ತಿಳಿದಿದೆಯೇ ಯುಗಾದಿ ಆಚರಣೆಯ ಹಿಂದಿರುವ ಕಾರಣ..?

ತಿಳಿದಿದೆಯೇ ಯುಗಾದಿ ಆಚರಣೆಯ ಹಿಂದಿರುವ ಕಾರಣ..?

ಚೈತ್ರ ಮಾಸದ ಶುಕ್ಲ ಪಕ್ಷದ ಪಾಂಡ್ಯದಂದು ಬರುವ ಯುಗಾದಿ ಹಬ್ಬನ್ನು ದೇಶದಲ್ಲಿ ಬೇರೆ ಬೇರೆ ಹೆಸರುಗಳಿಂದ ಆಚರಿಸಲಾಗುತ್ತದೆ. ಯುಗಾದಿ ಎಂಬ ಪದವು ಸಂಸ್ಕೃತದ "ಯುಗ" ಮತ್ತು "ಆದಿ" ಎಂಬ ಪದಗಳಿಂದ ಬಂದಿದೆ. ಯುಗ ಎಂದರೆ ಹೊಸ ವರ್ಷ, ಆದಿ ಎಂದರೆ ಪ್ರಾರಂಭ ಎಂಬ ಅರ್ಥವನ್ನು ನೀಡುತ್ತದೆ. ಯುಗಾದಿಯನ್ನು ಚಂದ್ರಮಾನ ಹಾಗೂ ಸೌರಮಾನ ಎಂದು ಎರಡು ಬಗೆಯಲ್ಲಿ ಆಚರಿಸುವ ಪದ್ಧತಿ ಇದೆ. 

ಎಲ್ಲೆಲ್ಲಿ ಚಂದ್ರಮಾನ ಯುಗಾದಿ ಆಚರಣೆ:  ಚಂದ್ರನ ಚಲನೆಯನ್ನ ಗುರುತಿಸಿ ಮಾಡುವ ಪದ್ಧತಿಗೆ ಚಂದ್ರಮಾನ ಯುಗಾದಿ ಎಂದು ಕರೆಯಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ನಲ್ಲಿ ಚಂದ್ರಮಾನ ಯುಗಾದಿ ಆಚರಿಸಲಾಗುತ್ತದೆ. 

ಎಲ್ಲೆಲ್ಲಿ ಸೌರಮಾನ ಉಗಾದಿ ಆಚರಣೆ:  ಸೂರ್ಯನು ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ತಮಿಳುನಾಡು, ಕೇರಳ ಹಾಗೂ ಉತ್ತರ ಭಾರತದ ಹಲವೆಡೆ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಹಲವು ಹೆಸರುಗಳಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.

ಬ್ರಹ್ಮ ಸೃಷ್ಟಿ ಕಾರ್ಯ ಆರಂಭಿಸಿದ ದಿನ: ಪುರಾಣಗಳ ಪ್ರಕಾರ ಈ ದಿನದಂದೇ ಬ್ರಹ್ಮನು ತನ್ನ ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಿದ ಎಂಬ ನಂಬಿಕೆಯಿದೆ. ಇನ್ನು ಅಂದಿನಿಂದಲೇ ಕಾಲಗಣನೆಯೂ ಆರಂಭವಾಯಿತು. ಗಣನೆಗೆ ಅನುಕೂಲವಾಗಲು ವಾರ, ತಿಥಿ, ನಕ್ಷತ್ರ, ಮಾಸ, ಋತುಗಳನ್ನು ಮಾಡಿದ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.

ಸಮೃದ್ಧಿಯ ಸೂಚಕ ಯುಗಾದಿ: ವಸಂತಕಾಲದಲ್ಲಿ ಗಿಡ ಮರಗಳಲ್ಲಿ ಎಲೆಗಳೆಲ್ಲ ಉದರಿ ಹೊಸ ಚಿಗುರು ಪ್ರಾರಂಭವಾಗುತ್ತದೆ. ಎಲ್ಲಿನೋಡಿದರು ಹಸಿರು ಕಂಗೊಳಿಸುತ್ತಿರುತ್ತದೆ. ಅಷ್ಟೇ ಅಲ್ಲದೆ ಪ್ರಕೃತಿ ಹೊಸತನದ ಸಂಕೇತವನ್ನು ತೋರುತ್ತದೆ. ಹಿಂದೂಗಳು ಇದನ್ನು ಹೊಸ ವರ್ಷ ಎಂದು ಪರಿಗಣಿಸುತ್ತಾರೆ. ಅಷ್ಟೇ ಅಲ್ಲದೆ ಈ ಕಾಲದಲ್ಲಿ ಭೌಗೋಳಿಕವಾಗಿಯೂ ಬದಲಾವಣೆಯಾಗುತ್ತದೆ. ಚಂದ್ರನು ಸೂರ್ಯನಿಗೆ ಸ್ವಲ್ಪ ಸಮೀಪ ಚಲಿಸುತ್ತಾನೆ. 

