ಪ್ರೀತಿಯ `ಇಂಟರ್ನೆಟ್ ಎಕ್ಸ್ಪ್ಲೋರರ್' ಥ್ಯಾಂಕ್ಯೂ, ಗುಡ್‌ಬೈ ಹೇಳಿ!

ಪ್ರೀತಿಯ `ಇಂಟರ್ನೆಟ್ ಎಕ್ಸ್ಪ್ಲೋರರ್' ಥ್ಯಾಂಕ್ಯೂ, ಗುಡ್‌ಬೈ ಹೇಳಿ!

                               

GoodBye Internet explorerImage Credits : Vandal

90ರ ದಶಕದಲ್ಲಿ ಕಂಪ್ಯೂಟರ್ ಬಳಸಲು ಆರಂಭಿಸಿದವರಿಗೆ ಇಂಟರ್ನೆಟ್ ಎಕ್ಸ್ಪ್ಲೋರರ್ ಗೊತ್ತಿರಲೇ ಬೇಕು. ನೀವು ಮೊದಲು ಇಂಟರ್ನೆಟ್‌ನಲ್ಲಿ ಹುಡುಕಾಡಲು ಬಳಸಿದ್ದು ಇಂಟರ್ನೆಟ್ ಎಕ್ಸ್ಪ್ಲೋರರ್‌ನಲ್ಲೇ ಆಗಿರುತ್ತೆ. ಬಹುತೇಕರು ಮೊದಲ ಇ-ಮೇಲ್ ಸಹ ಇದರಲ್ಲೇ ಕಳುಹಿಸಿರುತ್ತೀರಿ. 

 

ಕೊನೆಯಾಗಲಿದೆ 26 ವರ್ಷಗಳ ಸೇವೆ!

ಇಂಟರ್ನೆಟ್ ಎಕ್ಸ್ಪ್ಲೋರರ್ ಬಗ್ಗೆ ಈ ನೆನಪು ಮಾಡಿಕೊಳ್ಳಲು ಒಂದು ಕಾರಣವಿದೆ. ಯಾಕೆಂದ್ರೆ ಸದ್ಯದಲ್ಲೇ ಅದು ನೆನಪಾಗಿ ಮಾತ್ರ ಉಳಿಯಲಿದೆ. ಮೈಕ್ರೋಸಾಫ್ಟ್ ಸಂಸ್ಥೆ ಜೂನ್ 15, 2022 ರಂದು ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. 26 ವರ್ಷಗಳ ಸೇವೆಯ ಬಳಿಕ ಇಂಟರ್ನೆಟ್ ಎಕ್ಸ್ಪ್ಲೋರರ್ ಕಣ್ಮರೆಯಾಗಲಿದೆ. ಈ ವಿಷಯ ನಿಮಗೆ ಬೇಸರ ಮೂಡಿಸಬಹುದು. 

 

ಎಕ್ಸ್ಪ್ಲೋರರ್ ಅನ್ನು ಮೈಕ್ರೋಸಾಫ್ಟ್ ಸಂಸ್ಥೆ ಬಂದ್ ಮಾಡಲು ಕಾರಣ ಏನು?, ಇಂಟರ್ನೆಟ್ ಎಕ್ಸ್ಪ್ಲೋರರ್ ಶುರುವಾಗಿದ್ದು ಯಾವಾಗ? ಬೆಳೆದು ಬಂದ ಹಾದಿ ಹೇಗಿತ್ತು? ಏನೆಲ್ಲಾ ಬದಲಾವಣೆಗಳನ್ನು ಕಂಡಿತು ಅನ್ನೋದನ್ನ ತಿಳಿದುಕೊಳ್ಳೋಣ. 

 

1990 ರ ದಶಕದಲ್ಲಿ ಬ್ರೌಸರ್ ಮಾರ್ಕೆಟ್‌ಗೆ ಬಹಳ ಬೆಲೆ ಆರಂಭವಾಯಿತು. ಆಗ ಮೈಕ್ರೋಸಾಫ್ಟ್ನ ಸ್ಥಾಪಕ ಬಿಲ್ ಗೇಟ್ಸ್, ಪರ್ಸನಲ್ ಕಂಪ್ಯೂಟರ್ (ಪಿಸಿ)ಗಳ ವಿಭಾಗದಲ್ಲಿ ಪ್ರಾಬಲ್ಯ ಮೆರೆಯಬೇಕು ಎಂದು ನಿರ್ಧರಿಸಿದರು. ಪ್ರಪಂಚದಾದ್ಯಂತ ಯುವಕರಲ್ಲಿ ಇಂಟರ್ನೆಟ್ ಬಗ್ಗೆ ಶುರುವಾಗಿದ್ದ ಕ್ರೇಝ್ ಹಾಗೂ ವರ್ಲ್ಡ್ ವೈಡ್ ವೆಬ್ ಬಳಕೆಗೆ ವೆಬ್ ಬ್ರೌಸರ್‌ನ ಅಗತ್ಯವಿದ್ದಿದ್ದನ್ನು ಗೇಟ್ಸ್ ಮನಗಂಡರು. 

