ಬುಲೆಟ್ ಬಾಬಾ ದೇವಾಲಯ; ರಾಯಲ್ ಎನ್‍ಫೀಲ್ಡ್ ಇಲ್ಲಿನ ದೇವರು..!

ಬುಲೆಟ್ ಬಾಬಾ ದೇವಾಲಯ; ರಾಯಲ್ ಎನ್‍ಫೀಲ್ಡ್ ಇಲ್ಲಿನ ದೇವರು..!

bullet baba templesource and pic credit: https://www.amarujala.com

ಭಾರತ ಅಂದ್ರೆ ವೈವಿಧ್ಯತೆಯಲ್ಲಿ ಏಕತೆ ಇರೋ ದೇಶ. ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳು ಭಾರತದ ವಿಶೇಷ. ಜತೆಗೇ ಭಿನ್ನ-ವಿಭಿನ್ನ ದೇವಾಲಯಗಳೂ ಇಲ್ಲಿವೆ. ಆಯಾ ಪ್ರದೇಶದ ನಂಬಿಕೆಗೆ ತಕ್ಕಂತೆ ವಿಶಿಷ್ಟವಾದ ದೇವಾಲಯಗಳು ರೂಪುಗೊಳ್ಳುತ್ತವೆ. ಅಲ್ಲಿ ನಡೆದ ಯಾವುದೋ ಘಟನೆಗೆ ಸಂಬಂಧಿಸಿದಂತೆ ಜನರಲ್ಲಿಯೂ ನಂಬಿಕೆ ಬೆಳೆದಿರುತ್ತದೆ. ಇದಕ್ಕೆ ಅನುಸಾರವಾಗಿ ದೇವರಿಗೆ ಮಾತ್ರವಲ್ಲದೆ, ವ್ಯಕ್ತಿಗೆ, ವಸ್ತುವಿಗೆ ದೇಶದ ಹಲವೆಡೆ ದೇವಾಲಯವನ್ನು ಕಟ್ಟಿರುವುದನ್ನು ನೋಡಿರಬಹುದು.

ದೇಶದ ಹಲವೆಡೆ ಶಿವ, ವಿಷ್ಣು, ಕೃಷ್ಣ, ಗಣೇಶ, ಸುಬ್ರಹ್ಮಣ್ಯ, ದೇವಿ, ದೇವಿಯ ಹಲವು ಅವತಾರಗಳ ದೇವಾಲಯಗಳನ್ನು ನಾವು ನೋಡಿದ್ದೇವೆ. ಅದಲ್ಲದೆ ದೇಶದಲ್ಲಿ ವಿಚಿತ್ರವೆನಿಸುವ, ವಿಚಿತ್ರ ಆಚರಣೆಯನ್ನು ಪಾಲಿಸಿಕೊಂಡು ಬಂದಿರುವ, ವಸ್ತು ಅಥವಾ ಪ್ರಾಣಿಗಳನ್ನು ಪೂಜಿಸುವ ಹಲವು ದೇವಸ್ಥಾನಗಳಿವೆ. ಸಾವಿರಾರು ಇಲಿಗಳಿಂದಲೇ ತುಂಬಿರುವ ಇಲಿಯನ್ನೇ ಪೂಜಿಸುವ ದೇವಸ್ಥಾನ ರಾಜಸ್ಥಾನದ ಕರ್ಣಿಮಾತಾ ದೇವಾಲಯ. ಹಾವನ್ನು ಪೂಜಿಸುವ ದೇವಸ್ಥಾನ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿದೆ. ಇದೇ ಅಂತಹದ್ದೇ ಒಂದು ವಿಚಿತ್ರ ದೇವಸ್ಥಾನ. ಆದರೆ ಇದರ ಬಗ್ಗೆ ಕೇಳಿದಾಗ ನೀವು ಅಚ್ಚರಿಪಡೋದು ಖಂಡಿತ.

