ದೇವರ ಪೂಜೆಯಲ್ಲಿ ದೀಪವನ್ನು ಯಾವ ದಿಕ್ಕಿಗೆ ಹಚ್ಚಬೇಕು ಗೊತ್ತಾ..?

ದೇವರ ಪೂಜೆಯಲ್ಲಿ ದೀಪವನ್ನು ಯಾವ ದಿಕ್ಕಿಗೆ ಹಚ್ಚಬೇಕು ಗೊತ್ತಾ..?

lamp for poojasource and pic credit: https://divineinfoguru.com

ದೇವರ ಪೂಜೆಯಲ್ಲಿ ಪ್ರತಿಯೊಂದು ಕಾರ್ಯವನ್ನು ಮಾಡುವಾಗಲೂ ಎಚ್ಚರಿಕೆಯಿಂದ ಇರಬೇಕು. ಯಾವ ದೇವರಿಗೆ ಏನನ್ನು ಅರ್ಪಿಸಬೇಕು, ಏನನ್ನು ಅರ್ಪಿಸಬಾರದು ಎಂಬುದರ ಬಗ್ಗೆ ತಿಳಿದಿರಬೇಕು. ಕೆಲವು ವಸ್ತುಗಳು ದೇವರ ಆಶೀರ್ವಾದವನ್ನು ಹೊಂದಿದ್ದರೆ, ಇನ್ನು ಕೆಲವು ದೇವರ ಶಾಪಕ್ಕೆ ಗುರಿಯಾಗಿರುತ್ತದೆ. ಅದೇ ರೀತಿ ದೇವರಿಗೆ ದೇಪ ಹಚ್ಚುವಾಗಲೂ ನಾವು ಹಲವು ವಿಚಾರಗಳನ್ನು ಗಮನಿಸಬೇಕಾಗುತ್ತದೆ. ದೇವರ ಮನೆಯಲ್ಲಿ ಇಂಥಹಾ ದಿಕ್ಕಿಗೆ ಮಾತ್ರ ದೀಪ ಹಚ್ಚಿದರೆ ಶುಭ, ದೀಪದ ಬತ್ತಿ ಇಂಥಹಾ ದಿಕ್ಕಿಗೆ ಮುಖ ಮಾಡಿದರೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ ಎಂಬ ಪದ್ಧತಿಯಿದೆ. 

lamp for poojasource and pic credit: Times of India

ಯಾವ ದಿಕ್ಕಿಗೆ ಮುಖ ಮಾಡಿ ದೀಪ ಹಚ್ಚಬೇಕು..?

ದೇವರ ಕೋಣೆಯಲ್ಲಿ ದೀಪವನ್ನು ಪೂರ್ವ ದಿಕ್ಕಿನಲ್ಲಿ ಮುಖ ಮಾಡಿ ಇಟ್ಟರೆಮನೆಯೊಳಗಡೆ ಐಶ್ವರ್ಯ ಸುಖ ಶಾಂತಿ ನೆಮ್ಮದಿ ಶಾಶ್ವತವಾಗಿ ನೆಲೆಸುತ್ತದೆಎಂಬ ನಂಬಿಕೆಯಿದೆ.ಆ ರೀತಿ ರೀತಿ ದೀಪದ ಬತ್ತಿಯನ್ನು ಇಡುವುದರಿಂದ ಮನೆಗೆ ಅದೃಷ್ಟಲಭಿಸುತ್ತದೆ ಎಂದು ಸಹ ಹೇಳಲಾಗುತ್ತದೆ. ಪಶ್ಚಿಮ ದಿಕ್ಕಿಗೆ ದೀಪದ ಮುಖವಿದ್ದರೆ ಮನೆಯಲ್ಲಿ ಶಾಂತಿ ಸುಖ ನೆಮ್ಮದಿ ಶಾಶ್ವತವಾಗಿ ನೆಲೆಸಿರುತ್ತದೆ. ಉತ್ತರದಿಕ್ಕಿನಲ್ಲಿ ಇಟ್ಟರೆ ಕೀರ್ತಿ ಪ್ರತಿಷ್ಠೆಗಳು ಬಂದು ಒದಗುತ್ತದೆ ಎಂಬ ನಂಬಿಕೆಯಿದೆ.

