ಪಾರ್ವತಿಯು ಗಣೇಶನನ್ನು ಪುತ್ರನಾಗಿ ಪಡೆದ ಸ್ಥಳವಿದು! ಲೇನ್ಯಾದ್ರಿಯ ಶ್ರೀ ಗಿರ್ಜಾತ್ಮಜ ಅಷ್ಟವಿನಾಯಕ ಕ್ಷೇತ್ರ

ಪಾರ್ವತಿಯು ಗಣೇಶನನ್ನು ಪುತ್ರನಾಗಿ ಪಡೆದ ಸ್ಥಳವಿದು!

                  ಲೇನ್ಯಾದ್ರಿಯ ಶ್ರೀ ಗಿರ್ಜಾತ್ಮಜ ಅಷ್ಟವಿನಾಯಕ ಕ್ಷೇತ್ರ

Lenyadri girijatmaja asta vinayaka TempleImage source and credits : ashtavinayak.in

===

 

ಗಿರಿಜಾ ಎಂದರೆ ಪಾರ್ವತಿ, ಆತ್ಮಜ ಎಂದರೆ ಪುತ್ರ. ಪಾರ್ವತಿಯ ಪುತ್ರನಿರುವ ಈ ಕ್ಷೇತ್ರವೇ `ಗಿರ್ಜಾತ್ಮಜ'. ಇದೂ ಕೂಡ ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನಲ್ಲಿದೆ. ಅಷ್ಟವಿನಾಯಕ ದೇಗುಲಗಳ ಪೈಕಿ ಇದು 6ನೇ ಕ್ಷೇತ್ರ ಎನಿಸಿಕೊಂಡಿದೆ.

 

ಈ ಕ್ಷೇತ್ರದಲ್ಲಿ ಪಾರ್ವತಿ ತನ್ನ ಕಠಿಣ ತಪಸ್ಸಿನ ಫಲದಿಂದ ಗಣಪತಿಯನ್ನು ಪುತ್ರನನ್ನಾಗಿ ಪಡೆಯುತ್ತಾಳೆ. ಅಷ್ಟ ವಿನಾಯಕ ಕ್ಷೇತ್ರಗಳ ಪೈಕಿ ಇದೊಂದೇ ಕ್ಷೇತ್ರ ಬೆಟ್ಟದ ಮೇಲಿದೆ. ಅಲ್ಲದೇ ಇದು ಬೌದ್ಧ ಗುಹೆಗಳ ಸಮೀಪದಲ್ಲಿದೆ. ಗಣೇಶನನ್ನು ಇಲ್ಲಿ ಮಗುವಿನ ಹೆಸರಿನಲ್ಲಿ ಪೂಜಿಸಲಾಗುತ್ತದೆ. 

 

ಒಮ್ಮೆ ಪಾರ್ವತಿ (ಗಿರಿಜಾ) ತನ್ನ ಪತಿ ಶಿವನನ್ನು `ಯಾರು ಧ್ಯಾನ ಮಾಡುತ್ತಿದ್ದೀರಿ' ಎಂದು ಕೇಳಿದಳು. ಆಗ ಶಿವನು `ಬ್ರಹ್ಮಾಂಡದ ಬೆಂಬಲಿಗ' ಗಣೇಶನ ಧ್ಯಾನ ಮಾಡುತ್ತಿರುವುದಾಗಿ ಹೇಳಿದನು. ಜೊತೆಗೆ ಗಣೇಶನ `ಗಂ' ಮಂತ್ರವನ್ನು ಪಾರ್ವತಿಗೆ ಹೇಳಿಕೊಟ್ಟನು. ಪಾರ್ವತಿಯು ಆ ಮಂತ್ರವನ್ನು ಜಪಿಸಲು ಆರಂಭಿಸಿದಳು.  

shiva parvati and with son ganeshaImage credit and source : Vrindavan Art

ಒಬ್ಬ ಮಗನನ್ನು ಹೊಂದಬೇಕೆಂಬ ಆಸೆ ಹೊಂದಿದ್ದ ಪಾರ್ವತಿಯು ಲೇನ್ಯಾದ್ರಿಯಲ್ಲಿ 12 ವರ್ಷಗಳ ಕಾಲ ತಪ್ಪಸ್ಸು ಮಾಡಿದಳು. ಅವರ ತಪ್ಪಸ್ಸನ್ನು ಮೆಚ್ಚಿದ ಗಣೇಶನು, ಪಾವರ್ತಿಗೆ ಏನು ವರಬೇಕೆಂದು ಕೇಳಿದಾಗ, ಪಾವರ್ತಿಯು ಗಣೇಶನಿಗೆ ನೀನು ನನ್ನ ಮಗನಾಗಿ ಹುಟ್ಟಬೇಕು ಎಂದು ಕೇಳಿಕೊಂಡಳು. ಅದಕ್ಕೆ ಗಣೇಶ ಒಪ್ಪಿಕೊಂಡ.  