GoodBye Internet explorerImage credits : as.com

 

1995 ರಲ್ಲಿ ಬಿಡುಗಡೆಯಾಯ್ತು ಎಕ್ಸ್ಪ್ಲೋರರ್ 

ಇಂಟರ್ನೆಟ್ ಎಕ್ಸ್ಪ್ಲೋರರ್‌ನ ಅಭಿವೃದ್ಧಿಯನ್ನು 1994 ರಲ್ಲಿ ಆರಂಭಿಸಿದ್ದ ಮೈಕ್ರೋಸಾಫ್ಟ್ ಸಂಸ್ಥೆ, 1995 ರಲ್ಲಿ ವೆಬ್ ಬ್ರೌಸರ್ ಅನ್ನು ಬಿಡುಗಡೆ ಮಾಡಿತು. ಈ ಇಂಟರ್‌ನೆಟ್ ಎಕ್ಸ್ಪ್ಲೋರರ್ ವೆಬ್ ಬ್ರೌಸರ್‌ನ ಅಭಿವೃದ್ಧಿಯ ರೂವಾರಿ, ಥಾಮಸ್ ರೇರ್‌ಡಾನ್. 

 

ಥಾಮಸ್ ಸೇರಿ 6 ಜನರಿದ್ದ ತಂಡ, ಇಂಟರ್ನೆಟ್ ಎಕ್ಸ್ಪ್ಲೋರರ್ 1.0 ವರ್ಷನ್ ಅನ್ನು ಜಗತ್ತಿಗೆ ಪರಿಚಯಿಸಿತು. ಈ ಕಾರ್ಯ ಕೈಗೊಂಡಾಗ ಥಾಮಸ್ ರೇರ್‌ಡಾನ್‌ಗೆ ಕೇವಲ 24 ವರ್ಷ ವಯಸ್ಸು. 

 

ವಿಂಡೀಸ್ 95 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ 1995 ರಲ್ಲಿ ಪಾದಾರ್ಪಣೆ ಮಾಡಿದ ಇಂಟರ್ನೆಟ್ ಎಕ್ಸ್ಪ್ಲೋರರ್, ಏಕಾಏಕಿ ಹಿಟ್ ಏನೂ ಆಗಲಿಲ್ಲ. ಅಷ್ಟೋತ್ತಿಗಾಗಲೇ ನೆಟ್‌ಸ್ಕೇಪ್ ಬ್ರೌಸರ್ ಶೇಕಡ 90 ರಷ್ಟು ಇಂಟರ್ನೆಟ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿತ್ತು. 

 

ಎಕ್ಸ್ಪ್ಲೋರರ್ ಮೊದಲ ಆವೃತ್ತಿ ಹಲವು ನ್ಯೂನತೆಗಳನ್ನು ಹೊಂದಿತ್ತು. ಆದರೆ ಮೈಕ್ರೋಸಾಫ್ಟ್ ತನ್ನ ಮಹತ್ವಾಕಾಂಕ್ಷೆಯ ವೆಬ್ ಬ್ರೌಸರ್‌ನ ಅಭಿವೃದ್ಧಿಯನ್ನು ನಿಲ್ಲಿಸಲಿಲ್ಲ. 1996 ರಲ್ಲಿ ಎಕ್ಸ್ಪ್ಲೋರರ್ 3.0 ಬಿಡುಗಡೆಯಾಯಿತು. ಮೈಕ್ರೋಸಾಫ್ಟ್ನ ವೆಬ್ ಬ್ರೌಸರ್‌ನ ಜನಪ್ರಿಯತೆ ಎಲ್ಲೆಡೆ ತಲುಪಿ, ಇಂಟರ್ನೆಟ್ ಬಳಕೆದಾರರಲ್ಲಿ ಚಿರಪರಿಚಿತವಾಯಿತು. 

 

ಇಂಟರ್ನೆಟ್ ಎಕ್ಸ್ಪ್ಲೋರರ್ (ಐಇ) 4.0 ಬಿಡುಗಡೆಯಾಗುತ್ತಿದ್ದಂತೆ ಮೈಕ್ರೋಸಾಫ್ಟ್ನ ಮೌಲ್ಯ ಗಗನಕ್ಕೇರಿತು. ವೆಬ್ ಬ್ರೌಸರ್ ಮಾರುಕಟ್ಟೆಯನ್ನು ಆಳಲು ಶುರು ಮಾಡಿತು. ಐಇ 4.0 ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಉಚಿತವಾಗಿ ಸಿಗಲು ಶುರುವಾಗಿದ್ದು, ಮೈಕ್ರೋಸಾಫ್ಟ್ಗೆ ಬಹಳ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. 

