ಮೇ.26.2021ರಂದು ಸೂಪರ್‌ಮೂನ್ ಅಥವಾ ಕೆಂಪು ರಕ್ತ ಚಂದ್ರ ಗ್ರಹಣ..! ಏನಿದು.? ಹೇಗೆ ಸಂಭವಿಸುತ್ತದೆ..?

ಮೇ.26.2021ರಂದು ಸೂಪರ್‌ಮೂನ್ ಅಥವಾ ಕೆಂಪು ರಕ್ತ ಚಂದ್ರ ಗ್ರಹಣ..! ಏನಿದು.? ಹೇಗೆ ಸಂಭವಿಸುತ್ತದೆ..?

blood moonsource and pic credit: oneindia.oom

ಭಾರತದಲ್ಲಿ ಗ್ರಹಣಗಳಿಗೆ ವಿಶೇಷ ಮಹತ್ವವಿದೆ. ಸೂರ್ಯ ಹಗಲಿನಲ್ಲಿಯೂ ಚ೦ದ್ರ ರಾತ್ರಿಯಲ್ಲಿಯೂ ಕಾಣುತ್ತಾನೆ. ಈ ಸೂರ್ಯ, ಚ೦ದ್ರ ಮರೆಯಾಗುವ ಕಾರ್ಯಕ್ಕೆ ಗ್ರಹಣ ಎನ್ನುತ್ತಾರೆ. ಸಾಮಾನ್ಯವಾಗಿ ಜನರು ಗ್ರಹಣಗಳನ್ನು ಭಯಪೂರಿತ ಮನಸ್ಸಿನಿ೦ದಲೇ ಬರಮಾಡಿಕೊಳ್ಳಲಾಗುತ್ತದೆ. ಆದರೆ ವಿಜ್ಞಾನಿಗಳು ಮಾತ್ರ ಇ೦ತಹ ಗ್ರಹಣಗಳನ್ನು ನಿರೀಕ್ಷಿಸುತ್ತಲೇ ಇರುತ್ತಾರೆ. ಯಾಕೆಂದರೆ ಗ್ರಹಣಗಳು ಆಕಾಶಕಾಯಗಳ ಬಗೆಗಿನ ನೂತನ ಸತ್ಯಗಳನ್ನು ಆವಿಷ್ಕರಿಸಲು ಅವರಿಗೊ೦ದು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ.

ಪಂಚಾಂಗ ಮತ್ತು ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ 2021ರಲ್ಲಿ  ಒಟ್ಟು ಎರಡು ಚಂದ್ರ ಗ್ರಹಣಗಳು ಸಂಭವಿಸಲಿವೆ. ಇದರಲ್ಲಿ ವರ್ಷದ ಮೊದಲ ಚಂದ್ರ ಗ್ರಹಣವನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ವರ್ಷದ ಮೊದಲ ಚಂದ್ರ ಗ್ರಹಣ ಮೇ 26ರಂದು ಎಂದರೆ ನಾಳೆ ನಡೆಯಲಿದೆ. ಈ ಬಾರಿ ಸೂಪರ್ ಮೂನ್ ಗ್ರಹಣವಾಗಿರುವುದರಿಂದ ಇದು ವಿಶೇಷವಾಗಿರುತ್ತದೆ. ನಾಳಿನ ವೈಶಾಖ ಹುಣ್ಣಿಮೆ ಬಹಳ ವಿಶೇಷವಾದ ಹುಣ್ಣಿಮೆ. ಅದೇ ದಿನ ಸೂಪರ್ ಮೂನ್ ಮತ್ತು ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರ ಭೂಮಿಗೆ ಅತ್ಯಂತ ಹತ್ತಿರವಾಗುವುದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ.

