ಹಬ್ಬಗಳಂದು ಮನೆ ಮುಂದೆ ತೋರಣ ಕಟ್ಟೋದೇಕೆ?

ಮನೆ ಮುಂದೆ ತೋರಣ ಕಟ್ತೀರಾ? ಹಾಗಿದ್ರೆ ವಿಚಾರಗಳನ್ನು ನೀವು ತಿಳ್ಕೋಳೇಬೇಕು

* ಹಸಿರು ಬಣ್ಣವು ಮನಸ್ಸಿಗೆ ಹಿತ ಮತ್ತು ಉಲ್ಲಾಸಕರವಾದದ್ದು, ಇದು ಆತಂಕವನ್ನು ಕಡಿಮೆ  ಮಾಡಲು ಸಹಕಾರಿಯಾಗಿದೆ. ಹಸಿರು ಮಾವಿನ ಎಲೆಗಳು ಫಲವತ್ತಾದ ಬೆಳೆ ಮತ್ತು ಸಾಮಾನ್ಯ ಯೋಗಕ್ಷೇಮವನ್ನು ಸಂಕೇತಿಸುತ್ತವೆ. 

* ಹೆಚ್ಚು ಕಾಲ ತಾಜಾ ಹಸಿರಾಗಿರಬಲ್ಲ ಮಾವಿನ ಎಲೆ ತೋರಣ ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಹಿರಿ ಆಮ್ಲ ಜನಕವನ್ನು ಬಿಡುಗಡೆ ಮಾಡಿ ವಾತಾವರಣವನ್ನು ಶುದ್ಧವಾಗಿಡುತ್ತದೆ

* ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಅರಿಷಿಣ ಹಚ್ಚುತ್ತೆವೆ, ಅರಿಶಿಣವು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣ ಹೊಂದಿದೆ. ತೋರಣವು ಹೊರಗಿನಿಂದ ಬರುವ ಕೀಟಗಳನ್ನು ವಿಚಲಿತಗೊಳಿಸಿದಾಗ ಅರಿಶಿಣವು ಬ್ಯಾಕ್ಟೀರಿಯಾ & ಇತರ ಕೀಟಗಳನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ.

* ಎಲೆಗಳಲ್ಲಿ ಹಲವಾರು ಔಷಧಿ ಗುಣಗಳಿದ್ದು ಸಾಂಕ್ರಾಮಿಕ ರೋಗ ಹರಡದಂತೆ ತಡೆಯಬಲ್ಲವು ಹೀಗಾಗಿಯೇ ನಮ್ಮ ಸನಾತನ ಸಂಸ್ಕೃತಿಯಲ್ಲಿ ಮನೆಯ ಬಾಗಿಲುಗಳಿಗೆ, ದೇವಾಲಯಗಳಿಗೆ, ಸಮಾರಂಭ, ಜಾತ್ರೆ ಆಚರಣೆಗಳ ಪ್ರದೇಶದಲ್ಲಿ ಎಲೆಗಳಿಂದ ಅಲಂಕರಿಸುವುದು ಸಂಪ್ರದಾಯವಾಗಿದೆ.

ನಮ್ಮ ಪ್ರತಿ ಸಂಪ್ರದಾಯದ ಹಿಂದೆ ಮಾನವನ ಒಳಿತನ್ನು ಬಯಸುವ ಅನೇಕ ಸತ್ಯಾಂಶಗಳಿವೆ. ಇದರ ಹಿಂದಿನ ವಿಜ್ಞಾನವನ್ನು ಅರಿತು ಸಂಪ್ರದಾಯವಾಗಿ ಮಾಡಿದ ನಮ್ಮ ಪೂರ್ವಜರನ್ನು ಮೆಚ್ಚಲೆಬೇಕು 

ಕೈಗೆ ಕಾಲಿಗೆ ಏನಾದರೂ ಗಾಯವಾಗಿ ರಕ್ತ ಸ್ರಾವ ಆಗುತ್ತಿದ್ದರೆ ತೋರಣದಿಂದ 1-2 ಮಾವಿನ ಎಲೆ ಸುಟ್ಟು ಅದರ ಪುಡಿಯನ್ನು ಗಾಯಕ್ಕೆ ಹಾಕಿ ಸ್ವಲ್ಪ ಹೊತ್ತು ಹಿಡಿದುಕೊಂಡಿದ್ದರೆ ರಕ್ತಸ್ರಾವ ನಿಲ್ಲುತ್ತದೆ , ಗಾಯವೂ ಕೀವಾಗದ ಹಾಗೆ ಮಾಯುತ್ತದೆ!

ಹಬ್ಬದಲ್ಲಿ ಮಾತ್ರವಲ್ಲ ಮನೆಯಲ್ಲಿ ಹತ್ತು ಜನಕಿಂತ ಜಾಸ್ತಿ ಜನ ಇದ್ದರು ವಾರಕ್ಕೆ ಒಂದು ಸಾರಿ ಕಟ್ಟಬೇಕು, ಮಾವಿನ ಎಲೆಯು ಐದಾರು ದಿನಗಳ ಕಾಲ ಹಚ್ಚ ಹಸಿರಾಗಿರುತ್ತದೆ, ಮರದಿಂದ ಕಿತ್ತು ತಂದ ನಂತರವೂ `ದ್ಯುತಿಸಂಶ್ಲೇಷಣ' ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ಮನೆಯನ್ನು ಸಣ್ಣ ಕಿಟಗಳಿಂದ ಕಾಪಾಡುತ್ತದೆ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author