lamp for poojasource and pic credit: google.com

ಆದರೆ ದಕ್ಷಿಣ ದಿಕ್ಕಿಗೆಯಾವತ್ತೂ ದೀಪದ ಮುಖವನ್ನು ಇಡಬಾರದು ಎಂದು ಹೇಳಲಾಗುತ್ತದೆ. ಈ ರೀತಿ ಇಟ್ಟರೆ ದೇವರಿಗೆ ಸಲ್ಲುವುದಿಲ್ಲ ಬದಲಾಗಿ ಪಿತೃಗಳಿಗೆ ದೀಪವನ್ನು ಇಟ್ಟ ಹಾಗೆ ಆಗುತ್ತದೆ. ಹಾಗಾಗಿ ಯಾವಾಗಲೂ ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಇಡಬಾರದುಎಂದು ಹೇಳುತ್ತಾರೆ. ಪಿತೃಗಳ ಹೆಸರಿನಲ್ಲಿ ಏನಾದರೂ ಪೂಜೆ ಮಾಡಿಸುತ್ತಿದ್ದರೆ ಅಂತಹ ಸಮಯದಲ್ಲಿ ಮಾತ್ರ ದಕ್ಷಿಣ ದಿಕ್ಕಿಗೆ ದೀಪದ ಬತ್ತಿಯನ್ನು ಮುಖ ಮಾಡಿಇಡಬಹುದಾಗಿದೆ.

ದೀಪದ ಬತ್ತಿ ಯಾವ ರೀತಿ ಇದ್ದರೆ ಶುಭ-ಅಶುಭ..?

ದೇವರಿಗೆ ಹಚ್ಚುವ ದೀಪದ ಬತ್ತಿಯು ಕೊಳೆಯಿಂದ ಕೂಡಿದ್ದರೆಮನೆ ಮಾಲೀಕ ಅನಾವಶ್ಯಕವಾದ ಯೋಚನೆಗಳಿಂದ ನೆಮ್ಮದಿ ಕಳೆದುಕೊಳ್ಳುತ್ತಾನೆ. ದೇವರಿಗೆ ಹಚ್ಚುವ ದೀಪದ ಬತ್ತಿಯು ಕಪ್ಪು ಆಗಿದ್ದರೆ, ಜೀವನದಲ್ಲಿ ಹಲವರು ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಾಗೆಯೇ ದೀಪದ ಬತ್ತಿಯು ತುಂಬಾ ಬೆಳ್ಳಗೆ ಇದ್ದರೆ ಜೀವನದಲ್ಲಿ ಎಲ್ಲ ಕಾರ್ಯಗಳು ಕೂಡಾ ಸುಸೂತ್ರವಾಗಿ ನಡೆಯುತ್ತದೆ. ದೀಪದ ಬತ್ತಿಯು ಗಂಟುಗಳಾಗಿದ್ದರೆ ಜೀವನದಲ್ಲಿ ತುಂಬಾ ಕಷ್ಟಗಳು ಬರುತ್ತವೆ.ಸಮಸ್ಯೆಗಳು ಬಗೆಹರಿಸಲಾಗದೆ ಸಿಕ್ಕು ಸಿಕ್ಕಾಗುತ್ತವೆ ಎಂದರ್ಥ.

light for poojasource and pic credit:https://www.ynotpics.com

ಲಕ್ಷ್ಮೀ ಪೂಜೆಗೆ ದೀಪದಲ್ಲಿನ ಬತ್ತಿ ಕೆಂಪು ಬಣ್ಣದಲ್ಲಿರಬೇಕುಎಂದು ಹೇಳಲಾಗುತ್ತದೆ.ಕೆಂಪು ಬಣ್ಣವು ಲಕ್ಷ್ಮಿ ಪೂಜೆಗೆ ಹೆಚ್ಚು ಶುಭವಾಗಿದೆ. ಆದ್ದರಿಂದ, ದೇವಿಗೆ ಕೆಂಪು ಬಣ್ಣದ ದೀಪವನ್ನು ಹಚ್ಚಿ, ನಂತರ ದೀಪವನ್ನು ಬಲಗಡೆಯಲ್ಲಿ ಇಡಬೇಕು. ಇದರಿಂದ ಲಕ್ಷ್ಮಿ ದೇವಿಯು ಮಾಡಿದ ಪೂಜೆಯನ್ನು ಸ್ವೀಕರಿಸುತ್ತಾಳೆಎಂದು ಹೇಳುತ್ತಾರೆ.

lakshmi poojasource and pic credit: India tv

ದೀಪದ ಬತ್ತಿಯು ತುಂಬಾ ಕಿರಿದಾಗಿದ್ದರೆ ಮನೆಯಲ್ಲಿ ಕೋಪ ಮತ್ತು ಜಗಳಗಳು ಹೆಚ್ಚಾಗುತ್ತದೆ. ಹಾಗೆಯೇ ದೀಪದ ಬತ್ತಿಯು ಉದ್ದವಾಗಿದ್ದರೆ ಮನೆಯಲ್ಲಿ ಖರ್ಚು ತುಂಬಾ ಹೆಚ್ಚಾಗುತ್ತದೆಎಂದು ಹೇಳಲಾಗುತ್ತದೆ. ದೀಪದ ಬತ್ತಿಯು ಬಣ್ಣ ಬಣ್ಣಗಳಿಂದ ಕುಡಿದರೆ ದೇಹದಲ್ಲಿ ಚರ್ಮದ ಸಮಸ್ಯೆಗಳು ಕಾಣಿಸುತ್ತದೆಎನ್ನಲಾಗುತ್ತದೆ..ದೇವರಿಗೆ ಬೆಳಗಿದ ಆರತಿ ಅಥವಾ ಹಚ್ಚಿದ ದೀಪಗಳನ್ನು ಆಗ್ನೇಯ ಭಾಗದಲ್ಲಿ ಇರಿಸಬೇಕು. ಸಾಧ್ಯವಾದರೆ ಬಣ್ಣ ಬಣ್ಣದ ದೀಪಗಳನ್ನು ಬೆಳಗುವಂತೆ ಮಾಡಬಹುದು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ನೆಲೆಸುವುದು.

