ಬಲಮುರಿ, ಎಡಮುರಿ ಗಣಪನ ಬಗ್ಗೆ ನಿಮಗೆ ತಿಳಿದಿರದ ವಿಷಯ

ಎಲ್ಲಾ ಪೂಜೆಗಳಲ್ಲೂ ಪ್ರಥಮ ವಂದ್ಯನೆಂದೇ ಗಣಪತಿಯನ್ನು ಪೂಜಿಸಲಾಗುತ್ತದೆ.ಗಣೇಶ ಹಿಂದೂ ಆರಾಧ್ಯ ದೈವಗಳಲ್ಲಿ ಪ್ರಮುಖ ಅಧಿಪತಿ. ವಿಘ್ನ ವಿನಾಯಕನ ಪ್ರತಿಯೊಂದು ಆಕಾರಕ್ಕೂ ಅದರದೇ ಆದ ವಿಶೇಷತೆ ಇದೆ. ಗಣಪತಿಯನ್ನು ಸಾಮಾನ್ಯವಾಗಿ ಎಡಮುರಿ ಗಣಪತಿ ಹಾಗೂ ಬಲಮುರಿ ಗಣಪತಿ ಎಂದು ಕರೆಯುವುದುಂಟು. ಆದರೆ, ಅದೆಷ್ಟೋ ಮಂದಿಗೆ ಬಲಮುರಿ-ಎಡಮುರಿ ಗಣಪತಿಗಿರುವ ವಿಶೇಷತೆ ಎನು ಎಂಬುದು ತಿಳಿದೇ ಇರುವುದಿಲ್ಲ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ganesha festivalsource and pic credit: Times of india

ಭಾರತದಲ್ಲಿ ಬಲಮುರಿ ಹಾಗೂ ಎಡಮುರಿ ಗಣಪತಿಗೆ ಸಾಕಷ್ಟು ವಿಶೇಷತೆಯಿದ್ದು ಹೆಚ್ಚಾಗಿ ಎಡಮುರಿ ಗಣಪತಿಯನ್ನೇ ಪೂಜೆ ಮಾಡುತ್ತಾರೆ. ಗಣಪನ ಸೊಂಡಿಲು ಎಡಕ್ಕೆ ತಿರುಗಿದ್ದರೆ ಎಡಮುರಿ ಗಣಪತಿಯೆಂದು, ಬಲಕ್ಕೆ ತಿರುಗಿದ್ದರೆ ಬಲಮುರಿ ಗಣಪತಿಯೆಂದೂ ಹಾಗೂ ಮಧ್ಯದಲ್ಲಿದ್ದರೆ ಊರ್ಧ್ವ ಮೂಲ ಗಣಪತಿಯೆಂದು ಕರೆಯುವುದುಂಟು.

ಬಲಮುರಿ ಗಣಪತಿ

 

ಬಲಬದಿಗೆ ಸೊಂಡಿಲಿರುವ ಗಣಪತಿಯ ಮೂರ್ತಿ ಎಂದರೆ ದಕ್ಷಿಣಾಭಿಮೂರ್ತಿ. ದಕ್ಷಿಣ ಎಂದರೆ ಬಲಬದಿ ಅಥವಾ ದಕ್ಷಿಣ ದಿಕ್ಕು. ಎಂದರೆ ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ. ಬಲಬದಿಯಲ್ಲಿ ಸೂರ್ಯನಾಡಿಯಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಶಕ್ತಿಶಾಲಿಯಾಗಿರುತ್ತಾರೆ. ಹಾಗೆಯೇ ಸೂರ್ಯನಾಡಿಯು ಕಾರ್ಯನಿರತವಾಗಿರುವವನು ತೇಜಸ್ವಿಯಾಗಿರುತ್ತಾನೆ ಎಂದರ್ಥ. ಇವೆರಡೂ ಅರ್ಥಗಳಲ್ಲಿ ವ್ಯಾಖ್ಯಾನಿಸಿ ಬಲಗಡೆಗೆ ಸೊಂಡಿಲಿರುವ ಗಣಪತಿಯನ್ನು ಬಲಮುರಿ ಗಣಪತಿ ಎನ್ನುತ್ತಾರೆ.

ganapati poojasource and pic credit: Times now

ಮತ್ತೊಂದೆಡೆ ಬಲಮುರಿ ಗಣೇಶನಿಂದ ಎಷ್ಟು ಒಳ್ಳೆಯದೋ ಅದೇ ರೀತಿಯಲ್ಲಿ ಕೆಲವರಿಗೆ ತೊಡಕಾಗುವುದೂ ಉಂಟು ಎಂದು ಹೇಳುತ್ತಾರೆ. ಕೆಲವು ಶಾಸ್ತ್ರಗಳು ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಬಲಮುರಿ ಗಣಪತಿಯು ಉಷ್ಣಕಾರಕನಾಗಿದ್ದು, ಪೂಜೆ ಅಥವಾ ಇನ್ನಿತರ ವಿಷಯಗಳಲ್ಲಿ ಹೆಚ್ಚಿನ ಲೋಪವಾದಲ್ಲಿ ಇದು ಅನಾಹುತಕ್ಕೆ ಕಾರಣವಾಗಬಹುದೆನ್ನುತ್ತಾರೆ.

