ಕೇರಳದ ಇತಿಹಾಸ ಪ್ರಸಿದ್ಧ ‘ತ್ರಿಶೂರ್ ಪೂರಂ’ ಬಗ್ಗೆ ನಿಮಗೆಷ್ಟು ಗೊತ್ತು..?

ದೇವರನಾಡಿನ ಅತಿ ದೊಡ್ಡ ಉತ್ಸವ ‘ತ್ರಿಶೂರ್ ಪೂರಂ’..

ದೇವರ ನಾಡು ಎಂದೇ ಪ್ರಸಿದ್ಧಿಪಡೆದಿರುವ ಕೇರಳದಲ್ಲಿ ಆನೇಕ ಉತ್ಸವಗಳು, ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತಲೇ ಇರುತ್ತವೆ. ಇವುಗಳಲ್ಲಿ ಅತಿ ದೊಡ್ಡ ಉತ್ಸವ ಎಂದೇ ಕರೆಯಲ್ಪಡುವ ತ್ರಿಶೂರ್ ಉತ್ಸವವೂ ಒಂದು. ಇದು ಕೇರಳದ ತ್ರಿಶೂರ್ ನಲ್ಲಿ ನಡೆಯುವ ಹಿಂದೂಗಳ ಅತಿ ದೊಡ್ಡ ಹಾಗೂ ಪ್ರಮುಖ ಮಹೋತ್ಸವವಾಗಿದೆ. ಅದ್ಧೂರಿಯಾಗಿ ಸಂಭ್ರಮದಿಂದ ಆಚರಿಸು ತ್ರಿಶೂರ್ ಪೂರಂ ಪ್ರತಿವರ್ಷ ಚೈತ್ರ ಮಾಸ ಪೂರ್ವ ನಕ್ಷತ್ರದಲ್ಲಿ ಬರುತ್ತದೆ. ಜಾತಿ ಧರ್ಮಗಳ ಬೇಧವಿಲ್ಲದೆ 7 ದಿನಗಳ ಕಾಲನಡೆಯುವ ಈ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗಿಯಾಗುತ್ತಾರೆ..

ತ್ರಿಶೂರಿನ ವಡಕ್ಕುನ್ನಾಥನ್ ದೇವಾಲಯದ ಸುತ್ತಲಿನ ಮೈದಾನದಲ್ಲಿ ಬಹಳ ವಿಜೃಂಭಣೆಯಿಂದ ನಡೆಯುವ ಉತ್ಸವವನ್ನು ನೋಡಲು ದೇಶ ವಿದೇಶಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ವಡಕ್ಕುಂನಾಥನ್ ದೇವಸ್ಥಾನವು ಪವಿತ್ರ ಹಿಂದೂ ವೈಷ್ಣವ ದೇವಾಲಯಗಳಲ್ಲಿ ಒಂದಾಗಿದೆ  ಪ್ರತಿ ವರ್ಷವೂ ತಪ್ಪದೇ ಅದ್ಧೂರಿಯಾಗಿ ಆಚರಿಸುವ ಈ ಉತ್ಸವದಲ್ಲಿ ತ್ರಿಶೂರಿನ ಪ್ರಮುಖ 10 ದೇವಸ್ಥಾನಗಳು  ಮುಖ್ಯ ಪಾತ್ರವಹಿಸುತ್ತವೆ. 

ತ್ರಿಶೂರ್ ಪೂರಂನ ಹಿನ್ನಲೆ: ರಾಜ ರಾಮವರ್ಮನ ಕಾಲದಲ್ಲಿ ಅಂದರೆ ತ್ರಿಶೂರ್ ಪೂರಂ ಆಚರಣೆಗೂ ಮುನ್ನವೇ ಅರಟ್ಟು ಪೂರಂ ಎಂಬ ಉತ್ಸವ ಅದ್ಧೂರಿಯಾಗಿ ನಡೆಯುತ್ತಿತ್ತು. ಸುತ್ತಲಿನ ಹಲವು ಊರುಗಳ ದೇವರುಗಳನ್ನು  ಈ ಉತ್ಸವದಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಒಮ್ಮೆ ಈ ಉತ್ಸವದ ವೇಳೆ ಅತಿಯಾದ ಮಳೆ ಗಾಳಿ ಸುರಿಯುತ್ತಿದ್ದರಿಂದ ಸುತ್ತಲಿನ ಕೆಲ ಊರುಗಳು ಉತ್ಸವದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಯಾವ ಊರುಗಳು ಈ ಯತ್ಸವದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲವೋ ಆ ಊರುಗಳನ್ನು ಉತ್ಸವಕ್ಕೆ ಪ್ರವೇಶಿಸದಂತೆ ತಡೆಹಿಡಿಯಲಾಗುತ್ತದೆ.

