ಚಿಂತೆಗಳನ್ನು ಮಾಯ ಮಾಡುವ ಚಿಂತಾಮಣಿ ವಿನಾಯಕನ ಬಗ್ಗೆ ನಿಮಗೆ ಗೊತ್ತ?

ಥೆವೋರ್‍ನ ಶ್ರೀ ಚಿಂತಾಮಣಿ ಅಷ್ಟವಿನಾಯಕ ಕ್ಷೇತ್ರದ ಇತಿಹಾಸವೇನು?

ಥೆವೋರ್‍ನ ಶ್ರೀ ಚಿಂತಾಮಣಿ ಅಷ್ಟವಿನಾಯಕ ಕ್ಷೇತ್ರದ ಇತಿಹಾಸವೇನು?  ಚಂಚಲ ಮನಸ್ಸನ್ನು ಪ್ರಶಾಂತಗೊಳಿಸಲು ಬ್ರಹ್ಮನೇ ಇಲ್ಲಿ ತಪ್ಪಸ್ಸು ಮಾಡಿದನಂತೆ..!

ಪುಣೆ ಜಿಲ್ಲೆಯ ಹವೇಲಿ ತಾಲೂಕಿನಲ್ಲಿ ಈ ಕ್ಷೇತ್ರವಿದೆ. ತನ್ನ ಚಂಚಲ ಮನಸ್ಸನ್ನು ಪ್ರಶಾಂತಗೊಳಿಸಲು ಬ್ರಹ್ಮ ದೇವರು, ಇಲ್ಲಿ ತಪಸ್ಸನ್ನು ಮಾಡಿದರಂತೆ. ಚಿಂತೆಗಳು ಮಾಯವಾದದ್ದರಿಂದ, ಮೂರ್ತಿಗೆ ಚಿಂತಾಮಣಿ ಎಂಬ ಹೆಸರು ಬಂತು. ಈ ಜಾಗವು ತೇವೂರ್ ಕುದುರೆ ಲಾಯಗಳ ಪ್ರದೇಶವೆನ್ನುತ್ತಾರೆ.

ಇನ್ನೊಂದು ಐತಿಹ್ಯದ ಪ್ರಕಾರ ಪೌರಾಣಿಕ ಕಥನವೊಂದು ಹೀಗಿದೆ. ತ್ರೇತಾಯುಗದಲ್ಲಿ ರಾಜ ಅಭಿಜೀತ ಮತ್ತು ರಾಣಿ ಗುಣವತಿ ಎಂಬ ರಾಜ ದಂಪತಿಗಳಿಗೆ ವಿವಾಹವಾಗಿ ಅನೇಕ ವರ್ಷಗಳ ಕಾಲ ಸಂತಾನವಿಲ್ಲದೆ ಸಂಕಟಕ್ಕೀಡಾಗಿದ್ದರು. 

ಮುಂದೆ ಈ ದಂಪತಿಗಳ ವೈಶಂಪಾಯನ ಮಹರ್ಷಿಗಳ ಸೇವೆಗೆ ಪ್ರತಿಫಲವಾಗಿ ಗಂಡು ಮಗುವಾಗಿ, ಆ ಮಗುವಿಗೆ "ಗಣ" ಎಂದು ಹೆಸರಿಡಲಾಯಿತು. ಮುಂದೆ ಅ ಬಾಲಕನು ಬೆಳೆದು ದೊಡ್ಡವನಾಗಿ ತಂದೆಯಿಂದ ಬಂದ ರಾಜ್ಯವನಾಳುತ್ತ ಗಣರಾಜನೆಂದೆ ಖ್ಯಾತನಾಗಿರಲು, ಒಮ್ಮೆ ರಾಜ ಕಾರ್ಯಾರ್ಥವಾಗಿ (ಬೇಟೆಗಾಗಿ) ಅಡವಿಯಲ್ಲಿ ಸಂಚರಿಸುತ್ತಿರಬೇಕಾದರೆ ಕಪಿಲ ಮಹರ್ಷಿಗಳ ಆಶ್ರಮವು ಈ ಗಣರಾಜನಿಗೆ ಎದುರಾಯಿತು. 

