ಹಳೆ ಫ್ಯಾಷನ್ ಈಗ ಫುಲ್ ಟ್ರೆಂಡ್..

ಇಂದು ಬೇಡ ಎಂದು ಬಿಟ್ಟಿದ್ದೇ ನಾಳೆ ಫುಲ್ ಟ್ರೆಂಡ್..!

ಕಾಲ ಬದಲಾದಂತೆ ಉಡುಗೆ ತೊಡುಗೆಯಲ್ಲೂ ಸಾಕಷ್ಟು ಬದಲಾವಣೆ ಸಾಮಾನ್ಯ.. ನಿನ್ನೆ ಹಳೆಯದೆನಿಸಿದ್ದು ಇಂದು ಫ್ಯಾಷನ್ ಲೋಕದಲ್ಲಿ ಸದ್ದು ಮಾಡುತ್ತೆ.. ಹಳೆಯ ಫ್ಯಾಷನ್ ಇಂದು ಫುಲ್ ಟ್ರೆಂಡ್ ಆಗಿಬಿಡುತ್ತದೆ.. ಫ್ಯಾಷನ್ ಲೋಕದಲ್ಲಿ ದಿನಕ್ಕೊಂದು ಟ್ರೆಂಡ್ ಹುಟ್ಟಿಕೊಳ್ಳುತ್ತೆ.. 

ಫ್ಯಾಷನ್ ಸದಾ ಪುನರಾವರ್ತನೆ ಎಂಬುದಕ್ಕೆ ಈಗ ಟ್ರೆಂಡ್ ಆಗಿರುವ ಉಡುಗೆಗಳೇ ಉತ್ತಮ ಉದಾಹರಣೆ.. ಈ ಫ್ಯಾಷನ್ ಲೋಕದಲ್ಲಿ ದಿನಕ್ಕೊಂದು ಹೊಸ ಟ್ರೆಂಡ್ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಅವುಗಳಲ್ಲಿ ಯಾಂಕಲ್ ಲೆಂತ್ ಪ್ಯಾಂಟ್ ಕೂಡ ಒಂದು. ನೋಡಲು ಪೆನ್ಸಿಲ್ ಕಟ್ ಪ್ಯಾಂಟಿನಂತೆ ಕಾಣುವ ಈ ಪ್ಯಾಂಟ್ ಪಾದಕ್ಕಿಂತ ಸ್ವಲ್ಪ ಮೇಲೆ ಇರುತ್ತವೆ. ತ್ರೀ ಫೋರ್ತ್ಗಿಂತಲೂ ಸ್ವಲ್ಪ ಉದ್ದವಿರುವ ಈ ಪ್ಯಾಂಟ್ ಗಳು ಕಾಲೇಜು ಯುವತಿಯರಿಗೆ, ಉದ್ಯೋಗಸ್ತ ಮಹಿಳೆಯರಿಗೆ ಹೆಚ್ಚು ಅಚ್ಚುಮೆಚ್ಚು...

ಈ  ರೀತಿಯ ಯಾಂಕಲ್ ಲೆಂತ್ ಪ್ಯಾಂಟ್ ಎಲ್ಲರಿಗೂ ಒಪ್ಪುತ್ತದೆ. ಎಲ್ಲಾ ವಯಸ್ಸಿನವರೂ ಸಹ ಧರಿಸಬಹುದಾಗಿದೆ. ಕಾಟನ್, ಜೀನ್ಸ್, ಲೆನಿನ್ ಬಟ್ಟೆಗಳಲ್ಲಿ ಆಂಕಲ್ ಲೆಂತ್ ಪ್ಯಾಂಟ್ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಬಣ್ಣಗಳಲ್ಲಿ ಸಾಕಷ್ಟು ಆಯ್ಕೆಯೂ ಇದೆ. ಬ್ಲೇಸರ್ಗಳೊಂದಿಗೆ ಕೂಡ ಈ ಯಾಂಕಲ್ ಲೆಂತ್ ಪ್ಯಾಂಟನ್ನು ಧರಿಸಬಹುದು. ಪ್ಯಾಂಟ್ನ ಬಣ್ಣಕ್ಕೆ ಕಾಂಟ್ರಾಸ್ಟ್ ಬಣ್ಣದ ಶರ್ಟ್ ಇದ್ದರೆ ಸ್ಟೈಲಿಷ್ ಲುಕ್ ಇರುತ್ತದೆ..

ಇನ್ನು ಸೆವೆಂಟೀಸ್ ನಲ್ಲಿ ಫುಲ್ ಟ್ರೆಂಡಿ ಎನಿಸಿದ್ದ ಪಲಾಜೊ ಪ್ಯಾಂಟ್ ಈಗ ಮತ್ತೆ ಫ್ಯಾಷನ್ ಆಗಿಬಬಿಟ್ಟಿವೆ.. ಈ ಪ್ಯಾಂಟ್ ಗಳು ಮಹಿಳೆಯರನ್ನು ಆವರಿಸಿದೆ.. ಇನ್ನಷ್ಟು ಹೊಸ ಬಣ್ಣಗಳು, ಹೊಸ ಡಿಸೈನ್ ಮತ್ತು ವಿಶೇಷ ಫ್ಯಾಬ್ರಿಕ್ಗಳಲ್ಲಿ ಮತ್ತದೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸ್ಕರ್ಟ್ನಂತೆಯೂ ಕಾಣುವ  ಈ ಪ್ಯಾಂಟ್ ಹುಡುಗಿಯರ ಹಾಟ್ ಫೇವರಿಟ್ ಆಗಿದೆ. ಅಲ್ಲದೆ ಬೇಸಿಗೆಗೆ ಪರ್ಫೆಕ್ಟ್ ಉಡುಪಾಗಿದೆ.

ಇನ್ನು ಈ ಪ್ಯಾಂಟ್ ಗೆ ಸ್ಲೀವ್ ಲೆಸ್ ಡ್ರೆಸ್ ಪರ್ಫೆಕ್ಟ್ ಮ್ಯಾಚ್. ಪಲಾಜೊ ಪ್ಯಾಂಟುಗಳನ್ನೇ ಹೋಲುವ ಹಲವಾರು ವಿನ್ಯಾಸದ ಪ್ಯಾಂಟುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಪಲಾಜೊ ಪ್ಯಾಂಟ್ ಗಳು ಗಾಚೊ ಪ್ಯಾಂಟ್, ಹ್ಯಾರೆಮ್ ಪ್ಯಾಂಟ್ಸ್ ಹಾಗೂ ಪೈಜಾಮಾಗಳಿಗಿಂತಲೂ ಸ್ಪೆಷಲ್ ಆಗಿರುತ್ತವೆ.. ಇನ್ನು ಪಲಾಜೋ ಪ್ಯಾಂಟ್ ಗಳನ್ನ ಧರಿಸಿದಾಗ ಹೈ ಹೀಲ್ಡ್ ಅಥವಾ ಎತ್ತರದ ಚಪ್ಪಲಿ, ಶೂ ಧರಿಸುವುದು ಉತ್ತಮ. ಬಳೆಯ ಬದಲು ಒಂದೇ ಕೈಗೆ ಆಕರ್ಷಕವಾದ ಬ್ರೇಸ್ಲೆಟ್ ಹಾಕಬಹುದು..

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author