ಇದರಿಂದ ಮುಜುಗರಕ್ಕೊಳಗಾದ ಸಕ್ತನ್ ತಂಬುರನ್ ಎಂಬ ರಾಜ ವಡಕ್ಕುನಾಥನ್ ಕ್ಷೇತ್ರದಲ್ಲಿ ಚೈತ್ರ ಮಾಸ ಪೂರ್ವ ನಕ್ಷತ್ರದಲ್ಲಿ ತ್ರಿಶೂರ್ ಪೂರಂ  ಪ್ರರಾಂಭಿಸುತ್ತಾನೆ. ಈ ಉತ್ಸವದಲ್ಲಿ ಭಾಗಿಯಾಗಲು ಇತರೆ ದೇವಾಲಯಗಳಿಗು ಆಹ್ವಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ

ಏಳು ದಿನಗಳ ಕಾಲ ನಡೆಯುವ ಈ ಉತ್ಸವವು  ಧ್ವಜಾರೋಹಣದಿಂದ  ಪ್ರಾರಂಭವಾಗುತ್ತದೆ.  ಅಷ್ಟೇ ಅಲ್ಲ ಈ ಉತ್ಸವದ ಸಮಯದಲ್ಲಿ ಮಾತ್ರವೇ ವಡಕ್ಕುನಾಥನ್ ಕ್ಷೇತ್ರದ ದಕ್ಷಿಣದ ಗೋಪುರವನ್ನು ತೆರೆಯಾಲಾಗುತ್ತದೆ.

ಅಲಂಕೃತ ಆನೆಗಳ: ಈ ಉತ್ಸವದ ಪ್ರಮುಖ ಆಕರ್ಶಣೆ ಎಂದರೆ ಅಲಂಕೃತ ಆನೆಗಳು. 50ಕ್ಕೂ ಹೆಚ್ಚು ಆನೆಗಳು ಉತ್ಸವದಲ್ಲಿ ಭಾಗಿಯಾಗುತ್ತವೆ. ಆನೆಗಳಿಗೆ ಚಿನ್ನದ ಶಿರಸ್ತ್ರಾಣ ಹಾಕಿ, ಘಂಟೆಗಳಿಂದ ಅಲಂಕರಿಸಲಾಗುತ್ತದೆ. ಪರಮೆಕಾವೂ - ತಿರುವಂಬಾಡಿ ದೇವಾಲಯ ಗುಂಪುಗಳು ಸ್ಪರ್ಧಾತ್ಮಕವಾಗಿ ಉತ್ತರದ್ವಾರ ಮತ್ತು ದಕ್ಷಿಣದ್ವಾರಗಳ ಮುಂದೆ ಮೇಳವನ್ನು ನುಡಿಸುತ್ತಾರೆ. ಅಷ್ಟೇ ಅಲ್ಲದೆ ದೇವರುಗಳನ್ನು ಪಲ್ಲಕ್ಕಿ ಮೇಲೆ ಕೂರಿಸಿ ಆನೆಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನೂ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ 200ಕ್ಕೂ ಹೆಚ್ಚು ಜನ ಕಲಾವಿದರು ಭಾಗವಹಿಸುತ್ತಾರೆ. 

ಈ ಉತ್ಸವದ ಮತ್ತೊಂದು ಆಕರ್ಶಣೆ ಎಂದರೆ ಪಾಟಾಕಿಗಳು. ಹೌದು ಸರಿಯಾಗಿ ಸಂಜೆ 7-15ರ ಸುಮಾರಿಗೆ ಸ್ವರಾಜ್ ವೃತ್ತದಲ್ಲಿ ಪಟಾಕಿಗಳನ್ನು ಹಚ್ಚಲು ಪ್ರಾರಂಭಿಸಲಾಗುತ್ತದೆ. ಉತ್ಸವದ ನಾಲ್ಕು ದಿನಗಳಕಾಲ ದೊಡ್ಡ ದೊಡ್ಡ ಪಟಾಕಿಗಳನ್ನು ಸಿಡಿಸಲಾಗುತ್ತದೆ.

ಉತ್ಸವದ ಏಳನೆ ದಿನ ಅಂದರೆ ಕೊನೆ ದಿನ ಮದ್ಯಾಹ್ನ ಪಟಾಕಿಗಳನ್ನು ಸಿಡಿಸುತ್ತಾ ದೇವರುಗಳನ್ನು ಭಕ್ತಿ ಭಾವದಿಂದ ಅವರ ಸ್ವಸ್ಥಾನಕ್ಕೆ ಕಳುಹಿಸಿಕೊಡಲಾಗುತ್ತಾದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author