 

ಅದರಂತೆ, ಭಾದ್ರಪದ ಮಾಸದ ಚತುರ್ಥಿಯಂದು ಪಾವರ್ತಿಯು ಗಣೇಶನ ಮಣ್ಣಿನ ಮೂರ್ತಿಯನ್ನು ಮಾಡಿ ಪೂಜಿಸಿದಳು. ಆ ಮಣ್ಣಿನ ಮೂರ್ತಿಯು ಜೀವ ಪಡೆಯಿತು. ಶಿವನು ಆ ಮಗುವಿಗೆ ಗಣೇಶ ಎಂದು ನಾಮಕರಣ ಮಾಡಿ, ಯಾರು ಯಾವುದೇ ಕಾರ್ಯಕ್ಕೆ ಮೊದಲು ಗಣೇಶನನ್ನು ಪೂಜಿಸುತ್ತಾರೋ, ಅವರಿಗೆ ಆ ಕಾರ್ಯ ಸಿದ್ಧಿಸಲಿ ಎಂದು ಆಶೀರ್ವದಿಸಿದನು. ಗಣೇಶನು ತನ್ನ ಬಾಲ್ಯವನ್ನು ಲೇನ್ಯಾದ್ರಿಯಲ್ಲೇ ಕಳೆದನು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. 

 

ಗುಹೆಯೊಳಗಿದ್ದಾನೆ ಗಣೇಶ!

Lenyadri girijatmaja asta vinayaka TempleImage source and credits : pavitrya.com

ಮರಾಠಿಯಲ್ಲಿ ಲೇನ್ಯಾ ಎಂದರೆ ಗುಹೆ, ಆದ್ರಿ ಎಂದರೆ ಪರ್ವತ. ಪರ್ವತದಲ್ಲಿರುವ ಗುಹೆಯಲ್ಲಿ ನೆಲೆಸಿರುವ ಗಿರಿಜಾ ಪುತ್ರ. ವರ್ಷದ ಯಾವುದೇ ತಿಂಗಳಲ್ಲಿ ಬೇಕಿದ್ದರೂ ಈ ದೇಗುಲಕ್ಕೆ ಭಕ್ತರು ಭೇಟಿ ನೀಡಬಹುದು. ಏಕ ಶಿಲೆಯನ್ನು ಕೆತ್ತಿ ನಿರ್ಮಿಸಲಾಗಿರುವ ಈ ದೇಗುಲಕ್ಕೆ ತಲುಪಬೇಕಿದ್ದರೆ 307ರಿಂದ 315 ಮೆಟ್ಟಿಲುಗಳನ್ನು ಹತ್ತಬೇಕು. ಈ ಪರ್ವತದಲ್ಲಿರುವ 18 ಬೌದ್ಧ ಗುಹೆಗಳಲ್ಲಿ ಗಿರ್ಜಾತ್ಮಜ ಗಣೇಶನದ್ದು 8ನೇ ಗುಹೆ. ಇದನ್ನು ಗಣೇಶ ಗೂಫಾ ಎಂದೂ ಕರೆಯುತ್ತಾರೆ. 

 

ಗುಹೆಯೊಳಗಿಲ್ಲ ಒಂದೇ ಒಂದು ಬಲ್ಬ್! 

Lenyadri girijatmaja asta vinayaka Temple no bulbImage credits and source : wikiwand

ಗುಹೆಯೊಳಗಿರುವ ದೇಗುಲದಲ್ಲಿ ಒಂದೇ ಒಂದು ವಿದ್ಯುತ್ ಬಲ್ಬ್ ಇಲ್ಲ ಎನ್ನುವುದು ವಿಶೇಷ. ಹಗಲಿನ ಹೊತ್ತು ಸೂರ್ಯನ ಬೆಳಕು ಈ ಗುಹೆಯೊಳಗೆ ಬೀಳುವಂತೆ ದೇಗುಲವನ್ನು ನಿರ್ಮಿಸಲಾಗಿದೆ. ಮತ್ತೊಂದು ವಿಶೇಷ ಎಂದರೆ 53 ಅಡಿ ಉದ್ದ, 51 ಅಡಿ ಅಗಲ, 7 ಅಡಿ ಎತ್ತರವಿರುವ ದೇಗುಲದ ಹಾಲ್‍ನಲ್ಲಿ ಒಂದೇ ಒಂದು ಕಂಬವಿಲ್ಲ.     

 

ಈ ಕ್ಷೇತ್ರದಿಂದ ಕೇವಲ 13 ಕಿಲೋ ಮೀಟರ್ ದೂರದಲ್ಲಿರುವ ಶಿವನೇರಿ ಕೋಟೆಯು ಶಿವಾಜಿ ಮಹಾರಾಜುನ ಜನಿಸಿದ ಸ್ಥಳ. ಅಲ್ಲದೇ ಮತ್ತೊಂದು ಅಷ್ಟವಿನಾಯಕ ಕ್ಷೇತ್ರವಾದ ಓಜಾರ್ ಗಣೇಶನ ಮಂದಿರ ಕೇವಲ 14 ಕಿಲೋ ಮೀಟರ್ ಅಷ್ಟೇ. 12 ಜ್ಯೋರ್ತಿಲಿಂಗ ಕ್ಷೇತ್ರಗಳಲ್ಲಿ ಒಂದಾದ ಭೀಮಾಶಂಕರ ಜ್ಯೋರ್ತಿಲಿಂಗವೂ ಇಲ್ಲಿಂದ 80 ಕಿಲೋ ಮೀಟರ್ ದೂರದಲ್ಲಿದೆ. 

 

ಈ ದೇಗುಲದಲ್ಲಿ ಗಣೇಶ ಚತುರ್ಥಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಲಕ್ಷಾಂತರ ಮಂದಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡಿ, ಗಣೇಶನಲ್ಲಿ ತಮ್ಮ ಕೋರಿಕೆಗನ್ನು ಸಲ್ಲಿಸುತ್ತಾರೆ. 

 

Enjoyed this article? Stay informed by joining our newsletter!

Comments

You must be logged in to post a comment.

About Author