ಲೋಕ ಕಲ್ಯಾಣಕ್ಕಾಗಿ ದೇಶದ ನಾಲ್ಕೂ ಮೂಲೆಯನ್ನು ಕಾಲ್ನಡಿಗೆಯಲ್ಲೇ ಸುತ್ತಿದ ಶಂಕರಾಚಾರ್ಯರು..

ಹಿಂದೂ  ಧರ್ಮದ ರಕ್ಷಣೆಗೆ ಶಂಕರಾಚಾರ್ಯರು ಕ್ರಮಿಸಿದ ದೂರವೆಷ್ಟು ಗೊತ್ತಾ..?

ಧರ್ಮ ರಕ್ಷಣೆಗೆ, ಲೋಕ ಕಲ್ಯಾಣಕ್ಕೆ ದೇವರ ಕೃಪೆಯಿಂದ ಕೇರಳದ ಕಾಲಾಟಿಯಲ್ಲಿ ಶಿವಗುರು ಹಾಗೂ ಆರ್ಯಾಂಬೆ ದಂಪತಿಯ ಮಗನಾಗಿ ಶಂಕರಾಚಾರ್ಯರು ಜನ್ಮತಾಳುತ್ತಾರೆ. ಈಶ್ವರನ ಕೃಪೆಯಿಂದ ವೈಶಾಖ ಶುಕ್ಲ ಪಂಚಮಿಯಂದು ಆರ್ಯಾಂಬೆಯ ಗರ್ಭದಲ್ಲಿ ಜನಿಸಿದ ಶಿಶುವಿಗೆ ಶಂಕರ ಎಂದು ನಾಮಕರಣ ಮಾಡಲಾಗುತ್ತದೆ. 

ದೈವಾಂಶ ಸಂಭೂತರಾದ ಶಂಕರಾಚಾರ್ಯರು ನಾಲ್ಕನೇ ವಯಸ್ಸಿಗೆ ವೇದಗಳ ಅದ್ಯಯನ ಮಾಡುತ್ತಾರೆ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಐದನೇ ವಯಸ್ಸಿಗೆ ಶಂಕರರಿಗೆ ಉಪನಯನವಾಗುತ್ತದೆ. ಅಲ್ಲದೆ ಆರ್ಯಾಂಬೆಗೆ ಇರುವ ಒಬ್ಬನೇ ಮಗ ಶಂಕರ ಸನ್ಯಾಸತ್ವ ಸ್ವೀಕರಿಸುವುದು ಇಷ್ಟವಿರಲಿಲ್ಲ. 

ಒಮ್ಮೆ ಶಂಕರರು ಚೂರ್ಣ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಮೊಸಳೆ ಶಂಕರರನ್ನು ಹಿಡಿಯುತ್ತದೆ ಈ ಸಂದರ್ಭದಲ್ಲಿ, ತಾಯಿಯನ್ನು ಕೂಗಿದ ಶಂಕರರು ಈ ಮೊಸಳೆಯಿಂದ ನಾನು ಪಾರಾಗಬೇಕಾದರೆ, ನಾನು ಸನ್ಯಾಸತ್ವ ಸ್ವೀಕರಿಸಲು ನೀವು ಒಪ್ಪಿಗೆ ನೀಡಬೇಕು. ಆಗ ಮಾತ್ರ ಮೊಸಳೆ ನನ್ನನ್ನು ಬಿಡುತ್ತದೆ ಎನ್ನುತ್ತಾರೆ. ತಾಯಿ ಆರ್ಯಾಂಬೆಗೆ ಬೇರೆ ದಾರಿಇಲ್ಲದೆ ಶಂಕರರು ಸನ್ಯಾಸತ್ವ ಸ್ವೀಕರಿಸುವುದಕ್ಕೆ ಒಪ್ಪಿಗೆ ಸೂಚಿಸಬೇಕಾಗುತ್ತದೆ. 

ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಬಾಲ ಸನ್ಯಾಸಿಯಾದ ಶಂಕರರು ಕಾಲಾಟಿಯಿಂದ ಹೊರಡುತ್ತಾರೆ. ಗುರುಗಳ ಮಾರ್ಗದರ್ಶನದಲ್ಲಿ ಸಾಗಿದ ಶಂಕರರ ಜೀವನ ಧರ್ಮ ರಕ್ಷಣೆಗೆ, ವೆದಾಂತ ಪ್ರಸಾರಕ್ಕೆ ಮೀಸಲಾಗುತ್ತದೆ.