blood moonsource and pic credit: https://www.space.com

ಭೂಮಿಯ ಸುತ್ತ ಚಂದ್ರನ ಕಕ್ಷೆಯು ಸಂಪೂರ್ಣವಾಗಿ ವೃತ್ತಾಕಾರವಾಗಿಲ್ಲ. ಇದರರ್ಥ ಗ್ರಹದ ಸುತ್ತಲೂ ಚಂದ್ರನ ಅಂತರವು ಬದಲಾಗುತ್ತದೆ. ಪೆರಿಗೀ ಎಂದು ಕರೆಯಲ್ಪಡುವ ಕಕ್ಷೆಯ ಹತ್ತಿರದ ಬಿಂದುವು ಕಕ್ಷೆಯ ದೂರದ ಬಿಂದುವಿಗಿಂತ ಭೂಮಿಗೆ ಸರಿಸುಮಾರು 28,000 ಮೈಲಿ ದೂರದಲ್ಲಿದೆ. ಪೆರಿಗಿಯ ಬಳಿ ಸಂಭವಿಸುವ ಹುಣ್ಣಿಮೆಯನ್ನು ಸೂಪರ್‌ಮೂನ್ ಎಂದು ಕರೆಯಲಾಗುತ್ತದೆ. ಭೂಮಿ ಮತ್ತು ಚಂದ್ರನ ನಡುವೆ 3,84,000 ಸಾವಿರ ಕಿಲೋ ಮೀಟರ್ ಅಂತರವಿದೆ. ಆದರೆ 3 ಲಕ್ಷ 57 ಸಾವಿರ ಕಿಲೋಮೀಟರ್ ಅಂತರದಲ್ಲಿ ಈ ಬಾರಿ ಚಂದ್ರ ಪರ್ಯಟನೆ ಮಾಡಲಿದ್ದಾನೆ. ಆ ಮೂಲಕ ಯಾವತ್ತಿಗಿಂತ ಸುಮಾರು ಏಳು ಶೇಕಡಾದಷ್ಟು ದೊಡ್ಡದಾಗಿ ಚಂದ್ರ ಕಾಣಿಸಿಕೊಳ್ಳಲಿದ್ದಾನೆ.

bloodmoonsource and pic credit: outtherecolorado.com

ಚಂದ್ರಗ್ರಹಣದ ಸಮಯ

ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯ ನಡುವೆ ಈ ಚಂದ್ರಗ್ರಹಣ ನಡೆಯುತ್ತದೆ. ಆಸ್ಟ್ರೇಲಿಯಾ, ಚೀನಾ, ಜಪಾನ್, ಇಂಡೋನೇಷಿಯಾದ ಜನ ಚಂದ್ರಗ್ರಹಣವನ್ನು ನೋಡಬಹುದು. ಆದರೆ ಭಾರತದ ಕೆಲವೇ ಕೆಲವು ಪ್ರದೇಶಗಳಲ್ಲಿ  ಗ್ರಹಣ ಕಾಣಿಸಿಕೊಳ್ಳಲಿದ್ದು ಇದನ್ನು ಉಪಛಾಯಾ ಗ್ರಹಣವೆಂದು ಕರೆಯುತ್ತಾರೆ. ಈ ರೀತಿಯ ಚಂದ್ರಗ್ರಹಣದಲ್ಲಿ ಸೂತಕದ ಆಚರಣೆ ಮಾಡಲಾಗುವುದಿಲ್ಲ. ಗ್ರಹಣ ಕಾಣುವ ದೇಶಗಳಲ್ಲೂ ಕೂಡ 11 ನಿಮಿಷಗಳ ಕಾಲ ಮಾತ್ರ ಪೂರ್ಣಗ್ರಹಣ ಕಣ್ತುಂಬಿಕೊಳ್ಳಬಹುದು.