bullet baba templesource and pic credit: https://indianexpress.com

ಬುಲೆಟ್ ಬೈಕ್ ಅಂದ್ರೆ ಮೊದಲಿನಿಂದಲೂ ಹಲವರಿಗೆ ಕ್ರೇಜ್ ಇದ್ದೇ ಇದೆ. ಹಣ ಕೂಡಿಟ್ಟಾದರೂ ಸರಿ, ಲೋನ್ ಮಾಡಿಯಾದರೂ ಸರಿ ಬುಲೆಟ್ ಪರ್ಚೇಸ್ ಮಾಡ್ಬೇಕು ಅನ್ನೋದು ಹಲವರ ಕನಸು. ಬುಲೆಟ್ ಬೈಕ್ ನಲ್ಲಿ ಲಾಂಗ್ ರೈಡ್ ಹೋಗ್ಬೇಕು, ಟ್ರಿಪ್ ಹೊಡೀಬೇಕು ಅನ್ನೋದು ಹಲವರ ಪ್ಲಾನ್. ಆದ್ರೆ ಹೀಗೆ ಕೊಂಡುಕೊಂಡ ಫೇವರಿಟ್ ಬುಲೆಟ್ ಬೈಕ್ ಕಳೆದು ಹೋದರೆ ಹೇಗಾಗಬೇಡ. ಎಲ್ಲಾ ಕಡೆ ಹುಡುಕಾಡಿದ್ರೂ, ಪೊಲೀಸ್ ಕಂಪ್ಲೇಂಟ್ ಕೊಟ್ರೂ ಏನೂ ಪ್ರಯೋಜನವಾಗದಿದ್ದಾಗ ಟೆನ್ಶನ್ ಆಗೋದು ಖಂಡಿತ.

ಡೋಂಟ್‍ ವರಿ, ಬುಲೆಟ್ ಕಳೆದು ಹೋದ್ರೆ, ಟೆನ್ಶನ್ ಮಾಡ್ಬೇಕಾಗಿಲ್ಲ. ಬುಲೆಟ್ ದೇವಸ್ಥಾನಕ್ಕೆ ಹೋಗಿ ಗುಡಿಯಲ್ಲಿರುವ ಬುಲೆಟ್ ಬಾಬಾನ ಮೊರೆ ಹೋದರೆ ಸಾಕು. ಅದೆಲ್ಲಿದ್ದರೂ ನಿಮ್ಮ ಬೈಕ್ ಸೇಫ್ ಆಗಿ ನಿಮ್ಮನ್ನು ತಲುಪುತ್ತದೆ. ಅರೆ ಇದೇನು ಆಶ್ಚರ್ಯ ಬುಲೆಟ್ ಗೂ ದೇವಸ್ಥಾನಾನ.?.ಬುಲೆಟ್ ಬಾಬಾ ದೇವರಾ ಅಂದ್ಕೊಂಡ್ರಾ..ಹೌದು..ನಿಜ..ಆ ಬಗ್ಗೆ ಇಲ್ಲಿದೆ ಹೆಚ್ಚಿನ ಡೀಟೈಲ್ಸ್.

ಬುಲೆಟ್ ದೇವಸ್ಥಾನ, ಬುಲೆಟ್ ಬಾಬಾ ದೇವರು..!

bullet baba templesource and pic credit: https://indianexpress.com

ಹೌದು, ಇದು ಬುಲೆಟ್ ಬೈಕ್ ಗಾಗಿಯೇ ಇರುವ ದೇವಾಲಯ. ಬುಲೆಟ್ ಬಾಬಾ ಈ ದೇವಾಲಯದ ಗುಡಿಯಲ್ಲಿ ಪೂಜಿಸಲ್ಪಡುವ ದೇವರು. ಈ ದೇವಸ್ಥಾನ ರಾಜಸ್ಥಾನದ ಜೋಧ್‍ ಪುರ್ ನಲ್ಲಿದೆ. ದೇಶದ ಯಾವುದೇ ಮೂಲೆಯಲ್ಲಿ ಬೈಕ್ ಕಳೆದುಹೋಗಿದ್ದರೆ, ನೀವೊಮ್ಮೆ ಇಲ್ಲಿ ಬಂದು ಭಕ್ತಿಯಿಂದ ಬೇಡಿಕೊಂಡರೆ ಸಾಕು ಮತ್ತೆಲ್ಲಾ ನಡೆಯುವುದು ಪವಾಡ. ಯಾರಾದರೂ ನಿಮ್ಮ ಬೈಕ್ ನ್ನು ಕದ್ದಿದ್ದರೆ ಅವರಾಗಿಯೇ ತಂದು ವಾಪಾಸ್ ಕೊಡುತ್ತಾರೆ. ಅಥವಾ ನೀವು ಬೈಕ್ ಕಳ್ಳತನದ ಬಗ್ಗೆ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದರೆ ಆ ಮೂಲಕವಾದರೂ ಬೈಕ್ ನಿಮ್ಮ ಕೈ ಸೇರುತ್ತದೆ.

