿ ಸಹೋದರರ ಕಿತ್ತಾಟ, ಡಿಎಂಕೆ ಧೂಳೀಪಟ

ಕರುಣಾನಿಧಿ ರಾಜಕೀಯ ಬದುಕಿನಲ್ಲಿ ಮತ್ತೊಂದು ಹಿನ್ನಡೆಗೆ ಕಾರಣ ಕುಟುಂಬದಲ್ಲಿನ ಕಿತ್ತಾಟ. ಕರುಣಾನಿಧಿಗೆ ಮೂವರು ಹೆಂಡತಿಯರು. ಎರಡನೇ ಹೆಂಡತಿ ದಯಾಳ್ ಅಮ್ಮಾಳ್ ಮಕ್ಕಳು ಅಳಗಿರಿ ಹಾಗೂ ಸ್ಟ್ಯಾಲಿನ್. ಮೂರನೇ ಹೆಂಡತಿ ಮಗಳು ರಜತಿ ಅಮ್ಮಾಳ್ ಪುತ್ರ ಕನ್ನಿಮೋಳಿ.  ಕರುಣಾನಿಧಿಗೆ 90 ವರ್ಷ ದಾಟುತ್ತಿದ್ದಂತೆ ಉತ್ತರಾಧಿಕಾರಕ್ಕಾಗಿ ಪಕ್ಷದಲ್ಲಿ ಸೋದರರಿಬ್ಬರ ಕಾಳಗ ಆರಂಭಗೊಂಡಿತ್ತು. ಕರುಣಾನಿಧಿಯ ಎರಡನೇ ಪತ್ನಿ ಮಕ್ಕಳಾದ ಅಳಗಿರಿ ಮತ್ತು ಸ್ಟಾಲಿನ್ ನಡುವಿನ ಸಮರ ಪಕ್ಷಕ್ಕೆ ಭಾರೀ ಹಿನ್ನಡೆ ತಂದೊಡ್ಡಿತು.ಕರುಣಾನಿಧಿ ನಂತರದ ಉತ್ತರಾಧಿಕಾರಕ್ಕೆ ಅಳಗಿರಿ ಹೊಂಚು ಹಾಕಿದ್ರೆ. ಅತ್ತ ಡಿಎಂಕೆಯಲ್ಲಿ ಚಾಣಕ್ಯ ಎಂದೇ ಗುರ್ತಿಸಿಕೊಂಡಿರುವ ಇನ್ನೋರ್ವ ಪುತ್ರ ಸ್ಟಾಲಿನ್ ಕೂಡಾ ಉತ್ತರಾಧಿಕಾರದ ಆಕಾಂಕ್ಷಿಯಾಗಿದ್ದರು.

stalin alagirisource and pic credit: https://www.theweek.in

ಇಬ್ಬರ ಕಾಳಗವನ್ನು ಶಮನಗೊಳಿಸಲೆಂದೇ ಅಳಗಿರಿಯನ್ನು ಕೇಂದ್ರದಲ್ಲಿ ಮಂತ್ರಿ ಮಾಡಿ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿದ್ರೆ. ಸ್ಟಾಲಿನ್ ನನ್ನು ಉಪಮುಖ್ಯಮಂತ್ರಿ ಮಾಡಿ ರಾಜ್ಯ ರಾಜಕಾರಣಕ್ಕೆ ಸೀಮಿತಗೊಳಿಸಿದ್ರು, ಇದ್ರಿಂದ ಸೋದರರ ವೈಷಮ್ಯ ಶಮನಗೊಳಿಸುವ ಉದ್ದೇಶ ಕರುಣಾನಿಧಿಯದ್ದಾಗಿತ್ತು. ಆದ್ರೆ..ಅಳಗಿರಿ ಮತ್ತೆ ರಾಜ್ಯ ರಾಜಕಾರಣದತ್ತ ಮುಖ ಮಾಡಿದ್ದರಿಂದ ಅನಿವಾರ್ಯವಾಗಿ ಪಕ್ಷದಿಂದಲೇ ಉಚ್ಛಾಟನೆ ಮಾಡಬೇಕಾಯಿತು. ಅಣ್ಣಾ ತಮ್ಮಂದಿರ ಕಿತ್ತಾಟದಿಂದ ಡಿಎಂಕೆ ಇಬ್ಭಾಗವಾಯ್ತೇ ಹೊರತು, ಪಕ್ಷಕ್ಕೆ ಅಧಿಕಾರ ದಕ್ಕಲೇ ಇಲ್ಲ.