ಐತಿಹಾಸಿಕ ಕಾರಣ: ಇದೇ ದಿನ ರಾಮನು ವಾಲಿಯನ್ನು ಸಂಹರಿಸಿದನು. ಅಷ್ಟೇ ಅಲ್ಲದೆ ದುಷ್ಟ ಪ್ರೌವೃತ್ತಿಯ ರಾಕ್ಷಸರು ಮತ್ತು ರಾವಣನನ್ನು ವಧಿಸಿ ರಾಮನು ಅಯೋಧ್ಯೆಗೆ ಹಿಂದಿರುಗಿದ್ದು ಇದೇ ದಿನ. ಇನ್ನು ದಕ್ಷಿಣ ಭಾರತವನ್ನಾಳಿದ ಶಾಲಿವಾಹನರ ರಾಜ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದು ಸಿಂಹಾಸನರೂಢನಾದನೆಂದು, ಆ ದಿನದಿಂದ ಶಾಲಿವಾಹನರ ಶಕೆ ಪ್ರಾರಂಭವಾಯಿತೆಂದು ಹೇಳಲಾಗುತ್ತದೆ.

ಯುಗಾದಿಯ ಆಚರಣೆ: ಯುಗಾದಿ ಹಬ್ಬ ಹತ್ತಿರವಾಗುತ್ತಿದ್ದಂತೆ ಮನೆಗಳನ್ನು ಶುಚಿಗೊಳೊಸಿ, ಪ್ರತಿಯೊಂದು ವಸ್ತುಗಳನ್ನು ಸ್ವಚ್ಚಗೊಳಿಸಲು ಪ್ರಾರಂಭಿಸುತ್ತಾರೆ. ಹಬ್ಬದ ದಿನದಂದು ಕುಟುಂಬದವರೆಲ್ಲಾ ಸೇರಿ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಹೂಗಳಿಂದ ಮನೆಯನ್ನು ಅಲಂಕರಿಸಿ ಪೂಜೆ ಮಾಡಿ, ಭಕ್ಷ್ಯ ಭೋಜನವನ್ನು ಸವಿಯುತ್ತಾರೆ.

ಎಣ್ಣೆ ಸ್ನಾನ:  ಯುಗಾದಿಯಂದು ಎಣ್ಣೆ ಸ್ನಾನ ಮಾಡುವ ಆಚರಣೆ ಇದೆ. ಬೆಳಗ್ಗೆ ಬೇಗ ಎದ್ದು ದೇಹಕ್ಕೆ ಎಣ್ಣೆ ಹಚ್ಚಿ ಎಣ್ಣೆಯು ಚರ್ಮದೊಳಗೆ ಇಳಿಯುವವರೆಗೂ ಬಿಟ್ಟು ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು. ಇದಕ್ಕೆ ಅಭ್ಯಂಗ ಸ್ನಾನ ಎನ್ನುತ್ತಾರೆ. ಚರ್ಮಕ್ಕೆ ಸ್ನಿಗ್ಧತೆ ಸಿಗಲೆಂದು ಎಣ್ಣೆ ಹಚ್ಚುತ್ತಾರೆ. ಎಣ್ಣೆ ಹಚ್ಚಿದ ನಂತರ ಸ್ನಾನ ಮಾಡುವುದರಿಂದ ಕೂದಲಿಗೆ ಮತ್ತು ಚರ್ಮಕ್ಕೆ ಬೇಕಾದಷ್ಟು ಎಣ್ಣೆಯಂಶ ಸಿಗುತ್ತದೆ. ಆದುದರಿಂದ ಸ್ನಾನದ ಮುಂಚೆ ಎಣ್ಣೆ ಹಚ್ಚಬೇಕು. 

ಸುಖ-ದುಃಖದ ಸಂಕೇತ ಬೇವು-ಬೆಲ್ಲ: ಯುಗಾದಿ ಎಂದರೆ ಎಲ್ಲರಿಗೂ ಮೊದಲು ನೆನಪಾಗುವುದೇ ಬೇವು ಬೆಲ್ಲ. ಜೀವನದ ಏಳು ಬೀಳು ಸೂಚಿವ ಈ ಬೇವು-ಬೆಲ್ಲ ಮಿಶ್ರಣವನ್ನು ಪೂಜೆಯ ನಂತರ ಒಬ್ಬರಿಗೊಬ್ಬರು ಹಂಚಿ ಸೇವಿಸೆವಿಸುತ್ತಾರೆ. ಬೇವು ಕಹಿ, ಇದು ಕಷ್ಟ, ನೋವು, ದು:ಖದ ಸಂಕೇತ. ಬೆಲ್ಲ ಸಿಹಿ, ಇದು ಸಂತೋಷ, ನಲಿವಿನ ಕ್ಷಣಗಳ ಸಂಕೇತವಾಗಿದೆ. ಬೇವು-ಬೆಲ್ಲ ಜೀವನದಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿದೆ.

"ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ, ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಂ''.

ಈ ಶ್ಲೋಕವು "ನನ್ನ ದೇಹವು ವಜ್ರದಂತೆ ಸದೃಢವಾಗಿ ಶಕ್ತಿಶಾಲಿಯಾಗಿ, ಸರ್ವಾರಿಷ್ಟನಾಶ ಇವುಗಳಿಗಾಗಿ ಬೇವು ಬೆಲ್ಲವನ್ನು ಸೇವಿಸುತ್ತಿದ್ದೇನೆ" ಎಂಬ ಅರ್ಥವನ್ನು ನೀಡುತ್ತದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author