ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುವುದು ಯಾಕೆ ? ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು..?

ದೇವಸ್ಥಾನಕ್ಕೆ ಹೋಗುವವರು ದೇವರಿಗೆ ಕೈ ಮುಗಿಯುತ್ತಾರೆ. ಉದ್ಧಂಡ ನಮಸ್ಕಾರ ಹಾಕುತ್ತಾರೆ. ದೇವಸ್ಥಾನಕ್ಕೆ ಪ್ರದಕ್ಷಿಣೆಯನ್ನೂ ಹಾಕುತ್ತಾರೆ. ಆದರೆ ಇದೆಲ್ಲದರ ಹಿಂದಿನ ಕಾರಣ ಹಲವರಿಗೆ ತಿಳಿದಿಲ್ಲ. ಪ್ರದಕ್ಷಿಣೆ ಹಾಕುವ ಆಚರಣೆಯನ್ನು ನಮ್ಮ ಹಿರಿಯರು ಅನಾದಿಕಾಲದಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಭೂತ ಹಾಗೂ ವರ್ತಮಾನದಲ್ಲಿ ಮಾಡಿದ ಪಾಪಗಳು ಪ್ರದಕ್ಷಿಣೆಯಿಂದ ಇಲ್ಲವಾಗುತ್ತದೆ ಎಂಬುದು ನಂಬಿಕೆ.

ಪ್ರದಕ್ಷಿಣೆಯ ಬಗ್ಗೆ ಪುರಾಣ ಏನು ಹೇಳುತ್ತದೆ..?

 

ಹಿಂದೂ ಪುರಾಣಗಳ ಪ್ರಕಾರ ದೇವರಿಗೆ ಹಾಕುವ ಪ್ರದಕ್ಷಿಣೆ ಬಗ್ಗೆ ಹಲವಾರು ಕಥೆಗಳಿವೆ. ಇವುಗಳಲ್ಲಿ ಶಿವ, ಗಣಪತಿ ಮತ್ತು ಕಾರ್ತೀಕೇಯನ ಕಥೆಹೆಚ್ಚು ಪ್ರಸಿದ್ಧಿಯಾಗಿದೆ. ಶಿವ ಒಮ್ಮೆ ತನ್ನ ಇಬ್ಬರು ಪುತ್ರರಾದ ಗಣಪತಿ ಮತ್ತು ಕಾರ್ತಿಕೇಯನನ್ನು ಕರೆದು ವಿಶ್ವಕ್ಕೆ ಪ್ರದಕ್ಷಿಣೆ ಬರುವಂತೆ ತಿಳಿಸುತ್ತಾನೆ. ಆಗ ಕಾರ್ತಿಕೇಯನು ತನ್ನ ವಾಹನ ನವಿಲನ್ನು ಏರಿಕೊಂಡು ವಿಶ್ವ ಪರ್ಯಟನೆಗೆ ಮುಂದಾಗುತ್ತಾನೆ. ಆದರೆ ಗಣಪತಿಯು ಅಲ್ಲೇ ಶಿವನಿಗೆ ಸುತ್ತು ಬರುತ್ತಾನೆ. ಇದು ಮೋಸವಲ್ಲವೇ ಎಂದು ಶಿವ ಕೇಳಿದಾಗ, ನಿಮ್ಮೊಳಗೆ ವಿಶ್ವವೇ ಇದೆ. ಹಾಗಾಗಿ ನಾನು ಹೀಗೆ ಮಾಡಿದೆ ಎನ್ನುತ್ತಾನೆ. ಇದುಪ್ರದಕ್ಷಿಣೆಯ ಬಗ್ಗೆ ಪುರಾಣ ಹೇಳುವಂತಹದ್ದು.

parikrama templesource and pic credit: https://in.pinterest.com/

ಪ್ರದಕ್ಷಿಣೆಯ ವಿಧಗಳು

ಪ್ರದಕ್ಷಿಣೆಯಲ್ಲಿ ಹಲವು ವಿಧಗಳಿವೆ. ಆದಿ ಪ್ರದಕ್ಷಿಣೆಅಂಗ ಪ್ರದಕ್ಷಿಣೆಮೊಣಕಾಲಿನ ಪ್ರದಕ್ಷಿಣೆ ಎಂದು ಇದನ್ನು ಕರೆಯುತ್ತಾರೆ.