ಭಾರತದ ಹಲವು ಭವ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ ಶಂಕರರು ಕಾಶಿಗೆ ತಲುಪುತ್ತಾರೆ. ಇಲ್ಲಿಯೇ ಶಂಕರರ ಧರ್ಮ ಯಾತ್ರೆ ಪ್ರಾರಂಭವಾಗುತ್ತದೆ. ಹಿಂದೂಗಳ ಪವಿತ್ರ ಗ್ರಂಥಗಳಾದ ಭಗವತ್ಗೀತೆ, ಉಪನಿಷತ್ತುಗಳು, ಬ್ರಹ್ಮ ಸೂತ್ರಗಳನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಆದ್ದರಿಂದ ಶಂಕರರು ಇವುಗಳಿಗೆ ವಿವರಣೆ ಬರೆಯಲು ಸಂಕಲ್ಪ ಮಾಡುತ್ತಾರೆ. ಅದರಂತೆ ಭಗವತ್ಗೀತೆ, ಉಪನಿಷತ್ತುಗಳಿಗೆ ಭಾಷ್ಯ ಬರೆಯುತ್ತಾರೆ, ಆದರೆ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆಯಲು ಶಂಕರರು ಸುಮಾರು ಸಾವಿರದ ಇನ್ನೂರು ವರ್ಷಗಳ ಹಿಂದೆ ಹಿಮಾಲಯದ ತಪ್ಪಲಿನಲ್ಲಿರುವ ಸುಮಾರು ಹನ್ನೆರಡು ಸಾವಿರ ಅಡಿ ಎತ್ತರದಲ್ಲಿರುವ ಬದರಿ ಕ್ಷೇತ್ರಕ್ಕೆ ಪ್ರಯಾಣ ಬೆಳೆಸುತ್ತಾರೆ. 

ಇದಷ್ಟೇ ಅಲ್ಲ ಶಂಕರರು ಹಿಂದೂ ಧರ್ಮದ ರಕ್ಷಣೆಗಾಗಿ ದೇಶದ ಮೂಲೆ ಮೂಲೆಯನ್ನು ಕಾಲ್ನಡಿಗೆಯಲ್ಲೇ ಸುತ್ತುತ್ತಾರೆ. ಲಭ್ಯವಿರುವ ದಾಖಲೆಗಳಿಂದ ಗುರುತಿಸಬಹುದಾದ ಕೆಲವು ಪ್ರಮುಖ ಸ್ಥಳ ಮತ್ತು ಅವುಗಳ ದೂರವನ್ನು ಇಂದಿನ ಲೆಕ್ಕದಲ್ಲಿ ನೋಡುವುದಾರೆ.

1. ಶಂಕರರ ಜನ್ಮ ಸ್ಥಳ ಕಾಲಡಿಯಿಂದ ಓ೦ಕಾರೇಶ್ವರ - 1795 ಕಿ.ಮೀ.

2.ಓಂಕಾರೇಶ್ವರದಿಂದ ವಾರಾಣಸಿ - 988 ಕಿ.ಮೀ

3. ವಾರಣಾಸಿಯಿಂದ ಬದರಿನಾಥ - 991 ಕಿ.ಮೀ 

4. ಬದರಿನಾಥದಿಂದ ಪ್ರಯಾಗ - 899 ಕಿ.ಮೀ

6. ಮಾಹಿಶಿಯಿಂದ ಶ್ರೀಶೈಲ – 1906 ಕಿ.ಮೀ

7. ಶ್ರೀಶೈಲದಿಂದ ಗೋಕರ್ಣ – 686 ಕಿ,ಮೀ

8 ಗೋರ್ಣದಿಂದ ಕೊಲ್ಲೂರು – 135 ಕಿ.ಮೀ

9. ಕೊಲ್ಲೂರಿನಿಂದ ಶೃಂಗೇರಿ – 110 ಕಿ.ಮೀ.

10. ಶೃಂಗೇರಿಯಿಂದ ಕಾಲಡಿ – 509 ಕಿ.ಮೀ.

11. ಕಾಲಡಿಯಿಂದ ರಾಮೇಶ್ವರ - 429 ಕಿ.ಮೀ

12. ರಾಮೇಶ್ವರದಿಂದ ತಿರುಪತಿ - 663 ಕಿ.ಮೀ

13. ತಿರುಪತಿಯಿಂದ ದ್ವಾರಕ – 2150 ಕಿ.ಮೀ 

14. ದ್ವಾರಕೆಯಿಂದ ಗೌಹಾತಿ - 2990 ಕಿ.ಮೀ

15. ಗೌಹಾತಿಯಿಂದ ಪುರಿ – 1499 ಕಿ.ಮೀ 

16. ಪುರಿಯಿಂದ ಕಾಶ್ಮೀರ (ಎಲ್ಒಸಿ) - 2693 ಕಿ.ಮೀ 

17. ಕಾಶ್ಮೀರದಿಂದ ಬದರಿನಾಥ – 1085 ಕಿ.ಮೀ 

18. ಬದರಿಯಿಂದ ಕೇದಾರನಾಥ - 41 ಕಿ.ಮೀ 

ಇದಷ್ಟೇ ಅಲ್ಲದೆ ಧರ್ಮರಕ್ಷಣೆಗೆ ಶಂಕರರು ದಕ್ಷಿಣದ ರಾಮೇಶ್ವರ, ಕನ್ಯಾಕುಮಾರಿಯಿಂದ ಹಿಡಿದು ಉತ್ತರದ ಕಾಶ್ಮೀರದವರೆಗೂ, ಪೂರ್ವದ ಜಗನ್ನಾಥದಿಂದ ಪಶ್ಚಿಮದ ದ್ವಾರಕೆಯವರೆಗು ಸಂಚರಿಸಿ ಅನೇಕ ದೇವಲಾಯಗಳನ್ನು ಪುನರುಜ್ಜೀವನಗೊಳಿಸಿದ್ದಾರೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author