ಆಗ ತನ್ನ ಸೇನಾ ಪರಿವಾರ ಸಮೇತನಾಗಿ ಗಣರಾಜನು ಕಪಿಲ ಮಹರ್ಷಿಗಳ ಆಶ್ರಮದಲ್ಲಿ ಕೆಲ ಕಾಲ ವಿಶ್ರಮಿಸಲು, ಬಡ ಸಾಧುವಾದ ಕಪಿಲ ಮಹರ್ಷಿಗಳು ರಾಜನಿಗೆ ತಕ್ಕ ಮರ್ಯಾದೆಯಿಂದ ಅಲ್ಪ ಸಮಯದಲ್ಲಿ ಭಾರಿ ಭೋಜನ ಕೂಟವನ್ನು ಏರ್ಪಡಿಸಿ, ರಾಜ ಪರಿವಾರಕ್ಕೆ ಯಾವ ವಿಷಯದಲ್ಲೂ ಕುಂದು ಉಂಟಾಗದಂತೆ ಆತಿಥ್ಯ ನೀಡುತ್ತಿರಲು ಗಣರಾಜನಿಗೆ ಅನುಮಾನ ಆರಂಭವಾಯಿತು. 

ಈ ಸಾಧುವಾದರು ಕಾಡು ಮೇಡು ಅಲೆದು ಯಜ್ಞಯಾಗದಿಗಳಲ್ಲೇ ತಮ್ಮ ಜೀವನದ ಬಹು ಕಾಲ ಕಳೆಯುವಂತಹವರು, ಇಂತಹವರು ಅರಮನೆಯು ನಾಚುವಂತಹ, ರಾಜ ನಳತಜ್ಞರು ತಿಳಿಯದ ಇಂತಹ ಉತ್ಕøಷ್ಟ ಭೋಜನ ಕೂಟ ಏರ್ಪಡಿಸಲು ಸಾಧ್ಯವಾಗಿದ್ದು ಹೇಗೆ? ಎಂದು ಅದರ ಹಿಂದಿನ ರಹಸ್ಯ ಕೆದಕಲು ಮುಂದಾದಾಗ ಅವನಿಗೆ ತಿಳಿಯುವುದು ಇದೆಲ್ಲ ಆ ಕಪಿಲ ಮಹರ್ಷಿಗಳಲ್ಲಿರುವ `ಚಿಂತಾಮಣಿ' ಎಂಬ ಮಣಿಯ ಪ್ರಭಾವದಿಂದ ಎಂದು. ಕಪಿಲ ಮಹರ್ಷಿಗಳಿಗೆ ಯಾವ ಸಮಯದಲ್ಲೂ ಯಾವ ಕಾರ್ಯಗಳಿಗೂ ತೊಡಕಾಗದಿರಲಿ ಎಂದು ಸ್ವತಃ ದೇವೆಂದ್ರನೆ ಆ ಮಣಿಯನ್ನು ಅವರಿಗೆ ಕೊಟ್ಟಿರುತ್ತಾನೆ. 

ಇದರ ಸಂಪೂರ್ಣ ಹಿನ್ನೆಲೆಯರಿತ ಗಣರಾಜನು ಆ ಮಣಿಯು ತನಗೆ ಬೇಕೆಂದು, ಹಾಗೂ ರಾಜ್ಯದ ಗಡಿಯೊಳಗೆ ಯಾವುದೇ ವಸ್ತುವಿದ್ದರು ಅವೆಲ್ಲವೂ ರಾಜನಿಗೆ ಸೇರಿದ್ದವೆಂದು ಮುನಿಗಳೊಂದಿಗೆ ವಾಗ್ವಾದ ಮಾಡುತ್ತಾನೆ. ಮುನಿಗಳು ಆ ಅಮೂಲ್ಯವಾದ ಮಣಿಯನ್ನು ಕೊಡಲು ನಿರಾಕರಿಸಿದಾಗ ಗಣರಾಜನು ಬಲವಂತವಾಗಿ ಆ ಮಣಿಯನ್ನು ಮುನಿಗಳಿಂದ ಕಿತ್ತೊಯ್ಯುತ್ತಾನೆ.

ಸಾಧು ಸ್ವಭಾವದವರಾದ ಕಪಿಲ ಮಹರ್ಷಿಗಳು ಈ ಘಟನೆಯಿಂದ ಬಹಳವಾಗಿ ನೊಂದುಕೊಂಡರೂ ಗಣರಾಜನಿಗೆ ಶಾಪ ಕೊಡಲಿಲ್ಲ. ಬದಲಾಗಿ ದೇವಿ ದುರ್ಗೆಯಲ್ಲಿ ತಮಗೊದಗಿದ ಆಪತ್ತನ್ನು ತೋಡಿಕೊಳ್ಳಲು, ದೇವಿ ದುರ್ಗೆ ಕಪಿಲರಿಗೆ ಗಣಪತಿಯನ್ನು ಆರಾಧಿಸುವಂತೆ ಸಲಹೆ ಕೊಡುತ್ತಾಳೆ. 