350 ಸಿಸಿ ರಾಯಲ್ ಎನ್‍ಫೀಲ್ಡ್ ಇಲ್ಲಿನ ದೇವರು..!

bullet baba templesource and pic credit: https://indianexpress.com

ಬುಲೆಟ್ ಬಾಬಾ ದೇವಾಲಯದಲ್ಲಿ ಪೂಜಿಸಲ್ಪಡುವುದು 350 ಸಿಸಿಯ ರಾಯಲ್ ಎನ್‍ಫೀಲ್ಡ್ ಬೈಕ್‍.. ಬೈಕ್ ಕಳೆದುಹೋದವರು ಬಂದು ಈ ಬೈಕ್‍ಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ದಿನವೊಂದಕ್ಕೆ ದೇಶದ ಹಲವೆಡೆಯಿಂದ ನೂರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಕಳೆದುಹೋದ ಬೈಕ್ ಮರಳಿ ಸಿಗಲು ಬುಲೆಟ್ ಬಾಬಾನ ಮೊರೆ ಹೋಗುತ್ತಾರೆ. ಈ ಬುಲೆಟ್ ದೇವಾಲಯದ ನಿರ್ಮಾಣದ ಹಿಂದೆ ಒಂದು ಅಚ್ಚರಿಯ ಕಥೆಯೂ ಇದೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರಲ್ಲಿ ದೇವಸ್ಥಾನ..!

ಬುಲೆಟ್ ಬಾಬಾ ದೇವಾಲಯ ಹಾಗೇ ಸುಮ್ಮನೆ ಒಂದು ದಿನ ಏಕಾಏಕಿ ನಿರ್ಮಾಣವಾಗಿಲ್ಲ. ಈ ದೇವಾಲಯ ನಿರ್ಮಾಣದ ಹಿಂದೆ ಚಕಿತಗೊಳ್ಳುವ ಒಂದು ಕಥೆಯೇ ಇದೆ. ಜನರ ನಂಬಿಕೆಯ ಪ್ರತೀಕವಾಗಿಯೇ ಈ ಬುಲೆಟ್ ದೇವಸ್ಥಾನ ರೂಪುಗೊಂಡಿದೆ. ಪಾಲಿ-ಜೋಧ್ ಪುರ್ ಹೈವೇಯಲ್ಲಿ ಸಾಗುವ ಪ್ರತಿಯೊಬ್ಬರೂ ಈ ದೇವಸ್ಥಾನಕ್ಕೆ ತೆರಳಿ ಬುಲೆಟ್ ಬಾಬಾನಿಗೆ ಕೈ ಮುಗಿದು ಪ್ರಯಾಣ ಮುಂದುವರೆಸುತ್ತಾರೆ.

baba templesource and pic credit: Jodhpur tourism

ಬುಲೆಟ್ ಬಾಬಾ ಎಂದು ಕರೆಸಿಕೊಳ್ಳುವ ಈ ದೇವಾಲಯವನ್ನು ಓಂ ಬನ್ನಾ ಎಂಬ ವ್ಯಕ್ತಿಯ ಹೆಸರಲ್ಲಿ ನಿರ್ಮಿಸಲಾಗಿದೆ. 1998ರಲ್ಲಿ ಗ್ರಾಮದ ಮುಖಂಡ ಓಂ ಸಿಂಗ್ ರಾಥೋರ್ ರ ಪುತ್ರ ಓಂ ಬನ್ನಾ ಬುಲೆಟ್‍ ನಲ್ಲಿ ತೆರಳುತ್ತಿದ್ದ ಸಂದರ್ಭ ಅಪಘಾತವುಂಟಾಗಿ ರಸ್ತೆಯಲ್ಲೇ ಮೃತಪಟ್ಟಿದ್ದರು. ಪೊಲೀಸರು ಪ್ರತಿ ಅಪಘಾತದ ಸಂದರ್ಭ ಮಾಡುವಂತೆ ಬೈಕ್ ನ್ನು ತಂದು ಠಾಣೆಯಲ್ಲಿ ಇರಿಸಿದ್ದರು. ಆದರೆ ಠಾಣೆಯಿಂದ ಕಾಣೆಯಾದ ಬೈಕ್ ಮತ್ತೆ ಅಪಘಾತ ನಡೆದ ಅದೇ ಸ್ಥಳದಲ್ಲಿ ಪತ್ತೆಯಾಗಿತ್ತು. ಪೊಲೀಸರು ಪ್ರತಿ ಸಾರಿ ಈ ಬುಲೆಟ್ ನ್ನು ಠಾಣೆಗೆ ತಂದು ಇರಿಸಿದಾಗಲೂ ಬೈಕ್ ಮತ್ತದೇ ಆಕ್ಸಿಡೆಂಟ್ ನಡೆದ ಸ್ಥಳದಲ್ಲಿ ಪತ್ತೆಯಾಗುತ್ತಿತ್ತು.