 

ganapati festivalsource and pic credit: The financial express

ಬಲಮುರಿ ಗಣಪತಿಯು ದಕ್ಷಿಣದ ದಿಕ್ಕನ್ನ ಮೃತ್ಯುವಿನ ನಂತರ ಯಾವ ರೀತಿ ಪರೀಕ್ಷೆ ಆಗುತ್ತದೆಯೋ ಆದೇ ರೀತಿಯ ಪರೀಕ್ಷೆಗಳು ಮೃತ್ಯುವಿಗೂ ಮೊದಲು ಆಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಮುಖ ಮಾಡಿ ಕುಳಿತುಕೊಳ್ಳಬಾರದುಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಹೀಗಾಗಿ ಕೆಲವು ಶಾಸ್ತ್ರಗಳು ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಯೋಗ್ಯವಲ್ಲ ಎಂದು ಹೇಳುತ್ತದೆ.

ganesha idolsource and pic credit: google.com

ಎಡಮುರಿ ಗಣಪತಿ

 

ಎಡಬದಿಗೆ ಸೊಂಡಿಲಿರುವ ಮೂರ್ತಿ ಎಂದರೆ ವಾಮಮುಖಿ ಗಣಪತಿ. ವಾಮ ಎಂದರೆ ಎಡಬದಿ ಅಥವಾ ಉತ್ತರ ದಿಕ್ಕು. ಎಡಬದಿಗೆ ಚಂದ್ರನಾಡಿಯು ಇರುತ್ತದೆ. ಹಾಗೆಯೇ ಉತ್ತರದಿಕ್ಕು ಆಧ್ಯಾತ್ಮಕ್ಕೆ ಪೂರಕವಾಗಿದೆ, ಆನಂದದಾಯಕವಾಗಿದೆ ಎಂದರ್ಥ. ಹೀಗಾಗಿಯೇ ವಾಮಮುಖಿ ಗಣಪತಿಯನ್ನು ಪೂಜೆಯಲ್ಲಿ ಇಡುತ್ತಾರೆ. ಈ ಗಣಪತಿಯ ಪೂಜೆಯನ್ನು ದಿನನಿತ್ಯದ ಪೂಜೆಯನ್ನು ಮಾಡುತ್ತಾರೆ. ಎಡಮುರಿ ಗಣಪತಿಗಿಂತ ಬಲಮುರಿ ಗಣಪತಿಯೇ ವಿಶೇಷವೆಂದು ಹೇಳುವುದುಂಟು. ಇದಕ್ಕೆ ಕಾರಣ. ಬಲಮುರಿ ಗಣಪತಿ ನಮ್ಮ ಜ್ಞಾನ ಸಾಧನೆಯ ವಿಘ್ನಗಳನ್ನು ನಿವಾರಿಸಿ ಬದುಕಿನ ಹಾದಿಯನ್ನು ಸುಗಮವಾಗಿಸುತ್ತಾನೆಂಬ ನಂಬಿಕೆಯಿದೆ. 

ganesha idolsource and pic credit: India.com

ದೇಶ-ವಿದೇಶಗಳಲ್ಲಿಯೂ ಗಣಪನನ್ನು ಆರಾಧಿಸಲಾಗುತ್ತದೆ.ಚೀನಾಜಪಾನ್,ಕಾಂಬೋಡಿಯಾನೇಪಾಳಶ್ರೀಲಂಕಾ ಮುಂತಾದ ಹಲವು ದೇಶಗಳಲ್ಲೂ ಏಕದಂತನನ್ನು ಪೂಜಿಸುತ್ತಾರೆ. ಇಂದು ಗಣೇಶ ಯಾವುದೇ ಒಂದು ವಿಶಿಷ್ಟ ವರ್ಗ ಅಥವಾ ಪ್ರದೇಶದ ದೇವತೆಯಾಗಿರದೆ ಸಕಲ ಮತಸಕಲ ದೇಶದವರೂ ಪೂಜಿಸಲ್ಪಡುವ ದೇವನಾಗಿದ್ದಾನೆ. ಶ್ರೀಲಂಕಾದ ಕಟರ್ ಎಂಬಲ್ಲಿ ಗಣಪತಿಯನ್ನು ಹಿಂದುಮುಸ್ಲಿಂಕ್ರೈಸ್ತರೆಲ್ಲರೂ ಪೂಜಿಸುತ್ತಾರೆ. ಗುಜರಾತಿನ ಜೈನ ದೇವಾಯದಲ್ಲಿ ಗಣಪತಿಯ ವಿಗ್ರಹಗಳನ್ನು ಕಾಣಬಹುದು. ಮಹಾರಾಷ್ಟ್ರಆಂಧ್ರ,ತಮಿಳುನಾಡುಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಲಕ್ಷಾಂತರ ದೇಗುಲಗಳಿವೆ..

Enjoyed this article? Stay informed by joining our newsletter!

Comments

You must be logged in to post a comment.

About Author