ದುರ್ಗೆಯ ಸಲಹೆಯ ಮೇರೆಗೆ ಗಣಪತಿಯನ್ನು ಆರಾಧಿಸಿದ ಕಪಿಲರು ಅವನ ಕಟಾಕ್ಷವನ್ನು ಪಡೆಯುವಲ್ಲಿ ಸಫಲರಾಗುತ್ತಾರೆ. ಗಣಪತಿಯು ಕಪಿಲರಲ್ಲಿ ಚಿಂತಾಮಣಿಯನ್ನು ತಾನು ಮರಳಿ ತರುವುದಾಗಿ ಭರವಸೆ ಕೊಡುತ್ತಾನೆ. 

ಆಗ ಗಣಪತಿಯು ಗಣರಾಜನೊಂದಿಗೆ ನೇರ ಯುದ್ಧಕ್ಕಿಳಿಯುತ್ತಾನೆ. ಈ ಕಾಳಗದಲ್ಲಿ ಗಣಪತಿಯು ಗಣರಾಜನನ್ನು ಒಂದು ಕದಂಬ ವೃಕ್ಷದ ಕೆಳಗೆ ತನ್ನ ಪರಶುವಿನಿಂದ ಸಂಹರಿಸುತ್ತಾನೆ. ಚಿಂತಾಮಣಿಯನ್ನು ಕಪಿಲರಿಗೆ ಮರಳಿಸಿದಾಗ ಕಪಿಲರು ಅದನ್ನು ತಾವು ಇರಿಸಿಕೊಳ್ಳದೆ ಗಣಪತಿಯ ಕೊರಳಲ್ಲಿಯೇ ಇಟ್ಟು ಪೂಜಿಸುತ್ತಾರೆ. ಅಂದಿನಿಂದ ಆ ಕ್ಷೇತ್ರ ಕದಂಬ ತೀರ್ಥ ಅಥವಾ ಕದಂಬ ಪುರಿ ಅಥವಾ ಚಿಂತಾಮಣಿ ಎಂದೇ ಪ್ರಸಿದ್ಧವಾಗಿದೆ.

ಈಗಿನ ದೇವಸ್ಥಾನದ ಗರ್ಭಗುಡಿಯನ್ನು ಶ್ರೀ ಮೊರೆಯ ಗೋಸಾವಿ ಅವರ ವಂಶಸ್ಥರಾದ ಧರಣೀಧರ್ ಮಹಾರಾಜ್ ದೇವ್ ಎಂಬುವರು ಕಟ್ಟಿಸಿರಬಹುದು ಎಂದು ಊಹಿಸಲಾಗಿದೆ. ಸುಮಾರು ಇದರ ನಿರ್ಮಾಣದ ನೂರು ವರ್ಷಗಳ ನಂತರ ಶ್ರೀಮಂತ ಮಾಧವರಾವ್ (1) ಪೇಶ್ವೆ ದೇವಸ್ಥಾನದ ಹೊರಭಾಗದ ಕಟ್ಟಿಗೆಯ ಪಡಸಾಲೆ ನಿರ್ಮಾಣ ಮಾಡಿದ್ದಾರೆ.

ಥೆವೋರ್‍ನ ಈ ಚಿಂತಾಮಣಿಯೇ ಮರಾಠ ದೊರೆಗಳಲ್ಲಿ ಪ್ರಸಿದ್ಧನಾಗಿದ್ದ ಮಾಧವರಾವ್(1) ಪೇಶ್ವೆಯ ಮನೆ ದೈವವಾಗಿತ್ತು. ಕ್ಷಯ ರೋಗದಿಂದ ಬಳಲುತ್ತಿದ್ದ ಮಾಧವರಾವ್ 1) ಪೇಶ್ವೆ ಇದೇ ಮಂದಿರದಲ್ಲಿ 18 ನವೆಂಬರ್ 1772 ರಲ್ಲಿ ದೇಹತ್ಯಾಗ ಮಾಡಿರಬಹುದು ಎಂದು ಇತಿಹಾಸ ತಜ್ಞರು ಊಹಿಸಿದ್ದಾರೆ.

ಥೆವೋರ್‍ನ ಶ್ರೀ ಚಿಂತಾಮಣಿ ಅಷ್ಟವಿನಾಯಕ ಕ್ಷೇತ್ರದ ಇತಿಹಾಸವೇನು?  ಚಂಚಲ ಮನಸ್ಸನ್ನು ಪ್ರಶಾಂತಗೊಳಿಸಲು ಬ್ರಹ್ಮನೇ ಇಲ್ಲಿ ತಪ್ಪಸ್ಸು ಮಾಡಿದನಂತೆ..!

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author