bloodmoonsource anc pic credit: https://scroll.in/article

ಗ್ರಹಣ ಒಂದಿಲ್ಲೊಂದು ರಾಶಿಗೆ ಕೆಡುಕುಂಟು ಮಾಡುತ್ತದೆ, ಇನ್ಯಾವುದಕ್ಕೋ ಶುಭ ಉಂಟು ಮಾಡುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸಂಭವಿಸುವ ಈ ತೀರಾ ಸಹಜ ಪ್ರಕ್ರಿಯೆಗೆ ಬ್ಲೂ ಮೂನ್, ಬ್ಲಡ್ ಮೂನ್, ಸೂಪರ್ ಮೂನ್ ಎಂಬಿತ್ಯಾದಿ ಹೆಸರಿಂದ ಕರೆಯಲಾಗುತ್ತದೆ. ಅಷ್ಟಕ್ಕೂ ಈ ರಕ್ತ ಚಂದ್ರ ಎಂದರೇನು ಸವಿಸ್ತಾರವಾಗಿ ತಿಳಿಯೋಣ.

bloodmoonsource and pic credit: http://shaamtak.com

ರಕ್ತಚಂದ್ರ ಅಥವಾ ಕೆಂಪು ಚಂದ್ರ ಎಂದರೇನು..?

ರಕ್ತಚಂದ್ರ ಅಥವಾ ಕೆಂಪುಚಂದ್ರದ ಬಗ್ಗೆ ಹಲವರಲ್ಲಿ ಮೂಢನಂಬಿಕೆಗಳಿವೆ. ಇದರಿಂದ ಕೆಡುಕುಂಟಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ಹೀಗಿಲ್ಲ. ಭೂಮಿಯ ತುದಿಗಳಿಂದ ಮಾತ್ರ ಚಂದ್ರನಿಗೆ ಬೆಳಕು ಬೀಳುವ ಕಾರಣ ಚಂದ್ರ ಕೆಂಪಾಗಿ ಗೋಚರಿಸುತ್ತಾನೆ. ಇದನ್ನೇ ರಕ್ತಚಂದ್ರ ಗ್ರಹಣ ಎಂದು ಕರೆಯುತ್ತಾರೆ.

ಭೂಮಿಸೂರ್ಯಮತ್ತು ಚಂದ್ರನ ನಡುವೆ ಸಮತಲ ಇರುವುದರಿಂದ ಇಂತಹ ಗ್ರಹಣಗಳು ಸಂಭವಿಸುತ್ತವೆ. ಈ ಬಾರಿ ಸಂಪೂರ್ಣವಾಗಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಒಂದು ಚೂರೂ ಸರ‍್ಯನ ನೆರಳು ಚಂದ್ರನಿಗೆ ಬೀಳದೆ ಇರುವ ಕಾರಣ ಚಂದ್ರ ಸಂಪೂರ್ಣವಾಗಿ ಕೆಂಪಗೆ ಕಾಣಿಸುತ್ತಾನೆ. ಇದನ್ನು ನಾವು ರಕ್ತಚಂದ್ರ ಎಂದು ಕರೆಯುತ್ತೇವೆ. ಈಶಾನ್ಯ ರಾಜ್ಯಗಳ ಕೆಲವೆಡೆಯಲ್ಲಿ ಅರೆ ನೆರಳಿನ ಚಂದ್ರಗ್ರಹಣ ಗೋಚರಿಸಬಹುದು.