bullet baba templesource and pic credit: https://indianexpress.com

ಹೀಗೆ ಹಲವು ಸಾರಿ ಬೈಕ್‍ ನ್ನು ವಾಪಾಸು ತಂದ ಪೊಲೀಸರು, ಠಾಣೆಗೆ ಬೈಕ್ ತಂದಿಟ್ಟು ಅದರಲ್ಲಿದ್ದ ಪೆಟ್ರೋಲ್ ಖಾಲಿ ಮಾಡಿಟ್ಟರು. ಇನ್ನಾದರೂ ಈ ಬೈಕ್ ಇಲ್ಲಿಂದ ಎಲ್ಲಿಗೂ ಹೋಗಲು ಸಾಧ್ಯವಿಲ್ಲ ಎಂದುಕೊಂಡರು. ಆದರೆ ಎಲ್ಲರೂ ದಿಗ್ರ್ಬಮೆಗೊಳ್ಳುವಂತೆ ಮತ್ತದೇ ಅಪಘಾತ ನಡೆದ ಸ್ಥಳದಲ್ಲಿ ಬೈಕ್ ಪತ್ತೆಯಾಯಿತು. ಈ ಸುದ್ದಿ ಇಡೀ ಗ್ರಾಮದಲ್ಲಿ ಹಬ್ಬಿ ಜನರು ಬುಲೆಟ್ ಬೈಕ್ ಬಗ್ಗೆ ಅಚ್ಚರಿಗೊಂಡರು. ಇದೆಂಥಾ ಪವಾಡ ಎಂದು ನಿಬ್ಬೆರಗಾದರು. ಓಂ ಬನ್ನಾ ಆತ್ಮವೇ ಬೈಕ್ ನಲ್ಲಿದೆ ಎಂದು ನಂಬಲಾಯ್ತು.

bullet baba templesource and pic credit: https://indianexpress.com

ಅದರ ಬೆನ್ನಲ್ಲೇ, ರಾಜಸ್ಥಾನದ ಜೋಧ್‍ ಪುರ್ ನಲ್ಲಿ ಬುಲೆಟ್ ಬಾಬಾ ದೇವಾಲಯದ ನಿರ್ಮಾಣವಾಯಿತು. ಇದೇ ಕಾರಣಕ್ಕಾಗಿ ಜೋಧ್‍ಪುರ್ ಎನ್‍ಎಚ್‍ 50ರಲ್ಲಿ ಸಂಚರಿಸುವುದು ತುಂಬಾ ಸೇಫ್‍, ಬುಲೆಟ್ ಬಾಬಾ ಬೈಕ್ ಸವಾರರನ್ನು ಕಾಪಾಡುತ್ತಾನೆ ಎಂದು ನಂಬಲಾಗುತ್ತದೆ. ಪ್ರತಿನಿತ್ಯ ಬೆಳಗ್ಗೆ, ಸಂಜೆ ಈ ಬುಲೆಟ್ ಬಾಬಾ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ಸಾಂಪ್ರದಾಯಿಕ ಡ್ರಮ್ ವೊಂದನ್ನು ಬಾರಿಸಿ ಪೊಜೆ ಸಲ್ಲಿಸಲಾಗುತ್ತದೆ.

bullet baba templesource and pic credit: https://indianexpress.com

ಬುಲೆಟ್ ದೇವಾಲಯದಲ್ಲಿ ದೊಡ್ಡ ಗಾಜಿನ ಒಳಗೆ ಬುಲೆಟ್ ಬೈಕ್ ನ್ನು ಇಡಲಾಗಿದೆ. ಪ್ರತಿನಿತ್ಯ ಇದಕ್ಕೆ ಪೂಜೆ ಸಲ್ಲಿಸಿ ತಿಲಕ ಇಡಲಾಗುತ್ತದೆ. ಬುಲೆಟ್ ಬಾಬಾನ ದರ್ಶನಕ್ಕೆ ಭಕ್ತರ ದೊಡ್ಡ ದಂಡೇ ನೆರೆದಿರುತ್ತದೆ. ಪೂಜೆಯ ಸಮಯದಲ್ಲಿ ದೇವಸ್ಥಾನದ ರಸ್ತೆಯಲ್ಲಿ ಜನರು ಸೇರಿ ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯವಾಗಿದೆ. ಇನ್ನು, ಬುಲೆಟ್ ಪ್ರಿಯರು ಇಲ್ಲಿಗೆ ಭೇಟಿ ನೀಡುವುದು ತೀರ್ಥಯಾತ್ರೆಯಷ್ಟೇ ಮುಖ್ಯ ಎಂದು ನಂಬುತ್ತಾರೆ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author