ಡಿಎಂಕೆಗೆ ಸತತ ಸೋಲು, 2-ಜಿ ಹಗರಣದಲ್ಲಿ  ಜೈಲು ಸೇರಿದ ಮಗಳು

kanimolisource and pic credit: https://www.thenewsminute.com

ಕುಟುಂಬ ವ್ಯಾಮೋಹಕ್ಕೆ ಒಳಗಾಗಿದ್ದ ಕರುಣಾನಿಧಿ ಬದುಕು ಹಾಳು ಮಾಡಲು ಮಾಜಿ ಸಚಿವ ಎ.ರಾಜಾ ಒಬ್ಬನೇ ಒಬ್ಬ ಸಾಕಾಗಿತ್ತು. ಸೋದರ ಸಂಬಂಧಿ ಮಾರನ್ ಕುಟುಂಬದೊಂದಿಗೆ ಸಂಬಂಧ ಹಳಸಿದ್ದರಿಂದ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ದಯಾನಿಧಿ ಮಾರನ್ ಬದಲಿಗೆ ಪುತ್ರಿ ಕನ್ನಿಮೋಳಿ ಸಲಹೆಯಂತೆ ಎ.ರಾಜಾರನ್ನು ಸಚಿವರನ್ನಾಗಿ ನೇಮಕ ಮಾಡಲಾಗಿತ್ತು.2-ಜಿ ತರಂಗಾಂತರ ಹಂಚಿಕೆಯಲ್ಲಿ ಸ್ವತಂತ್ರ ಭಾರತ ಕಂಡು ಕೇಳರಿಯದ ಹಗರಣದಲ್ಲಿ ಸಿಲುಕಿದ್ದ ರಾಜಾ, ಪಕ್ಷಕ್ಕೆ ಮಸಿ ಬಳಿದು ಬಿಟ್ಟರು. ರಾಜಾ ಜೊತೆಗೆ ಕನ್ನಿಮೋಳಿ ಸಹ ಜೈಲು ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಯ್ತು. ಈ ಹಗರಣದ ನಂತರ ಡಿಎಂಕೆ ಮೇಲೇಳೇ ಇಲ್ಲ. ತಮಿಳುನಾಡಿನ ಜನತೆ ಕರುಣಾನಿಧಿಯನ್ನು ಸೋಲಿಸದಿದ್ದರೂ, ಡಿಎಂಕೆಗೆ ಅಧಿಕಾರ ನೀಡಲೇ ಇಲ್ಲ.

ಕರುಣಾನಿಧಿ ಮತ್ತು ಕಪ್ಪು ಕನ್ನಡಕ

karunanidhisource and pic credit: google.com

ಕರುಣಾನಿಧಿ ಎಂದರೆ ತಕ್ಷಣ ನೆನಪು ಬರುವುದು ಬಿಳಿ ಧೋತಿ, ಶರ್ಟ್‍, ಹಳದಿ ಶಾಲು, ಕಪ್ಪು ಕನ್ನಡಕ ತೊಟ್ಟ ವ್ಯಕ್ತಿ. ಅಷ್ಟರ ಮಟ್ಟಿಗೆ ಕರುಣಾನಿಧಿಯವರು ಕಪ್ಪುಕನ್ನಡಕವನ್ನು ಬಳಸುತ್ತಿದ್ದರು ಕಾರು ಅಪಘಾತವೊಂದರಲ್ಲಿ ಕಣ್ಣಿಗೆ ತೀವ್ರ ಗಾಯಗೊಂಡ ಕರುಣಾನಿಧಿಗೆ 12 ಶಸ್ತ್ರಚಿಕಿತ್ಸೆ ನಡೆಸಿದ ನಂತರ ದೃಷ್ಟಿ ಮರಳಿ ಸಿಕ್ಕಿತ್ತು. ಅಂದಿನಿಂದ ಅವರು ಕನ್ನಡಕ ಧರಿಸತೊಡಗಿದ್ದರು. ತಮ್ಮ ಜೀವನದ 46 ವರ್ಷಗಳ ಕಾಲ ಕರುಣಾನಿಧಿ ಕಪ್ಪು ಕನ್ನಡಕ ಧರಿಸಿದ್ದರು. 2017 ನವೆಂಬರ್ ನಿಂದ ಕರುಣಾನಿಧಿ ಲುಕ್ ಬದಲಾಗಿತ್ತು. ಕಪ್ಪು ಕನ್ನಡಕ್ಕೆ ಕರುಣಾನಿಧಿ ಗುಡ್ ಬೈ ಹೇಳಿದ್ದರು. 92 ವಯಸ್ಸಿನಲ್ಲಿ ಕನ್ನಡಕ ಬದಲಿಸುವಂತೆ ಕರುಣಾನಿಧಿಗೆ ವೈದ್ಯರು ಸಲಹೆ ನೀಡಿದ್ದರು. ಅವರ ನಿರ್ದೇಶನದಂತೆ ಕನ್ನಡಕ ಬದಲಾವಣೆ ಮಾಡಲಾಯಿತು. 40 ದಿನಗಳ ಕಾಲ ಹುಡುಕಿ ಹೊರ ರಾಷ್ಟ್ರದಿಂದ ಜರ್ಮಲ್‍ ಫ್ರೇಮ್ ನ ಹೊಸ ಕನ್ನಡಕವನ್ನು ತರಿಸಿಕೊಡಲಾಗಿತ್ತು.

ತಮಿಳುನಾಡಿನ ಮೇಲೆ ಜಯಲಲಿತಾ ಎಷ್ಟರ ಮಟ್ಟಿಗೆ ಪಾರುಪತ್ಯ ಸಾಧಿಸಿದರೆಂದರೆ, ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೇರುವ ಮೂಲಕ ಇತಿಹಾಸವನ್ನೇ ಸೃಷ್ಠಿಸಿಬಿಟ್ಟರು. ಒಂದು ಕಾಲದಲ್ಲಿ ತಮಿಳು ಭಾಷೆಯ ಹೆಸರು ಹೇಳಿಕೊಂಡೇ ಅಧಿಕಾರದ ಗದ್ದುಗೇರಿದ ಕರುಣಾನಿಧಿ, ಅದೇ ತಮಿಳುನಾಡಿನಲ್ಲಿ ಅಧಿಕಾರಕ್ಕಾಗಿ ಹೋರಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಯಿತು.ಕರುಣಾನಿಧಿಯವರು ಆಗಸ್ಟ್ 7,2018ರಂದು ಚೆನ್ನೈಯಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

Enjoyed this article? Stay informed by joining our newsletter!

Comments

You must be logged in to post a comment.

About Author