bloodmoonsource and pic credit: https://astronomy.com

ಗ್ರಹಣದ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರ ಕಾಂತಿ ಕಳೆದುಕೊಳ್ಳುತ್ತಾನೆ. ಖಗ್ರಾಸ ಚಂದ್ರ ಗ್ರಹಣದಲ್ಲಿ ಭೂಮಿಯ ಸಂಪೂರ್ಣ ನೆರಳು ಚಂದ್ರನ ಮೇಲೆ ಬಿದ್ದು, ನಂತರ ಭೂಮಿ ಕೊಂಚ ಸರಿದಾಗ ಸೂರ್ಯ ಕಿರಣಗಳು ಭೂಮಿಯ ಅಂಚಿನಿಂದ ಚಂದ್ರನ ಮೇಲೆ ಬೀಳುತ್ತವೆ. ಆಗ ವಾತಾವರಣದ ಧೂಳಿನ ಕಣಗಳು ಸೂರ್ಯನ ಬೆಳಕಿಗೆ ಅಡ್ಡಬಂದು ಚಂದ್ರ ರಕ್ತವರ್ಣದಲ್ಲಿ ಕಾಣುವಂತೆ ಮಾಡುತ್ತವೆ. ಚಂದ್ರ ಕೆಂಪು ಬಣ್ಣದಲ್ಲಿ ಕಾಣುವುದರಿಂದ ಇದಕ್ಕೆ ಬ್ಲಡ್ ಮೂನ್, ರಕ್ತ ಚಂದ್ರ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಸೂರ್ಯನ ಬೆಳಕು ಗೋಚರ ಬೆಳಕಿನ ಎಲ್ಲಾ ಬಣ್ಣಗಳನ್ನು ಹೊಂದಿರುತ್ತದೆ. ಭೂಮಿಯ ವಾತಾವರಣವನ್ನು ರೂಪಿಸುವ ಅನಿಲದ ಕಣಗಳು ನೀಲಿ ತರಂಗಾಂತರಗಳ ಬೆಳಕನ್ನು ಚದುರಿಸುವ ಸಾಧ್ಯತೆಯಿದೆ. ಆದರೆ ಕೆಂಪು ತರಂಗಾಂತರಗಳು ಹಾದುಹೋಗುತ್ತವೆ. ಇದನ್ನು ರೇಲೀ ಸ್ಕ್ಯಾಟರಿಂಗ್ ಎಂದು ಕರೆಯಲಾಗುತ್ತದೆ, ಮತ್ತು ಅದಕ್ಕಾಗಿಯೇ ಆಕಾಶವು ನೀಲಿ ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತಗಳು ಹೆಚ್ಚಾಗಿ ಕೆಂಪು ಬಣ್ಣದ್ದಾಗಿರುತ್ತವೆ.

ಚಂದ್ರಗ್ರಹಣದ ಸಂದರ್ಭದಲ್ಲಿ, ಕೆಂಪು ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋಗಬಹುದು ಮತ್ತು ಚಂದ್ರನ ಕಡೆಗೆ ವಕ್ರೀಭವನಗೊಳ್ಳುತ್ತದೆ ಅಥವಾ ಬಾಗುತ್ತದೆ. ಇದು ಗ್ರಹಣ ಸಮಯದಲ್ಲಿ ಚಂದ್ರನನ್ನು ಮಸುಕಾದ ಕೆಂಪು ಬಣ್ಣ ಆವರಿಸಿಕೊಳ್ಳುವಂತೆ ಮಾಡುತ್ತದೆ.

ಸೂಪರ್ ಮೂನ್ ಸ್ಪೆಷಲ್ ಯಾಕೆ..

bloodmoonsource and pic credit: https://www.forbes.com

ಚಂದ್ರನ ತುಲನಾತ್ಮಕವಾಗಿ ಹತ್ತಿರದಲ್ಲಿರುವುದು ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡದಾಗಿದೆ ಮತ್ತು ಪ್ರಕಾಶಮಾನವಾಗಿ ಕಾಣುತ್ತದೆ. ಆದರೂ ಸೂಪರ್‌ಮೂನ್ ಮತ್ತು ಸಾಮಾನ್ಯ ಚಂದ್ರನ ನಡುವಿನ ವ್ಯತ್ಯಾಸವು ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ. ಸಾಮಾನ್ಯವಾಗಿ ನೀವು ಎರಡು ಚಿತ್ರಗಳನ್ನು ಅಕ್ಕಪಕ್ಕದಲ್ಲಿ ನೋಡದ ಹೊರತು ಗಮನಿಸುವುದು ಕಷ್ಟ.

