ಧರ್ಮಕ್ಕಾಗಿ ಪ್ರಾಣ ತ್ಯಾಗಮಾಡಿದವರ ಸ್ಮರಣಾರ್ಥ ಮೊಹರಂ ಆಚರಣೆ..

ಹಿಂದೂ-ಮುಸ್ಲೀಮರ ಭಾವೈಕ್ಯತೆಯ ‘ಮೊಹರಂ’ ಆಚರಣೆಯ ಮಹತ್ವ ತಿಳಿದಿದೆಯಾ..?

ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಪ್ರಮುಖವಾದದ್ದು ಮೊಹರಂ. ಭಾರತದಲ್ಲಿ ಹಲವಾರು ಹಬ್ಬಗಳನ್ನು ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲರೂ ಆಚರಿಸುತ್ತಾರೆ. ಇಂತಹ ಕೆಲವು ಹಬ್ಬಗಳಲ್ಲಿ ಮೊಹರಂ ಕೂಡಾ ಒಂದು. ಯಾವುದೇ ತಾರತಮ್ಯ ಇಲ್ಲದಂತೆ ಈ ಹಬ್ಬದಲ್ಲಿ ಹಿಂದೂಗಳು ಪಾಲ್ಗೊಳ್ಳುತ್ತಾರೆ.

ಮೊಹರಂ ಎಂದರೆ ಮಹಮದಿಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಮೊಹರಂ ಹಬ್ಬವನ್ನು ಬಾಬಯ್ಯ ಹಬ್ಬವೆಂದು ಕರೆಯುತ್ತಾರೆ. ಈ ಹಬ್ಬಕ್ಕೆ ಚಾರಿತ್ರಿಕ ಹಾಗೂ ಧಾರ್ಮಿಕ ಹಿನ್ನಲೆಯೂ ಇದೆ.

ಕ್ರಿ. ಶ 680ರ ಕರ್ಬಲಾ ಯುದ್ಧದಲ್ಲಿ ಅರಬ್ ರಾಜ ಯಜೀದ್  ಪ್ರವಾದಿ ಮೊಹಮ್ಮದರ ಮೊಮ್ಮಗನಾದ ಇಮಾಮ್ ಹುಸೇನ್ ಮತ್ತವರ ಅನುಯಾಯಿಗಳನ್ನು ಈ ತಿಂಗಳಲ್ಲಿಯೇ ಕುಟುಂಬ ಸಹಿತ ಕೊಲ್ಲುತ್ತಾನೆ. ಇಮಾಮ್ ಹುಸೇನ್ ಮತ್ತವರ ಅನುಯಾಯಿಗಳು ಇಸ್ಲಾಂ ಧರ್ಮಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿರುತ್ತಾರೆ. ಆದ್ದರಿಂದ ಈ ತಿಂಗಳನ್ನು ಹುತಾತ್ಮರಾದ ಹುಸೇನ್ ರ ಸ್ಮರಣಾರ್ಥವಾಗಿ ಆಚರಿಸುತ್ತಾರೆ. ಕರ್ಬಲಾದ ಯುದ್ಧ ಮೊಹರಂ ಒಂದರಿಂದ ಪ್ರಾರಂಭಗೊಂಡು ಸತತವಾಗಿ ಹತ್ತು ದಿನಗಳವರೆಗೆ ನಡೆಯುತ್ತದೆ. ಈ ಹತ್ತು ದಿನಗಳ ಅವಧಿಗೆ ರೋಜ್-ಏ-ಆಶುರಾ ಎಂದು ಕರೆಯಲಾಗುತ್ತದೆ.

ಈ ತಿಂಗಳು ಮುಸ್ಲಿಮರು ಶೋಕವನ್ನು ಆಚರಿಸುತ್ತಾರೆ. ಈ ತಿಂಗಳಲ್ಲಿ ಯಾವುದೇ ಸಂಭ್ರಮ ಅಥವಾ ಪ್ರಮುಖ ಕಾರ್ಯಗಳನ್ನು ಆಚರಿಸಲಾಗುವುದಿಲ್ಲ. ಮುಸ್ಲಿಂ ಸಮುದಾಯದಲ್ಲಿಯೇ ಈ ತಿಂಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಆಚರಿಸದಂತೆ ಆದಷ್ಟೂ ತಡೆಹಿಡಿಯಲಾಗುತ್ತದೆ.