GoodBye Internet explorerImage Credits : PC MAG

 

1999 ರಲ್ಲಿ ಐಇ 5.0 ವಿಂಡೋಸ್ 98 ನೊಂದಿಗೆ ಉಚಿತವಾಗಿ ದೊರೆಯಲು ಶುರುವಾಗಿದ್ದು, ನೆಟ್‌ಸ್ಕೇಪ್‌ನಿಂದ ಇಂಟರ್ನೆಟ್ ಮಾರುಕಟ್ಟೆಯನ್ನು ಕಸಿದುಕೊಳ್ಳಲು ಮೈಕ್ರೋಸಾಫ್ಟ್ಗೆ ಸುಲಭವಾಗಿಸಿತು. 

 

ಪ್ರತಿಸ್ಪರ್ಧಿಗಳೊಂದಿಗೆ ಕಾನೂನು ಸಮರವನ್ನೂ ನಡೆಸಿದರೂ ಮೈಕ್ರೋಸಾಫ್ಟ್ ಹೆಚ್ಚಿನ ನಷ್ಟವೇನೂ ಆಗಲಿಲ್ಲ. 2002 ರ ವೇಳೆಗೆ ಇಂಟರ್ನೆಟ್ ಎಕ್ಸ್ಪ್ಲೋರರ್, ಅಂತರ್ಜಾಲ ಮಾರುಕಟ್ಟೆಯನ್ನು ಶೇ.95 ರಷ್ಟನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿತ್ತು. 

 

ಜಗತ್ತು ಅಂತಾರ್ಜಾಲ ಬಳಕೆಗೆ ಇಂಟರ್ನೆಟ್ ಎಕ್ಸ್ಪ್ಲೋರರ್‌ಗೆ ಕ್ರೆಡಿಟ್ ಸಲ್ಲಿಸಬೇಕು ನಿಜ, ಆದರೆ ಈ ಬ್ರೌಸರ್ ಕುಸಿದ ರೀತಿಯೂ ನಿಮ್ಮಲ್ಲಿ ಕುತೂಹಲ ಮೂಡಿಸದೆ ಇರುವುದಿಲ್ಲ. ಇಂಟರ್ನೆಟ್ ಎಕ್ಸ್ಪ್ಲೋರ್ 6.0 ಬಿಡುಗಡೆಯಾದಾಗ ಅದರಲ್ಲಿ ಹಲವು ಸಮಸ್ಯೆಗಳು ಕಂಡುಬಂದವು. ಇದು ಐಇ ಜನಪ್ರಿಯತೆ ಕಳೆದುಕೊಳ್ಳುವಂತೆ ಮಾಡಿತು. 

 

2006 ರಲ್ಲಿ ಐಇ 7.0 ಬಿಡುಗಡೆಯಾದಾಗ, ವೆಬ್ ಬ್ರೌಸರ್ ಮಾರುಕಟ್ಟೆ ಬೇರೆ ಬ್ರೌಸರ್‌ಗಳಿಗೆ ಹುಡುಕಾಟ ಆರಂಭಿಸಿತ್ತು. 2004 ರಲ್ಲಿ ಮೋರಿಝಿಲ್ಲಾ ಫೈರ್‌ಫಾಕ್ಸ್ ಹಾಗೂ 2008 ರಲ್ಲಿ ಗೂಗಲ್ ಕ್ರೋಮ್ ಬಿಡುಗಡೆ ಜೊತೆಗೆ ಮೊಬೈಲ್ ಆಪರೇಟಿಂಗ್ ತಂತ್ರಾಂಶಗಳಾದ ಆಂಡ್ರೋಯ್ಡ್ ಹಾಗೂ ಐಓಎಸ್, ಸ್ಮಾರ್ಟ್ಫೋನ್‌ಗಳ ಯುಗದಲ್ಲಿ ಇಂಟರ್ನೆಟ್ ಎಕ್ಸ್ಪ್ಲೋರರ್‌ನ ಜನಪ್ರಿಯತೆ ಹಾಗೂ ಬಳಕೆಯನ್ನು ಕುಗ್ಗಿಸಿದವು. 