light for poojasource and pic credit: Times of India

ದೀಪದ ಬತ್ತಿಯು ತುಂಬಾ ಸಡಿಲವಾಗಿದ್ದರೆ ಜೀವನದಲ್ಲಿ ಯಾರಿಂದಲೂ ಕೂಡಾ ಸಹಾಯ ಸಿಗುವುದಿಲ್ಲ ಎನ್ನಲಾಗುತ್ತದೆ. ದೀಪದ ಬತ್ತಿಯು ತುಂಬಾ ಗಟ್ಟಿಯಾಗಿದ್ದರೆ ಸಂಸಾರದಲ್ಲಿ ಒಟ್ಟಾಗಿ ಸುಖವಾಗಿ ಬಾಳುತ್ತಾರೆಎಂದು ಹೇಳಲಾಗುತ್ತದೆ. ಬತ್ತಿ ಒಂದು ದೊಡ್ಡದು ಮತ್ತೊಂದು ಚಿಕ್ಕದಾಗಿದ್ದರೆ ಆ ಮನೆಯಲ್ಲಿ ಇರುವ ಯಜಮಾನರು ತಮ್ಮ ಗೆಳೆಯರಿಂದ ತುಂಬಾ ಅನುಕೂಲವಾಗಿ ಇರುತ್ತಾರೆ ಎಂದು ಅರ್ಥ. ಒಂದೊಂದು ದೀಪಕ್ಕೆ ಒಂದೊಂದು ಬತ್ತಿಯಂತೆ ಎರಡು ದೀಪ ಹಚ್ಚಿದರೆ ಮನೆಯಲ್ಲಿ ಸುಖ ಸಂತೋಷ ಯಾವಾಗಲೂ ನೆಲೆಯೂರಿ ನಿಲ್ಲುತ್ತದೆಎಂಬ ನಂಬಿಕೆಯಿದೆ.

light for poojasource and pic credit: Times now

ದೇವರ ಮನೆಯಲ್ಲಿ ಎಷ್ಟು ದೀಪ ಹಚ್ಚಬೇಕು..?

ಪ್ರತಿದಿನ ದೇವರ ಪೂಜೆ ಮಾಡುವಾಗ ದೇವರ ಮನೆಯಲ್ಲಿ ದೀಪವನ್ನು ಹಚ್ಚುತ್ತೇವೆ. ಯಾವುದೇ ಶುಭ ಕಾರ್ಯ ನಡೆಸುವಾಗಲೂ ದೀಪ ಹಚ್ಚುವುದರ ಮೂಲಕವೇ ಪ್ರಾರಂಭಿಸುತ್ತೇವೆ. ಆದರೆ ಮನೆಯಲ್ಲಿ ದೇವರ ಮುಂದೆ ಎಷ್ಟು ದೀಪ ಹಚ್ಚಿದರೆ ಒಳ್ಳೆಯದು ಎಂಬ ಬಗ್ಗೆ ಹಲವರಿಗೆ ಮಾಹಿತಿಯಿಲ್ಲ.ಮನೆಯಲ್ಲಿ ಎರಡು ದೀಪ ಹಚ್ಚಿದರೆ ಉತ್ತಮ. ಯಾಕೆಂದರೆ ಮನುಷ್ಯ ಎಂದ ಮೇಲೆ ಸುಖದುಖಃ ಸಮಾನವಾಗಿರಬೇಕು. ಆದ್ದರಿಂದ ಸುಖ ಹಾಗೂ ದುಖಃದ ಸಂಕೇತವಾಗಿ 2 ದೀಪವನ್ನು ಹಚ್ಚಿದರೆ ಶ್ರೇಷ್ಠ ಎನ್ನಲಾಗಿದೆ. ಕಷ್ಟ ಸುಖ ಎರಡು ಸಮಾನವಾಗಿ ಬರಲಿ ಎಂಬ ಕಾರಣಕ್ಕೆ 2 ದೀಪ ಹಚ್ಚಬೇಕು ಎಂದು ಹೇಳಲಾಗುತ್ತದೆ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author