ಪ್ರತಿ ಚಂದ್ರನ ಕಕ್ಷೆಯಲ್ಲಿ ಎರಡು ಬಾರಿ, ಚಂದ್ರನು ಭೂಮಿ ಮತ್ತು ಸೂರ್ಯನಂತೆಯೇ ಒಂದೇ ಸಮತಲದಲ್ಲಿರುತ್ತಾನೆ. ಇದು ಹುಣ್ಣಿಮೆಗೆ ಅನುಗುಣವಾದರೆ, ಸೂರ್ಯ, ಭೂಮಿ ಮತ್ತು ಚಂದ್ರರು ಸರಳ ರೇಖೆಯನ್ನು ರೂಪಿಸುತ್ತಾರೆ. ಚಂದ್ರನು ಭೂಮಿಯ ನೆರಳಿನ ಮೂಲಕ ಹಾದು ಹೋಗುತ್ತಾನೆ. ಇದು ಒಟ್ಟು ಚಂದ್ರಗ್ರಹಣಕ್ಕೆ ಕಾರಣವಾಗುತ್ತದೆ.

bloodmoonsource and pic credit: elitedaily.com

ಚಂದ್ರಗ್ರಹಣದ ಸೂತಕವಿಲ್ಲ..!

ಉಪಛಾಯಾ ಗ್ರಹಣವನ್ನು ಧರ್ಮಗ್ರಂಥಗಳಲ್ಲಿ ಗ್ರಹಣದ ಸಾಲಿನಲ್ಲಿ ಸೇರಿಸಿಲ್ಲ. ಹೀಗಾಗಿ ಈ ಗ್ರಹಣದಂದು ಸೂತಕದ ಆಚರಣೆ ಇರುವುದಿಲ್ಲ. ದೇವಾಲಯಗಳ ಬಾಗಿಲು ಮುಚ್ಚುವುದಿಲ್ಲ. ಅದರಂತೆ ಧಾರ್ಮಿಕಕಾರ್ಯಗಳನ್ನೂ ನಿಷೇಧಿಸಲಾಗಿಲ್ಲ. ನೀವು ಸಾಮಾನ್ಯ ದಿನಗಳಂತೆಯೇ ಕೆಲಸವನ್ನು ಮಾಡಬಹುದು. ಮೇ 26ರಂದು ನಡೆಯುವ ಚಂದ್ರಗ್ರಹಣದ ನಂತರ ಮುಂದಿನ ಚಂದ್ರಗ್ರಹಣ ನವೆಂಬರ್ 19ರಂದು ನಡೆಯಲಿದೆ.

bloodmoonsource and pic credit: dnaindia.com

ಯಾವ ರಾಶಿ, ನಕ್ಷತ್ರದಲ್ಲಿ ಗ್ರಹಣ..?

ವರ್ಷದ ಮೊದಲ ಚಂದ್ರಗ್ರಹಣವು ವೃಶ್ಚಿಕ ರಾಶಿ, ಅನುರಾಧಾ ನಕ್ಷತ್ರದಲ್ಲಿ ನಡೆಯಲಿದೆ. ಅನುರಾಧಾ ನಕ್ಷತ್ರದ ಅಧಿಪತಿ ಶನಿದೇವ. ಮೇ 23ರಂದು ಶನಿದೇವನೂ ಸಕ್ರಿಯವಾಗಿದ್ದಾನೆಗ್ರಹಣದ ಪ್ರಭಾವ ಪ್ರತಿಯೊಂದು ರಾಶಿಯ ಮೇಲೆ ಇರುತ್ತದೆ, ಕೆಲ ರಾಶಿಯ ಮೇಲೆ ಗ್ರಹಣದ ಪ್ರಭಾವ ಒಳ್ಳೆಯದಿದ್ದರೆ ಇನ್ನು ಕೆಲವು ರಾಶಿಯ ಮೇಲೆ ಅದು ಕೆಟ್ಟ ಪರಿಣಾಮ ಬೀರುತ್ತದೆ

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author