 

ಮೈಕ್ರೋಸಾಫ್ಟ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಹಿಂದೆ ಬಿದ್ದಿದ್ದು ಸಹ ಇದಕ್ಕೆ ಪ್ರಮುಖ ಕಾರಣ. ವಿಂಡೋಸ್ ಮೊಬೈಲ್‌ಗಳು ಬಿಡುಗಡೆಯಾದರೂ, ಜನ ಅದನ್ನು ಒಪ್ಪಿಕೊಳ್ಳಲಿಲ್ಲ. ವರ್ಷಗಳು ಕಳೆದಂತೆ ಇಂಟರ್ನೆಟ್ ಎಕ್ಸ್ಪ್ಲೋರರ್ ಹಲವು ಬದಲಾವಣೆಗಳನ್ನು ಕಂಡರೂ, ಹೆಚ್ಚಿನ ಪ್ರಯೋಜನವಾಗಲಿಲ್ಲ. 

 

1.7 ಪರ್ಸೆಂಟ್‌ಗಿಳಿದ ಮಾರುಕಟ್ಟೆ! 

2002 ರಲ್ಲಿ ಬ್ರೌಸರ್ ಮಾರುಕಟ್ಟೆಯ ಶೇ.95 ರಷ್ಟನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಎಕ್ಸ್ಪ್ಲೋರರ್, 2021 ರ ಮಾರ್ಚ್ ವೇಳೆಗೆ ಕೇವಲ 1.7 ಪರ್ಸೆಂಟ್‌ಗೆ ಕುಸಿದಿತ್ತು. ಇದೇ ಕಾರಣಕ್ಕೆ ಮೈಕ್ರೋಸಾಫ್ಟ್ ಸಂಸ್ಥೆ ಎಕ್ಸ್ಪ್ಲೋರರ್‌ಗೆ ಗುಡ್‌ಬೈ ಹೇಳಲು ನಿರ್ಧರಿಸಿತು. 

 

GoodBye Internet explorerImage Credits : Hassell Inclusion

 

ಮೈಕ್ರೋಸಾಫ್ಟ್ ಎಡ್ಜ್ ಕಥೆ ಏನಾಗುತ್ತೆ?

ಭಾರತದಲ್ಲಿ ಹಲವು ಸರ್ಕಾರಿ ವೆಬ್‌ಸೈಟ್‌ಗಳು ಇಂಟರ್ನೆಟ್ ಎಕ್ಸ್ಪ್ಲೋರರ್‌ನಲ್ಲಿ ಮಾತ್ರ ಸರಿಯಾಗಿ ಕೆಲಸ ಮಾಡುತ್ತವೆ. ಈಗ ಎಕ್ಸ್ಪ್ಲೋರರ್ ಸ್ತಬ್ಧವಾದ ಮೇಲೆ ಕಥೆ ಏನು? ಅಂತ ಕೇಳಿದರೆ, ಮೈಕ್ರೋಸಾಫ್ಟ್ ಸಂಸ್ಥೆ ಎಡ್ಜ್ ಎನ್ನುವ ಹೊಸ ಬ್ರೌಸರ್ ಪರಿಚಯಿಸಿದೆ. ಎಕ್ಸ್ಪ್ಲೋರರ್‌ನಲ್ಲಿ ಓಪನ್ ಆಗುತ್ತಿದ್ದ ವೆಬ್‌ಸೈಟ್‌ಗಳೆಲ್ಲವೂ, ಎಡ್ಜ್ಗೆ ಹೊಂದಿಕೊಳ್ಳಲಿವೆ ಎನ್ನಲಾಗಿದೆ. ಎಡ್ಜ್ ಎಷ್ಟು ಜನಪ್ರಿಯತೆ ಪಡೆಯುತ್ತೆ ಕಾದು ನೋಡ್ಬೇಕು. 

 

90 ರ ದಶಕದ ಬಹುತೇಕರನ್ನು ಇಂಟರ್ನೆಟ್ ಜಗತ್ತಿಗೆ ಪರಿಚಯಿಸಿದ ಎಕ್ಸ್ಪ್ಲೋರರ್‌ಗೆ ಥ್ಯಾಂಕ್ಯೂ ಹಾಗೂ ಗುಡ್‌ಬೈ ಹೇಳಲೇಬೇಕು. 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

Subscribe to Planet Tv Kannada
https://www.youtube.com/Planet Tv Kannada

Follow us on Facebook
https://www.facebook.com/Planettvkannada

Follow us on Twitter
https://twitter.com/Planettvkannada

Follow us on Instagram
https://www.instagram.com/planettvkannada

Follow us on Pinterest
https://www.pinterest.com/Planettvkannada

Follow us on Koo app
https://www.kooapp.com/planettvkannada

Follow us on share chat
https://sharechat.com/planettvkannada

Join us on Telegram
https://t.me/planettvkannada

Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author