ಆದಿ ಪ್ರದಕ್ಷಿಣೆಅತೀ ಹೆಚ್ಚು ಸಣ್ಣ ಹೆಜ್ಜೆಗಳನ್ನು ಇಟ್ಟುಕೊಂಡು ಬರುವ ಪ್ರದಕ್ಷಿಣೆ, ಆದಿ ಪ್ರದಕ್ಷಿಣೆಈ ಸಂದರ್ಭದಲ್ಲಿ ಕಾಲಿನ ಮುಂಭಾಗವೂ ಮತ್ತೊಂದು ಕಾಲಿನ ಹಿಂಭಾಗಕ್ಕೆ ತಾಗುತ್ತಿರಬೇಕು.

ಅಂಗ ಪ್ರದಕ್ಷಿಣೆದೇವಸ್ಥಾನದ ಕೆರೆ ಅಥವಾ ಕೊಳದಲ್ಲಿ ಸ್ನಾನ ಮಾಡಿದ ಬಳಿಕ ಒದ್ದೆ ಬಟ್ಟೆಯಲ್ಲಿ ಮಂತ್ರ ಪಠಿಸುತ್ತಾ ದೇವರಿಗೆ ಪ್ರದಕ್ಷಿಣೆ ಹಾಕುವುದನ್ನು ಅಂಗ ಪ್ರದಕ್ಷಿಣೆ ಎನ್ನುತ್ತೇವೆ.

ಮೊಣಕಾಲಿನ ಪ್ರದಕ್ಷಿಣೆಮೊಣಕಾಲಿನಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕುವುದುಇದರ ಹೊರತಾಗಿ ಅಶ್ವತ್ಥ ಮರ ಮತ್ತು ತುಳಸಿ ಗಿಡಕ್ಕೆ ಪ್ರದಕ್ಷಿಣೆ ಹಾಕುವುದು ತುಂಬಾ ಪವಿತ್ರವೆಂದು ನಂಬಲಾಗಿದೆ.

pradakshinesource and pic credit: https://isha.sadhguru.org

ಯಾವ್ಯಾವ ದೇವರಿಗೆ ಎಷ್ಟೆಷ್ಟು ಪ್ರದಕ್ಷಿಣೆಗಳನ್ನು ಹಾಕಬೇಕು ಎಂಬುದನ್ನು ಸಹ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಯಾವ್ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು..?

ಇಂಥಹಾ ದೇವಸ್ಥಾನದಲ್ಲಿ ನಾವು ಇಂತಿಷ್ಟೇ ಪ್ರದಕ್ಷಿಣೆಗಳನ್ನು ಹಾಕಬೇಕು ಎಂಬ ನಿಯಮವಿದೆ. ಆ ನಿಯಮಕ್ಕನುಸಾರವಾಗಿ ಹಾಕುವ ಪ್ರದಕ್ಷಿಣೆಯಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ಅಲ್ಲದೆ ಇಂಥಹಾ ದೇವರಿಗೆ ಇಂತಿಷ್ಟೇ ಪ್ರದಕ್ಷಿಣೆಗಳನ್ನು ಹಾಕಬೇಕು ಎಂದು ಪುರಾಣಗಳು ಹೇಳುತ್ತವೆ.

 

ಗಣಪತಿಗೆ ಒಂದು ಪ್ರದಕ್ಷಿಣೆ,  ಶಿವನಿಗೆ ಎರಡು ಪ್ರದಕ್ಷಿಣೆಮಹಾವಿಷ್ಣುವಿಗೆ ಮೂರು ಪ್ರದಕ್ಷಿಣೆಅಯ್ಯಪ್ಪನಿಗೆ ನಾಲ್ಕು ಪ್ರದಕ್ಷಿಣೆಸುಬ್ರಹ್ಮಣ್ಯನಿಗೆ ಐದು ಪ್ರದಕ್ಷಿಣೆದುರ್ಗೆಗೆ ಆರು ಪ್ರದಕ್ಷಿಣೆ ಹಾಕಬೇಕು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.

pradakshinesource and pic credit: https://vedictribe.com/

ಅಲ್ಲದೆ ದೇವಾಲಯಗಳಲ್ಲಿ ಇಂಥಹಾ ಸಮಯದಲ್ಲೇ ಪ್ರದಕ್ಷಿಣೆ ಹಾಕಿದರೆ ಸೂಕ್ತ ಅನ್ನೋ ನಂಬಿಕೆಯಿದೆ.ಹಾಗಾದ್ರೆ ದೇವಾಲಯಗಳಲ್ಲಿ ನಾವು ಯಾವ ಸಮಯದಲ್ಲಿ ಪ್ರದಕ್ಷಿಣೆ ಹಾಕಬೇಕು ತಿಳಿಯೋಣ

ಯಾವ ಸಮಯದಲ್ಲಿ ಪ್ರದಕ್ಷಿಣೆ ಹಾಕಿದರೆ ಫಲ ಸಿಗುತ್ತದೆ..?

