ದುರ್ಗೆಯ ಆರಾಧನೆಗೆ ಮೀಸಲು ಮಾಸಿಕ ದುರ್ಗಾಷ್ಟಮಿ

ದುರ್ಗಾಮಾತೆಯ ಆರಾಧನೆಗೆ ಶುಭ ದಿನ ಮಾಸಿಕ ದುರ್ಗಾಷ್ಟಮಿ

ಹಿಂದೂ ಧರ್ಮದಲ್ಲಿ ಒಂದೊಂದು ದಿನವೂ ವಿಷತೆಗಳಿಂದ ಕೂಡಿರುತ್ತವೇ.. ಅಷ್ಟೇ ಅಲ್ಲ ತಿಂಗಳಿಗೊಂದು ದಿನವಾದರೂ ಯಾವುದಾದರು ದೇವತೆಯ ಆರಾಧನೆಗಾಗಿಯೇ ಮೀಸಲಿರುತ್ತದೆ. ಅದರಂತೆಯೇ ಮಾಸಿಕ ದುರ್ಗಾ ಅಷ್ಟಮಿ. ಪ್ರತಿ ತಿಂಗಳು ಶುಕ್ಲ ಪಕ್ಷದ ಅಷ್ಟಮಿಯನ್ನು ದುರ್ಗಾ ಅಷ್ಟಮಿಯೆಂದು ಕರೆಯಲಾಗುತ್ತದೆ. ಈ ದಿನದಂದು ಶಕ್ತಿ ದೇವತೆ ತಾಯಿ ದುರ್ಗೆಗೆ ಪೂಜೆ ಪುನಸ್ಕಾರ ಮಾಡುವ ಮೂಲಕ ಆರಾಧಿಸಲಾಗುತ್ತದೆ.

ಇನ್ನು ಪ್ರತಿ ತಿಂಗಳು ಬರುವ ಶುಕ್ಲ ಪಕ್ಷದ ಅಷ್ಟಮಿಯನ್ನು ದುರ್ಗ ಅಷ್ಟಮಿ ಎಂದು ಕರೆದರೆ, ನವರಾತ್ರಿಯ ಸಮಯದಲ್ಲಿ ಬರುವ ಅಷ್ಟಮಿಯನ್ನು ಮಹಾಷ್ಟಮಿ ಎಂದು ಕರೆಯಲಾಗುತ್ತದೆ. 

ಸಂಸ್ಕೃತ ದಲ್ಲಿ 'ದುರ್ಗಾ' ಎಂಬ ಪದಕ್ಕೆ 'ಅಜೇಯ' ಎಂಬ ಅರ್ಥ ಬರುತ್ತದೆ. 'ಅಷ್ಟಮಿ' ಎಂಬ ಪದಕ್ಕೆ 'ಎಂಟು ದಿನ' ದಿನ ಎಂಬ ಅರ್ಥ ಬರುತ್ತದೆ. ಹಿಂದೂ ಪರಾಣಗಳ ಪ್ರಕಾರ ದುರ್ಗಾ ಮಾತೆಯು ಮಹಿಷಾಸುರ ರಾಕ್ಷಸನನ್ನು ಸಂಹರಿಸಿದ ದಿನವನ್ನು ವಿಜಯದ ಸಂಕೇತಾವಗಿ ಆಚರಿಸಲಾಗುತ್ತದೆ.

ಮಾತೆ ದುರ್ಗೆಯ ಆರಾಧನೆ ಹೇಗೆ..?: ಉತ್ತರ ಭಾರತದಲ್ಲಿ ದುರ್ಗೆಯ ಆರಾಧನೆ ಹೆಚ್ಚಾಗಿ ಕಂಡುಬರುತ್ತದೆ. ಇನ್ನು ಆಂಧ್ರ ಪ್ರದೇಶದಲ್ಲಿ ಈ ದಿನವನ್ನು ಬತುಕಮ್ಮ ಪಂಡಗ ಎಂದು ಆಚರಿಸುತ್ತಾರೆ. ಈ ದಿನದಂದು ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಭಕ್ತರು ಕಟ್ಟುನಿಟ್ಟಾದ ಉಪವಾಸ ಮಾಡಿ, ದುರ್ಗೆಯ ಮಂತ್ರ ಪಠಣ ಮಾಡುತ್ತಾರೆ. ದುರ್ಗಾ ಮಾತೆಯ ಕಥೆಗಳನ್ನು ಓದುವ ಮೂಲಕ, ಮನದ ಆಕಾಂಕ್ಷೆಗಳು ಈಡೇರಲೆಂದು ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ದಿನ ದೇವಿಗೆ ಇಷ್ಟವಾದ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಅರ್ಪಿಸುತ್ತಾರೆ. ಹಿರಿಯರು, ಗರ್ಭಿಣಿಯರು, ಮಕ್ಕಳು, ಆರೋಗ್ಯ ಸಮಸ್ಯೆ ಇರುವವರು ಉಪವಾಸ ಇರಲೇ ಬೇಕೆಂಬ ಕಡ್ಡಾಯವಿಲ್ಲ.

ದುರ್ಗ ಅಷ್ಟಮಿಯ ವ್ರತಾಚರಣೆಯಲ್ಲಿ ಕುಮಾರಿ ಪೂಜೆ ಮಾಡುತ್ತಾರೆ. ಅಂದರೆ 6ರಿಂದ 12 ವರ್ಷದೊಳಗಿನ ಹೆಣ್ಣುಮಕ್ಕಳನ್ನು ಕನ್ಯಾ ರೂಪವಾಗಿ ಪೂಜಿಸುವ ಆಚರಣೆಯೂ ಕೆಲವೆಡೆ ಕಂಡು ಬರುತ್ತದೆ. 

ಸಾಮಾನ್ಯವಾಗಿ ಈ ದಿನದಂದು ದುರ್ಗೆಯ ವ್ರತಾಚರಣೆ ಮಾಡುವವರು ಮದ್ಯ ಸೇವನೆ ಹಾಗೂ ಧೂಮಪಾನವನ್ನು ಮಾಡುವುದಿಲ್ಲ. ಸಂಜೆ ವೇಳೆ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಮನೆಯ ಹತ್ತಿರವಿರುವ ದೇವಿಯ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆಗಳಲ್ಲಿ ಭಾಗಿಯಾಗಿ ತಾಯಿಯ ದರ್ಶನ ಪಡೆಯುತ್ತಾರೆ. ಉಪವಾಸವಿದ್ದ ಭಕ್ತರು ಈ ದಿನದಂದು ನೆಲದ ಮೇಲೆಯೇ ಮಲಗುತ್ತಾರೆ. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author