ಏನಿದು ಇತಿಹಾಸ: ಇಸ್ಲಾಂ ಸಂಸ್ಥಾಪಕರಾದ ಮಹಮ್ಮದ್ ಪೈಗಂಬರ್ ಅವರ ಮಗಳು ಬೀಬಿ ಫಾತಿಮಾ. ಬೀಬಿ ಫಾತಿಮಾರ ಪತಿ ಹಜರತ್ ಅಲಿ. ಹಜರತ್ ಅಲಿ ಹಾಗೂ ಬೀಬಿ ಫಾತಿಮಾ ದಂಪತಿಯ ಮಕ್ಕಳೇ ಇಮಾಮ್ ಹಸನ್ ಮತ್ತು ಇಮಾಮ್ ಹುಸೇನ್. ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ತಮ್ಮ ಮೊಮ್ಮಕ್ಕಳಿಗೆ ತಮ್ಮ ಸಿದ್ಧಾಂತ, ಧರ್ಮ ಪಾಲನೆಯ ನಿಯಮಗಳನ್ನು ವಿಶ್ವದಾದ್ಯಂತ ವಿಸ್ತರಿಸುವಂತೆ ತಿಳಿಸಿದ್ದರು. ಮೊಹಮ್ಮದ್ ಪೈಗಂಬರರ ಮರಣದ ನಂತರ ಮಗಳು ಬೀಬಿ ಫಾತಿಮಾರ ಪತಿ ಹಜರತ್ ಅಲಿ ನಾಲ್ಕನೇ ಖಲೀಫರಾಗಿದ್ದರು. 

ಹಜರತ್ ಅಲಿ ಅವರ ತರುವಾಯ ಖಲೀಫ್ ಸ್ಥಾನಕ್ಕೆ ಇಮಾಮ್ ಹುಸೇನ್ ಬರಬೇಕಿತ್ತು. ಆದ್ರೆ ಅಲ್ಲಿಯ ಸರ್ದಾರನಾಗಿದ್ದ ಯಜೀದ್ ಎಂಬಾತ ತಾನೇ ಖಲೀಫ್ ಎಂದು ಘೋಷಿಸಿಕೊಂಡಿದ್ದನು. ಆದರೆ ಯಜೀದ್, ಇಸ್ಲಾಂ ತತ್ವ ಸಿದ್ಧಾಂತಗಳನ್ನು ತನಗೆ ಅನೂಕೂಲವಾಗುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು. ಸಹಜವಾಗಿ ಇಮಾಮ್ ಹುಸೇನ್ ಮತ್ತು ಇಮಾಮ್ ಹಸನ್ ಇಬ್ಬರು ಯಜೀದ್ ಆಡಳಿತವನ್ನು ವಿರೋಧಿಸಿದರು. ತನ್ನನ್ನು ವಿರೋಧಿಸಿದ ಇಮಾಮ್ ಹಸನ್ ಅವರ ಆಹಾರದಲ್ಲಿ ಯಜೀದ್ ವಿಷ ಬೆರೆಸುತ್ತಾನೆ. ವಿಷಾಹಾರ ಸೇವಿಸಿದ ಇಮಾಮ್ ಹಸನ್ ಮೃತಪಡುತ್ತಾರೆ.

ಸಹೋದರನನ್ನು ಮೋಸದಿಂದ ಹತ್ಯೆ ಮಾಡಿದ ಯಜೀದ್ ದುರಾಡಳಿತವನ್ನು ಸಹಿಸದ ಇಮಾನ್ ಹುಸೇನರು  ಸತ್ಯ, ನ್ಯಾಯವನ್ನು ಕಾಪಾಡಲು 72 ಅನುಯಾಯಿಗಳೊಂದಿಗೆ ಯಜೀದ್ ವಿರುದ್ಧ ಯುದ್ಧ ಸಾರಿದರು. ಮೊಹರಂ ತಿಂಗಳ ಹತ್ತನೇ ದಿನ  ಕರ್ಬಲಾ ಎಂಬ ಮರುಭೂಮಿಯಲ್ಲಿ ನಡೆದ ಯುದ್ಧದಲ್ಲಿ ಇಮಾಮ್ ಹುಸೇನರ ಕುಟುಂಬ ಹಾಗೂ ಅವರ ಅನುಯಾಯಿಗಳು ಹುತಾತ್ಮರಾಗುತ್ತಾರೆ. 

ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೆ ಸಮರ್ಪಿಸಿಕೊಂಡ ಹಜರತ್ ಹಸನ್ ಮತ್ತು ಹಜರತ್  ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹತ್ತು ದಿನಗಳವರೆಗೆ ನಡೆಯುವ ಈ ಹಬ್ಬದಲ್ಲಿ 10 ಅಥವಾ 11 ದಿನಗಳ ಉಪವಾಸ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಸ್ಲೀಮ್ ಬಾಂಧವರು ಮಸೀದಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author