ಮಧ್ಯಾಹ್ನ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ

ಸಂಜೆ ಪ್ರದಕ್ಷಿಣೆ ಮಾಡುವುದರಿಂದ ಮಾಡಿದ ಪಾಪಗಳು ದೂರವಾಗುತ್ತದೆ

ರಾತ್ರಿ ಪ್ರದಕ್ಷಿಣೆ ಹಾಕುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ

ಪ್ರದಕ್ಷಿಣೆಯ ಫಲಗಳು

ಪ್ರದಕ್ಷಿಣೆಯ ಫಲಗಳನ್ನು ನೋಡೋದಾದ್ರೆ, 5 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಜಯ ಸಿಗುತ್ತದೆ. 7 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಶತ್ರುಗಳನ್ನು ಸೋಲಿಸಬಹುದು. 9 ಬಾರಿ ಪ್ರದಕ್ಷಿಣೆ ಹಾಕಿದರೆ ಸಂತಾನ ಪ್ರಾಪ್ತಿಯಾಗುತ್ತದೆ. 11 ಬಾರಿ ಪ್ರದಕ್ಷಿಣೆ ಹಾಕಿದರೆ ಆಯುಷ್ಯ ವ್ಯದ್ಧಿಯಾಗುತ್ತದೆ. 13 ಬಾರಿ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಈಡೇರುತ್ತದೆ. 15 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಧನಯೋಗ. 19 ಬಾರಿ ಪ್ರದಕ್ಷಿಣೆ ಹಾಕಿದರೆ ರೋಗ ನಿವಾರಣೆಯಾಗುತ್ತೆ ಎಂಬ ನಂಬಿಕೆಯಿದೆ,

 

ಪುರಾಣಗಳಲ್ಲಿ ಇರುವಂತೆ ಜನರು ಇಂದಿಗೂ ದೇವರಿಗೆ ಪ್ರದಕ್ಷಿಣೆ ಹಾಕುತ್ತಾರೆ. ಕೆಲವರು ಕೈ ಮುಗಿದು ಕಣ್ಣು ಮುಚ್ಚಿಕೊಂಡು ಪ್ರದಕ್ಷಿಣೆ ಹಾಕಿದರೆಮತ್ತೆ ಕೆಲವರು ಮಂತ್ರವನ್ನು ಪಠಿಸುತ್ತಾ ಪ್ರದಕ್ಷಿಣೆ ಹಾಕುತ್ತಾರೆ. ದೇವರಿಗೆ ಬರುವಂತಹ ಪ್ರದಕ್ಷಿಣೆಯು ತುಂಬಾ ಪವಿತ್ರವಾಗಿರುವುದೆಂದು ಭಾವಿಸಲಾಗಿದೆ. 

temple parikramasource and pic credit: https://www.indictoday.com/

ಬಲದಿಂದ ಪ್ರದಕ್ಷಿಣೆ ಬರುವುದು ಯಾಕೆ..?

ದೇವಸ್ಥಾನಕ್ಕೆ ಹೋದರೆ ಎಲ್ಲರೂ ಬಲಬದಿಯಿಂದ ಪ್ರದಕ್ಷಿಣೆ ಬರಲು ಆರಂಭಿಸುತ್ತಾರೆ. ಇದಕ್ಕೂ ಶಾಸ್ತ್ರದಲ್ಲಿ ಕಾರಣವನ್ನು ಉಲ್ಲೇಖಿಸಲಾಗಿದೆ.ಪ್ರ ಎಂದರೆ ಆರಂಭ ಮತ್ತು ದಕ್ಷಿಣೆ ಎಂದರೆ ಬಲಭಾಗ. ಬಲ ಎಂದರೆ ಶಕ್ತಿ ಹಾಗಿರುವಾಗ ನಮಗೆ ಭಕ್ತಿ, ಶ್ರದ್ಧೆಯೊಂದಿಗೆ ಭಗವಂತನ ಅನುಗ್ರಹ ಬೇಕಾದರೆ ಬಲಬದಿಯಿಂದಲೇ ಪ್ರದಕ್ಷಿಣೆ ಬರಬೇಕು. ಬಲ ಎಂದರೆ ಶುಭವೂ ಹೌದು. ಹಾಗಾಗಿ ಬಲಬದಿಯಿಂದ ಪ್ರದಕ್ಷಿಣೆ ಹಾಕಿದರೆ, ಶ್ರವಣ, ಗ್ರಹಣ, ದೃಷ್ಟಿ, ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.

Enjoyed this article? Stay informed by joining our newsletter!

Comments

You must be logged in to post a comment.

About Author