ಪರಶುರಾಮ ಜಯಂತಿಯನ್ನು ಯಾಕೆ ಆಚರಿಸುತ್ತಾರೆ ಗೊತ್ತಾ..?

ಮಹಾ ವಿಷ್ಣುವಿನ ಅವತಾರ ಪರಶುರಾಮ ಜಯಂತಿ ಮಹತ್ವ ಮತ್ತು ಆಚರಣೆ ಹೇಗೆ..?

ವಿಷ್ಣುವಿನ ಆರನೇ ಅವತಾರ ಪರಶುರಾಮ ಜಯಂತಿಯನ್ನು ಶುಕ್ಲ ಪಕ್ಷದ ತೃತೀಯ ದಿನದಂದು ಅಂದರೆ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಭಗವಾನ್ ಪರಶುರಾಮ ವೈಶಾಖ ಶುಕ್ಲ ತೃತೀಯ ದಿನದಂದು ಜನಿಸಿದನು. ಆದ್ದರಿಂದ ಈ ದಿನವನ್ನು ಪರಶುರಾಮ ಜಯಂತಿ ಎಂದೇ ಆಚರಿಸಲಾಗುತ್ತದೆ. ಈ  ಜಯಂತಿ ಸಾಮಾನ್ಯವಾಗಿ ಅಕ್ಷಯ ತೃತೀಯದಂದು ಆಚರಿಸಲಾಗುತ್ತದೆ.

ಸಪ್ತಋಷಿಗಳಲ್ಲಿ ಒಬ್ಬರಾದ ಜಮದಗ್ನಿ ಋಷಿ ಮತ್ತು ಭೃಗು ವಂಶಸ್ಥೆಯಾದ ರೇಣುಕಾದೇವಿ ದಂಪತಿಗಳಿಗೆ ಜನಿಸಿದ ಪರಶುರಾಮ, ವಿಷ್ಣುವಿನ ಆರನೇ ಅವತಾರ. ಪುರಾಣಗಳ ಪ್ರಕಾರ ವೈಶಾಖ ಶುಕ್ಲ ಪಕ್ಷ ತೃತೀಯ ದಿನದಂದು ತ್ರೇತಾಯುಗ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಹೈದೇಯ ರಾಜವಂಶದ ರಾಜರನ್ನು ನಾಶಮಾಡಲು ಪರಶುರಾಮ ಜನ್ಮ ತಾಳಿದನು ಎನ್ನಲಾಗುತ್ತದೆ. ಹೀಗಾಗಿ ಪರಶುರಾಮ ಜಯಂತಿಯ ದಿನವು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನದಂದು ಭಕ್ತರು ದಿನವಿಡೀ ಉಪವಾಸ ಮಾಡುತ್ತಾರೆ ಮತ್ತು ವಿಷ್ಣುವಿನ ಆಶೀರ್ವಾದವನ್ನು ಪಡೆಯಲು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.

 

ಉಲ್ಲೇಖಗಳ ಪ್ರಕಾರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ದೈವತ್ವ ಹೊಂದಿದ್ದ ಕಾಮಧೇನು ಋಷಿ ಜಮದಗ್ನಿಗಳ ಆಶ್ರಮದಲ್ಲಿತ್ತು. ಒಮ್ಮೆ ಕ್ಷತ್ರಿಯ ರಾಜನಾದ ಕಾರ್ತವಿರ್ಯ ಸಹಸ್ರಾರ್ಜುನ ಋಷಿ ಜಮದಗ್ನಿಗಳ ಆಶ್ರಮಕ್ಕೆ ಭೇಟಿ ನೀಡಿದಾಗ ಕಾಮಧೇನು ವಿನ ಶಕ್ತಿಯಬಗ್ಗೆ ಅರಿತನು. ಕಾಮಧೇನು ಹಸುವನ್ನು ತನ್ನ ವಶಮಾಡಿಕೊಳ್ಳಲು ಅದನ್ನು ಆಶ್ರಮದಿಂದ ಅಪಹರಿಸಿದನು.

ಇದನ್ನು ಅರಿತ ಋಷಿ ಜಮದಗ್ನಿ, ಕಾಮಧೇನುವನ್ನು ಸುರಕ್ಷಿತವಾಗಿ ಆಶ್ರಮಕ್ಕೆ ಮರಳಿ ತರಲು ತಮ್ಮ ಮಗನಾದ ಪರಶುರಾಮನಿಗೆ ಆದೇಶಿಸುತ್ತಾರೆ. ಈ ಸಂದರ್ಭದಲ್ಲಿ ರಾಜ ಅಡ್ಡ ಬಂದಾಗ ರಾಜನನ್ನು ಕೊಂದ ನಂತರ ಪರಶುರಾಮ ಕಾಮಧೇನುವನ್ನು ಆಶ್ರಮಕ್ಕೆ ತರುತ್ತಾನೆ.

ಪರಶುರಾಮ ಶ್ರೀವಿಷ್ಣುವಿನ ಅವತಾರವಾಗಿರುವುದರಿಂದ ಉಪಾಸದೇವತೆಯಂದು ಪೂಜಿಸಲಾಗುತ್ತದೆ. ವೈಶಾಖ ಶುಕ್ಲ ಪಕ್ಷ ತೃತಿಯಾ (ಅಕ್ಷಯ ತದಿಗೆ) ದಂದು ಬರುವ ಪರಶುರಾಮ ಜಯಂತಿಯನ್ನು ಒಂದು ಉತ್ಸವವೆಂದೂ ಆಚರಿಸಲಾಗುತ್ತದೆ. 

ಭಗವಾನ್ ಪರಶುರಾಮ ಶಿವನಿಗೆ ಪ್ರಿಯವಾದವನು. ಶಿವನಿಗೆ ತನ್ನನ್ನು ತಾನು ಭಕ್ತಿಯಿಂದ ಅರ್ಪಿಸಿಕೊಂಡವನು. ಪರಶುರಾಮ ಜಯಂತಿಯನ್ನು ಭಾರತದಾದ್ಯಂತ ಬಹಳ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. 

ಇನ್ನು ಈ ದಿನ ಭಕ್ತರು, ಒಂದು ದಿನ ಮುಂಚಿತವಾಗಿಯೇ ಉಪವಾಸ ಮಾಡುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ, ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮಹಾವಿಷ್ಣುವಿನ ಭಕ್ತರು ರಾತ್ರಿಯಿಡೀ ಎಚ್ಚರವಾಗಿದ್ದು, ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಭಕ್ತಿಯಿಂದ ಪಠಿಸುತ್ತಾರೆ. ಈ ದಿನ ಮಾಡಿದ ಯಾವುದೇ ಶುಭ ಕಾರ್ಯವು ಫಲಪ್ರದ ಫಲಿತಾಂಶವನ್ನು ನೀಡುತ್ತದೆ. ಜೊತೆಗೆ ಈ ದಿನವನ್ನು ಬಹಳ ಶುಭವೆಂದು ಹೇಳಲಾಗುತ್ತದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author